ದೇವಣಗಾಂವ: ಈ ಕ್ಷೇತ್ರದ ಉಪ ಚುನಾವಣೆ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ತಾವು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅದಕ್ಕಾಗಿ ಕ್ಷೇತ್ರದ ತಳವಾರ ಸಮಾಜವು ಸಹ ಒಂದಾಗಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಬೆಂಬಲಿಸುತ್ತಾರೆಂದು ಸಮಾಜದ ಪರವಾಗಿ ತಾವು ವಾಗ್ದಾನ ನೀಡುವುದಾಗಿ ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಬರವಸೆ ನೀಡಿದರು.
ಶುಕ್ರವಾರ ಸಂಜೆ ಗ್ರಾಮದ ಲಕ್ಷ್ಮೀ ದೇವಸ್ಥಾನದ ಬಳಿ ಏರ್ಪಡಿಸಿದ ಬಿಜೆಪಿ ಪ್ರಚಾರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಡಬಲ್ ಎಂಜಿನ್ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳಿಂದಾಗಿ ಎಲ್ಲೆಡೆ ಬಿಜೆಪಿ ಪರವಾದ ಅಲೆ ಬಲವಾಗಿ ಎದ್ದಿದ್ದು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ರಚಿಸುವುದು ಖಚಿತ. ಹಾಗೆಯೇ ರಮೇಶ ಭೂಸನೂರ ಅವರೂ ಸಹ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸಚಿವರಾಗುವುದೂ ಅಷ್ಟೇ ಖಚಿತ ಎಂದು ಡಾ.ಗೌತಮ್ ಚೌದರಿ ವಿಶ್ವಾಸ ವ್ಯಕ್ತಪಡಿಸಿದರು.

ಲಿಂಬೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿಯವರು ಎಲ್ಲ ಸಮುುದಾಯಗಳ ಭಾವನೆಗೆ ಬೆಲೆ ಕೊಟ್ಟು ಹಲವಾರು ಸಮಾಜಗಳ ಅಬಿವೃದ್ದಿ ನಿಗಮ ಸ್ಥಾಪಿಸಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರಲ್ಲದೆ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳ ಮತ್ತು ಪಕ್ಷದ ಚುನಾವಣೆ ಪ್ರಣಾಳಿಕೆಯ ಅಂಶಗಳ ಕುರಿತು ವಿವರಿಸಿದರು.
ಗ್ರಾಮದ ಹಿರಿಯರಾದ ಈರಯ್ಯ ಸರ್ತಿಮಠ ಮಾತನಾಡಿದರು.
ಜಿಪಂ ಮಾಜಿ ಸದಸ್ಯರಾದ ಕಾಶೀನಾಥ ಗಂಗನಳ್ಳಿ, ಶ್ರೀಮಂತ ನಾಗೂರ, ಪಕ್ಷದ ಮುಖಂಡರಾದ ರಾವುತಪ್ಪ ಭೂಸನೂರ, ಶಂಕರಲಿಂಗ ಕಡ್ಲೇವಾಡ, ಬಸವರಾಜ ತಾವರಖೇಡ, ಶಣ್ಮುಕಪ್ಪ ಸೋಮನಾರಕ, ನಿಂಗಪ್ಪ ಅಳ್ಳಗಿ, ಸಿದರಾಮಪ್ಪ ಸೊನ್ನ,
ವೇದಿಕೆ ಮೇಲಿದ್ದರು.
ಸಿದ್ಧಾರ್ಥ ಮೇಲಿನಕೇರಿ ಮತ್ತು ದತ್ತಾತ್ರೇಯ ಸೊನ್ನ ನಿರೂಪಣೆ ಮಾಡಿದರು. ಗ್ರಾಪಂ ಮಾಜಿ ಸದಸ್ಯ ಗಾಲೀಬಸಾಬ ನಾಗಾವಿ ವಂದಿಸಿದರು.
ಕುಶಪ್ಪ ಕಲಬಾ, ಶಿವಶರಣ ಕಡ್ಲೇವಾಡ, ಈರಪ್ಪ ಸೊಡ್ಡಿ, ವಿಠ್ಠಲ ಯರಗಲ್, ಮುತ್ತುರಾಜ ಕಲಶೆಟ್ಟಿ ಸೇರಿದಂತೆ ಹಲವರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಡಾ.ಗೌತಮ್ ಚೌಧರಿ ಮತ್ತು ಅಶೋಕ ಅಲ್ಸಾಪೂರ ಅವರ ನೇತ್ರತ್ವದಲ್ಲಿ ಪಕ್ಷದ ಮುಖಂಡರು, ಗ್ರಾಮದ ಪ್ರಮುಖರು ಮತ್ತು ಅಧಿಕ ಸಂಖ್ಯೆಯ ಕಾರ್ಯಕರ್ತರು ಗ್ರಾಮದ ಬಸವೇಶ್ವರ ವೃತ್ತದಿಂದ ಊರ ಬೀದಿಗಳಲ್ಲಿ ಪಾದಯಾತ್ರೆ ಕೈಗೊಂಡು ರಮೇಶ ಭೂಸನೂರ ಪರ ಮತಯಾಚನೆ ಮಾಡಿದರು.