Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಖ್ಯಾತ ಖಳನಟ, ಪರಿಸರ ಪ್ರೇಮಿ ಎಂ ಪಿ ಶಂಕರ
ವಿಶೇಷ ಲೇಖನ

ಖ್ಯಾತ ಖಳನಟ, ಪರಿಸರ ಪ್ರೇಮಿ ಎಂ ಪಿ ಶಂಕರ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ.ಶಶಿಕಾಂತ ಪಟ್ಟಣ
ರಾಮದುರ್ಗ
ಬೆಳಗಾವಿ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಕನ್ನಡ ಚಿತ್ರರಂಗದ ಹಿರಿಯ ನಟ ಪರಿಸರ ಪ್ರೇಮಿ ಪ್ರಾಣಿಪ್ರಿಯ ಖ್ಯಾತ ಕಳ ನಟ ಎಂ ಪಿ ಶಂಕರ ಚಲನ ಚಿತ್ರಗಳಲ್ಲಿ ಹಲವು ಹೊಸ ಪ್ರಯೋಗಗಳನ್ನು ಕಾಡು ಮೇಡುಗಳಲ್ಲಿ ಚಿತ್ರಿಸಿ ಹೆಸರುವಾಸಿಯಾದ ಅಪ್ರತಿಮ ಕೆಚ್ಚೆದೆಯ ಗಂಡುಗಲಿ ಎಂ ಪಿ ಶಂಕರ
ಜನನ ಮತ್ತು ಬಾಲ್ಯ
ಎಂ ಪಿ ಶಂಕರ ಇವರು 20, ಆಗಸ್ಟ್, 1935 ರಂದು ಮೈಸೂರು ಪುಟ್ಟಲಿಂಗಪ್ಪ ಮತ್ತು ಗಂಗಮ್ಮ ಎಂಬ ಲಿಂಗಾಯತ ಕುಟುಂಬದಲ್ಲಿ ಜನಿಸಿದರು.
ಅಜಾನು ಬಾಹು ಶಂಕರ್ ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ಇವರು ಅನೇಕ ಖಳನಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯ ಹರಿಶ್ಚಂದ್ರ, ಶನಿ ಪ್ರಭಾವ, ಬಂಗಾರದ ಮನುಷ್ಯ, ಗಂಧದ ಗುಡಿ,ಭೂತಯ್ಯನ ಮಗ ಅಯ್ಯು ಇವರ ಕೆಲವು ಪ್ರಮುಖ ಚಿತ್ರಗಳು. ಇವರು ಪೋಷಕ ನಟರಾಗಿ ಕೂಡ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ, ದಿಗ್ದರ್ಶನ, ಚಿತ್ರನಿರ್ಮಾಣ, ವಿತರಣೆ ಹಾಗೂ ಸಂಬಂಧಿಸಿದ ಎಲ್ಲಾ ಮಜಲುಗಳನ್ನು ಚೆನ್ನಾಗಿ ಅರಿತಿದ್ದರು. ಕಾಡು, ಪರಿಸರ ಸಂರಕ್ಷಣೆಯ ಬಗ್ಗೆ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಹಲವು ಚಿತ್ರಗಳ ನಿರ್ಮಾಪಕರಾಗಿದ್ದಾರೆ..
ಕುಟುಂಬ
ಪುಟ್ಟಲಿಂಗಪ್ಪ, ಗಂಗಮ್ಮ ದಂಪತಿಗಳ ಪ್ರೀತಿಯ ಮೂರನೆಯ ಸಂತಾನವಾಗಿ ಭರಣಿ ನಕ್ಷತ್ರ ದಲ್ಲಿ ಜನಿಸಿದರು. ಹೀಗಾಗಿ ಭರಣಿ ಚಲನ ಚಿತ್ರ ಬ್ಯಾನರ್ ಕೆಳಗೆ 16 ಚಿತ್ರಗಳನ್ನು ನಿರ್ಮಿಸಿದ್ದಾರೆ.
ಪತ್ನಿ, ಮಂಜುಳಾ, ಪುತ್ರಿ, ಶೋಭಾ, ಇಬ್ಬರು ಪುತ್ರರು, ತಿಲಕ್, ಹಾಗೂ ವಿರೂಪಾಕ್ಷ. ಕೊನೆಯ ಮಗ ವಿರೂಪಾಕ್ಷ ಆತ್ಮ ಹತ್ಯೆ ಮಾಡಿ ಕೊಂಡು ಇಹ ಲೋಕ ತ್ಯಜಿಸಿದರು.
ಎಮ್.ಪಿ.ಶಂಕರ್, ಶ್ರೇಷ್ಠ ಖಳನಾಯಕನೆಂದು ಹೆಸರುಮಾಡಿದ್ದರು. 1962 ರಲ್ಲಿ ಬಿಡುಗಡೆಯಾದ ಸತ್ಯಹರಿಶ್ಚಂದ್ರ ಕಪ್ಪು-ಬಿಳುಪಿನ ಚಲನಚಿತ್ರದಲ್ಲಿ ವೀರಬಾಹು ವಿನ ಪಾತ್ರದಲ್ಲಿ ಒಳ್ಳೆಯ ಅಭಿನಯವನ್ನು ತೋರಿಸಿ ಚಿತ್ರರಸಿಕರ ಮನವೊಲಿಸಿಕೊಂಡರು. ಅವರ ನಿರ್ದೇಶನದ, ಡಾ.ರಾಜ್ ನಟಿಸಿದ ಗಂಧದಗುಡಿ ಚಿತ್ರ ಎಲ್ಲರ ಗಮನ ಸೆಳೆಯಿತು. ಇದರ ಎರಡನೆಯ ಆವರ್ತಿಯಲ್ಲಿ ಶಿವರಾಜಕುಮಾರ್ ಅಭಿನಯಿಸಿದ್ದರು. ಕಾಡಿನ ಸಂರಕ್ಷಣೆ ಹಾಗೂ, ಪರಿಸರದ ಬಗ್ಗೆ ಅವರು ಯಾವಾಗಲು ಕಾಳಜಿ ವಹಿಸುತ್ತಿದ್ದರು. ರತ್ನಮಂಜರಿ, ಚಿತ್ರದಿಂದ ಕನ್ನಡಚಿತ್ರರಂಗವನ್ನು ಪ್ರವೇಶಿಸಿದ ಶಂಕರ್ ರವರು, 1968 ರಲ್ಲಿ, ’ಕಾಡಿನ ರಹಸ್ಯ’ ಚಿತ್ರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಕಲ್ಲರಳಿ ಹೂವಾಗಿ’ ಚಿತ್ರ, ಅವರ ವೃತ್ತಿಜೀವನದ ಕೊನೆಯದು.
ಕೆಲವು ಹಾಸ್ಯಸನ್ನಿವೇಶಗಳಿಂದ ತುಂಬಿದ, ‘ನಾರದವಿಜಯ’, ಹಾಗೂ ‘ಗಿಡ್ಡೂದಾದ’, ಎಂಬ ಚಿತ್ರಗಳನ್ನು ತಯಾರಿಸಿದ್ದರು.
ಭರಣಿ ಕಲಾತಂಡ, ನಾಟಕರಂಗಪ್ರಕಾರ
ಇದು ಎಂ ಪಿ ಶಂಕರ ಅವರ ಅತ್ಯಂತ ಅಪರೂಪದ ಪ್ರೀತಿಯ ರಂಗ ಭೂಮಿಯ ಕಲಾ ತಂಡ ಇದರಡಿಯಲ್ಲಿ ’ಗೌತಮ ಬುದ್ಧ’, ‘ಸೊಹ್ರಾಬ್ ರುಸ್ತುಂ’, ‘ಗದಾಯುದ್ಧ’, ‘ಕನಕದಾಸ ‘ನಾಟಕಗಳನ್ನು ಆಡಿಸಿ, ತಾವೂ ಅಭಿನಯಿಸಿದ್ದರು. ಅವರ ಪೂಜ್ಯ ತಂದೆಯವರ ಅಭಿಲಾಷೆಯಂತೆ, ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ್ದರು.
ಪ್ರಶಸ್ತಿಗಳು.
1953_1954 ರಲ್ಲಿ ಬನುಮಯ್ಯ ಹೈಸ್ಕೂಲ್ ನಲ್ಲಿ ತಮ್ಮ ‘ಪ್ರೌಢಶಾಲೆಯ ವಾರ್ಷಿಕೋತ್ಸ’ವದಲ್ಲಿ ‘ಕಾಡುಕುರುಬ’ ನ ಪಾತ್ರವನ್ನು ಯಶಸ್ವಿಯಾಗಿ ಅಭಿನಯಿಸಿದ್ದರು. ‘ಮೈಸೂರ್ ವಿದ್ಯುಚ್ಛಕ್ತಿ ಆಫೀಸ್’ ನಲ್ಲಿ ದಿನಗೂಲಿ ಕೆಲಸಮಾಡುತ್ತಿದ್ದರು.
1955 ರಲ್ಲಿ, ‘ಮೈಸೂರಿನ ರೈಲ್ವೆಕಾರ್ಖಾನೆ’ಯಲ್ಲಿ ನೌಕರಿಮಾಡಿದ್ದರು.
1956 ರಲ್ಲಿ ‘ಮೈಸೂರ್ ದಸರಾಹಬ್ಬ’ದ ಸಮಯದ ‘ಕುಸ್ತಿ-ಪಂದ್ಯಾವಳಿ’ಯಲ್ಲಿ ಭಾಗವಹಿಸಿದ್ದರು. ಆಗಿನ ಮೈಸೂರಿನ ಮುಖ್ಯಮಂತ್ರಿ, ‘ಬಿ.ಡಿ.ಜತ್ತಿ’ಯವರ ಹಸ್ತದಿಂದ ಬಹುಮಾನ ಗಿಟ್ಟಿಸಿದ್ದರು. ತಮ್ಮ ಕೊನೆಯ ದಿನಗಳಲ್ಲಿ ವಿನಿವಿಂಕ್ ಶಾಸ್ತ್ರಿಗಳ ಜೊತೆ ವ್ಯವಹಾರ ಸಂಬಂಧಬೆಳೆಸಿ, ಸುಮಾರು ೧೫ ಲಕ್ಷರೂಪಾಯಿಗಳಷ್ಟು ಹಣವನ್ನು ನಷ್ಟ ಮಾಡಿಕೊಂಡಿದ್ದರು.
ಇದರಿಂದ ಬಹಳವಾಗಿ ನೊಂದಿದ್ದರು.
ಭರಣಿ ಬ್ಯಾನರ್ ನಲ್ಲಿ ಸುಮಾರು 16 ಚಲನ ಚಿತ್ರಗಳನ್ನು ನಿರ್ಮಿಸಿ ಕನ್ನಡದ ಅಪ್ಪಟ ಪರಿಸರ ಪ್ರೇಮಿ ಎಂ ಪಿ ಶಂಕರ ಒಬ್ಬ ಮಾನವತಾವಾದಿ.
ತಮ್ಮ ಗಂಧದ ಗುಡಿ ಚಲನ ಚಿತ್ರಗಳಲ್ಲಿ ಡಾ ರಾಜಕುಮಾರ ಮತ್ತು ವಿಷ್ಣುವರ್ಧನ ಅವರನ್ನು ಒಟ್ಟಿಗೆ ಸೇರಿಸಿ ಒಳ್ಳೆಯ ಚಲನ ಚಿತ್ರ ನಿರ್ಮಿಸಿದರು. ಅಲ್ಲಿ ತಪ್ಪಿನಿಂದಾಗಿ ಬಂದೂಕಿನಿಂದ ಹಾರಿದ ಗುಂಡು ವಿಷ್ಣುವರ್ಧನ ಮತ್ತು ರಾಜಕುಮಾರ ಅವರನ್ನು ದೂರ ಮಾಡಿತು. ಇದನ್ನು ಎಷ್ಟು ಸಲ ಕನ್ನಡಿಗರಿಗೆ ಹೇಳಿದರೂ ಒಪ್ಪದ ಜನರು ವಿಷ್ಣುವರ್ಧನ ಅವರನ್ನು ಉದ್ದೇಶಪೂರಕವಾಗಿ ಅತ್ಯಂತ ಹೀನಾಯವಾಗಿ ನಡೆದು ಕೊಂಡರು. ಇದರಿಂದ ಎಂ ಪಿ ಶಂಕರ ಅವರು ತುಂಬ ನೊಂದುಕೊಂಡಿದ್ದರು.
ನಿಧನ
ಮೂಳೆ ಮುರಿತ ಪಿತ್ತ ಕೋಶದ ಕ್ಯಾನ್ಸರ್ ನಿಂದಾಗಿ ಆರೋಗ್ಯವು ಸಂಪೂರ್ಣ ಕ್ಷೀಣಿಸಿತು.
ತಮ್ಮ 73 ನೆಯ ವರ್ಷದಲ್ಲಿ ಮೈಸೂರು ಪುಟ್ಟಲಿಂಗಪ್ಪ ಶಂಕರ್ ರವರು, ಮೈಸೂರಿನ, ’ಕಾಳಿದಾಸ ರಸ್ತೆಯಲ್ಲಿರುವ ತಮ್ಮ ಸ್ವಗೃಹ, ಮಂಜುನಾಥನಿಲಯದಲ್ಲಿ, ದಿನಾಂಕ 17, ಜುಲೈ 2008 ರಂದು, ದೈವಾಧೀನರಾದರು. ಮನೆಯಲ್ಲೇ ಜಾರಿಬಿದ್ದು ಸೊಂಟದ ಮೂಳೆಗೆ ಪೆಟ್ಟಾಗಿತ್ತು. ‘ವಿಕ್ರಮ್ ನರ್ಸಿಂಗ್ ಹೋಂ,’ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ವಲ್ಪ ಗುಣಹೊಂದಿ ಮನೆಗೆ ವಾಪಸ್ ಬಂದಿದ್ದರು. ಆದರೆ, ಪಿತ್ತಕೋಶದ ಕ್ಯಾನ್ಸರ್ ಅವರನ್ನು ಬಹಳ ಸಮಯದಿಂದ ಕಾಡಿಸುತ್ತಿತ್ತು. ಅವರ ಅಂತಿಮ ಸಂಸ್ಕಾರವನ್ನು, ವಿದ್ಯಾರಣ್ಯಪುರದ,’ ಲಿಂಗಾಯತ ರುದ್ರಭೂಮಿ,’ ಯಲ್ಲಿ ನೆರವೇರಿಸಲಾಯಿತು.
ಇಂತಹ ಅಪ್ಪಟ ಕನ್ನಡ ಪ್ರೇಮಿ ನಟ ನಿರ್ಮಾಪಕ ನಿರ್ದೇಶಕ ಎಂ ಪಿ ಶಂಕರ ಈಗ ನೆನಪು ಮಾತ್ರ..

ಪ್ರಶಸ್ತಿಗಳು, ಹಾಗೂ ಬಿರುದು-ಬಾವಲಿಗಳು

ನಟಶಾರ್ದೂಲ
ಕಲಾಶಾರ್ದೂಲ
ಮೈಸೂರುಹುಲಿ
ಕಲಾಸೇವಾಧುರೀಣ
ಕನ್ನಡಭೂಷಣ
ಸಾಹಸೀಚಿತ್ರರತ್ನ
ಕರುಣಾರತ್ನ
ಸಾಗರ

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ
    In (ರಾಜ್ಯ ) ಜಿಲ್ಲೆ
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.