ಕಾಂಗ್ರೆಸ್ ನಾಯಕರೆ ಕೀಳುಮಟ್ಟದ ಹೇಳಿಕೆ ಕೈಬಿಡಿ :ಅರುಣಸಿಂಗ್
ವಿಜಯಪುರ : ಅಲ್ಪಸಂಖ್ಯಾತ ನಾಯಕತ್ವ ಬಿಜೆಪಿಯಲ್ಲಿ ಪ್ರಬಲಗೊಂಡರೆ, ಅವರಿಗೂ ಸಹ ವಿಧಾನಸಭೆ ಚುನಾವಣೆಗೆ ಟಿಕೇಟ್ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಹೇಳಿದರು.
ಸೋಮವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎನ್ನುವುದು ಬಿಜೆಪಿ ಆಶಯವಾಗಿದೆ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ವರ್ಗಬೇಧ ಮಾಡದೇ ಬಿಜೆಪಿ ಕಲ್ಪಿಸುತ್ತಿದೆ ಎಂದರು.
ಈ ವೇಳೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ಒಂದೇ ಟಿಕೇಟ್ ನೀಡಲಾಗಿಲ್ಲ ಎಂದು ತೂರಿಬಂದ ಪ್ರಶ್ನೆಗೆ ಉತ್ತರಿಸಿದ ಅರುಣ ಸಿಂಗ್, ಅಲ್ಪಸಂಖ್ಯಾತ ಮೋರ್ಚಾ ಬಿಜೆಪಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ, ಸ್ಥಳೀಯ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಲಾಗಿದೆ, ಪಕ್ಷದಲ್ಲಿ ಅಲ್ಪಸಂಖ್ಯಾತ ನಾಯಕತ್ವ ಇನ್ನೂ ಪ್ರಬಲವಾಗಬೇಕಿದೆ, ಗೆಲ್ಲುವ ಕುದುರೆಗಳಿಗೆ ಮಹತ್ವ ನೀಡಲಾಗಿದೆ, ಅಲ್ಪಸಂಖ್ಯಾತ ಮುಖಂಡರಲ್ಲಿ ಗೆಲ್ಲುವ ಕುದುರೆ ಇದ್ದರೆ ಅವರಿಗೆ ಪ್ರಾತಿನಿಧ್ಯ ಮುಂದೆ ದೊರಕಲಿದೆ ಎಂದು ಅರುಣಸಿಂಗ್ ಸ್ಪಷ್ಟಪಡಿಸಿದರು.
ಯತ್ನಾಳ ಅವರು ಸೋನಿಯಾ ಗಾಂಧೀ ಅವರನ್ನು ವಿಷಕನ್ಯೆ ಎಂದು ಕರೆದಿರುವುದು ಸರಿಯಲ್ಲ, ಆದರೆ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ಬಗ್ಗೆ ಅತ್ಯಂತ ಕೀಳುಮಟ್ಟದ ಶಬ್ದ ಪ್ರಯೋಗಿಸಿ ಪ್ರಚೋದನೆ ಮಾಡುತ್ತಿದ್ದಾರೆ, ಇದು ಮೊದಲು ನಿಲ್ಲಬೇಕು, ಮೊದಲು ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವುದನ್ನು, ಶಬ್ದ ಪ್ರಯೋಗಿಸುವುದನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.

ದೇಶದಲ್ಲಿ ಕಳೆದ ಒಂಭತ್ತು ವಸಂತಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ, ಹವಾಯಿ ಚಪ್ಪಲ್ ಧರಿಸುವ ವ್ಯಕ್ತಿ ಗಗನಯಾನ ಮಾಡುತ್ತಿದ್ದಾರೆ, ಭವ್ಯ ರಾಮಮಂದಿರ ನಿರ್ಮಾಣವಾಗಿದೆ, ವಂದೇ ಭಾರತ ಎಂಬ ಅತ್ಯಾಧುನಿಕ ರೈಲು ಹೀಗೆ ಭಾರತದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ ಎಂದರು.
ಕಪ್ಪು ಹಣದ ವಿರುದ್ಧ ಮೊದಲ ದಿನದಿಂದಲೇ ಮೋದಿ ಸರ್ಕಾರ ಸಮರ ಸಾರಿದೆ, ಅನಧಿಕೃತವಾಗಿ ವಿದೇಶದಲ್ಲಿ ಕಪ್ಪು ಹಣ ಕೂಡಿಟ್ಟವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ, ಮೊದಲ ಸಚಿವ ಸಂಪುಟದಲ್ಲಿಯೇ ಈ ದಿಟ್ಟ ನಿರ್ಧಾರ ಕೈಗೊಂಡಿತ್ತು, ಆದರೆ ಕಪ್ಪು ಹಣ ಹೊಂದಿದ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಈ ಸಮರದ ವಿರುದ್ಧ ಆಕ್ಷೇಪ ಎತ್ತುತ್ತಲೇ ಇದ್ದಾರೆ, ಆದರೂ ಸರ್ಕಾರ ತನ್ನ ಕೆಲಸ ಮಾಡುತ್ತಿದೆ ಎಂದರು.
150 ಕ್ಷೇತ್ರಗಳಲ್ಲಿ ಗೆಲುವು
150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ, ಕಾಂಗ್ರೆಸ್ ಗ್ರಾಫ್ ಕೆಳಗೆ ಇಳಿಯುತ್ತಲೇ ಇದೆ, ಬಿಜೆಪಿ ಗ್ರಾಫ್ ಏರುತ್ತಿದೆ. ಡಬಲ್ ಇಂಜಿನ್ ಸರ್ಕಾರದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ, ಇದರ ಪ್ರಯೋಜನ ಜನರಿಗೆ ತಟ್ಟಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು ಬಿಡುಗಡೆಗೊಳಿಸಿದ ಅರುಣ ಸಿಂಗ್, ಬಿಜೆಪಿ ಅಧಿಕಾರಕ್ಕೆ ಬಂದರೆ ಕೆಜಿ ಅಕ್ಕಿಯ ಜೊತೆಗೆ ಐದು ಕೆಜಿ ಸಿರಿಧಾನ್ಯ, ಬಿಪಿಎಲ್ ಕುಟಿಂಬದವರಿಗೆ ಅರ್ಧಲೀಟರ್ ನಂದಿನಿ ಹಾಲು ಉಚಿತ, ಗಣೇಶ ಚತುರ್ಥಿ, ದೀಪಾವಳಿ, ಯುಗಾದಿ ಹಬ್ಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್, 10 ಲಕ್ಷ ಜನರಿಗೆ ಜಮೀನು ಹಂಚಿ ಮನೆ ನಿರ್ಮಾಣ ಮಾಡಿಕೊಡುವ ಮೂಲಕ 3 ವರ್ಷಗಳಲ್ಲಿ ಪ್ರತಿಯೊಬ್ಬರು ಸ್ವಂತ ಸೂರು ಹೊಂದುವ ಸಂಕಲ್ಪ ಮಾಡಲಾಗಿದೆ, ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆಗೆ ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡುವ, ರೈತರ ಶ್ರೇಯೋಭಿವೃದ್ಧಿಗೆ 30 ಸಾವಿರ ಕೋಟಿ ರೂ. ವಿನಿಯೋಗ ಮಾಡಲಾಗುವುದು ಎಂದು ವಿವರಿಸಿದರು.
ರಾಜಸ್ತಾನದಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಇಲ್ಲಿಯವರೆಗೂ ಮಾಡಿಲ್ಲ, ಅಕ್ಕ ಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ರಾಜಸ್ತಾನದಲ್ಲಿ ಅಗತ್ಯ ವಸ್ತು ಹಾಗೂ ತೈಲ ಬೆಲೆ ಹೆಚ್ಚಾಗಿದೆ, ರೋಜಗಾರ ಭತ್ಯೆಯನ್ನೂ ಸಹ ರಾಜಸ್ತಾನ ಕಾಂಗ್ರೆಸ್ ಸರ್ಕಾರ ನೀಡಿಲ್ಲ ಎಂದರು.
ಕಾಂಗ್ರೆಸ್ ಪಾರ್ಟಿ 420 ಪಾರ್ಟಿ, ಈ ಕಾರಣಕ್ಕಾಗಿಯೇ ಉತ್ತರ ಪ್ರದೇಶ ಜನತೆ ಕಾಂಗ್ರೆಸ್ ರಿಜೆಕ್ಟ್ ಮಾಡಿದ್ದಾರೆ, ಗೋವಾ, ಆಸ್ಸಾಂ ಎಲ್ಲೆಡೆಯೂ ಕಾಂಗ್ರೆಸ್ ತಕ್ಕ ಪಾಠ ದೊರಕಿದೆ. ಕರ್ನಾಟಕದ ಜನತೆ ಸಹ ಈ ಬಾರಿ ಕಾಂಗ್ರೆಸ್‌ಗೆ ರಿಜೆಕ್ಟ್ ಮಾಡಲಿದ್ದಾರೆ, ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ದಾಖಲೆ ಬರೆಯಲಿದೆ ಎಂದರು. ಇನ್ನೂ ಜೆಡಿಎಸ್ ಮುಳುಗುವ ಹಡಗು, ಅವರಿಗೆ ಯಾವ ದೃಷ್ಟಿಕೋನವಿಲ್ಲ, ಯೋಚನೆ ಇಲ್ಲ, ಯೋಜನೆ ಇಲ್ಲ ಎಂದರು.
ಕೋವಿಡ್ ಅಂತಹ ಮಹಾಮಾರಿ ಸಮಯದಲ್ಲೂ ನಮ್ಮ ಸರ್ಕಾರ ಬೆಲೆ ಏರಿಕೆಯ ಮೇಲೆ ನಿಗಾ ವಹಿಸಿದೆ. ದೇಶಾದ್ಯಂತ ಉಚಿತ ಲಸಿಕೆ ನೀಡುವ ಕೆಲಸ ಮಾಡಿದೆ, ಕೋವಿಡ್ ಸ್ಥಿತಿಯ ನಂತರ ಮುಂದುವರೆದ ರಾಷ್ಟ್ರಗಳಲ್ಲಿ ಶೇ.15 ಬೆಲೆ ಏರಿಕೆ ಹೆಚ್ಚಳವಾಗಿದೆ ಆದರೆ ನಮ್ಮಲ್ಲಿ ಶೇ.5 ಕ್ಕಿಂತ ಕಡಿಮೆ ಏರಿಕೆಯಾಗಿದೆ, ಇದು ಮೋದಿ ಅವರ ಬೆಲೆ ಏರಿಕೆಯ ನಿಯಂತ್ರಣದ ಕಾರ್ಯವೈಖರಿ, ಇದನ್ನು ಪ್ರತಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಪ್ರಮುಖರಾದ ಡಾ.ಗೌತಮ್ ಚೌಧರಿ, ಡಾ.ಸುರೇಶ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಸಂಜಯ ಪಾಟೀಲ ಕನಮಡಿ, ವಿವೇಕಾನಂದ ಡಬ್ಬಿ, ವಿಜಯ ಜೋಶಿ, ಸದಾಶಿವ ಗುಡ್ಡೊಡಗಿ, ಕಿರಣ ಪಾಟೀಲ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
: ಅಲ್ಪಸಂಖ್ಯಾತ ನಾಯಕತ್ವ ಬಿಜೆಪಿಯಲ್ಲಿ ಪ್ರಬಲಗೊಂಡರೆ, ಅವರಿಗೂ ಸಹ ವಿಧಾನಸಭೆ ಚುನಾವಣೆಗೆ ಟಿಕೇಟ್ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಹೇಳಿದರು.