Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಬಡತನ ಎಂದಿಗೂ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ, ಬದಲಾಗಿ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ವಿದ್ಯಾಭ್ಯಾಸದಲ್ಲಿ ಸಾಧನೆಯ ಮೆಟ್ಟಿಲು ಹತ್ತಬಹುದು.ಬಡತನ ಕುಟುಂಬದಲ್ಲಿ ಹುಟ್ಟಿರೋದು ತಪ್ಪಲ್ಲ. ಅದನ್ನು ಯಾರು ಹೇಳಿ ಕೇಳಿ ಪಡೆದುಕೊಂಡು ಬಂದಿರುವುದಿಲ್ಲ. ಆದರೆ ಬಡತನ ಎಂಬ ಕುಂಟುನೆಪ ಇಟ್ಕೊಂಡು ನಿನ್ನ ದಾರಿಗೆ ನೀನೇ ಮುಳ್ಳಿನ ಬೇಲಿ ಹಾಕಿಕೊಳ್ಳುವುದು ಮೂರ್ಖತನ. ಯಾಕೆ ಈ ಮಾತು ಹೇಳ್ತಿದ್ದೀವಿ ಅಂದ್ರೆ ಮನೆಯಲ್ಲಿ ಬಡತನವಿದೆ. ವಿದ್ಯಾಭ್ಯಾಸದಲ್ಲಿ ಹೇಗೆ ಮುಂದುವರೆಯುವುದು ಎಂಬಿತ್ಯಾದಿ ವಿಚಾರಗಳನ್ನು ತಲೆಗೆ ತುಂಬಿಸಿಕೊಂಡು ಮನೆಯಲ್ಲಿ ಕುಳಿತು ಯೋಚಿಸುತ್ತಿದ್ದರೆ ಇವತ್ತು ಕನಕರಾಜ್ ಎಸ್ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಪ್ಪ-ಅಪ್ಪನ ಮುಖದಲ್ಲಿ ಸಾರ್ಥಕತೆ ಭಾವನೆ ಮೂಡಲು ಸಾಧ್ಯವಾಗುತ್ತಿರಲಿಲ್ಲ.ಹೆಚ್ ಡಿ ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಸಿದ್ದಲಿಂಗೇಗೌಡ ಪುತ್ರ ಕನಕರಾಜ್ ಎಸ್ ಬಡತನ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ. ಉತ್ತಮ ಅಂಕಗಳನ್ನು ಪಡೆದು ಹುಟ್ಟೂರಿನ ಹಾಗೂ ಕುಟುಂಬದ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಸಿದ್ದಲಿಂಗೇಗೌಡ-…

Read More

ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಕೃಷಿಯಲ್ಲಿ ನಿರಂತರ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದ್ದು, ಇಳುವರಿ ಕುಂಠಿತವಾಗುತ್ತಿದೆ. ಮಣ್ಣಿನ ಸಾರಾಂಶ ಸಂರಕ್ಷಿಸುವ ನಿಟ್ಟಿನಲ್ಲಿ ರಾಸಾಯನಿಕ ಗೊಬ್ಬರ ಬದಲಾಗಿ ಸಾವಯವ ಗೊಬ್ಬರ ಬಳಕೆ ಮಾಡಬೇಕೆಂದುಶಾಸಕ ಅನಿಲ್ ಚಿಕ್ಕಮಾದು ರೈತರಿಗೆ ಸಲಹೆ ನೀಡಿದರು.ತಾಲೂಕಿನ ಮೈಸೂರು-ಮಾನಂದವಾಡಿ ಮಾರ್ಗ ಮಧ್ಯೆದಲ್ಲಿರುವ ಲಕ್ಷ್ಮೀಪುರದಲ್ಲಿ ನೂತನವಾಗಿ ಆರಂಭವಾಗಿರುವ ಮೈಟೆಕ್ ಆಗ್ರೋ ಸಲ್ಯೂಷನ್ಸ್ ಕಚೇರಿ ಓಪನ್ ಮಾಡಿ ಮಾತನಾಡಿದರು. ಈ ಹಿಂದೆ ನಮ್ಮ ಪೂರ್ವಜರು ಸಾವಯವ ಗೊಬ್ಬರ ಬಳಸಿ, ಜಮೀನಿನಲ್ಲಿ ತರಕಾರಿ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ಪದ್ಧತಿಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನವನ ಆರೋಗ್ಯಕ್ಕೂ ಸಹಕಾರಿಯಾಗಿತ್ತು. ನೈಸರ್ಗಿಕವಾಗಿ ಬೆಳೆದ ತರಕಾರಿಗಳನ್ನು ತಿಂದು ಮನುಷ್ಯ 100-120 ವರ್ಷಗಳವರೆಗೆ ಬದುಕುತ್ತಿದ್ದರು. ಆದರೆ ಇತ್ತೀಚಿಗೆ ಜಾಸ್ತಿ ಕೆಮಿಕಲ್ಸ್ ಬಳಕೆ ಮಾಡುವುದರಿಂದ ಭೂಮಿಯ ಆರೋಗ್ಯ ಕೆಡುವುದರ ಜೊತೆಗೆ ಮನುಷ್ಯ ಜೀವಿಯು ಕೂಡ ಅನಾರೋಗ್ಯಕ್ಕೆ ತುತ್ತಾಗಿ 30 ವರ್ಷದ ಆಸುಪಾಸಿನಲ್ಲೇ ಅಕಾಲಿಕ ಮರಣಕ್ಕೀಡಾಗುತ್ತಿದ್ದಾರೆ. ದಯವಿಟ್ಟು ತಾಲೂಕಿನ ಜನತೆ ಸಾವಯವ ಗೊಬ್ಬರ ಬಳಸಿ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಯಾವುದೇ ಒಂದು ಸಸಿಯ ಚಿಗುರುವ ಭಾಗವನ್ನು ನಾವು ಕುಡಿ ಎಂದು ಕರೆಯುತ್ತೇವೆ. ಬೇರು ಸಸ್ಯಕ್ಕೆ ಮೂಲ ಆಧಾರವಾದರೆ ಕಾಂಡ ಎಲೆಗಳು ಅದರ ವಿಸ್ತರಿತ ಭಾಗವಾಗುತ್ತವೆ ಮತ್ತು ಕುಡಿ ಮುಂದಿನ ಭವಿಷ್ಯದಲ್ಲಿ ದೊಡ್ಡದಾಗುವ, ಹೆಮ್ಮರವಾಗುವ ಭಾಗವಾಗುತ್ತದೆ.ಅಂತೆಯೇ ಕುಟುಂಬದಲ್ಲಿ ಹಿರಿಯರು ಮೂಲ ಬೇರಾದರೆ ಅವರ ಮಕ್ಕಳು ಕಾಂಡ ಎಲೆ ಮುಂತಾದ ಸಸ್ಯದ ಭಾಗಗಳಾಗುತ್ತಾರೆ ಮನೆಯ ಮಕ್ಕಳು ಆ ಮನೆಯ ಭವಿಷ್ಯದ ಕುಡಿಗಳಾಗುತ್ತಾರೆ. ಇಂತಹ ಮನೆಯ ಮಕ್ಕಳು ತಮ್ಮ ಎಲ್ಲಾ ಅಣ್ಣ, ತಮ್ಮ, ಅಕ್ಕ, ತಂಗಿಯರೊಂದಿಗೆ ಉತ್ತಮವಾದ ಒಡನಾಟವನ್ನು ಇಟ್ಟುಕೊಂಡು ಬಾಳುವಂತೆ ನಾವು ಮಕ್ಕಳನ್ನು ಬೆಳೆಸಬೇಕು.ಮಕ್ಕಳಲ್ಲಿ ಅವರು ಹಾಗೆ ಇವರು ಹೀಗೆ ಎಂಬ ಪೂರ್ವಾಗ್ರಹಗಳನ್ನು ಬೆಳೆಸದೇ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ, ಸಹೃದಯತೆಯಿಂದ ಬದುಕುವಂತಹ ತಾಳ್ಮೆಯ ಸ್ವಭಾವವನ್ನು ನಿಧಾನವಾಗಿ ರೂಢಿಸಬೇಕು.ಒಂದೇ ಕುಟುಂಬದ ಎರಡನೇ ತಲೆಮಾರಿನ ಮಕ್ಕಳು ಮತ್ತು ಮೊಮ್ಮಕ್ಕಳಲ್ಲಿಯೂ ಕೂಡ ತಮ್ಮ ಹಿರಿಯರಲ್ಲಿ ಇದ್ದಂತಹ ಅನ್ಯೋನ್ಯತಾ ಭಾವ, ಪ್ರೀತಿ ವಿಶ್ವಾಸ ಇರಲಿ… ಹಾಗೆ ಇರುವಂತೆ ಮಕ್ಕಳನ್ನು…

Read More

ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ರಷಿಯನ್ ತತ್ವಜ್ಞಾನಿ ಹಾಗೂ ಹೋರಾಟಗಾರ ಸ್ಟಾಲಿನ್ ರವರು ಹೇಳಿರುವಂತೆ, “ಜೀವನ-ಬದುಕು ಎಂಬುದು ನಿಮಗೆ ನೇರವಾಗಿ ಯಶಸ್ಸನ್ನು ತಂದು ಕೊಡುವುದಿಲ್ಲ. ಅದು ನಮಗೆ ಸಾಧ್ಯತೆಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ನಮ್ಮಲ್ಲಿರುವ ಶಕ್ತಿ-ಸಾಮರ್ಥವನ್ನು ಸಮರ್ಥವಾಗಿ ಬಳಸಿಕೊಂಡು ಅವುಗಳನ್ನು ಯಶಸ್ಸನ್ನಾಗಿ ಬದಲಾಯಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ” ಎಂದು ಹೇಳಿದ್ದಾರೆ.ಕಠಿಣ ಪರಿಶ್ರಮ ಮತ್ತು ಛಲಗಾರಿಕೆ ಇದ್ದರೆ ಎಂತಹ ಗ್ರಾಮೀಣ ಪ್ರತಿಭೆಯು ರಾಷ್ಟ್ರಮಟ್ಟದಲ್ಲಿ ಅಮೋಘ ಸಾಧನೆ ತೋರಬಹುದು. ರಾಜಸ್ಥಾನದ ಸಾಂಪ್ರದಾಯಿಕ ಸಾಮಾಜಿಕ ಪದ್ಧತಿ ‘ಆತಾ-ಸಾತಾ’ ಹೆಸರಿನಲ್ಲಿ ಕುಟುಂಬಗಳು ಮದುವೆ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ವಿನಿಮಯ (ಬೇರೆ ಮನೆಗೆ ಹೆಣ್ಣು ಕೊಟ್ಟು ತೆಗೆದುಕೊಳ್ಳುವ ಪದ್ಧತಿ) ಮಾಡಿಕೊಳ್ಳುವ ಪದ್ದತಿಯಡಿಯಲ್ಲಿ ಕೇವಲ ೧೦ ವರ್ಷದವಳಿದ್ದಾಗಲೇ ತಂದೆ ಸಂಬಂಧಿಗೆ ವಿವಾಹ ಮಾಡಿಕೊಟ್ಟಿದ್ದರು. ಸಾಮಾಜಿಕ ಕಟ್ಟಳೆ, ಸಾಂಪ್ರದಾಯಿಕ ಅಡೆತಡೆ ಮತ್ತು ಸವಾಲುಗಳನ್ನು ಮೀರಿ, ಹಠಮಾರಿ ಹೆಣ್ಣಾಗಿ ಬೆಳೆದು ಇಡೀ ದೇಶವೇ ನಿಬ್ಬೆರಗಾಗುವಂತೆ ಸಾಧನೆ ಮಾಡಿ ತೋರಿದ ಗ್ರಾಮೀಣ ಹುಡುಗಿ ಅವಳು.ಇವರು ಯಾರ ಬಗ್ಗೆ ಹೇಳೋಕ ಹೊರಟಿದ್ದಾರೆ ಅಂದುಕೊಂಡೀರಾ?…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಇ.ಡಿ ಸೆಲ್(ED Cell)ವತಿಯಿಂದ, ಆಯುರ್ವೇದ ವೈದ್ಯಕೀಯ ಪದ್ಧತಿಯ ತತ್ವಗಳನ್ನು ನವೀಕರಿಸುವ ಹೊಸ ತರ್ಕ ಮಂಡನೆಯ ಕುರಿತು ವಿದ್ಯಾರ್ಥೀಗಳಿಗೆ ಆಯುರ್ಥಿಂಕ್ ಫೆಸ್ಟ-2026 ವಿಷಯ ಕುರಿತು ತರ್ಕ ಸಂಗ್ರಹಣೆ ಕಾರ್ಯಕ್ರಮ ಶನಿವಾರ ನಡೆಯಿತು.ಈ ಕಾರ್ಯಕ್ರಮವನ್ನು ಉದ್ಘಾಟಸಿದ ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಡಾ.ಬಿ.