Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ​ಮುದ್ದೇಬಿಹಾಳ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿರುವ ಪ್ರತಿಷ್ಠಿತ ‘ಯುವ ವಿಜ್ಞಾನಿ ಕಾರ್ಯಕ್ರಮ’ ಕ್ಕೆ ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಗ್ರಂಥಿಕಾ ಕುಂಬಾರ ಆಯ್ಕೆಯಾಗಿರುವ ಹಿನ್ನೆಲೆ ಪಟ್ಟಣದ ಪವಾಡ ಬಸವೇಶ್ವರ ಆಶ್ರಮದ ಆವರಣದಲ್ಲಿ ಭಾನುವಾರ ಸಂಜೆ ಕುಂಬಾರ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.​ ​ಈ ವೇಳೆ ಮುಖ್ಯಗುರು ಶಿವಾನಂದ ಕುಂಬಾರ, ಮತ್ತು ಸಮಾಜದ ಮುಖಂಡರು ಮಾತನಾಡಿ, ಈ ಭಾಗದ ವಿದ್ಯಾರ್ಥಿನಿಯೊಬ್ಬಳು ರಾಷ್ಟ್ರ ಮಟ್ಟದ ಇಸ್ರೋ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಇದು ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.​ ಈ ವೇಳೆ ಸಮಾಜದ ಹಿರಿಯರಾದ ಸಂಗಣ್ಣ ಕುಂಬಾರ, ಮುಖ್ಯಗುರು ಶಿವಾನಂದ ಕುಂಬಾರ, ಬಸವರಾಜ ಕುಂಬಾರ (ಗೋನಾಳ), ಮಂಜುನಾಥ ಕುಂಬಾರ, ರಾಜಶೇಖರ ಕುಂಬಾರ, ಪತ್ರಕರ್ತ ಬಸವರಾಜ ಕುಂಬಾರ (ಚವನಭಾವಿ), ಅಂಬಣ್ಣ ಕುಂಬಾರ, ಮಲ್ಲಣ್ಣ ಕುಂಬಾರ, ಶರಣಬಸಪ್ಪ ಕುಂಬಾರ, ಮುತ್ತು ಕುಂಬಾರ ಹಾಗೂ ವಿರೇಶ ಚಲವಾದಿ ಸೇರಿದಂತೆ ಸಮಾಜದ ಪ್ರಮುಖರು ಭಾಗಿಯಾಗಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೨ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ವಾಂಸರಿಂದ ಗೋಷ್ಠಿಗಳನ್ನು ಏರ್ಪಡಿಸಿ ಸಮ್ಮೇಳನಕ್ಕೆ ಬಂದ ಕನ್ನಡ ಅಭಿಮಾನಿಗಳಿಗೆ ಜ್ಞಾನ ದಾಸೋಹ ಉಣ ಬಡಿಸುವಂತಾಗಲಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹ.ಮ ಪೂಜಾರ ಹೇಳಿದರು.ಸಿಂದಗಿ ತಾಲೂಕ ಪಂಚಾಯತ ಸಭಾಂಗಣದಲ್ಲಿ ಜರುಗಿದ ಸಾಹಿತಿಗಳ, ಲೇಖಕರ, ಕವಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ೧೪ ವರ್ಷದ ಹಿಂದೆ ಸಿಂದಗಿಯಲ್ಲಿ ಜಿಲ್ಲಾ ಸಮ್ಮೇಳನ ಜರುಗಿತ್ತು. ಈಗ ಹಮ್ಮಿಕೊಳ್ಳಲಾಗಿರುವ ಸಮ್ಮೇಳನಕ್ಕೆ ಸಿಂದಗಿ ತಾಲೂಕಿನ ಎಲ್ಲ ಕನ್ನಡ ಅಭಿಮಾನಿಗಳು ತನು, ಮನ, ದನದಿಂದ ಸಹಕಾರ ನೀಡುವುದು ಅತ್ಯಗತ್ಯ ಎಂದರು.