ವಿಜಯಪುರ: ನಗರ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾದಳದ ಸಂಘಟನೆಯು ಸಧ್ಯ ಬಲಹೀನವಾಗಿದ್ದು ಇಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪೂರಕ ವಾತಾವರಣವಿದೆ. ಹೀಗಾಗಿ ಕ್ಷೇತ್ರದ ಹಿರಿಯರು, ಕಾರ್ಯಕರ್ತರೊಂದಿಗೆ ಸಮಾಲೋಚಿಸಿ, ಅವರ ಅಭಿಪ್ರಾಯದಂತೆ ನಾನು ಚುನಾವಣೆ ಕಣದಿಂದ ನಿವೃತ್ತಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ಬೆಂಬಲಿಸುವುದಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರ ಕ್ಷೇತ್ರದ ಅಭ್ಯರ್ಥಿ ಬಿ.ಎಚ್.ಮಹಾಬರಿ ಹೇಳಿದರು.
ನಗರದ ಖಾಸಗಿ ಹೊಟೇಲಿನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಈ ನಿರ್ಧಾರ ಪ್ರಕಟಿಸಿದರು.
ನಮ್ಮ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ ಮಾಡಗಿ ಅವರಿಗೆ ತಮ್ಮ ನಿರ್ಧಾರ ತಿಳಿಸಿದ್ದಾಗಿ ಹೇಳಿದ ಅವರು, ಕುಮಾರಸ್ವಾಮಿಯವರೂ ಸಹ ಎಲ್ಲಿ ನಮಗಿಂತ ಕಾಂಗ್ರೆಸ್ ಅಭ್ಯರ್ಥಿಯ ಶಕ್ತಿ ಹೆಚ್ಚಿದೆ ಅಂತಹ ಕಡೆಗಳಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಅಭ್ಯರ್ಥಿಗೆ ಶಕ್ತಿ ತುಂಬಬೇಕೆAದು ತಮ್ಮ ಭಾಷಣದಲ್ಲಿಯೇ ಹೇಳಿದ್ದಾರೆ. ಅದರಂತೆ ತಾವು ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಸಂಪೂರ್ಣ ಬೆಂಬಲಿಸುವುದಾಗಿ ಸ್ಪಷ್ಠಪಡಿಸಿದರು.
ತಾವು ತೆಗೆದುಕೊಂಡ ನಿರ್ಧಾರ ಪಕ್ಷದ ನಿರ್ಧಾರವಾಗಿರದೇ ತಮ್ಮ ವೈಯಕ್ತಿಕ ನಿರ್ಧಾರವಾಗಿದೆ. ತಾವು ಕಣದಲ್ಲುಳಿದಿದ್ದರೆ ಪಕ್ಷಕ್ಕೆ ೪-೫ಸಾವಿರ ಮತಗಳು ಸಿಗುವ ನಿರೀಕ್ಷೆ ಇತ್ತು. ಸ್ಪರ್ಧೆ ಮಾಡಿ ಕಳಪೆ ಪ್ರದರ್ಶನ ತೋರಿ ಪಕ್ಷದ ಹೆಸರಿಗೆ ಕಳಂಕ ತರಬಾರದೆಂದು ಹಾಗೂ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ನನ್ನಿಂದ ತೊಂದರೆಯಾಗಬಾರದೆAದು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು.
ಪಕ್ಷದ ವರಿಷ್ಠರು ನನಗೆ ಕೊನೆಯ ಕ್ಷಣದಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟರು. ಕಡಿಮೆ ಸಮಯದಲ್ಲಿ ಚುನಾವಣೆ ಎದುರಿಸುವುದೂ ಕಷ್ಟವಾಗಿತ್ತು. ನಾನೂ ಸಹ ಒಲ್ಲದ ಮನಸ್ಸಿನಿಂದ ಸ್ಪರ್ಧಿಸಿದ್ದೆ ಎಂದ ಅವರು, ತಾವು ಯಾವುದೇ ಒತ್ತಡಕ್ಕೆ ಒಳಗಾಗದೇ ಸ್ವಂತ ನಿರ್ಧಾರ ಕೈಗೊಂಡಿದ್ದು, ನನ್ನನ್ನು ಹೆದರಿಸುವ, ನನ್ನನ್ನು ಕೊಂಡುಕೊಳ್ಳುವ ತಾಕತ್ತು ಯಾರಿಗೂ ಇಲ್ಲ. ನಾನು ಹೆದರುವುದು ನಮ್ಮ ಪಕ್ಷದ ವರಿಷ್ಠರಿಗೆ ಮಾತ್ರ. ಅವರಿಗೆ ಕ್ಷಮೆ ಕೇಳಿ ಜೆಡಿಎಸ್ ಪಕ್ಷದಲ್ಲೇ ಮುಂದುವರಿಯುವುದಾಗಿ ತಿಳಿಸಿದರು.
ವಿಜಯಪುರ ನಗರದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಬ್ದುಲ್ ಹಮೀದ ಮುಶ್ರೀಪ್ ಅವರಿಗೆ ಮತ ನೀಡಬೇಕೆಂದು ಮತದಾರರಲ್ಲಿ ಮಹಾಬರಿ ಅವರು ಮನವಿ ಮಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment