ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರು ಮತ್ತು ಇಬ್ಬರು ಸಹ ಪ್ರಾಧ್ಯಾಪಕರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ರಾಜಸ್ಥಾನದ ಜಗದೀಶ್ ಪ್ರಸಾದ್ ಜಬರ್ ಮಾಲ್ ಟಿಬರೆವಾಲಾ ವಿಶ್ವವಿದ್ಯಾಲಯ ಮೂವರಿಗೆ ಪಿಎಚ್.ಡಿ ಪ್ರಧಾನ ಮಾಡಿದೆ.
ಕಾಲೇಜಿನ ಪ್ರಾಚಾರ್ಯ ಪ್ರೊ. ಶಾಲಮೊನ ಚೋಪಡೆ ಅವರು ಮಂಡಿಸಿದ “ಹೃದಯ ಸಂಬಂಧಿ ಪರಿಧಮನಿಯ ಕಾಯಿಲೆಯ ಹೆಚ್ಚಿನ ಅಪಾಯದ ಗುಂಪಿನ ಆರೋಗ್ಯಕರ ಹೃದಯ ಜೀವನ ಶೈಲಿಗೆ ಸಂಬಂಧಿಸಿದ ಅರಿವು ಮತ್ತು ದೃಷ್ಟಿಕೋನಗಳ ಮೇಲೆ ರಚನಾತ್ಮಕ ಜಾಗೃತಿ ಕಾರ್ಯಕ್ರಮದ ಪರಿಣಾಮ” ಮಹಾಪ್ರಬಂಧಕ್ಕೆ ಪಿಎಚ್.ಡಿ ಲಭಿಸಿದ್ದು, ಡಾ.ಅನುಪಮಾ ಓಕ್ ಅವರು ಮಾರ್ಗದರ್ಶಕರಾಗಿದ್ದಾರೆ.
ಇದೇ ಕಾಲೇಜಿನ ಕಮ್ಯೂನಿಟಿ ನರ್ಸಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಸಂತೋಷ ಇಂಡಿ ಅವರು ಮಂಡಿಸಿದ “ಅಂಗನವಾಡಿ ಮತ್ತು ಶಾಲಾಪೂರ್ವ ಮಕ್ಕಳ ಆಹಾರ ಪದ್ಧತಿ, ಆಂಥ್ರೊಪೆಮೆಟ್ರಿಕ್ ಅಳತೆಗಳು ಮತ್ತು ಬೆಳವಣಿಗೆ ಮತ್ತು ಅಭಿವೃದ್ಧಿಯ ಅಭಿವೃದ್ಧಿಯಲ್ಲಿ ಅವರ ಪೋಷಕರ ಪಾತ್ರವನ್ನು ಮೌಲ್ಯಮಾಪನ ಮಾಡಲು ತುಲನಾತ್ಮಕ ಅಧ್ಯಯನ” ಮಹಾಪ್ರಬಂಧಕ್ಕೆ ಪಿಎಚ್.ಡಿ ಲಭಿಸಿದ್ದು, ಡಾ. ರಾಜೇಶ್ ಕೊಣ್ಣೂರ
ಅವರು ಮಾರ್ಗದರ್ಶಕರಾಗಿದ್ದಾರೆ.
ಮತ್ತೋರ್ವ ಸೈಕಿಯಾಟ್ರಿಕ್ ನರ್ಸಿಂಗ್ ವಿಭಾಗ ಸಹ ಪ್ರಾಧ್ಯಾಪಕ ಅಮಿತಕುಮಾರ ಬಿರಾದಾರ ಅವರು ಮಂಡಿಸಿದ “ವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ವೃದ್ಧರಲ್ಲಿ ದೈಹಿಕ ಮತ್ತು ಶಾರೀರಿಕ ಸ್ಥಿತಿ, ಮೊಬೈಲ್ ಚಟ ಮತ್ತು ನಡವಳಿಕೆ ಮತ್ತು ಜೀವನದ ಗುಣಮಟ್ಟದ ಮೇಲೆ ಅದರ ಪ್ರಭಾವವನ್ನು ನಿರ್ಣಯಿಸಲು ತುಲನಾತ್ಮಕ ಅಧ್ಯಯನ” ಮಹಾಪ್ರಬಂಧಕ್ಕೆ ಪಿಎಚ್.ಡಿ ಲಭಿಸಿದ್ದು, ಡಾ. ರಾಜೇಶ್ ಕೊಣ್ಣೂರ
ಅವರು ಮಾರ್ಗದರ್ಶಕರಾಗಿದ್ದಾರೆ.
ಪಿಎಚ್.ಡಿ ಪದವಿ ಪಡೆದಿರುವ ಮೂವರು ಸಾಧಕರಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