Author: editor.udayarashmi@gmail.com

ಮುದ್ದೇಬಿಹಾಳ: ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಸರಳ ಸಜ್ಜನಿಕೆಯ ರಾಜಕಾರಣವನ್ನು ಮೆಚ್ಚಿ ಅವರಿಗೆ ಎಲ್ಲ ಹಿರಿಯ ವಕೀಲರು ಸೇರಿದಂತೆ ಅಂದಾಜು 15೦ ಕ್ಕೂ ಹೆಚ್ಚು ವಕೀಲರು ಬೆಂಬಲಿಸಿದ್ದಾರೆ ಎಂದು ಹಿರಿಯ ವಕೀಲರಾದ ಎಂ.ಎಚ್.ಹಾಲಣ್ಣನವರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ತಿಳಿಸಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ನಾಡಗೌಡರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ ಮನೆತನದವರಾದ ನಾಡಗೌಡರು ಅಧಿಕಾರಕ್ಕೆ ಬಂದರೆ ನೀರಾವರಿ, ಶಿಕ್ಷಣ, ಮಹಿಳೆಯರ ಆರ್ಥಿಕ ಸುಧಾರಣೆ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ಮತಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತಾರೆ. ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುವದಿಲ್ಲ. ಈ ಹಿಂದೆಯೂ ಹೊಸ ನ್ಯಾಯಾಲಯ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬಿಜೆಪಿ ಸರ್ಕಾರ ಕಡು ಬಡವರನ್ನೂ ನೋಡದೇ ಸಾಸಿವೆ, ಜೀರಿಗೆ ಗೂ ಜಿಎಸ್‌ಟಿ ಹಾಕಿ ಹೈರಾಣು ಮಾಡಿದೆ. ಮುಂದಿನ ದಿನಗಳಲ್ಲಿ ಬಡವರು ಸೇರಿದಂತೆ ಮಧ್ಯಮ ವರ್ಗದ ಜನತೆ ಜೀವನ ನಡೆಸಲು ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವುದು ಅನಿವಾರ್ಯವಾಗಿದೆ ಎಂದರು.ಈ…

Read More

ಕಲಕೇರಿ: ಸಮಿಪದ ಕೋರವಾರ ಹಾಗೂ ವಿವಿಧ ಗ್ರಾಮಗಳಲ್ಲಿ ದೇವರಹಿಪ್ಪರಗಿ‌ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಮತಯಾಚನೆ ಮಾಡಿದರು.ಗ್ರಾಮಸ್ಥರು, ಅಭಿಮಾನಿಗಳು ಶಾಸಕ ಸೋಮನಗೌಡರನ್ನು ತೆರೆದ ಜೀಪಿನಲ್ಲಿ ರೋಡ್ ಶೋ ಮಾಡುವ ಮೂಲಕ ಭವ್ಯವಾಗಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಇದ್ದರು.

Read More

ವಿಜಯಪುರ: ಪ್ರತಿಯೊಬ್ಬ ಮನುಷ್ಯನಿಗೆ ಬೇಕಾಗಿರುವುದು ಸುರಕ್ಷತೆ ಹಾಗೂ ಮೂಲಭೂತ ಸೌಕರ್ಯ. ಅದನ್ನು ನಮ್ಮ‌ ತಂದೆಯವರು ಕಲ್ಪಿಸಿದ್ದಾರೆ. ಅದಕ್ಕಾಗಿ ಜನ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ನಿಶ್ಚಿತವಾಗಿ 20 ಮತಗಳ ಅಂತರದಿಂದ ಗೆಲ್ಲಲಿದ್ದೇವೆ ಎಂದು ಯುವ ನಾಯಕ ರಾಮನಗೌಡ ಪಾಟೀಲ ಹೇಳಿದರು. ನಗರ ಮತಕ್ಷೇತ್ರದ ವ್ಯಾಪ್ತಿಯ ವಾರ್ಡ ನಂ.2 ರ ದರ್ಗಾ ಹಾಗೂ ವಾರ್ಡ್ ನಂ.24 ರ ಶಿಖಾರಕಾನೆಯ ಗೊಲ್ಲರ ಓಣಿ, ಗಣಪತಿ ಗುಡಿ, ವೆಂಕಟರಮಣ ಗುಡಿ ಹತ್ತಿರ ಸಭೆ ಹಾಗೂ ಮತಯಾಚನೆ ಮಾಡಿ ಅವರು ಮಾತನಾಡಿದರು. ವಿರೋಧಿಗಳೆಲ್ಲ ಒಂದಾಗಿ ಸೋಲಿಸಬೇಕೆಂಬ ಕನಸಿಗೆ ನಮ್ಮವರು ಅವಕಾಶ ಕೊಡುವುದಿಲ್ಲ. ಇದರಿಂದ ನಗರದಲ್ಲಿ ನೆಮ್ಮದಿ ಜೊತೆಗೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ. ಔದ್ಯೋಗಿಕ ನಗರವಾಗುವ ನಿಟ್ಟಿನಲ್ಲಿ ತಂದೆಯ ಕೆಲಸ ಮಾಡುತ್ತಾರೆ. ಆಗ ನಮ್ಮ ಯುವಕರು ದೂರದ ಊರಿಗೆ ಹೋಗಿ ದುಡಿಯುವ ತೊಂದರೆ ತಪ್ಪಲಿದೆ ಎಂದು ಹೇಳಿದರು. ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿರಿಯ ನಾಗರಿಕರು, ಮಹಿಳೆಯರು ಭಾಗವಹಿಸಿದ್ದರು.

Read More

ಸಿಂದಗಿ: ಪಟ್ಟಣದ ವಾರ್ಡ ನಂ.೧೬ ರಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ಪರವಾಗಿ ಅವರ ಮಾತೋಶ್ರಿ ಸಿದ್ದಮ್ಮ ಗೌಡತಿ ಎಂ.ಮನಗೂಳಿ ಅವರು ಮಾತಂಗಿ ಸಮುದಾಯದ ಹೆಣ್ಣುಮಕ್ಕಳ ಸಭೆಯಲ್ಲಿ ಮಾತನಾಡಿ ಮತಯಾಚಿಸಿದರು.ಈ ಸಂದರ್ಭದಲ್ಲಿ ಅಭ್ಯರ್ಥಿ ಅಶೋಕ ಅವರ ಧರ್ಮಪತ್ನಿ ಶ್ರೀಮತಿ ನಾಗರತ್ನ ಮನಗೂಳಿ, ಕುಟುಂಬ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಅಧಿಕ ಸಂಖ್ಯೆಯ ಮಹಿಳೆಯರಿದ್ದರು.

Read More

ವಿಜಯಪುರ: ಮಾಜಿ ಸಂಸದರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಮೇಶ ಕತ್ತಿ ಅವರು, ಮೇ.೫ ರಂದು ವಿಜಯಪುರ ನಗರ ಬಣಜಿಗ ಸಮಾಜಕ್ಕೆ ಪತ್ರ ಬರೆದು, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೆಂಬಲಿಸುವAತೆ ಕೋರಿದ್ದಾರೆ.ಬಣಜಿಗ ಸಮಾಜ ಸೇರಿದಂತೆ ಎಲ್ಲ ಸಣ್ಣಪುಟ್ಟ ಸಮುದಾಯಗಳ ಪರ ಧ್ವನಿಯಾಗಿರುವ ವಿಜಯಪುರ ನಗರ ಮತಕ್ಷೇತ್ರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು, ತಮ್ಮ ಒತ್ತಡದ ಕೆಲಸದಲ್ಲೂ ರಾಜ್ಯದಲ್ಲಿ ಸ್ಪರ್ಧಿಸಿರುವ ಬಣಜಿಗ ಸಮುದಾಯ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಅವರ ಗೆಲುವಿಗಾಗಿ ಶ್ರಮಿಸುವುದು ನಮ್ಮ ಸಮುದಾಯದ ಕರ್ತವ್ಯ. ಆದ್ದರಿಂದ ವಿಜಯಪುರ ನಗರ ಮತಕ್ಷೇತ್ರದ ಬಣಜಿಗ ಸಮಾಜ ಬಾಂಧವರು ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಿರುವ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬೆಂಬಲಿಸಿ, ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಕೋರಿದ್ದಾರೆ.

Read More

ದೇವಣಗಾಂವ: ಈ ಕ್ಷೇತ್ರದ ಉಪ ಚುನಾವಣೆ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ತಾವು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅದಕ್ಕಾಗಿ ಕ್ಷೇತ್ರದ ತಳವಾರ ಸಮಾಜವು ಸಹ ಒಂದಾಗಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಬೆಂಬಲಿಸುತ್ತಾರೆಂದು ಸಮಾಜದ ಪರವಾಗಿ ತಾವು ವಾಗ್ದಾನ ನೀಡುವುದಾಗಿ ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಬರವಸೆ ನೀಡಿದರು.ಶುಕ್ರವಾರ ಸಂಜೆ ಗ್ರಾಮದ ಲಕ್ಷ್ಮೀ ದೇವಸ್ಥಾನದ ಬಳಿ ಏರ್ಪಡಿಸಿದ ಬಿಜೆಪಿ ಪ್ರಚಾರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.ಡಬಲ್ ಎಂಜಿನ್ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳಿಂದಾಗಿ ಎಲ್ಲೆಡೆ ಬಿಜೆಪಿ ಪರವಾದ ಅಲೆ ಬಲವಾಗಿ ಎದ್ದಿದ್ದು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ರಚಿಸುವುದು ಖಚಿತ. ಹಾಗೆಯೇ ರಮೇಶ ಭೂಸನೂರ ಅವರೂ ಸಹ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸಚಿವರಾಗುವುದೂ ಅಷ್ಟೇ ಖಚಿತ ಎಂದು ಡಾ.ಗೌತಮ್ ಚೌದರಿ ವಿಶ್ವಾಸ ವ್ಯಕ್ತಪಡಿಸಿದರು. ಲಿಂಬೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿಯವರು…

Read More

ಮುದ್ದೇಬಿಹಾಳ: ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ಕಲ್ಲು ತೂರಾಟ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೋನಾಳ ಎಸ್.ಎಚ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.ಘಟನೆಯಲ್ಲಿ ಗೋನಾಳ ಗ್ರಾಮದ ನಿವಾಸಿ ಶಾಂತಾ ಇಂಡಿ ಎಂಬುವವರಿಗೆ ತಲೆಗೆ ಕಲ್ಲು ಬಡಿದು ಜೋರಾಗಿ ಪೆಟ್ಟಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ೧೪ ಹೊಲಿಗೆಗಳು ಬಿದ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ದೂರು ದಾಖಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಇನ್ನುಳಿದವರ ಬಂಧನಕ್ಕಾಗಿ ತನಿಖೆ ನಡೆಸಿದ್ದಾಗಿ ಮಾಹಿತಿ ನೀಡಿದ್ದಾರೆ.ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಸಿ.ಎಸ್.ನಾಡಗೌಡರು ಮತ್ತು ಶಾಂತಗೌಡರು :ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುತ್ತಿದ್ದಂತೆಯೇ ದೌಡಾಯಿಸಿದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡರು ಮತ್ತು ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಗಾಯಾಳುವಿನ ಯೋಗಕ್ಷೇಮ ವಿಚಾರಿಸಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲು ನೆರವಾದರು.ಈ ವೇಳೆ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ…

Read More

ದೇವರಹಿಪ್ಪರಗಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ಅಲ್ಪಸಂಖ್ಯಾತರು ದೇವರಹಿಪ್ಪರಗಿ: ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಎಲ್ಲರ ಭರವಸೆಯಾಗಿದೆ. ಕ್ಷೇತ್ರದಲ್ಲಿ ಹಿಂದೆAದಿಗಿAತಲೂ ಹೆಚ್ಚಿನ ಕೆಲಸಗಳಾಗಿವೆ ಎಂದು ಬಿಜೆಪಿ ಮುಖಂಡ ಸುರೇಶಗೌಡ ಪಾಟೀಲ ಸಾಸನೂರ ಹೇಳಿದರು.ಪಟ್ಟಣದ ಹೊಸನಗರದಲ್ಲಿ ಗುರುವಾರ ಅಲ್ಪಸಂಖ್ಯಾತರ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಿಜೆಪಿ ರಾಜ್ಯದ ಪ್ರಗತಿಗೆ ದಿಟ್ಟ ಹೆಜ್ಜೆ ಇಟ್ಟಿದ್ದು, ಕಳೆದ ಐದು ವರ್ಷಗಳಿಂದ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಕಾಣಬಹುದಾಗಿದೆ. ಅಭಿವೃದ್ಧಿಯೊಂದೇ ನಮ್ಮ ಮೂಲ ಮಂತ್ರವಾಗಿದೆ. ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಸಾಕಷ್ಟು ಅನುದಾನ ತಂದು ಕ್ಷೇತ್ರವನ್ನು ಪ್ರಗತಿಪಥದತ್ತ ಕೊಂಡೊಯುವಲ್ಲಿ ಪ್ರಮುಖ ಮಾತ್ರ ವಹಿಸಿದ್ದಾರೆ. ಸಮಗ್ರ ನೀರಾವರಿ, ಉತ್ತಮ ರಸ್ತೆಗಳು, ಮನೆ-ಮನೆಗೆ ಉತ್ತಮ ನೀರು, ಸಿಸಿ ರಸ್ತೆಗಳ ನಿರ್ಮಾಣದಿಂದ ಜೀವನಮಟ್ಟ ಸುಧಾರಿಸುತ್ತಿದೆ. ಕ್ಷೇತ್ರದ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಾದರಿ ಕ್ಷೇತ್ರ ಮಾಡಲು ಶ್ರಮ ವಹಿಸಿದ್ದು ಇನ್ನೊಂದು ಬಾರಿ ಕ್ಷೇತ್ರದ ಅಭಿವೃದ್ಧಿಗಾಗಿ ತಾವೆಲ್ಲರು ಬೆಂಬಲಿಸಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.ಬಿಜೆಪಿ ಅಲ್ಪಸಂಖ್ಯಾತರ ಮುಖಂಡ ಹುಸೇನ್ ಗೌಂಡಿ,…

Read More

ಕಲಕೇರಿ: ಗ್ರಾಮದ ವಿವಿಧೆಡೆ ಶುಕ್ರವಾರ ಮನೆ ಮನೆಗೆ ತೆರಳಿ ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಅವರ ಪರ ವಿಜಯಲಕ್ಷ್ಮೀ ಸಾಹೇಬಗೌಡ ಪಾಟೀಲ ಅವರು ಮತಯಾಚನೆ ಮಾಡಿದರು.‌ ಬಿಜೆಪಿ ಅಭ್ಯರ್ಥಿ ಸೋಮನಗೌಡರು ಕಳೆದ 5 ವರ್ಷದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.ಈ ವೇಳೆ ಮಹಿಳಾ ಘಟಕದ ಪಧಾಧಿಕಾರಿಗಳು,ಪಕ್ಷದ ನೂರಾರು ಕಾರ್ಯಕರ್ತರು ಇದ್ದರು.

Read More