ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ ಧರ್ಮನೇ ಗೆಲ್ಲೋದು. ಅಧರ್ಮ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ಢವಳಗಿ, ತಾರನಾಳ ಗ್ರಾಮಗಳಲ್ಲಿ ಕಾಂಗ್ರೇಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿದರು.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಹಣ, ಹೆಂಡ ಹಂಚಿ ಎಷ್ಟೇ ಕುತಂತ್ರದ ರಾಜಕಾರಣ ಮಾಡಿದರೂ ಧರ್ಮವನ್ನು ಅಳಿಸಿ ಹಾಕೋದಕ್ಕೆ ಸಾಧ್ಯವೇ ಇಲ್ಲ. ಅವರ ಐದು ವರ್ಷದ ರಾವಣನ ರಾಜ್ಯ ಅಂತ್ಯವಾಗಿ ಮೇ 13 ರಂದು ಸಿ.ಎಸ್.ನಾಡಗೌಡರ ನೇತೃತ್ವದ ರಾಮ ರಾಜ್ಯ ಉದಯವಾಗುತ್ತದೆ ಎಂದರು.
ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಾತನಾಡಿ, ನಾಲ್ಕು ವರ್ಷಗಳ ನಂತರ 3೦೦ ರೂಪಾಯಿಯ ಸೀರೆ ಕೊಟ್ಟು ಅದಕ್ಕೆ ಮಾಟ ಮಂತ್ರ ಮಾಡಿಸಿ ನಿಮ್ಮ ಮತ ಸೆಳೆಯುವ ಸಂಚು ರೂಪಿಸಿದ್ದಾರೆ. ದಾನ ಧರ್ಮ ಮಾಡುವವರು ಕದ್ದು ಮುಚ್ಚಿ ಮಾಡೋದಿಲ್ಲ. ನಾಲ್ಕು ಜನರ ಮಧ್ಯೆ ದೇವರ ಗುಡಿಯಲ್ಲಿ ಉಡಿ ತುಂಬುವ ಕಾರ್ಯಕ್ರಮ ಮಾಡಿ ದಾನ ಮಾಡುತ್ತಾರೆ. ಅಭಿವೃದ್ಧಿಯ ಬಗ್ಗೆ ಮಾತನಾಡುವವರು ನೀರಾವರಿ ಯಾಕೆ ಮಾಡಿಲ್ಲ? ಸಿಸಿ ರಸ್ತೆ ಮಾಡಿಸಿ ದುಡ್ಡು ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮುಖಂಡರಾದ ಸಿದ್ದನಗೌಡ ಬಿರಾದಾರ, ಮಲ್ಲನಗೌಡ ಸಿದ್ದರೆಡ್ಡಿ, ರಾಜೇಂದ್ರಗೌಡ ರಾಯಗೊಂಡ, ಡಾ.ಪ್ರಭು ಪಾಟೀಲ ಗುಡಿಹಾಳ, ಸೇಖರಗೌಡ ಕುಪ್ಪಿ, ಬಸನಗೌಡ ಪಾಟೀಲ ಕುಂಟೋಜಿ, ಸುರೇಶ ಪಾಟೀಲ, ವಿನೋದ ಕೊಣ್ಣೂರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment