ಆಲಮಟ್ಟಿ: ಅರಣ್ಯ ದಿನಗೂಲಿ ಕಾರ್ಮಿಕರ ಶ್ರಮದಿಂದಾಗಿ ಆಲಮಟ್ಟಿಯಲ್ಲಿ ಸುಂದರ ಉದ್ಯಾನ ಮೈದೆಳೆದು, ಇಡೀ ದೇಶದಲ್ಲಿಯೇ ಗಮನಸೆಳೆಯುತ್ತಿದೆ ಎಂದು ಕೆಬಿಜೆಎನ್ ಎಲ್ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಹೇಳಿದರು.
ಆಲಮಟ್ಟಿಯ ಡ್ಯಾಂಸೈಟ್ ನರ್ಸರಿಯಲ್ಲಿ ಸೋಮವಾರ ಅರಣ್ಯ ಇಲಾಖೆಯವರು ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಈಗ ಹಲವಾರು ಕಾರ್ಮಿಕರ ಸಂಘಟನೆಗಳಿದ್ದು, ಕಾರ್ಮಿಕರಿಗೆ ಸಕಲ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದರು.
ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ ಮಾತನಾಡಿ, ಕಾರ್ಮಿಕರ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಅರಣ್ಯಾಧಿಕಾರಿ ಪ್ರವೀಣ ಹಚ್ಯಾಳಕರ, ನಾಗಪ್ಪ, ಪತ್ರಕರ್ತರಾದ ಬಾಬು ಮುರಾಳ, ಬೀರು ಬೆನ್ನೂರ ಕಾರ್ಮಿಕ ಮುಖಂಡರಾದ ಭೀಮಶಿ ನಾಯಕ, ಚನ್ನಪ್ಪ ಕಣಕಾಲ, ಲಕ್ಷಿö್ಮÃ ಗೌಡರ ಇನ್ನೀತರರು ಉಪಸ್ಥಿತರಿದ್ದರು.
ಬಂದ್ ಆದ ಉದ್ಯಾನಗಳು
ಕಾರ್ಮಿಕರ ದಿನಾಚರಣೆ ಅಂಗವಾಗಿ ಆಲಮಟ್ಟಿಯ ರಾಕ್, ಸಂಗೀತ, ಮೊಘಲ್ ಉದ್ಯಾನ ಸೇರಿ ಎಲ್ಲಾ ಉದ್ಯಾನಗಳನ್ನು ಸೋಮವಾರ ಬಂದ್ ಮಾಡಲಾಗಿತ್ತು. ಬಂದ್ ವ್ಯಾಪಕ ಪ್ರಚಾರ ಇಲ್ಲದ್ದರಿಂದ ದೂರ ದೂರದಿಂದ ಬಂದಿದ್ದ ಪ್ರವಾಸಿಗರು ನಿರಾಶೆಯಿಂದ ಮರಳಬೇಕಾಯಿತು.