Author: editor.udayarashmi@gmail.com

ಬ್ರಹ್ಮದೇವನಮಡು: ಮೂರು ಬಾರಿ ಶಾಸಕರಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಸಿಕ್ಕ ಅವಕಾಶದಲ್ಲಿ ಜನರ ಸೇವೆ ಮಾಡಿದ್ದೇನೆ ಎಂದು ಬಿಜೆಪಿ ಅಭ್ಶಥಿ೯, ಶಾಸಕ ರಮೇಶ ಭೂಸನೂರ ಮನವಿ ಮಾಡಿದರು.ಸಿಂದಗಿ ತಾಲೂಕು ಹೊನ್ನಳ್ಳಿ, ಬ್ರಹ್ಮದೇವನಮಡು,ಖಾನಾಪೂರ,ಕರವಿನಾಳ ತಾಂಡಾದಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳ ನಿಮಾ೯ಣ, ಸಮುದಾಯ ಭವನ, ವಸತಿ ಶಾಲೆಗಳ ನಿಮಾ೯ಣ ಸೇರಿದಂತೆ ಹತ್ತು ಹಲವು ಅಭಿವೃದ್ದಿ ಕಾಮಗಾರಿ ಮಾಡಲಾಗಿದೆ. ಈ ಬಾರಿಯೂ ಕೂಡಾ ನಿಮ್ಮ ಆಶೀವಾ೯ದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು. ಈ ಸಂದಭ೯ದಲ್ಲಿ ಮಹಿಳೆಯರಾದ ಬನಕಾಬಾಯಿ ಚವ್ಹಾಣ, ಶಾರದಾಬಾಯಿ ಚವ್ಹಾಣ, ತಾರಬಾಯಿ ಪವಾರ, ಸೋನಾಬಾಯಿ ರಾಠೋಡ, ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಮಾಜಿ ತಾಪಂ ಸದಸ್ಶ ಶ್ರೀಶೈಲ ಚಳ್ಳಗಿ, ಅನೀಲ ಚವ್ಹಾಣ, ಸಂಜು ರಾಠೋಡ, ನಾನಾಗೌಡ ಪಾಟೀಲ, ಪಿಂಟು ಹೊಸಮನಿ, ಮಲ್ಲು ಗುಡಿಮನಿ, ಕಾಮಣ್ಣ ನಾಯ್ಕೋಡಿ, ಪಿಂಟು ರಾಠೋಡ ಸೇರಿದಂತೆ ಇತರರಿದ್ದರು.

Read More

ಕಲಕೇರಿ: ಗ್ರಾಮದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಗ್ರಾಮದಲ್ಲಿ ಪಕ್ಷದ ಪ್ರಚಾರ ಕಛೇರಿಯನ್ನು ಉದ್ಘಾಟಿಸಿ ನಂತರ ಮತಯಾಚನೆ ಮಾಡಿದರು.ಸದೃಢ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಬಿಜೆಪಿಯನ್ನು ಬೆಂಬಲಿಸಬೇಕಿದೆ, ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ತಮಗೆ ಮತವನ್ನು ನೀಡುವಂತೆ ಈ ವೇಳೆ ಮನವಿ ಮಾಡಿದರು.ಇದಕ್ಕೂ ಮುಂಚೆ ಯಲ್ಲಪ್ಪ ಮಹಾರಾಜರ ದೇವಸ್ಥಾನದಿಂದ ಮುಖ್ಯ ಬಜಾರವರೆಗೆ ಶಾಸಕ ಸೋಮನಗೌಡರನ್ನು ತೆರೆದ ಅಲಂಕೃತ ವಾಹನದಲ್ಲಿ ಬಾಜಾ ಭಜಂತ್ರಿ, ಡೊಳ್ಳು ಕುಣಿತದೊಂದಿಗೆ ಸಾವಿರಾರು ಜನ ಕಾರ್ಯಕರ್ತರು ಮೆರವಣಿಗೆಯೊಂದಿಗೆ ಅವರನ್ನು ಕರೆತಂದರು. ನಂತರ ಬೃಹತ್ ಪ್ರಮಾಣದ ಹೂಮಾಲೆಯನ್ನು ಕ್ರೇನ್ ಮುಖಾಂತರ ಸೋಮನಗೌಡರಿಗೆ ಹಾಕುವ ಮೂಲಕ ‌ತಮ್ಮ ಅಭಿಮಾನವನ್ನು ತೋರಿಸಿದರು.ಈ ವೇಳೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಜತ್ ಶಾಸಕ ವಿಕ್ರಮದಾದಾ ಸಾವಂತರಿಂದ ಎಂ.ಬಿ.ಪಾಟೀಲ ಪರ ಮತಯಾಚನೆ ವಿಜಯಪುರ: ನಮಗೆ ರೈಲು ಬಿಡುವವರು ಬೇಡ, ನೀರು ಕೊಡುವವರು ಬೇಕು ಎಂದು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ಶಾಸಕ ವಿಕ್ರಮದಾದಾ ಸಾವಂತ ಹೇಳಿದ್ದಾರೆ. ತಿಕೋಟಾ ತಾಲೂಕಿನ ಬಾಬಾನಗರ ಮತ್ತು ಹೊನವಾಡ ಗ್ರಾಮಗಳಲ್ಲಿ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಪರ ಮತಯಾಚಿಸಿ ಅವರು ಮಾತನಾಡಿದರು. ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಇತ್ತೀಚೆಗೆ ನೀಡಿದ ಹೇಳಿಕೆ ಬಗ್ಗೆ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದರು. ತುಬಚಿ-ಬಬಲೇಶ್ವರ ಏತ ನೀರಾವರಿ ಜನಕ ಮತ್ತು ಆಧುನಿಕ ಭಗೀರಥ ಎಂ. ಬಿ. ಪಾಟೀಲರು ಹುಲ್ಲು ಕಡ್ಡಿಯೂ ಬೆಳೆಯದ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯಲು ಕಾರಣರಾಗಿದ್ದಾರೆ. ಜನನಾಯಕ ಹೇಗೆ ಇರಬೇಕು ಎಂಬುದಕ್ಕೆ ಎಂ. ಬಿ. ಪಾಟೀಲರು ಮಾದರಿಯಾಗಿದ್ದಾರೆ. ಕರ್ನಾಟಕವಷ್ಟೇ ಅಲ್ಲ ಮಹಾರಾಷ್ಟ್ರದ ಜತ ತಾಲೂಕಿನ ಗಡಿ ಗ್ರಾಮಗಳ ಜನ ಜಾನುವಾರುಗಳು ಮತ್ತು ಕೃಷಿ ಭೂಮಿಗೂ ನೀರು ಕೊಡುವ ಮೂಲಕ ನೆರವಾಗಿದ್ದಾರೆ ಎಂದು ಹೇಳಿದರು. ದಶಕಗಳೇ…

Read More

ನಾಗಠಾಣ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳಿ ಪರವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಂಬಗಿ, ಅಂಕಲಗಿ, ಆಹೇರಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮತಯಾಚಿಸಿದ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕಾರಜೋಳ, ನಾಗಠಾಣ ವಿಧಾನಸಭಾ ಕ್ಷೇತ್ರದ ಪ್ರಗತಿಗೆ ಜನತೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು, ಈ ಭಾಗಕ್ಕೆ ಹೊರ್ತಿ ರೇವಣಸಿದ್ದೇಶ್ವರ ಯೋಜನೆ ಮೂಲಕ ಬಿಜೆಪಿ ಸರ್ಕಾರ ಅನ್ನದಾತನ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ, ಹೀಗಾಗಿ ಜನತೆ ಬಿಜೆಪಿಗೆ ಇನ್ನೊಮ್ಮೆ ಆಶೀರ್ವದಿಸಿದರೆ ಈ ಎಲ್ಲ ಅಭಿವೃದ್ಧಿ ಕಾರ್ಯಗಳ ಪರಂಪರೆ ಮುಂದುವರೆಯಲು ಸಾಧ್ಯವಾಗುತ್ತದೆ, ಬಿಜೆಪಿ ಈ ಬಾರಿ ನಿಷ್ಠಾವಂತ ಹಾಗೂ ಬೇರುಮಟ್ಟದ ಕಾರ್ಯಕರ್ತನಿಗೆ ಟಿಕೇಟ್ ನೀಡಿದೆ, ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳ್ಳಿ ಅವರಿಗೆ ಜನರೇ ಆಸ್ತಿ, ಜನರೇ ಶಕ್ತಿ. ಹೀಗಾಗಿ ಜನತೆ ಆಶೀರ್ವಾದ ರೂಪದ ಮತ ಕರುಣಿಸುವ ಮೂಲಕ ವಿಧಾನಸಭೆಗೆ ಕಳುಹಿಸಬೇಕು, ಜನಪರ ಸ್ಪಂದನೆಯುಳ್ಳ ಐಹೊಳ್ಳೆ ಅವರಿಗೆ ಮತ ನೀಡಬೇಕು ಎಂದು ಕೋರಿದರು. ಬಿಜೆಪಿ ಜನಪರ ಚಿಂತನೆಯುಳ್ಳ ಪಕ್ಷವಾಗಿದೆ, ಉಳಿದ…

Read More

ವಿಜಯಪುರ: ಚುನಾವಣಾ ಕಾರ್ಯ ಅತ್ಯಂತ ಜವಾಬ್ದಾರಿಯುತ ಹಾಗೂ ಅತಿ ಮುಖ್ಯವಾಗಿರುವುದರಿಂದ ಚುನಾವಣಾ ಆಯೋಗದ ನಿರ್ದೇಶನಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ಯಾವುದೇ ಗೊಂದಲಕ್ಕೊಳಗಾಗದೇ ಆಯೋಗದ ನಿರ್ದೇಶನದನ್ವಯ ಅಚ್ಚುಕಟ್ಟಾಗಿ ಚುನಾವಣಾ ಕಾರ್ಯ ನಿರ್ವಹಿಸುವಂತೆ ಚುನಾವಣಾ ಕಾರ್ಯಕ್ಕೆ ನಿಯೋಜಿತ ಪ್ರಿಸೈಡಿಂಗ್, ಸಹಾಯಕ ಪ್ರಿಸೈಡಿಂಗ್ ಮತ್ತು ಪೋಲಿಂಗ್ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು. ಮಂಗಳವಾರ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‌ನಲ್ಲಿ ಹಮ್ಮಿಕೊಂಡ ಎರಡನೇ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಚುನಾವಣಾ ಪ್ರಕ್ರಿಯೆ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿ-ಸಿಬ್ಬಂದಿಗಳ ಪಾತ್ರ ಅತಿಮುಖ್ಯವಾಗಿರುತ್ತದೆ. ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಪ್ರತಿಯೊಂದು ವಿಷಯವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದ ಅವರು ಮಸ್ಟರಿಂಗ್, ಡಿಮಸ್ಟರಿಂಗ್, ಕಾರ್ಯನಿರ್ವಹಣೆ, ಮತಗಟ್ಟೆಗೆ ತಲುಪಿದ ದಿನ ನಿರ್ವಹಿಸಬೇಕಾದ ಕ್ರಮ, ಮತದಾನ ದಿನ ಅಣುಕು ಮತದಾನ ಸಮಯದಲ್ಲಿ ನಿರ್ವಹಿಸಬೇಕಾದ ಕ್ರಮಗಳು ಹಾಗೂ ಕರ್ತವ್ಯಗಳು, ಸಿಯು, ಬಿಯು & ವಿವಿಪ್ಯಾಟ್ ಜೋಡಿಸುವ ವಿಧಾನ, ಮತದಾನ ನಂತರ ಮತಯಂತ್ರಗಳನ್ನು ಮೊಹರು ಮಾಡಿ ನೈಜ…

