ದೇವರಹಿಪ್ಪರಗಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ಅಲ್ಪಸಂಖ್ಯಾತರು
ದೇವರಹಿಪ್ಪರಗಿ: ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಎಲ್ಲರ ಭರವಸೆಯಾಗಿದೆ. ಕ್ಷೇತ್ರದಲ್ಲಿ ಹಿಂದೆAದಿಗಿAತಲೂ ಹೆಚ್ಚಿನ ಕೆಲಸಗಳಾಗಿವೆ ಎಂದು ಬಿಜೆಪಿ ಮುಖಂಡ ಸುರೇಶಗೌಡ ಪಾಟೀಲ ಸಾಸನೂರ ಹೇಳಿದರು.
ಪಟ್ಟಣದ ಹೊಸನಗರದಲ್ಲಿ ಗುರುವಾರ ಅಲ್ಪಸಂಖ್ಯಾತರ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ರಾಜ್ಯದ ಪ್ರಗತಿಗೆ ದಿಟ್ಟ ಹೆಜ್ಜೆ ಇಟ್ಟಿದ್ದು, ಕಳೆದ ಐದು ವರ್ಷಗಳಿಂದ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಕಾಣಬಹುದಾಗಿದೆ. ಅಭಿವೃದ್ಧಿಯೊಂದೇ ನಮ್ಮ ಮೂಲ ಮಂತ್ರವಾಗಿದೆ. ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಸಾಕಷ್ಟು ಅನುದಾನ ತಂದು ಕ್ಷೇತ್ರವನ್ನು ಪ್ರಗತಿಪಥದತ್ತ ಕೊಂಡೊಯುವಲ್ಲಿ ಪ್ರಮುಖ ಮಾತ್ರ ವಹಿಸಿದ್ದಾರೆ. ಸಮಗ್ರ ನೀರಾವರಿ, ಉತ್ತಮ ರಸ್ತೆಗಳು, ಮನೆ-ಮನೆಗೆ ಉತ್ತಮ ನೀರು, ಸಿಸಿ ರಸ್ತೆಗಳ ನಿರ್ಮಾಣದಿಂದ ಜೀವನಮಟ್ಟ ಸುಧಾರಿಸುತ್ತಿದೆ. ಕ್ಷೇತ್ರದ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಾದರಿ ಕ್ಷೇತ್ರ ಮಾಡಲು ಶ್ರಮ ವಹಿಸಿದ್ದು ಇನ್ನೊಂದು ಬಾರಿ ಕ್ಷೇತ್ರದ ಅಭಿವೃದ್ಧಿಗಾಗಿ ತಾವೆಲ್ಲರು ಬೆಂಬಲಿಸಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ಅಲ್ಪಸಂಖ್ಯಾತರ ಮುಖಂಡ ಹುಸೇನ್ ಗೌಂಡಿ, ಶಂಕರಗೌಡ ಕೋಟಿಖಾನಿ, ಮಹಮ್ಮದ ರಫೀಕ ಮೋಮಿನ ಮಾತನಾಡಿ, ಸೌಮ್ಯ ಸ್ವಭಾವದ ಶಾಸಕರು ಅಭಿವೃದ್ಧಿಯೊಂದೇ ಗುರಿಯಾಗಿಟ್ಟುಕೊಂಡು ಸಾಗುತ್ತಿದ್ದಾರೆ. ಕ್ಷೇತ್ರದ ಜನತೆ ಯಾವುದೇ ಜಾತಿ ಬೇಧ ಮಾಡದೆ ಪ್ರತಿಯೊಬ್ಬರೂ ಪ್ರಗತಿಗೋಸ್ಕರ ಶಾಸಕರನ್ನು ಬೆಂಬಲಿಸೋಣ ಎಂದರು.
ಇದೇ ಸಂದರ್ಭದಲ್ಲಿ ಹಲವಾರು ಅಲ್ಪಸಂಖ್ಯಾತ ಪ್ರಮುಖರು ವಿವಿಧ ಪಕ್ಷ ತೊರೆದು ಬಿಜೆಪಿ ಸೇರಿದರು.
ಖಾಜೇಸಾಬ್ ನದಾಫ, ಜಾವೀದ್ ವಾಲೀಕಾರ, ಮಹಮ್ಮದ್À ರಫೀಕ ಡೋಣೂರ, ದಾವಲಸಾಬ್ ನಾಗರಾಳ, ನಸರುದ್ದಿನ ನದಾಫ, ಮಶಾಕ ನದಾಫ, ಅಲ್ಲಾಬಕ್ಷ ಮುಳವಾಡ, ಮೈಬೂಬಸಾಬ ನದಾಫ, ಅಬ್ದುಲರಜಾಕ ವಾಲೀಕಾರ, ಮಕ್ತುಮಸಾಬ ನಸರುದ್ದೀನ, ಅಜೀಜ್ ಯಲಗಾರ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.