ದೇವರಹಿಪ್ಪರಗಿ: ಕ್ಷೇತ್ರದ ಅಭ್ಯರ್ಥಿ ರಾಜುಗೌಡ ಪಾಟೀಲರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿ, ನಾನು ಅವರನ್ನು ಸಚಿವರನ್ನಾಗಿ ಮಾಡಿ ಕ್ಷೇತ್ರಕ್ಕೆ ಕಳಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಜರುಗಿದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅಭ್ಯರ್ಥಿ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಪರ ಪ್ರಚಾರ ಕೈಗೊಂಡು ಮಾತನಾಡಿದರು.
ಈ ಬಾರಿ ರಾಜ್ಯದಲ್ಲಿ ಖಂಡಿತವಾಗಿಯೂ ಜೆಡಿಎಸ್ ಸರ್ಕಾರ ರಚನೆಯಾಗಲಿದೆ. ಆದ್ದರಿಂದ ನಿಮ್ಮ ಕುಟುಂಬದಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುತ್ತಿರುವ ರಾಜುಗೌಡರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿದ್ದೇ ಆದಲ್ಲಿ ಅವರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದರು.
ನಂತರ ಪಂಚರತ್ನ ಯೋಜನೆಗಳ ಕುರಿತು ಈಗಾಗಲೇ ಮನೆ ಮನೆಗೆ ತಿಳಿಸಲಾಗಿದೆ. ಜೆಡಿಎಸ್ ಸರ್ಕಾರ ಆಡಳಿತಕ್ಕೆ ಬಂದಲ್ಲಿ ರೈತರಿಗೆ ಬೀಜ ,ಗೊಬ್ಬರ ಖರೀದಿಗೆ ಪ್ರತಿ ಎಕರೆಗೆ ೧೦ ಸಾವಿರ, ಭೂರಹಿತ ಕೂಲಿ ಕಾರ್ಮಿಕರಿಗೆ ಮಾಸಿಕ ೨ ಸಾವಿರ, ಬಡಕುಟುಂಬಗಳಿಗೆ ವರ್ಷಕ್ಕೆ ೫ ಸಿಲಿಂಡರ್ ಉಚಿತ ಸೇರಿದಂತೆ ಪಂಚರತ್ನ ಯೋಜನೆಗಳಲ್ಲಿನ ಎಲ್ಲ ಭರವಸೆ ಈಡೇರಿಸಲಾಗುವುದು ಎಂದರು.
ಅಭ್ಯರ್ಥಿ ರಾಜುಗೌಡ ಪಾಟೀಲ ಮಾತನಾಡಿ, ಈ ಬಾರಿ ಆಯ್ಕೆ ಮಾಡಿ ಕಳಿಸಿದ್ದಲ್ಲಿ ನಾನು ನಿಮ್ಮೆಲ್ಲರಿಗೂ ಚಿರಋಣಿಯಾಗಿದ್ದು, ಮನೆ ಮಗನಾಗಿ ನಿಮ್ಮ ಆಶೋತ್ತರಗಳನ್ನು ಈಡೇರಿಸುತ್ತೇನೆ ಎಂದರು.
ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ, ಡಾ.ಆರ್.ಆರ್.ನಾಯಿಕ್, ಸಂಗನಗೌಡ ಬಿರಾದಾರ(ಮುಳಸಾವಳಗಿ) ಎ.ಡಿ.ಮುಲ್ಲಾ, ರಫೀಕ ಪಾನಪರೋಷ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಎಚ್.ಡಿ. ಕುಮಾರಸ್ವಾಮಿಯವರ ಮೆರವಣಿಗೆ ಮೊಹರೆ ಹಣಮಂತ್ರಾಯ ವೃತ್ತದಿಂದ ಆರಂಭಗೊAಡು ಡಾ.ಅಂಬೇಡ್ಕರ್ ವೃತ್ತದವರೆಗೆ ಜರುಗಿತು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ನಾನಾಗೌಡ ಬಿರಾದಾರ, ಮತಕ್ಷೇತ್ರದ ಅಧ್ಯಕ್ಷ ಸಾಯಬಣ್ಣ ಬಾಗೇವಾಡಿ, ಗುರನಗೌಡ ಪಾಟೀಲ, ಅನೀಲಗೌಡ ಪಾಟೀಲ(ಕುದರಿಸಾಲವಾಡಗಿ), ಅಜೀತ ರಾಠೋಡ, ಶೇಖರಗೌಡ ಪಾಟೀಲ (ಕೋರವಾರ), ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಮಹಿಬೂಬ್ ಮನಿಯಾರ, ಮುನೀರ್ ಅಹ್ಮದ್ ಮಳಖೇಡ, ಜಬ್ಬರ ಮೋಮಿನ್ ಶ್ರೀಕಾಂತ ರಾಠೋಡ, ಅರವಿಂದ ನಾಯ್ಕೋಡಿ, ಸೋಮು ಹದರಿ ಸೇರಿದಂತೆ ಮತಕ್ಷೇತ್ರದ ವಿವಿಧ ಗ್ರಾಮಗಳ ಪ್ರಮುಖರು, ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment