ಕಲಕೇರಿ: ಗ್ರಾಮದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಗ್ರಾಮದಲ್ಲಿ ಪಕ್ಷದ ಪ್ರಚಾರ ಕಛೇರಿಯನ್ನು ಉದ್ಘಾಟಿಸಿ ನಂತರ ಮತಯಾಚನೆ ಮಾಡಿದರು.
ಸದೃಢ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಬಿಜೆಪಿಯನ್ನು ಬೆಂಬಲಿಸಬೇಕಿದೆ, ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ತಮಗೆ ಮತವನ್ನು ನೀಡುವಂತೆ ಈ ವೇಳೆ ಮನವಿ ಮಾಡಿದರು.
ಇದಕ್ಕೂ ಮುಂಚೆ ಯಲ್ಲಪ್ಪ ಮಹಾರಾಜರ ದೇವಸ್ಥಾನದಿಂದ ಮುಖ್ಯ ಬಜಾರವರೆಗೆ ಶಾಸಕ ಸೋಮನಗೌಡರನ್ನು ತೆರೆದ ಅಲಂಕೃತ ವಾಹನದಲ್ಲಿ ಬಾಜಾ ಭಜಂತ್ರಿ, ಡೊಳ್ಳು ಕುಣಿತದೊಂದಿಗೆ ಸಾವಿರಾರು ಜನ ಕಾರ್ಯಕರ್ತರು ಮೆರವಣಿಗೆಯೊಂದಿಗೆ ಅವರನ್ನು ಕರೆತಂದರು. ನಂತರ ಬೃಹತ್ ಪ್ರಮಾಣದ ಹೂಮಾಲೆಯನ್ನು ಕ್ರೇನ್ ಮುಖಾಂತರ ಸೋಮನಗೌಡರಿಗೆ ಹಾಕುವ ಮೂಲಕ ತಮ್ಮ ಅಭಿಮಾನವನ್ನು ತೋರಿಸಿದರು.
ಈ ವೇಳೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment