ವಿಜಯಪುರ: ಮಂಗಳವಾರ ಹೊನ್ನಳ್ಳಿ ಗ್ರಾಮದಲ್ಲಿ ಜರುಗಿದ ಮದುವೆ ಸಮಾರಂಭದಲ್ಲಿ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ ವಿಜಯಪುರ ಮತ್ತು ಗ್ರಾಮ ಪಂಚಾಯತಿ ಜಂಬಗಿ (ಆ) ಇವರ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನವ ವಧು-ವರರಿಗೂ ಹಾಗೂ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದವರಿಗೆ ಮತದಾನ ಜಾಗೃತಿ ಕರಪತ್ರಗಳನ್ನು ಹಂಚಲಾಯಿತು. ಕಡ್ಡಾಯವಾಗಿ ಮತದಾನ ಮಾಡುವಂತೆಯೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ, ಮೇ ೧೦ರಂದುಮತಗಟ್ಟೆಗೆ ಬಂದು ಮತದಾನ ಮಾಡುವಂತೆಯೂ, ದಾನಗಳಲ್ಲಿಯೇ ಮತದಾನ ಪವಿತ್ರ ದಾನ.ನಮಗೆ ಸಿಕ್ಕ ಅತ್ಯಂತ ಶ್ರೇಷ್ಠ ಹಕ್ಕು, ಯಾವುದೇ ಕಾರಣಕ್ಕೂ ಯಾವದೇ ಆಸೆ-ಆಮಿಷೆಗಳಿಗೆ ಒಳಗಾಗದೇ ಮತದಾನ ಮಾಡುವಂತೆ ನಾಡಿನ ಅಭ್ಯುದಯಕ್ಕಾಗಿ ಮತ ಬಹು ಅಮೂಲ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಕಲ್ಲಪ್ಪ ನಂದರಗಿ, ತಾಲೂಕು ಪಂಚಾಯತಿ ಐಇಸಿ ಸಂಯೋಜಕ ರಾಘವೇಂದ್ರ ಭಜಂತ್ರಿ ಉಪಸ್ಥಿತರಿದ್ದರು.