Read More

ವಿಜಯಪುರ: ಮಂಗಳವಾರ ಹೊನ್ನಳ್ಳಿ ಗ್ರಾಮದಲ್ಲಿ ಜರುಗಿದ ಮದುವೆ ಸಮಾರಂಭದಲ್ಲಿ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ ವಿಜಯಪುರ ಮತ್ತು ಗ್ರಾಮ ಪಂಚಾಯತಿ ಜಂಬಗಿ (ಆ) ಇವರ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನವ ವಧು-ವರರಿಗೂ ಹಾಗೂ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದವರಿಗೆ ಮತದಾನ ಜಾಗೃತಿ ಕರಪತ್ರಗಳನ್ನು ಹಂಚಲಾಯಿತು. ಕಡ್ಡಾಯವಾಗಿ ಮತದಾನ ಮಾಡುವಂತೆಯೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ, ಮೇ ೧೦ರಂದುಮತಗಟ್ಟೆಗೆ ಬಂದು ಮತದಾನ ಮಾಡುವಂತೆಯೂ, ದಾನಗಳಲ್ಲಿಯೇ ಮತದಾನ ಪವಿತ್ರ ದಾನ.ನಮಗೆ ಸಿಕ್ಕ ಅತ್ಯಂತ ಶ್ರೇಷ್ಠ ಹಕ್ಕು, ಯಾವುದೇ ಕಾರಣಕ್ಕೂ ಯಾವದೇ ಆಸೆ-ಆಮಿಷೆಗಳಿಗೆ ಒಳಗಾಗದೇ ಮತದಾನ ಮಾಡುವಂತೆ ನಾಡಿನ ಅಭ್ಯುದಯಕ್ಕಾಗಿ ಮತ ಬಹು ಅಮೂಲ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಕಲ್ಲಪ್ಪ ನಂದರಗಿ, ತಾಲೂಕು ಪಂಚಾಯತಿ ಐಇಸಿ ಸಂಯೋಜಕ ರಾಘವೇಂದ್ರ ಭಜಂತ್ರಿ ಉಪಸ್ಥಿತರಿದ್ದರು.

Read More

ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಂಡ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಸ್ಕೌಟ್ಸ್ ಹಾಗೂ ಗೈಡ್ಸ್ ಸಹಯೋಗದಲ್ಲಿ ಆಯೋಜಿಸಿದ ಸೈಕಲ್ ಜಾಥಾಕ್ಕೆ ಜಿಲ್ಲಾ ಪಂಚಾಯತ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆ-೨೦೨೩ರ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಈಗಾಗಲೇ ಹಲವಾರು ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಹಮ್ಮಿಕೊಂಡ ಸೈಕಲ್ ಜಾಥಾ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಮತ್ತು ಗ್ರಾಮಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಬಿಸಿಲು ತಾಪಮಾನ ಹೆಚ್ಚಿಗಿದ್ದು, ಸೈಕಲ್ ಸವಾರರು ಮತದಾನ ಜಾಗೃತಿಯ ಜೊತೆಗೆ ತಮ್ಮ ಆರೋಗ್ಯದ ಕಡೆ ಗಮನವಿರಲಿ, ನೆರಳಲ್ಲಿ ವಿಶ್ರಾಂತಿ ಪಡೆದು ಮುಂದೆ ಸಾಗಬೇಕು. ಜೊತೆಯಲ್ಲಿ ತಂಪು ಪಾನೀಯ, ನೀರು,…

