Author: editor.udayarashmi@gmail.com

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರು ಮತ್ತು ಇಬ್ಬರು ಸಹ ಪ್ರಾಧ್ಯಾಪಕರಿಗೆ ಪಿಎಚ್.ಡಿ ಪದವಿ ಲಭಿಸಿದೆ. ರಾಜಸ್ಥಾನದ ಜಗದೀಶ್ ಪ್ರಸಾದ್ ಜಬರ್ ಮಾಲ್ ಟಿಬರೆವಾಲಾ ವಿಶ್ವವಿದ್ಯಾಲಯ ಮೂವರಿಗೆ ಪಿಎಚ್.ಡಿ ಪ್ರಧಾನ ಮಾಡಿದೆ. ಕಾಲೇಜಿನ ಪ್ರಾಚಾರ್ಯ ಪ್ರೊ. ಶಾಲಮೊನ ಚೋಪಡೆ ಅವರು ಮಂಡಿಸಿದ “ಹೃದಯ ಸಂಬಂಧಿ ಪರಿಧಮನಿಯ ಕಾಯಿಲೆಯ ಹೆಚ್ಚಿನ ಅಪಾಯದ ಗುಂಪಿನ ಆರೋಗ್ಯಕರ ಹೃದಯ ಜೀವನ ಶೈಲಿಗೆ ಸಂಬಂಧಿಸಿದ ಅರಿವು ಮತ್ತು ದೃಷ್ಟಿಕೋನಗಳ ಮೇಲೆ ರಚನಾತ್ಮಕ ಜಾಗೃತಿ ಕಾರ್ಯಕ್ರಮದ ಪರಿಣಾಮ” ಮಹಾಪ್ರಬಂಧಕ್ಕೆ ಪಿಎಚ್.ಡಿ ಲಭಿಸಿದ್ದು, ಡಾ.ಅನುಪಮಾ ಓಕ್ ಅವರು ಮಾರ್ಗದರ್ಶಕರಾಗಿದ್ದಾರೆ. ಇದೇ ಕಾಲೇಜಿನ ಕಮ್ಯೂನಿಟಿ ನರ್ಸಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಸಂತೋಷ ಇಂಡಿ ಅವರು ಮಂಡಿಸಿದ “ಅಂಗನವಾಡಿ ಮತ್ತು ಶಾಲಾಪೂರ್ವ ಮಕ್ಕಳ ಆಹಾರ ಪದ್ಧತಿ, ಆಂಥ್ರೊಪೆಮೆಟ್ರಿಕ್ ಅಳತೆಗಳು ಮತ್ತು ಬೆಳವಣಿಗೆ ಮತ್ತು ಅಭಿವೃದ್ಧಿಯ ಅಭಿವೃದ್ಧಿಯಲ್ಲಿ ಅವರ ಪೋಷಕರ ಪಾತ್ರವನ್ನು ಮೌಲ್ಯಮಾಪನ ಮಾಡಲು ತುಲನಾತ್ಮಕ ಅಧ್ಯಯನ” ಮಹಾಪ್ರಬಂಧಕ್ಕೆ ಪಿಎಚ್.ಡಿ ಲಭಿಸಿದ್ದು, ಡಾ. ರಾಜೇಶ್ ಕೊಣ್ಣೂರಅವರು ಮಾರ್ಗದರ್ಶಕರಾಗಿದ್ದಾರೆ.…

Read More

ವಿಜಯಪುರ: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಬಂಜಾರ ಸಮುದಾಯದ ಬೆನ್ನಿಗೆ ಚೂರಿ ಹಾಕಿದ್ದು, ಈ ಚುನಾವಣೆಯಲ್ಲಿ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಹೇಳಿದ್ದಾರೆ. ತಿಕೋಟಾ ತಾಲೂಕಿನ ಟಕ್ಕಳಕಿ ಎಲ್.ಟಿ.1 ರಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು. 1978ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ದೇವರಾಜ ಅರಸ ಅವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ತಂದೆ ಕೆ.ಟಿ.ರಾಠೋಡ ಸಚಿವರು ಹಾಗೂ ಮತ್ತು ಎಲ್.ಆರ್.ನಾಯಕ ರಾಜ್ಯಸಭೆ ಸದಸ್ಯರಾಗಿ ಮಾಡಿದ ಮನವಿಗೆ ಸ್ಪಂದಿಸಿ ಕಾಂಗ್ರೆಸ್ ಬಂಜಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿತ್ತು. ಈಗ 40 ವರ್ಷಗಳ ನಂತರವೂ ನಮ್ಮ ಸಮಾಜ ಇನ್ನೂ ಬಡತನ ರೇಖೆಗಿಂತಲೂ ಕೆಳಗಿದೆ. ಸಮುದಾಯದ ಶೇ.90 ರಷ್ಟು ಜನ ಈಗಲೂ ಗುಳೆ ಹೋಗುತ್ತಾರೆ. ಅವರ ರಕ್ಷಣೆ ಮಾಡುವ ಬದಲು ಶ್ರೀಮಂತರ ಪಕ್ಷ ಬಿಜೆಪಿ ಒಳಮಿಸಲಾತಿ ನೆಪದಲ್ಲಿ ನಮಗೆ ಅನ್ಯಾಯ ಮಾಡಿದೆ. 341ರ ಅನುಚ್ಛೇದ ಅಡಿ…

Read More

ಕಾಂಗ್ರೆಸ್ ನಾಯಕರೆ ಕೀಳುಮಟ್ಟದ ಹೇಳಿಕೆ ಕೈಬಿಡಿ :ಅರುಣಸಿಂಗ್ ವಿಜಯಪುರ : ಅಲ್ಪಸಂಖ್ಯಾತ ನಾಯಕತ್ವ ಬಿಜೆಪಿಯಲ್ಲಿ ಪ್ರಬಲಗೊಂಡರೆ, ಅವರಿಗೂ ಸಹ ವಿಧಾನಸಭೆ ಚುನಾವಣೆಗೆ ಟಿಕೇಟ್ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಹೇಳಿದರು. ಸೋಮವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎನ್ನುವುದು ಬಿಜೆಪಿ ಆಶಯವಾಗಿದೆ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ವರ್ಗಬೇಧ ಮಾಡದೇ ಬಿಜೆಪಿ ಕಲ್ಪಿಸುತ್ತಿದೆ ಎಂದರು. ಈ ವೇಳೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ಒಂದೇ ಟಿಕೇಟ್ ನೀಡಲಾಗಿಲ್ಲ ಎಂದು ತೂರಿಬಂದ ಪ್ರಶ್ನೆಗೆ ಉತ್ತರಿಸಿದ ಅರುಣ ಸಿಂಗ್, ಅಲ್ಪಸಂಖ್ಯಾತ ಮೋರ್ಚಾ ಬಿಜೆಪಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ, ಸ್ಥಳೀಯ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಲಾಗಿದೆ, ಪಕ್ಷದಲ್ಲಿ ಅಲ್ಪಸಂಖ್ಯಾತ ನಾಯಕತ್ವ ಇನ್ನೂ ಪ್ರಬಲವಾಗಬೇಕಿದೆ, ಗೆಲ್ಲುವ ಕುದುರೆಗಳಿಗೆ ಮಹತ್ವ ನೀಡಲಾಗಿದೆ, ಅಲ್ಪಸಂಖ್ಯಾತ ಮುಖಂಡರಲ್ಲಿ ಗೆಲ್ಲುವ ಕುದುರೆ ಇದ್ದರೆ ಅವರಿಗೆ ಪ್ರಾತಿನಿಧ್ಯ ಮುಂದೆ ದೊರಕಲಿದೆ ಎಂದು ಅರುಣಸಿಂಗ್ ಸ್ಪಷ್ಟಪಡಿಸಿದರು. ಯತ್ನಾಳ ಅವರು ಸೋನಿಯಾ ಗಾಂಧೀ ಅವರನ್ನು ವಿಷಕನ್ಯೆ…

Read More

ಜೆಡಿಎಸ್ ಅಭ್ಯರ್ಥಿ ಚುನಾವಣಾ ಕಣದಿಂದ ನಿವೃತ್ತಿ ಹಿಂದಿನ ಮರ್ಮ ಬಹಿರಂಗಪಡಿಸಲು ಆಗ್ರಹ ವಿಜಯಪುರ: ನಗರ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬಂದೇನವಾಜ ಮಹಾಬರಿ ಚುನಾವಣಾ ಕಣದಿಂದ ಹಿಂದೆ ಸರಿದು ಕಾಂಗ್ರೇಸ್ ಬೆಂಬಲಿಸಿದ ಕುರಿತು ರಾಜ್ಯದ ಜನತೆಗೆ ಜೆಡಿಎಸ್ ಪಕ್ಷದ ನಾಯಕರು ಬಹಿರಂಗಪಡಿಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘು ಅಣ್ಣಿಗೇರಿ ಆಗ್ರಹಿಸಿದ್ದಾರೆ. ನಗರದ ಹೊಟೇಲಿನಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ಚುನಾವಣೆ ಕಣದಿಂದ ಜೆಡಿಎಸ್‌ ಅಭ್ಯರ್ಥಿ ಮಹಾಬರಿ ಹಿಂದೆ ಸರಿದಿದ್ದಾರೆ. ಇದರ ಹಿಂದೆ ಕಾಂಗ್ರೆಸ್, ಜೆಡಿಎಸ್‌ ಒಳ ಒಪ್ಪಂದ ಇದೆ ಎಂದು ಅಣ್ಣಿಗೇರಿ ಆರೋಪಿಸಿದರು. ಕಾಂಗ್ರೆಸ್, ಜೆಡಿಎಸ್‌ ಸೇರಿಕೊಂಡು ಗದ್ದಲ, ಗೂಂಡಾಗಿರಿ ಮಾಡಲು ಹೊರಟಿದ್ದಾರೆ. ಅಲ್ಲದೇ, ಜೆಡಿಎಸ್‌, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳೆಂದು ಈ ಮೂಲಕ ತೊರಿಸಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು. ಈ ಕುರಿತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ರಾಜ್ಯದ ಜನತೆಗೆ ಸ್ಪಷ್ಠನೆ ನೀಡಬೇಕು ಎಂದರು ಅಭಿವೃದ್ದಿ, ಸುರಕ್ಷತೆ, ಹಿಂದುತ್ವ ಮೇಲೆ…

Read More

ಚಡಚಣ:ನಾಗಠಾಣ ಮತಕ್ಷೇತ್ರ ಎಲ್ಲಾ ನೀರಾವರಿ ಯೋಜನೆಗಳನ್ನುಅನುಷ್ಠಾನಗೊಳಿಸಿ, ರೈತರನ್ನು ಸ್ವಾವಲಂಬಿಗಳನ್ನಾಗಿಸಿ ಅವರ ಬದುಕು ಹಸನಾಗಿಸಲು ನಮ್ಮ ಪಕ್ಷ ಬದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಹೇಳಿದರು. ಪಟ್ಟಣದಲ್ಲಿ ಸೋಮವಾರ ಆಯೋಜಿಸಲಾದ ನಾಗಠಾಣ ಮತಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ದೇವಾನಂದ ಚವ್ಹಾಣ ಪರ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ನಮ್ಮ ಪಂಚರತ್ನ ಯೋಜನೆಯ ಉದ್ದೇಶ ಬಡವರಿಗೆ,ರೈತರ ಮಕ್ಕಳು ,ಹಾಗೂ ಕೂಲಿ ಕಾರ್ಮಿಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದು,ಭೂ ರಹಿತ ಕೂಲಿ ಕಾರ್ಮಿಕರಿಗೆ ಮಾಸಿಕ 2 ಸಾವಿರ ಸಹಾಯ ಧನ, ಬಿತ್ತನೆ ಸಮಯದಲ್ಲಿ ರೈತರಿಗೆ ಪ್ರತಿ ಏಕರೆ ಪ್ರದೇಶಕ್ಕೆ 10 ಸಾವಿರ ಸಹಾಯಧನ, ಬಾಣಂತಿಯರಿಗೆ ಉತ್ತಮ ಗುಣಮಟ್ಟದ ಆಹಾರಕ್ಕಾಗಿ ಆರು ತಿಂಗಳುಗಳ ವರೆಗೆ ಪ್ರತಿ ತಿಂಗಳು 6 ಸಾವಿರ ಸಹಾಯಧನ, ಅಂಗವಿಕಲರು, ವಿಧವೆಯರಿಗೆ ಪ್ರತಿ ತಿಂಗಳು 2 ಸಾವಿರ, ವೃದ್ಧಾಪ್ಯ ವೇತನದಾರರಿಗೆ ಮಾಸಿಕ 5 ಸಾವಿರ ಗೌರವಧನ ಹೆಚ್ಚಿಸುವದು, ಬಡವರಿಗೆ ವಾರ್ಷಿಕ 5 ಸಿಲಿಂಡರ ಉಚಿತವಾಗಿ ನೀಡುವದಲ್ಲದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ…

Read More

ವಿಜಯಪುರ: ಎಂ. ಬಿ. ಪಾಟೀಲರು ಶ್ರಮಿಕ ವರ್ಗದ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಬಬಲೇಶ್ವರ ಮತಕ್ಷೇತ್ರದ ಹಂಚನಾಳ ಎಲ್.ಟಿ.-1, ಎಲ್.ಟಿ.-2, ಎಲ್.ಟಿ.-3, ಹಂಚನಾಳ ಪಿ.ಎಚ್. ಗ್ರಾಮ, ಬರಟಗಿ ಎಲ್.ಟಿ.-3 ಮತ್ತು ಎಲ್.ಟಿ.-3 ಬಿ ಗಳಲ್ಲಿ ಮನೆ ಮನೆಗೆ ತೆರಳಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರ ಪರ ಮತಯಾಚಿಸಿ ಅವರು ಮಾತನಾಡಿದರು. ಜಲಸಂಪನ್ಮೂಲ ಸಚಿವರಾಗಿ ಮತ್ತು ಶಾಸಕರಾಗಿ ಎಂ. ಬಿ. ಪಾಟೀಲರು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರೈತಾಪಿ ಮತ್ತು ಶ್ರಮಿಕರು ಗುಳೆ ಹೋಗುವುದನ್ನು ತಪ್ಪಿಸಿದ್ದಾರೆ. ಸರ್ವ ಜನರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಿ ಪೂರ್ಣಗೊಳಿಸಿದ್ದಾರೆ. ಜಾತ್ಯತೀತ ಮತ್ತು ಧರ್ಮಾತೀತವಾಗಿ ಕೆಲಸ ಮಾಡಿದ್ದಾರೆ. ಈಗ ಸಮುದಾಯ ಸ್ಥಳೀಯವಾಗಿ ಕಾಯಕ ಮಾಡಲು ಅನುಕೂಲವಾಗಿದೆ. ಅಷ್ಟೇ ಅಲ್ಲ, ದೇವಸ್ಥಾನಗಳ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಕುಡಿಯಲು ನೀರು ಪೂರೈಕೆ, ಶಾಲಾ ಕಟ್ಟಡಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಸಿ.ಸಿ ರಸ್ತೆ ಹಾಗೂ ನೀರಾವರಿ…

Read More

ಕಲಕೇರಿ: ಸಮಿಪದ ಕೆಸರಟ್ಟಿ,ಬಿ ಬಿ ಇಂಗಳಗಿ, ಹಂಚಲಿ, ಅಂಬಳೂರ ಗ್ರಾಮದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಹಾಗೂ ತಮ್ಮ ಅಧಿಕಾರಾವಧಿಯಲ್ಲಿ ಮತಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ಕ್ಷೇತ್ರದ ಸಂಪೂರ್ಣ ನೀರಾವರಿಗಾಗಿ ತಮ್ಮನ್ನು ಬೆಂಬಲಿಸುವಂತೆ ಕೋರಿ ಮತ ಯಾಚಿಸಿದರು.ಪಕ್ಷದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು

Read More

ಸಿಂದಗಿ: ಮಕ್ಕಳು ಬೌದ್ಧಿಕವಾಗಿ ಕ್ರಿಯಾಶೀಲರಾಗಿ ಬೆಳೆಯಲು ಬೇಸಿಗೆ ಶಿಬಿರಗಳು ತುಂಬಾ ಸಹಕಾರಿ ಎಂದು ಗುರುದೇವ ಆಶ್ರಮದ ಶಾಂತಗಗಾಧರ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಗುರುದೇವ ಆಶ್ರಮದ ಸಭಾ ಭವನದಲ್ಲಿ ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಏ.10ರಿಂದ 20 ದಿನಗಳ ಕಾಲ ಬೇಸಿಗೆ ಕಲಾಮೇಳದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾ ಶಿಬಿರಗಳಿಂದ ಮಕ್ಕಳಲ್ಲಿನ ಪ್ರತಿಭೆಗೆ ಅವಕಾಶ ನೀಡಿದಂತಾಗುತ್ತದೆ. ಪಾಲಕರು ಮಕ್ಕಳಿಗೆ ಬರೀ ಓದು ಓದು ಎಂದು ಒತ್ತಡ ಹಾಕದೆ, ಈ ರೀತಿಯ ಕಮ್ಮಟಗಳಿಗೆ ಕಳಿಸುವುದರಿಂದ ನಿಮ್ಮ ಮಕ್ಕಳು ತುಂಬಾ ಚಟುವಟಿಕೆಯಿಂದ ಎಲ್ಲದರಲ್ಲಿ ಮುಂದೆ ಬರುತ್ತಾರೆ ಎಂದರು. ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಗರಂಜನಿ ಸಂಗೀತ ಅಕಾಡಮಿ ಮುಖ್ಯಸ್ಥ ಡಾ. ಪ್ರಕಾಶ ಮೂಡಲಗಿ ಮಾತನಾಡಿ, ಹಾಡುವ ಮೂಲಕ ಮಕ್ಕಳಿಗೆ ಗಾಯನದ ಬಗ್ಗೆ ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಪ್ರಾಸ್ತಾವಿಕ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಅತ್ಯಂತ ಸರಳವಾಗಿ ಸಮಾರೋಪ ಸಮಾರಂಭ ನಡೆಸಬೇಕಾಯಿತು. ಮುಂದಿನ ಸಾರಿ ಅದ್ಧೂರಿಯಾಗಿ ಕಾರ್ಯಕ್ರಮ…

Read More

ವಿಜಯಪುರ: ನಗರದಲ್ಲಿ ಭಾನುವಾರ ಸಂಜೆ ನಡೆದ ಬಣಜಿಗ ಸಮಾಜದ ಮುಖಂಡರ ಸಭೆಯಲ್ಲಿ, ನಗರದ ಅಭಿವೃದ್ಧಿ ಹಾಗೂ ಸುರಕ್ಷತೆಗಾಗಿ ಬಸನಗೌಡ ಪಾಟೀಲ ಯತ್ನಾಳ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಗೊಂದಲ ಸೃಷ್ಟಿಸಲು ಕೆಲವರು ತಪ್ಪು ಸಂದೇಶ ನೀಡಿ, ಪಂಚಮಸಾಲಿ ಹಾಗೂ ಬಣಜಿಗ ಸಮುದಾಯಗಳ ಮಧ್ಯೆ ಇದ್ದ ಅನ್ಯೋನ್ಯತೆ ಕೆಡಿಸಲು ಯತ್ನಿಸಿದ್ದರು. ಇದರಿಂದ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ಸಭೆ ನಡೆಸುವ ಮೂಲಕ ಸಮಾಜಕ್ಕೆ ಸಂದೇಶ ನೀಡಲಾಗುತ್ತಿದೆ.ಬಸನಗೌಡ ಪಾಟೀಲ ಯತ್ನಾಳರು ಎಂದೂ ನಮ್ಮ ಸಮಾಜಕ್ಕೆ ಬೈದಿರುವುದಿಲ್ಲ. ಸಣ್ಣಸಣ್ಣ ಸಮಾಜದಿಂದ ದೊಡ್ಡ ಸಮಾಜಗಳ ಪರವಾಗಿ ವಿಧಾನಸಭೆ ಒಳಗೂ ಹೊರಗೂ ಧ್ವನಿ ಎತ್ತಿ ನ್ಯಾಯ ಕೊಡಿಸಲು ಶ್ರಮಿಸುತ್ತಿರುವ ಅವರು, ಸದಾ ನಮ್ಮ ಸಮದಾಯದ ಜೊತೆಗೆ ಇದ್ದಾರೆ. ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ. ನಾವು ಕೂಡ ಅವರ ಬೆಂಬಲವಾಗಿ ಹಿಂದೆಯೂ ಇದ್ದೇವು. ಮುಂದೆಯೂ ಇರುತ್ತೇವೆ. ಆದರೆ, ಕೆಲವೇ ಕೆಲವರು ಕಾಂಗ್ರೆಸ್ ಜೊತೆ ಸೇರಿ ಒಪ್ಪಂದ ಮಾಡಿಕೊಂಡು, ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ. ಇಂತವರ ಮಾತಿಗೆ ಸಮಾಜದ ಯಾರೊಬ್ಬರೂ ಕಿವಿಗೊಡಬಾರದು.…

Read More

ದೇವರಹಿಪ್ಪರಗಿ: ಕ್ಷೇತ್ರದ ಅಭ್ಯರ್ಥಿ ರಾಜುಗೌಡ ಪಾಟೀಲರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿ, ನಾನು ಅವರನ್ನು ಸಚಿವರನ್ನಾಗಿ ಮಾಡಿ ಕ್ಷೇತ್ರಕ್ಕೆ ಕಳಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಪಟ್ಟಣದಲ್ಲಿ ಸೋಮವಾರ ಜರುಗಿದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅಭ್ಯರ್ಥಿ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಪರ ಪ್ರಚಾರ ಕೈಗೊಂಡು ಮಾತನಾಡಿದರು.ಈ ಬಾರಿ ರಾಜ್ಯದಲ್ಲಿ ಖಂಡಿತವಾಗಿಯೂ ಜೆಡಿಎಸ್ ಸರ್ಕಾರ ರಚನೆಯಾಗಲಿದೆ. ಆದ್ದರಿಂದ ನಿಮ್ಮ ಕುಟುಂಬದಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುತ್ತಿರುವ ರಾಜುಗೌಡರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿದ್ದೇ ಆದಲ್ಲಿ ಅವರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದರು.ನಂತರ ಪಂಚರತ್ನ ಯೋಜನೆಗಳ ಕುರಿತು ಈಗಾಗಲೇ ಮನೆ ಮನೆಗೆ ತಿಳಿಸಲಾಗಿದೆ. ಜೆಡಿಎಸ್ ಸರ್ಕಾರ ಆಡಳಿತಕ್ಕೆ ಬಂದಲ್ಲಿ ರೈತರಿಗೆ ಬೀಜ ,ಗೊಬ್ಬರ ಖರೀದಿಗೆ ಪ್ರತಿ ಎಕರೆಗೆ ೧೦ ಸಾವಿರ, ಭೂರಹಿತ ಕೂಲಿ ಕಾರ್ಮಿಕರಿಗೆ ಮಾಸಿಕ ೨ ಸಾವಿರ, ಬಡಕುಟುಂಬಗಳಿಗೆ ವರ್ಷಕ್ಕೆ ೫ ಸಿಲಿಂಡರ್ ಉಚಿತ ಸೇರಿದಂತೆ ಪಂಚರತ್ನ ಯೋಜನೆಗಳಲ್ಲಿನ ಎಲ್ಲ ಭರವಸೆ ಈಡೇರಿಸಲಾಗುವುದು ಎಂದರು.ಅಭ್ಯರ್ಥಿ ರಾಜುಗೌಡ ಪಾಟೀಲ ಮಾತನಾಡಿ, ಈ ಬಾರಿ ಆಯ್ಕೆ ಮಾಡಿ…

Read More