ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಯಾಳವಾರದ ಚಿತ್ರಕಲಾ ಶಿಕ್ಷಕ, ಸಾಹಿತಿ ಗುಂಡಪ್ಪ ರಾ ಕುಂಬಾರ ಇವರಿಗೆ ರಂಗಮಿತ್ರ ನಾಟ್ಯ ಸಂಘ ( ರೀ ) ಕಲಬುರಗಿ, ಹಾಗೂ ಕರ್ನಾಟಕ ನಾಟಕ ಬರಹಗಾರರ (ಕವಿಗಳ) ಸಂಘ ಬೆಂಗಳೂರು ಅವರು “ಕನ್ನಡ ಕವಿರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆಮಾಡಿ ಗೌರವಿಸಿದೆ.
ಗುಂಡಪ್ಪ ಇವರು ರಂಗಭೂಮಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಂಗಮಿತ್ರ ನಾಟ್ಯ ಸಂಘ ( ರೀ ) ಕಲಬುರಗಿ, ಹಾಗೂ ಕರ್ನಾಟಕ ನಾಟಕ ಬರಹಗಾರರ (ಕವಿಗಳ) ಸಂಘ ಬೆಂಗಳೂರು ಅವರು ದಿನಾಂಕ 4 -1-2025 ರಂದು ಡಾ ಎಸ್ ಎಂ ಪಂಡಿತ್ ರಂಗಮಂದಿರ ಕಲಬುರ್ಗಿಯಲ್ಲಿ ನಡೆಯುವ ಕವಿಸಂಗಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಾಜ್ಯಾಧ್ಯಕ್ಷ ಶಂಕರ್ಜಿ ಹೂವಿನ ಹಿಪ್ಪರಗಿ ಅವರು ತಿಳಿಸಿದ್ದಾರೆ.
ಅವರ ಕಲೆ, ಸಾಹಿತ್ಯ ಕೃಷಿ, ನಾಟಕ ಅಭಿನಯ ಸೇರಿದಂತೆ, ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ, ಇವರ ಸರಳ ಸ್ವಭಾವ ಹಾಗೂ ಉತ್ತಮ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ,.