ಶ್ರೀನಿವಾಸ ಪ್ರಸಾದ, ಇಂದಿನ ದಿನಗಳಲ್ಲಿ ಆಯುರ್ವೇದ ಪದ್ಧತಿಯನ್ನು ವೈಜ್ಞಾನಿಕರಣ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಂಶೋಧನ ಕೇಂದ್ರದ ಸಿಬ್ಬಂದಿ ಸಂಯೋಜಕ ಡಾ.ನಿರ್ಮಲಾ, ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ವೈದ್ಯರಾದ ಡಾ.ವಿಜಯಲಕ್ಷ್ಮಿ ಪೂಜಾರಿ, ಡಾ. ಕಾಶೀನಾಥ ಹದಿಮೂರ ಮುಂತಾದವರು ಉಪಸ್ಥಿತರಿದ್ದರು.ಆಯುರ್ವೇದ, ಎಂಜನಿಯರಿಂಗ್ ಹಾಗೂ ಬೇರೆ ಬೇರೆ ಕಾಲೇಜುಗಳಿಂದ ಸುಮಾರು 80 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದದಲ್ಲಿ ಅಧಿಕ ರಕ್ತದೊತ್ತಡ (High blood pressure) ತಲೆನೋವು, ತಲೆ ತಿರುಗುವಿಕೆ, ಹೃದಯವು ವೇಗವಾಗಿ ಬಡಿದುಕೊಳ್ಳುವ ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏಪ್ರಿಲ್ 20 ರಿಂದ ಏಪ್ರಿಲ್ 25ರ ವರೆಗೆ ನಡೆಯಲಿದೆ.ಬಿ.ಎಲ್.ಡಿ.ಇ ಆಯುರ್ವೇದ ಆಸ್ಪತ್ರೆಯಲ್ಲಿ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಆರು ದಿನಗಳ ಕಾಲ ಆಯೋಜಿಸಲಾಗಿರುವ ಈ ಶಿಬಿರದಲ್ಲಿ ಮೇಲಿನ ಸಮಸ್ಯೆಗಳನ್ನು ಎದುರಿಸುತ್ತಿರುವ 18 ರಿಂದ 79 ವರ್ಷದವರೆಗಿನ ಸಾರ್ವಜನಿಕರು ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 9513397413 ಸಂಪರ್ಕಿಸಬಹುದಾಗಿದೆ.

Read More

ವಿಜಯಪುರದಲ್ಲಿ ಕ್ಯಾನವಾಸ್ ಆರ್ಟ್ ಫೌಂಡೇಶನ್ ನಿಂದ ನಾಡಿನ ಶ್ರೇಷ್ಠ ಕಲಾವಿದರ ಕಲಾಕೃತಿಗಳ ಪ್ರದರ್ಶನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ವಿಶ್ವ ದೃಶ್ಯಕಲಾ ದಿನಾಚರಣೆಯ ಅಂಗವಾಗಿ ಕ್ಯಾನವಾಸ್ ಆರ್ಟ್ ಫೌಂಡೇಶನ್ ನಾಡಿನ ಶ್ರೇಷ್ಠ ಕಲಾವಿದರ ಕಲಾಕೃತಿಗಳ ಪ್ರದರ್ಶನ ವಿಜಯಪುರದಲ್ಲಿ ಆಯೋಜಿಸಿರುವುದು ಅತ್ಯಂತ ಸಂತಸದ ಸಂಗತಿ. ಹಿರಿಯ ಮತ್ತು ಯುವ ಕಲಾವಿದರ ಕಲಾಕೃತಿಗಳು ಒಂದೆಡೆ ನೋಡಲು ಸಿಗುವುದು ಅಪರೂಪದ ಸಂಗತಿ. ಇಂಥ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಲು ಸಂತೋಷವೆನಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಬೋವಿ ಹೇಳಿದರು. ಇಲಾಖೆಯಿಂದ ನೀಡುವ ಅನುದಾನವನ್ನು ಕಲಾವಿದರು ಸಂಘ ಸಂಸ್ಥೆಗಳು ಸರಿಯಾಗಿ ಉಪಯೋಗ ಮಾಡಿ ಸಮಾಜಕ್ಕೆ ಮಾದರಿಯಾಗುವ ಕೆಲಸ ಕಲಾವಿದರಿಂದ ಆಗಲಿ ಎಂದರು.ಅತಿಥಿಗಳಾಗಿ ಆಗಮಿಸಿದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ್ ಯಡಳ್ಳಿ ಅವರು ಮಾತನಾಡುತ್ತಾ, ಇವತ್ತಿನ ಆಧುನಿಕ ಯುಗದಲ್ಲಿ ಎಐ ಜಗತ್ತಿನಲ್ಲಿ ಎಲ್ಲರೂ ಕ್ಷಣಿಕ ಸಂತಸಕ್ಕಾಗಿ ಆಧುನಿಕ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಧರ್ಮಗಳು ಹೃದಯದಲ್ಲಿ ಪ್ರೀತಿ ಹುಟ್ಟಿಸಬೇಕು, ಮನುಷ್ಯರನ್ನು ಒಡೆಯದೇ ಕೂಡಿಸಬೇಕು ಎಂದು ಶಿರೂರಿನ ವಿಜಯಮಹಾಂತ ತೀರ್ಥ ಮಠದ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.ಆಲಮಟ್ಟಿ ಡ್ಯಾಂಸೈಟ್‌ನಲ್ಲಿ ಗುರುವಾರ ನಡೆದ ನವೀಕರಣಗೊಂಡ ಜಾಮೀಯಾ ಮಸೀದಿಯ ಉದ್ಘಾಟನೆ, ಮಸೀದಿ ದರ್ಶನ ಹಾಗೂ ಸೌಹಾರ್ದತಾ ಸಮಾರಂಭದಲ್ಲಿ ಅವರು ಮಾತನಾಡಿದರು.“ಮುಸ್ಲಿಂರ ಏಕದೇವೋಪಾಸನೆ ಹಾಗೂ ಶರಣರ ಲಿಂಗ ಪೂಜೆ ಎರಡೂ ಒಂದೇ. ಒಬ್ಬ ಸಚ್ಚರಿತ ಮುಸಲ್ಮಾನನು ನಿಜವಾದ ಶರಣನಾಗಬಲ್ಲ. ಹಾಗೆಯೇ ಒಬ್ಬ ಸಚ್ಚರಿತ ಶರಣನು ಇಸ್ಲಾಂನ ಶಾಂತಿ ಮಂತ್ರವನ್ನು ಪಾಲಿಸುವವನಾಗಬಲ್ಲ” ಎಂದು ಸ್ವಾಮೀಜಿ ಹೇಳಿದರು.ಬೀಳಗಿಯ ಹಜರತ್ ಮೌಲಾನಾ ಕಾಬತೆ ಅಬ್ದುಲ್ ವಹಾಬ್ ಸಾಬ್ ಮಾತನಾಡಿ, “ಅಲ್ಲಾ ಎಂದರೆ ಕೇವಲ ಆಕಾಶದಲ್ಲಿರುವ ಶಕ್ತಿ ಮಾತ್ರವಲ್ಲ, ಪ್ರೀತಿ, ದಯೆ ಮತ್ತು ನ್ಯಾಯದ ರೂಪದಲ್ಲಿ ಮನುಷ್ಯನ ಅಂತರಂಗದಲ್ಲಿ ನೆಲೆಸಿರುವ ಚೈತನ್ಯ. ಅಜಾನ್ ಮನುಷ್ಯನನ್ನು ಲೌಕಿಕ ಜಗತ್ತಿನಿಂದ ಪಾರಮಾರ್ಥಿಕ ಕಡೆಗೆ ಕರೆಯುವ ದನಿ. ಅಲ್ಲಾಹ್ ಎಂದರೆ ಒಂದೇ ಧರ್ಮಕ್ಕೆ ಸೀಮಿತವಲ್ಲ, ಅವನು ಜಗದೀಶ್ವರ” ಎಂದರು.ಬಸವನಬಾಗೇವಾಡಿಯ ಮಫ್ತಿ ಅಬ್ದುಲ್ ಅಜೀಜ್ ನಂದವಾಡಗಿ, ನಿಡಗುಂದಿಯ ಮೌಲಾನಾ ಆಸೀಫ್…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಕರ್ನಾಟಕದಲ್ಲಿ 2026ರ ಏಪ್ರಿಲ್ 16 ರಿಂದ ಮೇ 15 ರವರೆಗೆ ಮನೆಪಟ್ಟಿ ಮತ್ತು ವಸತಿ ಗಣತಿ (Census) ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೊದಲ ಮೂರು ದಿನ ಗ್ರಾಮದ ನಕ್ಷೆಯ ಜೊತೆಗೆ ಗಣತಿದಾರರಿಗೆ ಬಂದಂತಹ ಪ್ರದೇಶದಲ್ಲಿ ಲಭ್ಯವಿರುವ ಮನೆಗಳ, ರಸ್ತೆ, ಹಳ್ಳ, ಕೆರೆ, ಸಮುದಾಯ ಭವನ, ದೇವಸ್ಥಾನ ಸೇರಿದಂತೆ ಮನೆಪಟ್ಟಿ ತಯಾರಿಸಲು ಶಿಕ್ಷಕರು ಮನೆ ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.ತಾಲ್ಲೂಕಿನ ಘೋಣಸಗಿ ಗ್ರಾಮ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಬಿರು ಬಿಸಿಲಿನ ನಡುವೆಯೂ ರಜೆ ದಿನಗಳಲ್ಲಿ ಶಿಕ್ಷಕರು ಜನಗಣತಿ ಕಾರ್ಯ ಮಾಡುತ್ತಿದ್ದಾರೆ. ಆರಂಭದಲ್ಲಿ ಹಲವು ಶಿಕ್ಷಕರ ಮೊಬೈಲ್ ಲಾಗಿನದಲ್ಲಿ ತೊಂದರೆಯಾಗುತ್ತಿದೆ. ತಮಗೆ ವಹಿಸಿದ ನಕ್ಷೆ ಡೌನಲೋಡ್ ಆಗುತ್ತಿಲ್ಲ ಎಂದು ಶಿಕ್ಷಕರು ಮೇಲ್ವಿಚಾರಕರ ಗಮನಕ್ಕೆ ತಂದರು.ಮೇಲ್ವಿಚಾರಕ ಐ.ಎ.ತೇಲಿ, ಗಣತಿದಾರ ಎಂ.ಎನ್.ಮದಬಾವಿ, ಸಾವಿತ್ರಿ ಆಕಳೆ, ನಾರಾಯಣ ಜಗತಾಪ, ಪಿ.ಎಸ್.ಗದ್ಯಾಳ, ಬಿಎಲ್ಓ ರಾಜು ಹುನ್ನೂರ ಇದ್ದರು.

Read More

ಜಿಲ್ಲಾ ನಿರ್ವಹಣಾ ಸಮಿತಿ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಏ.೨೩ ರಿಂದ ಮೇ.೨೨ ರವರೆಗೆ ಜಿಲ್ಲೆಯಲ್ಲಿ ೯ನೇ ಸುತ್ತಿನ ಕಾಲು ಬಾಯಿ ರೋಗದ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ತಿಳಿಸಿದ್ದಾರೆ.ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ ಯೋಜನೆಯಡಿ ೯ನೇ ಸುತ್ತಿನ ಕಾಲುಬಾಯಿ ಜ್ವರ ರೋಗದ ಲಸಿಕಾ ಕಾರ್ಯಕ್ರಮದ ಜಿಲ್ಲಾ ನಿರ್ವಹಣಾ ಸಮಿತಿ ಸಭೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಅಭಿಯಾನದಲ್ಲಿ ರೈತರು, ಹಾಲು ಉತ್ಪಾದಕರ ಸಂಘಗಳು ಭಾಗವಹಿಸಿ ತಮ್ಮ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ಹಾಕಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಜಾನುವಾರುಗಳಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ೧೯೬೨ ಪಶು ಸಹಾಯವಾಣಿಗೆ ಕರೆ ಮಾಡಿ ಉಚಿತ ಅಂಬ್ಯುಲೆನ್ಸ್ ಸೇವೆ…

Read More