ಜೆಡಿಎಸ್ ಅಭ್ಯರ್ಥಿ ಚುನಾವಣಾ ಕಣದಿಂದ ನಿವೃತ್ತಿ ಹಿಂದಿನ ಮರ್ಮ ಬಹಿರಂಗಪಡಿಸಲು ಆಗ್ರಹ
ವಿಜಯಪುರ: ನಗರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂದೇನವಾಜ ಮಹಾಬರಿ ಚುನಾವಣಾ ಕಣದಿಂದ ಹಿಂದೆ ಸರಿದು ಕಾಂಗ್ರೇಸ್ ಬೆಂಬಲಿಸಿದ ಕುರಿತು ರಾಜ್ಯದ ಜನತೆಗೆ ಜೆಡಿಎಸ್ ಪಕ್ಷದ ನಾಯಕರು ಬಹಿರಂಗಪಡಿಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘು ಅಣ್ಣಿಗೇರಿ ಆಗ್ರಹಿಸಿದ್ದಾರೆ.
ನಗರದ ಹೊಟೇಲಿನಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ಚುನಾವಣೆ ಕಣದಿಂದ ಜೆಡಿಎಸ್ ಅಭ್ಯರ್ಥಿ ಮಹಾಬರಿ ಹಿಂದೆ ಸರಿದಿದ್ದಾರೆ. ಇದರ ಹಿಂದೆ ಕಾಂಗ್ರೆಸ್, ಜೆಡಿಎಸ್ ಒಳ ಒಪ್ಪಂದ ಇದೆ ಎಂದು ಅಣ್ಣಿಗೇರಿ ಆರೋಪಿಸಿದರು.
ಕಾಂಗ್ರೆಸ್, ಜೆಡಿಎಸ್ ಸೇರಿಕೊಂಡು ಗದ್ದಲ, ಗೂಂಡಾಗಿರಿ ಮಾಡಲು ಹೊರಟಿದ್ದಾರೆ. ಅಲ್ಲದೇ, ಜೆಡಿಎಸ್, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳೆಂದು ಈ ಮೂಲಕ ತೊರಿಸಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಈ ಕುರಿತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ರಾಜ್ಯದ ಜನತೆಗೆ ಸ್ಪಷ್ಠನೆ ನೀಡಬೇಕು ಎಂದರು
ಅಭಿವೃದ್ದಿ, ಸುರಕ್ಷತೆ, ಹಿಂದುತ್ವ ಮೇಲೆ ವಿಜಯಪುರ ನಗರ ಮತಕ್ಷೇತ್ರದ ಚುನಾವಣೆ ಆಗುತ್ತದೆ. ಪಾರದರ್ಶಕವಾಗಿ ಪೊಲೀಸ ಇಲಾಖೆ, ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಕಳೆದ ಚುನಾವಣೆಯಲ್ಲಿ ಹಿಂದುಗಳ ಏರಿಯಾದಲ್ಲಿ ಬಂದು ಕಾಂಗ್ರೆಸ್ ನವರು ದಾಂಧಲೆ ಹೆದರಿಕೆಯ ವಾತಾವರಣ ಉಂಟು ಮಾಡಿದ್ದರು. ಅದಕ್ಕಾಗಿ ಈ ಸಲ ಅಂತಹ ಘಟನೆಗಳು ಆಗದಂತೆ ಪೊಲೀಸರು ಹದ್ದಿನ ಕಣ್ಣು ಇಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಜೆಡಿಎಸ್ ಅಭ್ಯರ್ಥಿ ಬಂದೇನವಾಜ ಪರವಾಗಿ ಚುನಾವಣಾ ಏಜಂಟರನ್ನು ಮಾಡುವುದನ್ನು ಚುನಾವಣಾ ಆಯೋಗ ತಡೆ ಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.
ಹಿಂದೂ ಅಂದ್ರೆ ಅಶ್ಲೀಲ ಎಂದಿದ್ದ ಕೆ. ಪಿ. ಸಿ. ಸಿ. ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿ, ಕಾಣದ ಕೈಗಳದಂತೆ ನಗರಕ್ಕೆ ಆಗಮಿಸಿ ಕೆಲಸ ಮಾಡುತ್ತಿದ್ದಾರೆ. ನಿಮ್ಮ ವರ್ಕ್‌ಔಟ್ ನಡೆಯಲ್ಲ. ಯಾಕೆಂದ್ರೇ ನಗರದಾದ್ಯಂತ ಎಲ್ಲ ಸಮಾಜದ ಮುಖಂಡರು ಶಾಸಕ ಯತ್ನಾಳ ಪರವಾಗಿ ಇದ್ದಾರೆ ಎಂದರು.
ಕಳೆದ ಬಾರಿಯ ಮೂರು ಪಟ್ಟು ಹೆಚ್ಚಿನ ಮತಗಳಿಂದ ಯತ್ನಾಳ ಗೆಲುವು ಪಕ್ಕಾ ಎಂದರು. ಹಿಂದೂ ಮುಖಂಡರಾದ ಪರಶುರಾಮ ರಜಪೂತ, ಸದಾಶಿವ ಗುಡ್ಡೋಡಗಿ, ಗುರು ಗಚ್ಚಿನಮಠ, ಗುರುರಾಜ ಗಂಗನಹಳ್ಳಿ, ಕಿರಣ ಪಾಟೀಲ, ಎಂ.ಎಸ್.ಕರಡಿ, ರಾಜು ಕುರಿಯವರ, ರಾಜು ಅನಂತಪುರ, ವಿಜಯಕುಮಾರ ಡೋಣಿ, ವಿಜಯಕುಮಾರ ಚವ್ಹಾಣ, ರಾಜು ಗಣಿ, ಅನಿಲ ಸಬರದ, ಮನೋಹರ ಕಾಂಬ್ಳೆ, ಈಶ್ವರ ಮುಂಜಾನೆ, ವಿವೇಕ ಸಜ್ಜನ, ಪ್ರವೀಣ ಬಿಜ್ಜರಗಿ ಸೇರಿದಂತೆ ಹಲವರು ಇದ್ದರು.