ವಿಜಯಪುರ: ಮಾಜಿ ಸಂಸದರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಮೇಶ ಕತ್ತಿ ಅವರು, ಮೇ.೫ ರಂದು ವಿಜಯಪುರ ನಗರ ಬಣಜಿಗ ಸಮಾಜಕ್ಕೆ ಪತ್ರ ಬರೆದು, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೆಂಬಲಿಸುವAತೆ ಕೋರಿದ್ದಾರೆ.
ಬಣಜಿಗ ಸಮಾಜ ಸೇರಿದಂತೆ ಎಲ್ಲ ಸಣ್ಣಪುಟ್ಟ ಸಮುದಾಯಗಳ ಪರ ಧ್ವನಿಯಾಗಿರುವ ವಿಜಯಪುರ ನಗರ ಮತಕ್ಷೇತ್ರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು, ತಮ್ಮ ಒತ್ತಡದ ಕೆಲಸದಲ್ಲೂ ರಾಜ್ಯದಲ್ಲಿ ಸ್ಪರ್ಧಿಸಿರುವ ಬಣಜಿಗ ಸಮುದಾಯ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಅವರ ಗೆಲುವಿಗಾಗಿ ಶ್ರಮಿಸುವುದು ನಮ್ಮ ಸಮುದಾಯದ ಕರ್ತವ್ಯ. ಆದ್ದರಿಂದ ವಿಜಯಪುರ ನಗರ ಮತಕ್ಷೇತ್ರದ ಬಣಜಿಗ ಸಮಾಜ ಬಾಂಧವರು ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಿರುವ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬೆಂಬಲಿಸಿ, ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment