ಯಡ್ರಾಮಿ: ಜಾತ್ಯಾತೀತ ಜನತಾದಳ ಪಕ್ಷ ರೈತರ ಪಕ್ಷ. ಸಾಮಾನ್ಯ ರೈತ ಕುಟುಂಬದಿAದ ಬಂದು, ಹಗಲಿರುಳೆನ್ನದೆ ಜನರ ಸೇವೆ ಮಾಡುತ್ತಿರುವ ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದರೆ ನಮ್ಮ ಸರ್ಕಾರದಲ್ಲಿ ಮಂತ್ರಿಯನ್ನಾಗಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಯಡ್ರಾಮಿ ಪಟ್ಟಣದ ಗಂಗಯ್ಯ ಗುತ್ತೇದಾರ ಲೇಔಟ್ ನಲ್ಲಿ ಸೋಮವಾರದಂದು, ಜೇವರ್ಗಿ ವಿಧಾನಸಭೆ ಕ್ಷೇತ್ರದ ಜೇಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಪರ ನಡೆದ ಬೃಹತ್ ಸ್ವಾಭಿಮಾನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನರಿಬೋಳ ಕುಟುಂಬಕ್ಕೂ ಜನತಾದಳಕ್ಕೂ ಅವಿನಾಭವ ಸಂಬAದ ಇದೆ. ದಿ.ಶಿವಲಿಂಗಪ್ಪಗೌಡ ಪಾಟೀಲ ನರಿಬೋಳ ಅವರು ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಬದಲ್ಲಿ ಜನತಾದಳವನ್ನು ಜಿಲ್ಲೆಯಲ್ಲಿ ಸಂಘಟನೆಯನ್ನು ಮಾಡಿದ್ದರು. ಆದರೆ ಕಾರಣಾಂತರಗಳಿAದ ಜನತಾದಳ ಪರಿವಾರವನ್ನು ತೊರೆದಿದ್ದರು. ಆದರೆ ದೈವಬಲದಿಂದ ಮತ್ತೆ ಅವರ ಕುಟುಂಬ ಮಾತೃಪಕ್ಷ ಜನತಾದಳಕ್ಕೆ ಮರಳಿ ಬಂದಿದ್ದಾರೆ. ಅವರ ಕುಟುಂಬದಲ್ಲಿರುವ ೪ ಜನ ಅಣ್ಣ ತಮ್ಮಂದಿರು ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಬಾಗಿಯಾಗುವ ಜಾಯಮಾನದವರಾಗಿದ್ದಾರೆ. ಅವರನ್ನು ೩೦ ಸಾವಿರ ಮತಗಳ ಅಂತರದಿAದ ಗೆಲ್ಲಿಸುವ ಮೂಲಕ ಬೆಂಗಳೂರಿನ ಹಾಲಿ ಶಾಸಕರಿಗೆ ದೂರವಿಡಿ ಎಂದರು.
ಅವರು ಗೆದ್ದರೆ ಕೇವಲ ಜೇವರ್ಗಿ ತಾಲೂಕು ಅಷ್ಟೆ ಅಲ್ಲ ಕಲಬುರಗಿ ಜಿಲ್ಲೆ ಅಭಿವೃದ್ದಿ ಮಾಡಲು ಅವಕಾಶ ದೊರಕಿಸಿಕೊಟ್ಟಂತಾಗುತ್ತದೆ. ತಾಲೂಕಿನಲ್ಲಿ ಕೈಗಾರಿಕೆಗೆ ಹೆಚ್ಚು ಒತ್ತು ಕೊಡುವ ಮೂಲಕ ಯುವಕರಿಗೆ ಉದ್ಯೋಗ ಒದಗಿಸಿ ಕೊಡುತ್ತೇನೆ. ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸುತ್ತೇನೆ. ನನಗೆ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ಸನ್ಮಾನ ಸಮಾರಂಭಕ್ಕೆ ಬರುವ ಅವಕಾಶ ನೀಡಿ ಎಂದರು.
ಈ ಬಾಗ ಅತಿ ಹೆಚ್ಚು ತೊಗರಿ ಬೆಳೆ ಬೆಳೆಯುವ ಪ್ರದೇಶವಾಗಿದೆ. ಆದರೆ ಕಳೆದ ಬಾರಿ ಅತಿಯಾದ ಮಳೆಯಿಂದ ತೊಗರಿ ಬೆಳೆ ಹಾನಿಗೊಳಗಾಗಿದೆ. ಆದರೆ ರೈತರಿಗೆ ನ್ಯಾಯ ಒದಗಿಸಿ ಕೊಡುವಂತ ಕೆಲಸ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮಾಡಲಿಲ್ಲ. ಇದರ ಫಲವಾಗಿ ಜಿಲ್ಲೆಯಲ್ಲಿ ಸುಮಾರು ೨೬ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಪರವಾಗಿ ನಿಲ್ಲುವ ಏಕೈಕ ಪಕ್ಷ ಎಂದರೆ ಅದು ಜ್ಯಾತ್ಯಾತೀತ ಜನತಾದಳ ಪಕ್ಷ. ರೈತರ ಸರ್ಕಾರ ತರಲಿಕ್ಕಾಗಿ ಕಳೆದ ನಾಲ್ಕುವರೆ ತಿಂಗಳಲ್ಲಿ ನನ್ನ ಆರೋಗ್ಯವನ್ನು ಲೆಕ್ಕಿಸದೆ ದಿನಕ್ಕೆ ೧೮ ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ. ನನ್ನ ಹೋರಾಟಕ್ಕೆ ಜಾತಿ ಬೇದ ಮರೆತು ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರನ್ನು ಗೆಲ್ಲಿಸುವ ಮೂಲಕ ನನಗೆ ಶಕ್ತಿಯನ್ನು ನೀಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಮುಖಂಡ ಹಣಮಂತ ಯಳಸಂಗಿ ಮಾತನಾಡಿದರು.
ಅಶೋಕ ದೊಡಮನಿ, ಮಲ್ಲಿಕಾರ್ಜುನ ಭರ್ಮಾ, ಗುರಣ್ಣ ಐನಾಪೂರ, ಅಶೋಕ ಬಡಿಗೇರ ಹಾಗೂ ದಲಿತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರಿಗೆ ೧ಲಕ್ಷ ೧೧ ಸಾವಿರ ರೂಪಾಯಿ ದೇಣಿಗೆ ನೀಡಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಧರ್ಮರಾಯ ಜೋಗುರ, ಸಿದ್ದಣ್ಣ ಗಡದ ಮಂದೇವಾಲ, ಶರಣಗೌಡ ಬಿರಾದಾರ ಯಲಗೋಡ, ಪರಮಾನಂದ ಸರ್ಮಾ ಯಲಗೋಡ, ಸೌದಾಗರ ಜೇವರ್ಗಿ ತಮ್ಮ ಅಪಾರ ಬೆಂಬಲಿಗರೊAದಿಗೆ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಮಹಗಾಂವಕರ್, ಸೇಡಂ ಜೆಡಿಎಸ್ ಅಭ್ಯರ್ಥಿ ಬಾಲರಾಜ ಗುತ್ತೇದಾರ, ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಕೃಷ್ಣ ರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ರವೂಫ ಹವಲ್ದಾರ, ಗೊಲ್ಲಾಳಪ್ಪ ಕಡಿ, ರಮೇಶಬಾಬು ವಕಿಲ, ಮಹಾನಿಂಗಪ್ಪಗೌಡ ಬಂಡೆಪ್ಪಗೌಡ್ರ, ದಂಡಪ್ಪ ಸಾಹು ಕುಳಗೆರಿ, ದೇವಿಂದ್ರಪ್ಪಗೌಡ ಮಾಗಣಗೆರಿ, ಬಸವರಾಜಗೌಡ ಅರಳಗುಂಡಗಿ, ಬಸವರಾಜ ಹೂಗಾರ, ಅಮೀರಪಟೇಲ ಚಿಂಚೋಳಿ, ಶಂಕರ ಕಟ್ಟಿಸಂಗಾವಿ, ಚಂದ್ರಕಾAತ ಕುಸ್ತಿ, ನಿಂಗನಗೌಡ ಜವಳಗಿ, ಅಪ್ಪುಗೌಡ ಪಾಟೀಲ ಇದ್ದರು.
ನಿಮ್ಮ ಋಣ ಜೀವವಿರುವವರೆಗೂ ಮರೆಯೊಲ್ಲ
ನಾನು ಚುನಾವಣೆಯಲ್ಲಿ ಸ್ಪರ್ದೆ ಮಾಡುತ್ತಿರುವುದು ನನ್ನ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಕ್ಷೇತ್ರದ ಜನರ ಒತ್ತಾಯಕ್ಕೆ. ನಾನು, ನಮ್ಮ ಕುಟುಂಬ ದಶಕಗಳ ಕಾಲ ಕಟ್ಟಿದ ಪಕ್ಷ ನನಗೆ ಟಿಕೇಟ್ ನೀಡದಿದ್ದಾಗ ನನಗೆ ಬೆಂಬಲವಾಗಿ ನಿಂತು ನನಗೆ ಬಲವನ್ನು ತುಂಬಿದ್ದೀರಿ. ಅಲ್ಲದೆ ಇಂದು ಸಾವಿರಾರು ಸ್ವಾಭಿಮಾನಿ ಜನ ನನಗೆ ಬೆಂಬಲಿವಾಗಿ ನಿಂತಿದ್ದೀರಿ. ನಿಮ್ಮ ಈ ಋಣ ನನ್ನ ಜೀವ ಇರುವರೆಗೂ ಮರೆಯೊಲ್ಲ ಎಂದು ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ಹೇಳಿದರು.
ದೊಡ್ಡಪ್ಪಗೌಡ ಪಾಟೀಲರು ಗೆದ್ದರೆ ಮರಳಿ ಬಿಜೆಪಿ ಪಕ್ಷಕ್ಕೆ ಹೋಗುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ಸೋಲನ್ನು ಒಪ್ಪಿಕೊಂಡಿದೆ. ಇಲ್ಲಿ ಸೇರಿರುವ ಸಾವಿರಾರು ಸ್ವಾಭಿಮಾನಿ ಜನತೆಯ ಸಾಕ್ಷಿಯಾಗಿ ಹೇಳುತ್ತೇನೆ ಮರಳಿ ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ. ಈ ಬಾರಿ ಎಚ್.ಡಿ ಕುಮಾರಸ್ವಾಮಿ ಖಂಡಿತವಾಗಿ ಮುಖ್ಯಮಂತ್ರಿ ಆಗುತ್ತಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ತಾಲೂಕಿನ ರೈತರ ಬಹುದಿನದ ಕನಸು ಮಲ್ಲಾಬಾದ ಏತ ನಿರಾವರಿ ಕಾಮಗಾರಿ ಪೂರ್ಣ ಮಾಡಿಸುವುದರ ಜತೆಗೆ ತಾಲೂಕಿನ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ. ತಾಲೂಕಿನ ಜನತೆ ಯಾವುದೇ ಆಸೆ ಆಮೀಷಗಳಿಗೆ ಬಲಿಯಾಗದೆ ನಾನೆ ಅಭ್ಯರ್ಥಿ ಎಂದು ತಿಳಿದು ಮತದಾನ ಮಾಡಿ ಆಶೀರ್ವದಿಸಿದರೆ ನಿಮ್ಮ ಜೀತದಾಳಾಗಿ ದುಡಿಯುತ್ತೇನೆ ಎಂದರು.