Read More

ಇಂಡಿ: ಮತಕ್ಷೇತ್ರದಲ್ಲಿ ಜನತೆ ಬದಲಾವಣೆ ಬಯಸಿ ಬಿಜೆಪಿ ಪಕ್ಷಕ್ಕೆ ಎಲ್ಲಿಲ್ಲದ ಬೆಂಬಲ ಸೂಚಿಸುತ್ತಿದ್ದಾರೆ. ಯುವಕರ ಉತ್ಸಾಹ ಪಕ್ಷಕ್ಕೆ ಬಲ ಬಂದAತಾಗಿದ್ದು ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಕಂಕಣಬದ್ಧರಾಗಬೇಕೆAದು ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಹೇಳಿದರು.ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲರು ಮಾತನಾಡಿ ವಿಶ್ವಕರ್ಮ, ಕುಂಬಾರ ಸೇರಿದಂತೆ ಅನೇಕ ಅಭಿವೃದ್ದಿ ನಿಗಮ ರಚಿಸಿ ಬಡವರನ್ನು ಮೇಲೆ ತರಲು ಪ್ರಯತ್ನಿಸಿರುವ ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ ಸರಕಾರ ಹಲವಾರು ಜನಪರ ಯೋಜನೆ ಜಾರಿಯಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದ್ದು ಇದರಿಂದಾಗಿ ರಾಜ್ಯ ಮತ್ತಷ್ಟು ಅಭಿವೃದ್ದಿಗೆ ಪೂರಕವಾಗಲಿದೆ ಎಂದರು.ಸಭೆಯಲ್ಲಿ ಹಣಮಂತರಾಯಗೌಡ ಪಾಟೀಲ, ಶೀಲವಂತ ಉಮರಾಣಿ, ರಾಜಶೇಖರ ಯರಗಲ್ಲ, ರಾಘವೇಂದ್ರ ಕಾಪಸೆ, ಸೋಮು ದೇವರ, ವೇಂಕಟೇಶ ಕುಲಕರ್ಣಿ ಮಾತನಾಡಿದರು.ಚೆನ್ನುಗೌಡ ಪಾಟೀಲ, ಶ್ರೀಮಂತ ಮೊಗಲಾಯಿ, ಆರ್.ಜಿ.ಪಾಟೀಲ, ಮಲ್ಲು ವಾಲಿಕಾರ, ರಮೇಶ ಧರೆಣ್ಣನವರ, ಗಿರಿಮಲ್ ಬಿರಾದಾರ, ಬತ್ತು ಸಾಹುಕಾರ,…

Read More

ಮುದ್ದೇಬಿಹಾಳ : ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ ಬಸ್ ಒಂದು ಪಲ್ಟಿಯಾಗಿ, ಹಲವರು ಗಾಯಗೊಂಡಿರುವ ಘಟನೆ ತಾಲೂಕಿನ ಹಳ್ಳೂರ ಕ್ರಾಸ್ ಬಳಿ ಮಂಗಳವಾರ ನಡೆದಿದೆ.ಚುನಾವಣಾ ತರಬೇತಿಗೆಂದು ಮುದ್ದೇಬಿಹಾಳದಿಂದ ಸಿಂದಗಿ ಪಟ್ಟಣಕ್ಕೆ ಅಂದಾಜು ೫೪ ಜನ ಸರ್ಕಾರಿ ನೌಕರರನ್ನು ಹೊತ್ತೊಯ್ಯುತ್ತಿದ್ದ ಸರ್ಕಾರಿ ಬಸ್‌ನ ಎಕ್ಸೆಲ್ ತುಂಡಾಗಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳಾಗಿಲ್ಲ. ಬಹುತೇಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಕೆಲವರಿಗೆ ಮಾತ್ರ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಅತೀ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರುಗಳು ಈ ಬಸ್ಸಿನಲ್ಲಿ ಇದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಅಂಬೂಲೆನ್ಸ್ ಮೂಲಕ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.ಎದೆ ನೋವು ಸೇರಿದಂತೆ ೧೦ ಮೇಜರ್, ೩ ಹೆಡ್ ಇಂಜುರಿ, ೧ ಶೋಲ್ಡರ್ ಪ್ಯಾಕ್ಚರ್ ಅನುಮಾನದ ಮೇಲೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.ತಾಲೂಕು ಆಸ್ಪತ್ರೆಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಚುನಾವಣಾಧಿಕಾರಿ ಚಂದ್ರಕಾAತ ಪವಾರ, ತಹಶೀಲ್ದಾರ ರೇಖಾ ಟಿ, ಸಿಪಿಐ ಮಲ್ಲಿಕಾರ್ಜುನ…

Read More