ಮುದ್ದೇಬಿಹಾಳ: ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಸರಳ ಸಜ್ಜನಿಕೆಯ ರಾಜಕಾರಣವನ್ನು ಮೆಚ್ಚಿ ಅವರಿಗೆ ಎಲ್ಲ ಹಿರಿಯ ವಕೀಲರು ಸೇರಿದಂತೆ ಅಂದಾಜು 15೦ ಕ್ಕೂ ಹೆಚ್ಚು ವಕೀಲರು ಬೆಂಬಲಿಸಿದ್ದಾರೆ ಎಂದು ಹಿರಿಯ ವಕೀಲರಾದ ಎಂ.ಎಚ್.ಹಾಲಣ್ಣನವರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ತಿಳಿಸಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ನಾಡಗೌಡರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ ಮನೆತನದವರಾದ ನಾಡಗೌಡರು ಅಧಿಕಾರಕ್ಕೆ ಬಂದರೆ ನೀರಾವರಿ, ಶಿಕ್ಷಣ, ಮಹಿಳೆಯರ ಆರ್ಥಿಕ ಸುಧಾರಣೆ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ಮತಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತಾರೆ. ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುವದಿಲ್ಲ. ಈ ಹಿಂದೆಯೂ ಹೊಸ ನ್ಯಾಯಾಲಯ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬಿಜೆಪಿ ಸರ್ಕಾರ ಕಡು ಬಡವರನ್ನೂ ನೋಡದೇ ಸಾಸಿವೆ, ಜೀರಿಗೆ ಗೂ ಜಿಎಸ್‌ಟಿ ಹಾಕಿ ಹೈರಾಣು ಮಾಡಿದೆ. ಮುಂದಿನ ದಿನಗಳಲ್ಲಿ ಬಡವರು ಸೇರಿದಂತೆ ಮಧ್ಯಮ ವರ್ಗದ ಜನತೆ ಜೀವನ ನಡೆಸಲು ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವುದು ಅನಿವಾರ್ಯವಾಗಿದೆ ಎಂದರು.
ಈ ವೇಳೆ ಹಿರಿಯ ವಕೀಲರಾದ ಆರ್.ಬಿ.ಪಾಟೀಲ, ಎಂ.ಎ.ಮುದ್ದೇಬಿಹಾಳ, ಎನ್.ಆರ್.ಮೊಕಾಶಿ, ಕೆ.ಎನ್.ಬಳೂತಿ, ವಿ.ಜಿ.ಮದರಕಲ್ಲ, ಸಂಗಮೇಶ ಹೂಗಾರ, ಬಿ.ಆರ್.ನಾಡಗೌಡರ, ಎಲ್.ಎಸ್.ಮೇಟಿ, ಎಸ್.ಬಿ.ಬಾಚ್ಯಾಳ, ಎಚ್.ವಾಯ್.ಪಾಟೀಲ, ಪಿ.ಎನ್.ಬಿರಾದಾರ ಸೇರಿದಂತೆ ನ್ಯಾಯವಾದಿಗಳಾದ ಬಿ.ಎ.ನಾಡಗೌಡರ, ಎಸ್.ಎಂ ಪಾಟೀಲ, ಬಸಣ್ಣ ಮುಂದಿನಮನಿ, ಎನ್.ಬಿ.ಮುದ್ನಾಳ, ಆನಂದ ಮದರಕಲ್ಲ. ಆನಂದ ಕೊಂಗAಡಿ, ನಾಗಭೂಷಣ ನಾವದಗಿ, ಕಾಖಂಡಕಿ, ಎನ್.ಆರ್.ಗುರಿಕಾರ, ಎಚ್.ಟಿ.ಪೂಜಾರಿ, ಜೂಲಿ, ಪಿ.ಎಲ್.ಬೊಮ್ಮಣಗಿ, ಎಂ.ಎ.ಲಿAಗಸೂರ, ಬಿಜ್ಜೂರ, ಎನ್.ಆಯ್.ಕೇಸಾಪೂರ, ಯುಸೂಫ್ ಮುಜಾವರ, ಎಂ.ಸಿ.ಮ್ಯಾಗೇರಿ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment