Author: editor.udayarashmi@gmail.com

ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಗೆಲ್ಲಿಸಲು ಜಗದೀಶ ಶೆಟ್ಟರ ಕರೆ ಸಿಂದಗಿ: ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರ ಅಲೆ ಇದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 140-150 ಸ್ಥಾನದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಸಿಂದಗಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ಸಭೆಯಲ್ಲಿ ಅವರು ಮಾತನಾಡಿದರು.ಹಿರಿಯ ನಾಯಕರನ್ನು ಮನೆಗೆ ಕಳುಹಿಸಿ ತಾವು ಹೇಳಿದವರನ್ನು ಒಂದುಗೂಡಿಸುವ ಕಾರ್ಯ ಬಿಜೆಪಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಖಂಡಿತಅಧಿಕಾರಕ್ಕೆ ಬರುತ್ತೆ. ಕ್ಷೇತ್ರಕ್ಕಾಗಿ, ಕ್ಷೇತ್ರದ ಅಭಿವೃದ್ದಿಗಾಗಿ ದಿ.ಎಂ.ಸಿ.ಮನಗೂಳಿ ಅವರು ಜನರ ಒಳಿತಿಗಾಗಿ ಸದಾ ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ. ಅವರಂತೆ ಅವರ ಸುಪುತ್ರ ಅಶೋಕ ಮನಗೂಳಿ ಮುಂದೆಯೂ ಈ ಕಾರ್ಯ ಹೀಗೆ ಮುಂದುವರೆಸುತ್ತಾರೆ. ಅದಕ್ಕಾಗಿ ಎಲ್ಲ ಸಮುದಾಯದ ಸಹಕಾರ ಅವರಿಗೆ ಅವಶ್ಯಕ. ಈ ಹಿಂದೆ ಬಿಜೆಪಿಯಿಂದ ಬರುತ್ತಿದ್ದ ನಾನು ಇಂದು ಕಾಂಗ್ರೆಸ್ ಪರವಾಗಿ ಮತ ಕೇಳಲು ಬಂದಿದ್ದೇನೆ. ಹಾಗಾಗಿ ಎಲ್ಲ ಸಮಾಜದ ಮತಬಾಂಧವರು ಕಾಂಗ್ರೆಸ್ ಪಕ್ಷದ…

Read More

ಆಲಮಟ್ಟಿ: ಅರಣ್ಯ ದಿನಗೂಲಿ ಕಾರ್ಮಿಕರ ಶ್ರಮದಿಂದಾಗಿ ಆಲಮಟ್ಟಿಯಲ್ಲಿ ಸುಂದರ ಉದ್ಯಾನ ಮೈದೆಳೆದು, ಇಡೀ ದೇಶದಲ್ಲಿಯೇ ಗಮನಸೆಳೆಯುತ್ತಿದೆ ಎಂದು ಕೆಬಿಜೆಎನ್ ಎಲ್ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಹೇಳಿದರು.ಆಲಮಟ್ಟಿಯ ಡ್ಯಾಂಸೈಟ್ ನರ್ಸರಿಯಲ್ಲಿ ಸೋಮವಾರ ಅರಣ್ಯ ಇಲಾಖೆಯವರು ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.ದೇಶದಲ್ಲಿ ಈಗ ಹಲವಾರು ಕಾರ್ಮಿಕರ ಸಂಘಟನೆಗಳಿದ್ದು, ಕಾರ್ಮಿಕರಿಗೆ ಸಕಲ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದರು. ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ ಮಾತನಾಡಿ, ಕಾರ್ಮಿಕರ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ಅರಣ್ಯಾಧಿಕಾರಿ ಪ್ರವೀಣ ಹಚ್ಯಾಳಕರ, ನಾಗಪ್ಪ,  ಪತ್ರಕರ್ತರಾದ ಬಾಬು ಮುರಾಳ, ಬೀರು ಬೆನ್ನೂರ ಕಾರ್ಮಿಕ ಮುಖಂಡರಾದ ಭೀಮಶಿ ನಾಯಕ, ಚನ್ನಪ್ಪ ಕಣಕಾಲ, ಲಕ್ಷಿö್ಮÃ ಗೌಡರ ಇನ್ನೀತರರು ಉಪಸ್ಥಿತರಿದ್ದರು. ಬಂದ್ ಆದ ಉದ್ಯಾನಗಳು ಕಾರ್ಮಿಕರ ದಿನಾಚರಣೆ ಅಂಗವಾಗಿ ಆಲಮಟ್ಟಿಯ ರಾಕ್, ಸಂಗೀತ, ಮೊಘಲ್ ಉದ್ಯಾನ ಸೇರಿ ಎಲ್ಲಾ ಉದ್ಯಾನಗಳನ್ನು ಸೋಮವಾರ ಬಂದ್ ಮಾಡಲಾಗಿತ್ತು. ಬಂದ್ ವ್ಯಾಪಕ ಪ್ರಚಾರ ಇಲ್ಲದ್ದರಿಂದ ದೂರ ದೂರದಿಂದ ಬಂದಿದ್ದ ಪ್ರವಾಸಿಗರು ನಿರಾಶೆಯಿಂದ ಮರಳಬೇಕಾಯಿತು.

Read More

ಮುದ್ದೇಬಿಹಾಳ: ರಾಜ್ಯದಲ್ಲಿ ಬ್ರಷ್ಟ ಬಿಜೆಪಿ ಸರಕಾರವನ್ನು ಬುಡಸಮೇತ ಕಿತ್ತೇಸೆದು ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನರು ಈಗಾಗಲೇ ತಿರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಗುರ್ತಿಗೆ ಮತ ನೀಡಬೇಕು ಎಂದು ಪುರಸಭೆ ಮಾಜಿ ಸದಸ್ಯ ಪಿಂಟು ಸಾಲಿನ ನಂ ಹೇಳಿದರು.ಪಟ್ಟಣದ ಹುಡ್ಕೋ, ವಿದ್ಯಾನಗರ, ಸೇರಿದಂತೆ ಬಡಾವಣೆಗಳಲ್ಲಿ ಪಟ್ಟಣದ ಗಣ್ಯವ್ಯಾಪಾರಸ್ತರು, ಉದ್ಯಮಿಗಳು, ಮುಖಂಡರು ಕಾರ್ಯಕರ್ತರೊಂದಿಗೆ ಕಾಂಗ್ರೇಸ್ ಅಭ್ಯರ್ಥಿ, ಮಾಜಿ ಸಚಿವ ಸಿ.ಎಸ್.ನಾಡಗೌಡ ಅವರ ಪರವಾಗಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.ಕಳೇದ ೨೫ ವರ್ಷಗಳಿಂದ ನಾಡಗೌಡರು ಕಾಂಗ್ರೇಸ್ ಪಕ್ಷನಿಷ್ಠರಾಗಿ ಮಾತ್ರವಲ್ಲದೇ ಹಿಂದಿನ ಮುಖ್ಯಮಂತ್ರಿಯಾಗಿದ್ದ ಎಸ್ ಬಂಗಾರಪ್ಪನವರ ಅಧಿಕಾರದಲ್ಲಿ ಸಚಿವರಾಗಿ ಹಾಗೂ ಹಲವಾರು ಹುದ್ದೆಗಳನ್ನು ಅಲಂಕರಿಸಿದ ಹಿರಿಯ ಸರಳ ಸಜ್ಜನಿಕೆಯ ವ್ಯಕ್ತಿತ್ವದ ರಾಜಕೀಯ ಅಜಾತ ಶತ್ರುಗಳಾಗಿ ರಾಜಕಾರಣ ನಡೆಸಿದಂತಹವರು. ಅವರ ಅಧಿಕಾರವಧಿಯಲ್ಲಿ ಮೇಲು ಕೀಳು, ಜಾತಿಧರ್ಮ ಎನ್ನುವ ಯಾವುದೇ ತಾರತಮ್ಯ ಮಾಡದೇ ಸಾಮಾಜಿಕ ನ್ಯಾಯದಡಿಯಲ್ಲಿ ಉತ್ತಮ ಉತ್ತಮ ಸೇವೆ ಮಾಡುವ ಮೂಲಕ ನಾಗರಬೆಟ್ಟ ಏತ ನಿರಾವರಿ, ಪೀರಾಪುರ…

Read More

ಮುದ್ದೇಬಿಹಾಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಅವರು ಚಲಾಯಿಸುವ ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿದ್ದು 18ವರ್ಷ ದಾಟಿದ ಎಲ್ಲರೂ ತಪ್ಪದೆ ಮತದಾನ ಮಾಡುವ ಮೂಲಕ ಸಂವಿದಾನವನ್ನು ಗೌರವಿಸಿ ಎಂದು ನಾಗಬೇನಾಳ ಗ್ರಾಮ ಪಂಚಾಯಿತಿ ಪಿಡಿಓ ಪ್ರಭುದೇವ ಜೇವೂರ ಹೇಳಿದರು.ತಾಲ್ಲೂಕಿನ ತಾಲೂಕಿನ ನಾಗಬೇನಾಳ ಗ್ರಾಮ ಪಂಚಾಯಿತಿ ವ್ಯಪ್ತಿಗಳ ವಿವಿಧ ಗ್ರಾಮದಲ್ಲಿ ನಡೆದ ವಿದಾನ ಸಭಾ ಸಾರ್ವತ್ರಿಕ ಚುನಾವಣೆ ೨೦೨೩ಕ್ಕೆ ಸಂಬ0ಧಿಸಿದ0ತೆ ಮತದಾನ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಬೇಕಾದ ಉತ್ತಮ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ. ಮೇ೧೦ ರಂದು ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.ಈ ವೇಳೆ ಕಾರ್ಯದರ್ಶಿ ಸಂಗಮೇಶ ಕೂಡಗಿ, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಇತರ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Read More

ಯಡ್ರಾಮಿ: ಜಾತ್ಯಾತೀತ ಜನತಾದಳ ಪಕ್ಷ ರೈತರ ಪಕ್ಷ. ಸಾಮಾನ್ಯ ರೈತ ಕುಟುಂಬದಿAದ ಬಂದು, ಹಗಲಿರುಳೆನ್ನದೆ ಜನರ ಸೇವೆ ಮಾಡುತ್ತಿರುವ ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದರೆ ನಮ್ಮ ಸರ್ಕಾರದಲ್ಲಿ ಮಂತ್ರಿಯನ್ನಾಗಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಯಡ್ರಾಮಿ ಪಟ್ಟಣದ ಗಂಗಯ್ಯ ಗುತ್ತೇದಾರ ಲೇಔಟ್ ನಲ್ಲಿ ಸೋಮವಾರದಂದು, ಜೇವರ್ಗಿ ವಿಧಾನಸಭೆ ಕ್ಷೇತ್ರದ ಜೇಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಪರ ನಡೆದ ಬೃಹತ್ ಸ್ವಾಭಿಮಾನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ನರಿಬೋಳ ಕುಟುಂಬಕ್ಕೂ ಜನತಾದಳಕ್ಕೂ ಅವಿನಾಭವ ಸಂಬAದ ಇದೆ. ದಿ.ಶಿವಲಿಂಗಪ್ಪಗೌಡ ಪಾಟೀಲ ನರಿಬೋಳ ಅವರು ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಬದಲ್ಲಿ ಜನತಾದಳವನ್ನು ಜಿಲ್ಲೆಯಲ್ಲಿ ಸಂಘಟನೆಯನ್ನು ಮಾಡಿದ್ದರು. ಆದರೆ ಕಾರಣಾಂತರಗಳಿAದ ಜನತಾದಳ ಪರಿವಾರವನ್ನು ತೊರೆದಿದ್ದರು. ಆದರೆ ದೈವಬಲದಿಂದ ಮತ್ತೆ ಅವರ ಕುಟುಂಬ ಮಾತೃಪಕ್ಷ ಜನತಾದಳಕ್ಕೆ ಮರಳಿ ಬಂದಿದ್ದಾರೆ. ಅವರ ಕುಟುಂಬದಲ್ಲಿರುವ ೪ ಜನ ಅಣ್ಣ ತಮ್ಮಂದಿರು ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಬಾಗಿಯಾಗುವ ಜಾಯಮಾನದವರಾಗಿದ್ದಾರೆ. ಅವರನ್ನು ೩೦…

Read More

ವಿಜಯಪುರ: ನಗರ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾದಳದ ಸಂಘಟನೆಯು ಸಧ್ಯ ಬಲಹೀನವಾಗಿದ್ದು ಇಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪೂರಕ ವಾತಾವರಣವಿದೆ. ಹೀಗಾಗಿ ಕ್ಷೇತ್ರದ ಹಿರಿಯರು, ಕಾರ್ಯಕರ್ತರೊಂದಿಗೆ ಸಮಾಲೋಚಿಸಿ, ಅವರ ಅಭಿಪ್ರಾಯದಂತೆ ನಾನು ಚುನಾವಣೆ ಕಣದಿಂದ ನಿವೃತ್ತಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ಬೆಂಬಲಿಸುವುದಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರ ಕ್ಷೇತ್ರದ ಅಭ್ಯರ್ಥಿ ಬಿ.ಎಚ್.ಮಹಾಬರಿ ಹೇಳಿದರು.ನಗರದ ಖಾಸಗಿ ಹೊಟೇಲಿನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಈ ನಿರ್ಧಾರ ಪ್ರಕಟಿಸಿದರು.ನಮ್ಮ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ ಮಾಡಗಿ ಅವರಿಗೆ ತಮ್ಮ ನಿರ್ಧಾರ ತಿಳಿಸಿದ್ದಾಗಿ ಹೇಳಿದ ಅವರು, ಕುಮಾರಸ್ವಾಮಿಯವರೂ ಸಹ ಎಲ್ಲಿ ನಮಗಿಂತ ಕಾಂಗ್ರೆಸ್ ಅಭ್ಯರ್ಥಿಯ ಶಕ್ತಿ ಹೆಚ್ಚಿದೆ ಅಂತಹ ಕಡೆಗಳಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಅಭ್ಯರ್ಥಿಗೆ ಶಕ್ತಿ ತುಂಬಬೇಕೆAದು ತಮ್ಮ ಭಾಷಣದಲ್ಲಿಯೇ ಹೇಳಿದ್ದಾರೆ. ಅದರಂತೆ ತಾವು ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಸಂಪೂರ್ಣ ಬೆಂಬಲಿಸುವುದಾಗಿ ಸ್ಪಷ್ಠಪಡಿಸಿದರು.ತಾವು ತೆಗೆದುಕೊಂಡ ನಿರ್ಧಾರ ಪಕ್ಷದ…

Read More

ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ ಧರ್ಮನೇ ಗೆಲ್ಲೋದು. ಅಧರ್ಮ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.ತಾಲೂಕಿನ ಢವಳಗಿ, ತಾರನಾಳ ಗ್ರಾಮಗಳಲ್ಲಿ ಕಾಂಗ್ರೇಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿದರು.ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಹಣ, ಹೆಂಡ ಹಂಚಿ ಎಷ್ಟೇ ಕುತಂತ್ರದ ರಾಜಕಾರಣ ಮಾಡಿದರೂ ಧರ್ಮವನ್ನು ಅಳಿಸಿ ಹಾಕೋದಕ್ಕೆ ಸಾಧ್ಯವೇ ಇಲ್ಲ. ಅವರ ಐದು ವರ್ಷದ ರಾವಣನ ರಾಜ್ಯ ಅಂತ್ಯವಾಗಿ ಮೇ 13 ರಂದು ಸಿ.ಎಸ್.ನಾಡಗೌಡರ ನೇತೃತ್ವದ ರಾಮ ರಾಜ್ಯ ಉದಯವಾಗುತ್ತದೆ ಎಂದರು.ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಾತನಾಡಿ, ನಾಲ್ಕು ವರ್ಷಗಳ ನಂತರ 3೦೦ ರೂಪಾಯಿಯ ಸೀರೆ ಕೊಟ್ಟು ಅದಕ್ಕೆ ಮಾಟ ಮಂತ್ರ ಮಾಡಿಸಿ ನಿಮ್ಮ ಮತ ಸೆಳೆಯುವ ಸಂಚು ರೂಪಿಸಿದ್ದಾರೆ. ದಾನ ಧರ್ಮ ಮಾಡುವವರು ಕದ್ದು ಮುಚ್ಚಿ ಮಾಡೋದಿಲ್ಲ. ನಾಲ್ಕು ಜನರ ಮಧ್ಯೆ ದೇವರ ಗುಡಿಯಲ್ಲಿ ಉಡಿ ತುಂಬುವ ಕಾರ್ಯಕ್ರಮ ಮಾಡಿ ದಾನ ಮಾಡುತ್ತಾರೆ. ಅಭಿವೃದ್ಧಿಯ ಬಗ್ಗೆ ಮಾತನಾಡುವವರು ನೀರಾವರಿ…

Read More

ವಿಜಯಪುರ: ಸ್ವೀಪ್ ಸಮಿತಿ ವತಿಯಿಂದ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಕಲಾತ್ಮಕ ಚಿತ್ರಗಳನ್ನು ಬಿಡಿಸಿ, ಮತದಾನದ ಸಂದೇಶ ಸಾರುವ ಚಿತ್ರಗಳನ್ನು ಬಿಡಿಸುವುದರ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.ಕಲಾತ್ಮಕ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ನೂತನವಾಗಿ ಹೆಸರು ಸೇರ್ಪಡೆ ಹೊಂದಿ ಯುವ ಮತದಾರರು, ಮಹಿಳೆಯರು ಭಾಗವಹಿಸಿ ವಿವಿಧ ಕಲಾತ್ಮಕ ಚಿತ್ರಗಳನ್ನು ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.ತಾಲೂಕು ಪಂಚಾಯತಿಯ ಐಇಸಿ ಸಂಯೋಜಕ ಶಾಂತಪ್ಪ ಇಂಡಿ ಮಾತನಾಡಿ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ ಮತಚಲಾಯಿಸುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಾದ ಶ್ರೀಮತಿ ಸುನೀತಾ ಪಾಟೀಲ್, ಶ್ರೀಮತಿ ಮಹದೇವಿ ಚಿಕ್ಕಲಕಿ, ಶ್ರೀಮತಿ ಸವಿತಾ ವಸಟ್ಟಿ, ವಿಶಾಲ ಹಳ್ಳದ್, ಶ್ರೀಮತಿ ಭಾಗ್ಯಶ್ರೀ ಪತ್ತಾರ್ ಇತರರು ಉಪಸ್ಥಿತರಿದ್ದರು.ನಿಡಗುಂದಿ: ತಾಲೂಕಿನ ಯಲಗೂರ ಗ್ರಾಮದಲ್ಲಿ ತಾಲ್ಲೂಕು ಪಂಚಾಯಿತಿ, ತಾಲೂಕು ಸ್ವೀಪ್ ಸಮಿತಿ ಹಾಗೂ ಯಲಗೂರು ಗ್ರಾಮ ಪಂಚಾಯಿತಿ ವತಿಯಿಂದ ದಿನಾಂಕ: ೨೯.೦೪.೨೦೨೩ರಂದು ಮತದಾನದ ಜಾಗೃತಿ ಅಂಗವಾಗಿ ಮೆಣದಬತ್ತಿ ಜಾಥಾ ಹಮ್ಮಿಕೊಳ್ಳಲಾಯಿತು.ಈ…

Read More

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಗುರು ಬಸವಣ್ಣನವರ ಪ್ರೇರಣೆಯಿಂದ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ತತ್ವ ಅನುಸರಿಸುವುದಾಗಿ ಹೇಳುತ್ತಿರುವುದು ತಮ್ಮ ದುರಾಡಳಿತ ಕೃತ್ಯಗಳನ್ನು ಮುಚ್ಚಿಕೊಳ್ಳಲೆಂದು. ಆದರೆ ಅವರ ನಿಜವಾದ ತತ್ವ “ಬಿಜೆಪಿ-ಆರೆಸ್ಸೆಸ್ ಸಾಥ್, ಬಿಜೆಪಿ-ಆರೆಸ್ಸೆಸ್ ವಿಕಾಸ್” ಮಾತ್ರ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆರೋಪಿಸಿದರು.ಭಾನುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಈಗ ಶತಕ ಬಾರಿಸಿದರೂ ಅವರು ಅದರಲ್ಲಿ ಈವರೆಗೆ ತಾವು ತಮ್ಮ ಯಾವ ಘೋಷಣೆಯನ್ನೂ ಈಡೇರಿಸಿದ್ದು ಹೇಳಿಲ್ಲ. ಅದಾನಿಯ ಅಭಿವೃದ್ಧಿಯೇ ಅವರ ನಿಜ ‘ಮನ್ ಕಿ ಬಾತ್’ ಆಗಿದೆ ಎಂದು ವ್ಯಂಗ್ಯವಾಡಿದರು.ಕರ್ನಾಟಕದಲ್ಲಿ ಪ್ರವಾಹ ಬಂದು ಸಾವಿರಾರು ಜನ ನಿರಾಶ್ರಿತರಾಗಿ ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಾಗ ಹಾಗೂ ಕೋವಿಡ್ ಸಮಯದಲ್ಲಿ ಚಾಮರಾಜನಗರದ ಆಸ್ಪತ್ರೆಯಲ್ಲಿ 20 ಜನರ ಸಾವು ಘಟಿಸಿದಾಗ ಸೇರಿದಂತೆ ಇಂತಹ ಸಂದರ್ಭಗಳಲ್ಲಿ ಯಾವತ್ತೂ ಬಾರದ ಪ್ರಧಾನಿ ಮೋದಿಯವರು ಈಗ ಸರಕಾರಿ ವೆಚ್ಚದಲ್ಲಿ ಒಂದು…

Read More