ಈ ವೇಳೆ ವಿಶ್ರಾಂತ ಗುರುಮಾತೆ ಜಯಶ್ರೀ ಕುಲಕರ್ಣಿ ಮಾತನಾಡಿ, ಮಹಿಳೆಯರ ಕುರಿತು ಗೋಷ್ಠಿಯನ್ನು ಏರ್ಪಡಿಸಬೇಕು. ಸ್ಥಳೀಯ ಮಹಿಳೆಯರಿಗೆ ಸೂಕ್ತ ವೇದಿಕೆ ನೀಡಬೇಕು. ಎಂಭತ್ತು ವರ್ಷ ಮೀರಿದ ಸಾಧಕ ಮಹಿಳೆಯರನ್ನು ವೇದಿಕೆಯಲ್ಲಿ ಗೌರವಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಎಚ್.ಜಿ.ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ವಿಶ್ರಾಂತ ಪ್ರಾಚಾರ್ಯ ರಾ.ಶಿ.ವಾಡೆದ, ತಾಲೂಕ ಕಸಾಪ ಅಧ್ಯಕ್ಷ ವೈ.ಸಿ.ಮಯೂರ, ಶಿಕ್ಷಕಿ ಶೋಭಾ ಚಿಗರಿ, ಶೈನಾಬಿ ಮಸಳಿ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಕೃತಿಯಲ್ಲಿರುವ ಜೀವ ಸಂಕುಲ ಉಳಿಸಲು ಪಕ್ಷಿಗಳ ದಾಹ ತೀರಿಸುವುದು ನಮ್ಮೆಲ್ಲರ ಕರ್ತವ್ಶವಾಗಿದೆ ಎಂದು ಜ್ಞಾನ ವಿಕಾಸ್ ಸಮಾನ್ವಯಾಧಿಕಾರಿ ಆಶಾ ಹಿರೇಮಠ ಹೇಳಿದರು.ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಬಿವೃದ್ಧಿ ಸಂಸ್ಥೆಯ, ಗಂಗಾ ಜ್ಞಾನ ವಿಕಾಸ್ ಕೇಂದ್ರದ ಹಾಗೂ ಧರ್ಮಸ್ಥಳ ಸಂಘದ ಪದಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಪಕ್ಷಿಗಳಿಗೆ ನೀರುಣಿಸುವ ಸಲುವಾಗಿ ಅರವಟ್ಟಿಗೆಯನ್ನು ಮರದಲ್ಲಿ ಅಳವಡಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮ ಮನೆಯ ಮುಂದಿನ ಗೀಡ ಮರಗಳ ಹಾಗೂ ಮನೆಯ ಮೇಲೆ ಒಂದು ಪಾತ್ರೆ ಅಥವಾ ಪ್ಲಾಸ್ಟಿಕ್ ಬಾಟಲಗಳಲ್ಲಿ ನೀರು ಇಟ್ಟರೆ ಸಾವಿರಾರು ಪಕ್ಷಿಗಳ ಜೀವ ಉಳಿಸಬಹುದು ಎಂದರು.ಈ ವೇಳೆ ಸ್ಥಳೀಯ ಸೇವಾ ಪ್ರತಿನಿಧಿ ಭೀಮಾಭಾಯಿ ಗೌಂಡಿ, ಸಂಘದ ಪ್ರತಿನಿಧಿ ಲೈಲಾಬಿ ನಾಯ್ಕೋಡಿ, ಬಿಬಿಜಾನ್ ಅಗಿಸಿಮನಿ, ನಜಾಮಾ ಅಗಿಸಿಮನಿ, ರೋಶಾ ಬಾಗೇವಾಡಿ, ರಸೂಲಬಿ ಗಡಗಂಜ್, ಸಲೀಮಾ ಬಾಗೇವಾಡಿ ಸೇರಿದಂತೆ ಅನೇಕರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ರಾಂಪೂರ ರಸ್ತೆಯ ಹೊರ ವಲಯದಲ್ಲಿರುವ ಸಮರ್ಥ ವಿದ್ಯಾವಿಕಾಸ ಸಂಸ್ಥೆಯ ಪ್ರೇರಣಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಅಪೇಕ್ಷಾ ಹುಗ್ಗಿ ಅವರು ಓದಿದ ಶಾಲೆಗೆ ರೂ.೧.೧೨ಲಕ್ಷ ಮೌಲ್ಯದ ಡಿಜಿಟಲ್ ಬೋರ್ಡ್ ಕಾಣಿಕೆಯಾಗಿ ನೀಡಿದ್ದಾರೆ.ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಪ್ರಯುಕ್ತ ಮುಂದಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹುಗ್ಗಿ ಕುಟುಂಬ ಡಿಜಿಟಲ್ ಬೋರ್ಡ್ನ್ನು ನೀಡಿದ್ದಾರೆ. ವಿದ್ಯಾರ್ಥಿನಿ ಅಪೇಕ್ಷಾ, ಅವರ ತಂದೆ ಎಂ.