ಬ್ರಹ್ಮದೇವನಮಡು: ಮೂರು ಬಾರಿ ಶಾಸಕರಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಸಿಕ್ಕ ಅವಕಾಶದಲ್ಲಿ ಜನರ ಸೇವೆ ಮಾಡಿದ್ದೇನೆ ಎಂದು ಬಿಜೆಪಿ ಅಭ್ಶಥಿ೯, ಶಾಸಕ ರಮೇಶ ಭೂಸನೂರ ಮನವಿ ಮಾಡಿದರು.
ಸಿಂದಗಿ ತಾಲೂಕು ಹೊನ್ನಳ್ಳಿ, ಬ್ರಹ್ಮದೇವನಮಡು,ಖಾನಾಪೂರ,ಕರವಿನಾಳ ತಾಂಡಾದಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳ ನಿಮಾ೯ಣ, ಸಮುದಾಯ ಭವನ, ವಸತಿ ಶಾಲೆಗಳ ನಿಮಾ೯ಣ ಸೇರಿದಂತೆ ಹತ್ತು ಹಲವು ಅಭಿವೃದ್ದಿ ಕಾಮಗಾರಿ ಮಾಡಲಾಗಿದೆ. ಈ ಬಾರಿಯೂ ಕೂಡಾ ನಿಮ್ಮ ಆಶೀವಾ೯ದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು. ಈ ಸಂದಭ೯ದಲ್ಲಿ ಮಹಿಳೆಯರಾದ ಬನಕಾಬಾಯಿ ಚವ್ಹಾಣ, ಶಾರದಾಬಾಯಿ ಚವ್ಹಾಣ, ತಾರಬಾಯಿ ಪವಾರ, ಸೋನಾಬಾಯಿ ರಾಠೋಡ, ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಮಾಜಿ ತಾಪಂ ಸದಸ್ಶ ಶ್ರೀಶೈಲ ಚಳ್ಳಗಿ, ಅನೀಲ ಚವ್ಹಾಣ, ಸಂಜು ರಾಠೋಡ, ನಾನಾಗೌಡ ಪಾಟೀಲ, ಪಿಂಟು ಹೊಸಮನಿ, ಮಲ್ಲು ಗುಡಿಮನಿ, ಕಾಮಣ್ಣ ನಾಯ್ಕೋಡಿ, ಪಿಂಟು ರಾಠೋಡ ಸೇರಿದಂತೆ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment