ಮುದ್ದೇಬಿಹಾಳ: ರಾಜ್ಯದಲ್ಲಿ ಬ್ರಷ್ಟ ಬಿಜೆಪಿ ಸರಕಾರವನ್ನು ಬುಡಸಮೇತ ಕಿತ್ತೇಸೆದು ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನರು ಈಗಾಗಲೇ ತಿರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಗುರ್ತಿಗೆ ಮತ ನೀಡಬೇಕು ಎಂದು ಪುರಸಭೆ ಮಾಜಿ ಸದಸ್ಯ ಪಿಂಟು ಸಾಲಿನ ನಂ ಹೇಳಿದರು.
ಪಟ್ಟಣದ ಹುಡ್ಕೋ, ವಿದ್ಯಾನಗರ, ಸೇರಿದಂತೆ ಬಡಾವಣೆಗಳಲ್ಲಿ ಪಟ್ಟಣದ ಗಣ್ಯವ್ಯಾಪಾರಸ್ತರು, ಉದ್ಯಮಿಗಳು, ಮುಖಂಡರು ಕಾರ್ಯಕರ್ತರೊಂದಿಗೆ ಕಾಂಗ್ರೇಸ್ ಅಭ್ಯರ್ಥಿ, ಮಾಜಿ ಸಚಿವ ಸಿ.ಎಸ್.ನಾಡಗೌಡ ಅವರ ಪರವಾಗಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.
ಕಳೇದ ೨೫ ವರ್ಷಗಳಿಂದ ನಾಡಗೌಡರು ಕಾಂಗ್ರೇಸ್ ಪಕ್ಷನಿಷ್ಠರಾಗಿ ಮಾತ್ರವಲ್ಲದೇ ಹಿಂದಿನ ಮುಖ್ಯಮಂತ್ರಿಯಾಗಿದ್ದ ಎಸ್ ಬಂಗಾರಪ್ಪನವರ ಅಧಿಕಾರದಲ್ಲಿ ಸಚಿವರಾಗಿ ಹಾಗೂ ಹಲವಾರು ಹುದ್ದೆಗಳನ್ನು ಅಲಂಕರಿಸಿದ ಹಿರಿಯ ಸರಳ ಸಜ್ಜನಿಕೆಯ ವ್ಯಕ್ತಿತ್ವದ ರಾಜಕೀಯ ಅಜಾತ ಶತ್ರುಗಳಾಗಿ ರಾಜಕಾರಣ ನಡೆಸಿದಂತಹವರು. ಅವರ ಅಧಿಕಾರವಧಿಯಲ್ಲಿ ಮೇಲು ಕೀಳು, ಜಾತಿಧರ್ಮ ಎನ್ನುವ ಯಾವುದೇ ತಾರತಮ್ಯ ಮಾಡದೇ ಸಾಮಾಜಿಕ ನ್ಯಾಯದಡಿಯಲ್ಲಿ ಉತ್ತಮ ಉತ್ತಮ ಸೇವೆ ಮಾಡುವ ಮೂಲಕ ನಾಗರಬೆಟ್ಟ ಏತ ನಿರಾವರಿ, ಪೀರಾಪುರ ಏತ ನಿರಾವರಿ, ಚಿಮ್ಮಲಗಿ ಏತನಿರಾವರಿಯಂತ ನಿರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದದ್ದರಿಂದಾಗಿ ಇಂದು ನಮ್ಮ ಮತಕ್ಷೇತ್ರದಲ್ಲಿ ಇಂದು ಮೆಣಸಿನಕಾಯಿ, ಕಬ್ಬ, ದ್ರಾಕ್ಷಿಯಂತಹ ಇನ್ನು ವಿವಿಧ ವಾಣಿಜ್ಯಬೆಳೆಗಳನ್ನು ಬೆಳೆಯುವ ಮೂಲಕ ರೈತರು ಲಕ್ಷಾಂತರ ರೂಗಳನ್ನು ಆದಾಯ ಬರುವಂತೆ ಮಾಡಿದ ಕೀರ್ತಿಗೆ ಪಾತ್ರರಾದವರು. ಡೋಂಗಿ ರಾಜಕಾರಣ ಮಾಡುವ ಬಿಜೆಪಿಯವರ ಸುಳ್ಳು ಆಶ್ವಾಸನೆಯ ಮಾತುಗಳನ್ನು ನಂಬದೇ ನಿಜವಾದ ಬಡವರ, ದೀನ ದಲಿತರ, ಮಹಿಳೆಯರ, ರೈತರ ಪರವಾದ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ ಮತ ಚಲಾಯಿಸಬೇಕು ಎಂದರು.
ಈ ವೇಳೆ ಸಂಗಣ್ಣ ಬಿರಾದಾರ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ಗಣ್ಯ ಉದ್ಯಮಿಗಳಾದ ಗಣೇಶ ಅನ್ನಗೌನಿ, ಅಜೀತ ಓಸ್ವಾಲ್, ಮುತ್ತಣ್ಣ ರಾಯಗೊಂಡ, ಮುತ್ತು ಕಡಿ, ಅಶೋಕ ರೇವಡಿ, ಲಾಳೆಮಶ್ಯಾಕ ನಾಯ್ಕೋಡಿ, ಪುರಸಭೆ ಸದಸ್ಯರಾದ ಮಹಿಬೂಬ ಗೊಳಸಂಗಿ, ಸಮೀರ ದ್ರಾಕ್ಷಿ, ಅಲ್ಲಾಭಕ್ಷ ಢವಳಗಿ, ನಾಗಬೂಷಣ ನಾವದಗಿ, ರಾಜೇಂದ್ರ ರಾಯಗೊಂಡ, ಮುನ್ನಾ ಮಕಾಂದಾರ, ಹುಸೇನ ಮುಲ್ಲಾ ಸೇರಿದಂತೆ ಮತ್ತಿತರರು ಇದ್ದರು.
Related Posts
Add A Comment