ಆರ್.ಹುಗ್ಗಿ ಹಾಗೂ ತಾಯಿ ದ್ರಾಕ್ಷಾಯಿಣಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ನಿರ್ದೇಶಕ ಪಿ.ಡಿ.ಕುಲಕರ್ಣಿ ಮುಖ್ಯಗುರುಮಾತೆ ಎಸ್.ಐ.ಅಸ್ಕಿ, ಬಿ.ಎಸ್.ಲಾಳಸಂಗಿ, ಸಂಗೀತ ಶಿಕ್ಷಕ ವಿನಾಯಕ ಕುಲಕರ್ಣಿ, ಜ್ಞಾನೇಶ್ವರ ಹುಗಾರ, ಅಭಿಷೇಕ, ಭಾಗ್ಯಾಶ್ರೀ ಮುರುಡಿ, ಎಸ್. ನಿವೇದಿತಾ ಉಮ್ಮರಗಿ, ಶೈನಾಜ್, ಯಾಸ್ಮೀನ್, ಅಶ್ವೀನಿ, ಕವಿತಾ ಪೂಜಾರ, ದ್ರಾಕ್ಷಾಯಣಿ ಹುಗ್ಗಿ, ಸಚಿನ ಮಠಪತಿ, ಗುರುರಾಜ ಮುದ್ದೇಬಿಹಾಳ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರೌಢಶಾಲೆಯಲ್ಲಿ ೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-೧ರಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.ಈ ಪರೀಕ್ಷೆಯಲ್ಲಿ ಮೈಮೂನಾಬೇಗಂ ಕಾಚೂರ ಅವರು ೬೨೫ ಅಂಕಗಳಿಗೆ ೫೭೦ (೯೧.೨೦%) ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜೇಶ್ವರಿ ಕುರಿ ೫೫೫ ಅಂಕಗಳು (೮೮.೮%) ಪಡೆದು ದ್ವಿತೀಯ ಸ್ಥಾನ ಹಾಗೂ ಸಂಜನಾ ಬಡಿಗೇರ ೫೨೬ ಅಂಕಗಳು (೮೪.೧೬%) ಪಡೆದು ತೃತೀಯ ಸ್ಥಾನಗಳಿಸಿದ್ದಾರೆ. ಒಟ್ಟು ೯೮ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿತರಾಗಿದ್ದು, ಅದರಲ್ಲಿ ೯೮ ಮಂದಿ ಹಾಜರಾಗಿ ೮೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ೨ ಮಂದಿ ಡಿಸ್ಟಿಂಕ್ಷನ್, ೩೦ ಮಂದಿ ಪ್ರಥಮ ದರ್ಜೆ, ೨೩ ಮಂದಿ ದ್ವಿತೀಯ ದರ್ಜೆ ಮತ್ತು ೩೩ ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಶಾಲೆಯ ಒಟ್ಟಾರೆ ಫಲಿತಾಂಶ ೯೦% ಆಗಿದ್ದು, ಇದು ಸಂತಸದ ವಿಷಯವಾಗಿದೆ.ಈ ಸಾಧನೆಗೆ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾರಂಗಮಠ, ಸಿಂದಗಿ. ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಆಡಳಿತ ಮಂಡಳಿಯ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಬಂದಾಳ ರಸ್ತೆಯಲ್ಲಿರುವ * ವಿವೇಕ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇಕಡ 100 ರಷ್ಟು ಆಗಿದೆ.ಒಟ್ಟು 13 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಕುಮಾರಿ ಲಕ್ಷ್ಮಿ ಸುಗಯ್ಗೋಳ 625 ಕ್ಕೆ 575,92% ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ಕುಮಾರ ಪ್ರವೀಣ ಅಗಸರ 600ಕ್ಕೆ 568, 91% ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಕುಮಾರ ಪೃಥ್ವಿ ಲೋಣಿ 600ಕ್ಕೆ 566, 90.56% ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ಕುಮಾರ ಸಿದ್ಧಾರೂಡ 600ಕ್ಕೆ 555,88.8%, ಸ್ನೇಹಾ ಹೆರೂರ 600ಕ್ಕೆ 553,88.48%, ಭೂಮಿಕಾ ಹಳಿಮನಿ 600ಕ್ಕೆ 549, 87.84%, ಪ್ರಮೋದ್ ಭಾಸಗಿ 600 ಕ್ಕೆ 537, 85.92%, ಶ್ರೀನಿಧಿ ಕುಲಕರ್ಣಿ 600 ಕ್ಕೆ 529,85% ಅಂಕಗಳನ್ನು ಪಡೆದಿದ್ದಾರೆ. ಒಟ್ಟು 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ( ಡಿಸ್ಟಿಂಕ್ಷನ್) ಪಾಸಾದರೆ, ಆದಿತ್ಯ ಅರಳಗುಂಡಗಿ 498, ಆನಂದ ಮಾದರ್ 475, ಕಾವ್ಯ ಕತ್ತಿ 468, ಅರ್ಪಿತಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲ್ಲೂಕಿನ ಕಗ್ಗೋಡ ಗ್ರಾಮದ ಬಸವ ಪೀಠ (ರಿ) ಅಡಿಯಲ್ಲಿ ನಡೆಸುತ್ತಿರುವ ಪ್ರಕೃತಿ ಪ್ರೌಢ ಶಾಲೆಯ ವಿಧ್ಯಾರ್ಥಿಗಳು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಸಾಧನೆ ಮಾಡಿದ್ದಾರೆ.ಸುಪ್ರೀತಾ ಇಬ್ರಾಹಿಂಪುರ ಶೇ 97.92, ಪವಿತ್ರಾ ಚವ್ಹಾಣ ಶೇ. 97.92, ರಾಚಣ್ಣಾ ತೇಲಿ ಶೇ. 95.68, ಸಾಕ್ಷಿ ತಳವಾರ ಶೇ.92.96 ಸಾಧನೆಗೈದು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.ಸಂಸ್ಥೆಯ ಅಧ್ಯಕ್ಷ ಸುಭಾಸ ಥಂಬ, ಮುಖ್ಯೋಪಾಧ್ಯಾಯನಿ ಭಾರತಿ ಥಂಬ, ವಿಧ್ಯಾವತಿ ತೆನಿಹಳ್ಳಿ, ಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂದಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ೨೦೨೫-೨೬ ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಪರೀಕ್ಷೆಗೆ ಕುಳಿತ ೬೮ ವಿದ್ಯಾರ್ಥಿಗಳಲ್ಲಿ ಎಲ್ಲಾ ೬೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಪ್ರಥಮ ಸ್ಥಾನವನ್ನು ಸಿಂಧೂ ಶ್ರೀಶೈಲ ಮೆಳ್ಳಿಗೇರಿ ಶೇ ೯೪.೨೪, ದ್ವಿತೀಯ ಸ್ಥಾನವನ್ನು ಸುಶ್ಮಿತಾ ಸಾಹೇಬಗೌಡ ಸುರಗಿಹಳ್ಳಿ ಶೇ ೯೨.೯೬ ತೃತೀಯ ಸ್ಥಾನವನ್ನು ವಿದ್ಯಾ ಹನುಮಂತ ಬಿರಾದಾರ ಶೇ ೯೦.೮೮ ಹಾಗೆಯೇ ಸಿಂಧೂ ಶ್ರೀಶೈಲ ಮಳ್ಳಿಗೇರಿ ವಿಜ್ಞಾನದಲ್ಲಿ ನೂರಕ್ಕೆ ನೂರು ಹಾಗೂ ವಿದ್ಯಾ ಹನುಮಂತ ಬಿರಾದಾರ ಹಿಂದಿಯಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಾಧನೆಗೆ ಎಸ್‌ಡಿಎಮ್‌ಸಿ ಅಧ್ಯಕ್ಷ ಮನೋಹರ ಪೂಜಾರಿ, ಮುಖ್ಯಶಿಕ್ಷಕ ಆಯ್.ಎಸ್. ನರೂಣಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಯಾಳವಾರ ಗ್ರಾಮದ ಸೋಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಪರೀಕ್ಷೆಗೆ ಕುಳಿತ ೭೧ ವಿದ್ಯಾರ್ಥಿಗಳಲ್ಲಿ ಎಲ್ಲಾ ೭೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಥಮ ಸ್ಥಾನವನ್ನು ಲಕ್ಷಿö್ಮÃ ದೇಸಾಯಿ ಶೇ ೯೬.೬೪, ದ್ವಿತೀಯ ಸ್ಥಾನವನ್ನು ಕಸ್ತೂರಿಬಾಯಿ ಇಬ್ರಾಹಿಂಪೂರ ಶೇ ೯೩.೯೨ ತೃತೀಯ ಸ್ಥಾನವನ್ನು ಕೀರ್ತಿ ಹುಣಶ್ಯಾಳ ಶೇ ೯೧.೬೮ ಫಲಿತಾಂಶ ಪಡೆದಿದ್ದಾರೆ.ವಿದ್ಯಾರ್ಥಿ,ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ್ರ, ಮುಖ್ಯಶಿಕ್ಷಕ ಕೆ.ಆಯ್. ಹೊಸಮನಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಹಿಂದೂ ದೇವಸ್ಥಾನವೆಂದರೆ ಅಲ್ಲಿನ ದೇವದೇವತೆಗಾಗಿ ಪ್ರತಿಷ್ಠಾಪಿಸಲಾದ ಒಂದು ಪವಿತ್ರ ಮನೆ. ಅದು ಒಂದು ಪ್ರಾರ್ಥನೆಯ ಸ್ಥಳ ಮಾತ್ರ ಅಲ್ಲ. ವೇದ ಮಂತ್ರಗಳಿಂದ ದೇವ-ದೇವತೆಯನ್ನು ಅಲ್ಲಿ ಎಂದಿಗೂ ನೆಲೆಸಿರುವಂತೆ ಆಹ್ವಾನಿಸಿ ಪ್ರತಿಷ್ಠಾಪಿಸಲಾಗುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರು ದೇವರ ಮನೆಗೆ ಬಂದ ಅತಿಥಿಗಳಂತೆ, ಆದರೆ ಆ ಭೇಟಿಗೆ ದೇವರ ಆಹ್ವಾನವಿರಬೇಕು. ಆಗ ಆ ಭೇಟಿ ಒಂದು ತೀರ್ಥಯತ್ರೆಯಾಗುತ್ತದೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಹೈರಿಗೆ ಗ್ರಾಮದಲ್ಲಿ ಶ್ರೀ ರಾಮ ಒಕ್ಕಲಿಗರ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡಿರುವ ಶ್ರೀ ರಾಮ ಮಂದಿರ ಉದ್ಘಾಟನಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಇಲ್ಲಿನ ದೇವಸ್ಥಾನ ಉದ್ಘಾಟನಾ ಮಹೋತ್ಸವಕ್ಕೆ ಜನರು ಸೇರಿರುವುದನ್ನು ನೋಡಿ ಖುಷಿಯಾಗುತ್ತೆ. ರಾಮನ ಮೇಲೆ ಇಲ್ಲಿನ ಜನರಿಗೆ ಎಷ್ಟು ಭಕ್ತಿಯಿದೆ ಎಂಬುದು ತಿಳಿಯುತ್ತೆ ಎಂದು ಹೇಳಿದರು.ಇದಕ್ಕೂ ಮುನ್ನ ಬುಧವಾರ ಬೆಳಗ್ಗೆ 5.30ರ ಬ್ರಾಹ್ಮಿ ಮುಹೂರ್ತದಲ್ಲಿ…

Read More