ಚಡಚಣ:ನಾಗಠಾಣ ಮತಕ್ಷೇತ್ರ ಎಲ್ಲಾ ನೀರಾವರಿ ಯೋಜನೆಗಳನ್ನುಅನುಷ್ಠಾನಗೊಳಿಸಿ, ರೈತರನ್ನು ಸ್ವಾವಲಂಬಿಗಳನ್ನಾಗಿಸಿ ಅವರ ಬದುಕು ಹಸನಾಗಿಸಲು ನಮ್ಮ ಪಕ್ಷ ಬದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆಯೋಜಿಸಲಾದ ನಾಗಠಾಣ ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ದೇವಾನಂದ ಚವ್ಹಾಣ ಪರ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಪಂಚರತ್ನ ಯೋಜನೆಯ ಉದ್ದೇಶ ಬಡವರಿಗೆ,ರೈತರ ಮಕ್ಕಳು ,ಹಾಗೂ ಕೂಲಿ ಕಾರ್ಮಿಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದು,ಭೂ ರಹಿತ ಕೂಲಿ ಕಾರ್ಮಿಕರಿಗೆ ಮಾಸಿಕ 2 ಸಾವಿರ ಸಹಾಯ ಧನ, ಬಿತ್ತನೆ ಸಮಯದಲ್ಲಿ ರೈತರಿಗೆ ಪ್ರತಿ ಏಕರೆ ಪ್ರದೇಶಕ್ಕೆ 10 ಸಾವಿರ ಸಹಾಯಧನ, ಬಾಣಂತಿಯರಿಗೆ ಉತ್ತಮ ಗುಣಮಟ್ಟದ ಆಹಾರಕ್ಕಾಗಿ ಆರು ತಿಂಗಳುಗಳ ವರೆಗೆ ಪ್ರತಿ ತಿಂಗಳು 6 ಸಾವಿರ ಸಹಾಯಧನ, ಅಂಗವಿಕಲರು, ವಿಧವೆಯರಿಗೆ ಪ್ರತಿ ತಿಂಗಳು 2 ಸಾವಿರ, ವೃದ್ಧಾಪ್ಯ ವೇತನದಾರರಿಗೆ ಮಾಸಿಕ 5 ಸಾವಿರ ಗೌರವಧನ ಹೆಚ್ಚಿಸುವದು, ಬಡವರಿಗೆ ವಾರ್ಷಿಕ 5 ಸಿಲಿಂಡರ ಉಚಿತವಾಗಿ ನೀಡುವದಲ್ಲದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಹಾಗೂ ಸ್ವ ಸಹಾಯ ಗುಂಪುಗಳ ಸಾಲ ಮನ್ನಾ ಮಾಡುವದು, ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವದು, ಬಂಜಾರ ಸಮಾಜದ ಅಭೀವೃದ್ಧಿ, ಮಹದಾಯಿ ಯೋಜನೆಯ ಅನುಷ್ಠಾನಗಳಂತಹ ಯೋಜನೆಗಳನ್ನು ಹಮ್ಮಿಕೊಂಡು, ಸಮಾಜದ ಪ್ರತಿಯೊಬ್ಬರ ಬದುಕು ಹಸನಾಗಿಸಲು ನಮ್ಮ ಪಕ್ಷ ಬದ್ಧವಾಗಿದೆ. ಅದಕ್ಕಾಗಿ ಒಂದು ಬಾರಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸಲು ನಾಗಠಾಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ದೇವಾನಂದ ಚವ್ಹಾಣ ಅವರನ್ನು ಬೆಂಬಲಿಸಿ, ಎಂದು ಮನವಿ ಮಾಡಿದರು.
ಪ್ರಸ್ತಾವಿಕವಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರೈತರಿಗೆ, ಬಡವರಿಗೆ ಹಾಗೂ ಹಿಂದುಳಿದವರಿಗೆ ಸುಳ್ಳು ಭರವಸೆ ನೀಡುತ್ತ ಮೋಸಮಾಡುತ್ತಿವೆ. ರೈತರ ಹಿತ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಅವರನ್ನು ಬೆಂಬಲಿಸಿ ಎಂದರು.
ಅಭ್ಯರ್ಥಿ ಡಾ.ದೇವಾನಂದ ಚವ್ಹಾಣ ಮಾತನಾಡಿ, ಸಮಾಜ ಸೇವೆಗಾಗಿ ಇನ್ನೊಂದು ಬಾರಿ ತಮಗೆ ಬೆಂಬಲಿಸುವಂತೆ ಮತದಾರರಲ್ಲಿ ಶಿರಬಾಗಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಸಹಸ್ರಾರು ಸಂಖ್ಯೆಯ ಮುಖಂಡರು ಜೆಡಿಎಸ್ ಪಕ್ಷ ಸೇರಿದರು.
ವೇದಿಕೆಯ ಮೇಲೆ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ.ಪಾಟೀಲ ಹಲಸಂಗಿ, ಮುಖಂಡರಾದ ಬಾಬುಗೌಡ ಪಾಟೀಲ, ವಿಠ್ಠಲ ವಡಗಾಂವ, ಸುನೀತಾ ಚವ್ಹಾಣ, ರವಿ ಚವ್ಹಾಣ, ಯೂನೂಸ್ ಅಲಿ ಮಕಾನದಾರ, ಚಂದ್ರಶೇಖರ ನಿರಾಳೆ, ಭಿಮಾಶಂಕರ ವಾಳಿಖಿಂಡಿ, ಬಾಬು ಚವ್ಹಾಣ, ಇಮಾಮ ಪಟೇಲ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಮಸಿದ್ದ ಬಳಗಾನೂರ. ಧೂಳೇಶ ಚವ್ಹಾಣ, ನಿಂಗನಗೌಡ ಸೋಲಾಪೂರ, ರಾಮ ಮಾಲಾಪೂರ, ಪ್ರವೀಣ ಕಲ್ಯಾಣಶೆಟ್ಟಿ, ಸತೀಶ ಬಂಡಿ, ಮುರ್ತುಜಾ ನದಾಫ, ಸಿಕಂದರ ಸಾವಳಸಂಗ, ಸಿದ್ದು ಸೋಲಾಪೂರ, ಸಚಿನ್ ವಾಲಿ, ಪ್ರವೀಣ ಪಾಟೀಲ, ದೀಪಕ್ ಕದಂ , ವಿನೋದ,ಮಹಾದೇವ ಶಿಂಧೆ, ರವಿ ಶಿಂಧೆ, ಗುರುಬಾಳ ಗಿಡವೀರ, ರಾಜಶೇಖರ ಡೋಣಗಾಂವ ಸೇರಿದಂತೆ ಹಲವರು ಇದ್ದರು.