Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ೨೦೨೬ನೇ ಸಾಲಿನ ಶೈಕ್ಷಣಿಕ ಸಾಲಿಗೆ ಮೆರಿಟ್ ಕಮ್ ರಿಸರ್ವೇಷನ್ ಆಧಾರಿತ ಪ್ರವೇಶಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಲಭ್ಯವಿರುವ ಎರಡು ವರ್ಷದ ವೃತ್ತಿಗಳಾದ ಎಲೆಕ್ಟ್ರೀಶಿಯನ್, ಎಲೆಕ್ಟ್ರಾನಿಕ್, ಮೆಕ್ಯಾನಿಕ್, ಫಿಟ್ಟರ್, ಅಡ್ವಾನ್ಸ್ಡ್ ಸಿಎನ್ ಸಿ ಮೆಕ್ಯಾನಿಂಗ್ ಟೆಕ್ನಿಶಿಯನ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಬೇಸಿಕ್ ಡಿಸೈನರ್ ಮತ್ತು ವರ್ಚುವಲ್ ವೆರಿಫೈಯರ್, ಒಂದು ವರ್ಷದ ವೃತ್ತಿಗಳಾದ ವೆಲ್ಡರ್, ಇಂಡಸ್ಟ್ರಿಯಲ್ ರೋಬೋಟಿಕ್ಸ್, ಮತ್ತ ಡಿಜಿಟಲ್ ಮ್ಯಾನ್ಯುಫ್ಯಾಕ್ಚರಿಂಗ್ ಟೆಕ್ನಿಶಿಯನ್, ಮ್ಯಾನ್ಯುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಮತ್ತು ಆಟೋಮೇಶನ್, ಆರ್ಟಿಸನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ಸ್ ಗಳಲ್ಲಿ ೧೦ನೇ ತರಗತಿ ಉತ್ತೀರ್ಣರಾದ ಗ್ರಾಮೀಣ ಪ್ರದೇಶದ ಮಕ್ಕಳು ಪ್ರವೇಶ ಪಡೆಯಬಹುದಾಗಿದೆ.ಆಸಕ್ತ ಅಭ್ಯರ್ಥಿಗಳು ತಿತಿತಿ.ಛಿiಣe.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಖಾಸಗಿ ನೆಟ್ ಸೆಂಟರ್ ಅಥವಾ ಹತ್ತಿರದ ಸರ್ಕಾರಿ ಸಂಸ್ಥೆಗಳಲ್ಲಿ ತೆರಳಿ ಮೇ ೮ ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಬಬಲೇಶ್ವರ ಮೊ ಸಂಖ್ಯೆ: ೯೮೪೪೭೯೩೯೭೦, ೯೮೮೬೫೯೧೭೦೦,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಸ್ಸೆಸ್ಸೆಲ್ಸಿ ಇಲ್ಲವೇ ತತ್ಸಮಾನ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಂದ ೨೦೨೬-೨೭ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಮೆರಿಟ್ ಹಾಗೂ ರೋಸ್ಟರ್ ಆಧಾರಿತವಾಗಿ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಮೂಲಕ ಅರ್ಜಿ ಆಹ್ವಾನಿಸಿದೆ.ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಮೇ ೨ ರೊಳಗಾಗಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಪ್ರಾಚಾರ್ಯರಿಗೆ ನೇರವಾಗಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಮೇ ೪ ರಂದು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.ಆಫ್ ಲೈನ್ ಕೌನ್ಸಲಿಂಗ್ ಮೂಲಕ ಸೀಟು ಹಂಚಿಕೆ ಮಾಡಿ, ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳು ಮತ್ತು ಪ್ರವೇಶ ಶುಲ್ಕದೊಂದಿಗೆ ಪ್ರವೇಶವನ್ನು ಮೇ ೫ರೊಳಗಾಗಿ ಅಂತಿಮವಾಗಿ ಪಡೆದುಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ bidutt dtetech.karnataka.gov.inಹಾಗೂ ಜಣeಞ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್ ಸೈಟ್ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರದಲ್ಲಿ ನಡೆದ ಮಾದಕ ವಸ್ತು ನಿಯಂತ್ರಣ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳಿಗೆ ಖಡಕ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸಲು ಇಲಾಖಾಧಿಕಾರಿಗಳು ಸಮನ್ವಯತೆ ಹಾಗೂ ಸಹಕಾರದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಸೂಚನೆ ನೀಡಿದರು.ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ವಸ್ತು ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.ಜಿಲ್ಲೆಯ ಎಲ್ಲಾ ವಸತಿ ನಿಲಯಗಳ ಮೇಲೆ ನಿಗಾ ವಹಿಸಬೇಕು. ಶೈಕ್ಷಣಿಕ ಅವಧಿ ಮುಗಿದ ನಂತರ ಮಾದಕ ವಸ್ತು ನಿಯಂತ್ರಣ ಕುರಿತ ಅಭಿಯಾನ ಜಾಗೃತಿ ಹಮ್ಮಿಕೊಳ್ಳಬೇಕು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಖಾಸಗಿ ಹಾಗೂ ಸರ್ಕಾರಿ ಶಾಲೆ ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಮಾದಕ ವಸ್ತು ನಿಯಂತ್ರಣ ಕೋಶ ರಚಿಸಿಕೊಳ್ಳಬೇಕು ಶಾಲಾ ಮಕ್ಕಳಿಂದ ಒಂದು ಸಮಿತಿ ರಚಿಸಿ ಮಕ್ಕಳಿಂದ ಕಾರ್ಯಕ್ರಮ…

Read More

ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ: ಕರ್ನಾಟಕ ವಿಶ್ವವಿದ್ಯಾಲಯದ ೭೫ನೇ ಘಟಿಕೋತ್ಸವ ಸಮಾರಂಭವು ಗದಗ ನಗರದ ಗಾಂಧಿ ಭವನದಲ್ಲಿ ಭವ್ಯವಾಗಿ ನಡೆಯಿತು.ಈ ಸಂದರ್ಭದಲ್ಲಿ ನಗರದ ಕುಮಾರಿ ಅಕ್ಷತಾ ಶಾಂತಕುಮಾರ ಭಜಂತ್ರಿ ಅವರು ಎಂ.ಎಡ್ (ಶಿಕ್ಷಣ) ಸ್ನಾತಕೋತ್ತರ ಪದವಿಯಲ್ಲಿ ಉನ್ನತ ಸ್ಥಾನ ಗಳಿಸಿದ ಸಾಧನೆಗೆ “ಚಿನ್ನದ ಪದಕ” ಪಡೆದು ವಿಶೇಷ ಗೌರವಕ್ಕೆ ಪಾತ್ರರಾದರು.ಸದ್ಯ ಕರ್ನಾಟಕ ವಿಶ್ವವಿದ್ಯಾಲಯದಲ್ಲಿಯೇ ಪಿ.ಹೆಚ್.ಡಿ ಅಧ್ಯಯನ ಮಾಡುತ್ತಿರುವ ಅಕ್ಷತಾ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನಸೆಳೆದಿದ್ದಾರೆ. ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ಪದಕವನ್ನು ಪ್ರದಾನಿಸಿದರು.ಈ ವೇಳೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾದ ಡಾ. ಎಂ.ಸಿ. ಸುಧಾಕರ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಕ್ಷತಾ ಭಜಂತ್ರಿಯ ಈ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರಿಂದ ಹರ್ಷ ವ್ಯಕ್ತವಾಗಿದೆ.ಅಕ್ಷತಾ ಅವರ ಈ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ…

Read More

ವಿಜಯಪುರದಲ್ಲಿ ನಡೆದ ಮಹಿಳಾ ಕಲ್ಯಾಣ ವಿಭಾಗದ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ.ಕೆ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮಹಿಳಾ ಕಲ್ಯಾಣ ವಿಭಾಗದ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾವಲು ಸಮಿತಿ ಪ್ರತಿಮಾಹೆ ಸಭೆ ನಡೆಸಿ ಎಂದು ಈಗಾಗಲೇ ಈ ಹಿಂದಿನ ಸಭೆಯಲ್ಲಿ ನಿರಂತರವಾಗಿ ಸೂಚಿಸಲಾಗಿದೆ. ಗ್ರಾಮ ಪಂಚಾಯತಿ ಕಾವಲು ಸಮಿತಿ ಚರ್ಚಿಸಿರುವ ವಿಷಯ ಪ್ರಚಾರ ಕೈಗೊಳ್ಳಬೇಕು. ಜನರಿಗೆ ಗೊತ್ತಾಗಬೇಕು. ಇದರಿಂದ ಇದರ ಕಾಯ್ದೆಯ ಅರಿವು ಜನರಿಗೆ ಮೂಡಲಿದೆ ಎಂದರು.ಜಿಂಗಲ್ಸ್ ಮೂಲಕ ಪ್ರಚಾರ ಮಾಡಬೇಕು. ಗ್ರಾಮೀಣ ಹಾಗೂ ಸ್ಥಳೀಯ ಸಂಸ್ಥೆಗಳ ಸ್ವಚ್ಛವಾಹಿನಿ ಮೂಲಕ ತಿಳಿಹೇಳಬೇಕು. ಬಾಲ್ಯ ವಿವಾಹ ಇದೊಂದು ಸಾಮಾಜಿಕ ಪಿಡುಗಾಗಿದ್ದು, ಮಕ್ಕಳ ಬಾಲ್ಯ ಸುಂದರಗೊಳ್ಳಲು ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ಬಾಲ್ಯ ವಿವಾಹ ತಡೆಯಬೇಕು ಎಂದರು.ಮಾರ್ಚ್-೨೦೨೬ರ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಮಾರ್ಗವಾಗಿ ಹರಿಯುತ್ತಿರುವ ಘಟಪ್ರಭಾ ಎಡದಂಡೆ ಕಾಲುವೆಗೆ ಪ್ರತಿದಿನ ೨೪೦೦ ಕ್ಯುಸೆಕ್‌ನಂತೆ ನೀರು ಹರಿಸುತ್ತಿರುವದರಿಂದ ಈ ಭಾಗದ ಅಂತರ್ಜಲಮಟ್ಟ ಹೆಚ್ಚಾಗುವ ಮೂಲಕ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ನಿವಾರಣೆಯಾದಂತಾಗಿದೆ.ಕಳೆದ ಒಂದು ವಾರದಿಂದ ಜಿಎಲ್ಬಿಸಿ ಕಾಲುವೆಯ ನೀರು ಈ ಭಾಗದ ಎರಡು ಬ್ರಹತ್ ಕೆರೆ ಹಾಗೂ ಬಾಂದಾರಗಳಿಗೆ ಹರಿಸಿ ತುಂಬಿಸಲಾಗಿದ್ದರಿಂದ ಬಾವಿ ಬರ‍್ವೆಲ್‌ಗಳ ಅಂತರ್ಜಲಮಟ್ಟ ಹೆಚ್ಚಿದ್ದು ಈ ಮೊದಲು ಕೇವಲ ಅರ್ಧಘಂಟೆ ಮಾತ್ರ ನೀರು ಪೋರೈಸುತಿದ್ದ ಬರ‍್ವೆಲ್‌ಗಳೂ ಈಗ ಸತತವಾಗಿ ನೀರು ಕೊಡುತ್ತಿವೆಯಲ್ಲದೇ ರೈತರ ಹೊಲಗಳಲ್ಲಿರುವ ಭಾವಿಗಳ ಜಲಮಟ್ಟವೂ ಗಣನೀಯವಾಗಿ ಹೆಚ್ಚಿದ್ದರಿಂದ ರೈತರು ಹರ್ಷಗೊಂಡು ತಮ್ಮ ಹೊಲ ಗದ್ದೆಗಳನ್ನು ಹದಗೊಳಿಸುವ ಮೂಲಕ ಬಿತ್ತನೆ ಕಾರ್ಯಕ್ಕೆ ಅಣಿಯಾಗಿದ್ದಾರೆ.ಹನ್ನೊಂದು ದಿನಗಳ ಕಾಲ ಹರಿಸಲಾಗುತ್ತಿರುವ ಈ ಕಾಲುವೆ ನೀರು ಇನ್ನು ಕೇವಲ ನಾಲ್ಕು ದಿನಮಾತ್ರ ಹರಿಯಲಿದ್ದು ತೇರದಾಳ ಮತಕ್ಷೇತ್ರ ವ್ಯಾಪ್ತಿಯ ರೈತರು ಸಾರ್ವಜನಿಕರು ತಮ್ಮ ಭಾಗದ ಕೆರೆ ಬಾಂದಾರಗಳನ್ನು ತುಂಬಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಸಿದ್ದು ಸವದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗದಗ ತೋಂಟದಾರ್ಯ ವಿದ್ಯಾಪೀಠದ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಎಸ್. ಪಟ್ಟಣಶೆಟ್ಟಿ ಅವರು ೨೦೨೬ ನೇ ಸಾಲಿನ “ಕಾಯಕಯೋಗಿ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ.ದೊಡ್ಡಬಳ್ಳಾಪುರ ದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡಮಾಡುವ “ಕಾಯಕಯೋಗಿ ಪ್ರಶಸ್ತಿ” ಯನ್ನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಾನಂದ ಎಸ್. ಪಟ್ಟಣಶೆಟ್ಟಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಭಿನಂದನೆ”ಕಾಯಕಯೋಗಿ ಪ್ರಶಸ್ತಿ”ಗೆ ಭಾಜನರಾದ ಶಿವಾನಂದ ಎಸ್. ಪಟ್ಟಣಶೆಟ್ಟಿ ಅವರಿಗೆ ಸಿಂದಗಿಯ ಜಗದೀಶ ಕಲಬುರ್ಗಿ ಹಾಗೂ ಕಲಬುರ್ಗಿ ಪರಿವಾರ ಅಭಿನಂದಿಸಿ ಶುಭ ಕೋರಿದ್ದಾರೆ.

Read More

ರಸ್ತೆಗಳಲ್ಲಿ ಮಧ್ಯಾಹ್ನ ಜನಸಂಚಾರ ವಿರಳ | ಬತ್ತಿದ ಕೊಳವೆ ಬಾವಿಗಳು | ಹೆಚ್ಚಾದ ತಂಪು ಪಾನೀಯಗಳ ಬೇಡಿಕೆ | ಗೃಹಜ್ಯೋತಿ ಪರಿಮಿತಿ ದಾಟುತ್ತಿರುವ ಕರೆಂಟ್‌ ಬಿಲ್‌ ವರದಿ: ಸಿದ್ರಾಮ್ ಎಮ್ ಇಟ್ಟಿಬಾಗಲಕೋಟೆ: ಏಪ್ರೀಲ್ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಕೋಟೆನಾಡಿನಲ್ಲಿ ತಾಪಮಾನ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಮನೆಯೊಳಗೆ ಎಸಿ, ಫ್ಯಾನು ಏನೇ ಇದ್ದರೂ ಸೆಕೆ ತಾಳಲಾಗುತ್ತಿಲ್ಲ. ಮಧ್ಯಾಹ್ನವಂತೂ ಹೊರ ಬರಲು ಸಾಧ್ಯವಾಗುವುದೇ ಇಲ್ಲ. ಮೇಲ್ಛಾವಣಿಗೆ ನೀರು ಹಾಯಿಸಿ ಮನೆಯನ್ನು ತಣ್ಣಗೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಜಮೀನಿನಲ್ಲಿರುವ ಬೆಳೆಗಳೂ ಒಣಗುತ್ತಿದ್ದು, ನೀರಿಲ್ಲದೇ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕೋಟೆನಾಡಿನಲ್ಲಿ ರಣಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದಾರೆ. ಜಿಲ್ಲೆಯ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದರೂ ಜಮಖಂಡಿˌ ಮುಧೋಳˌ ಬೀಳಗಿˌ ರಬಕವಿ-ಬನಹಟ್ಟಿ ಸೇರಿದಂತೆ ಅನೇಕ ತಾಲೂಕಿನಲ್ಲಿ ಗಟ್ಟಿ ಮಳೆಯಾಗದೆ ತಾಪಮಾನ ಇನ್ನಷ್ಟು ಅಧಿಕವಾಗಿದೆ.ಸುಡು ಬೇಸಿಗೆಯಲ್ಲಿ ಬೆಳೆ ರಕ್ಷಣೆಗೆ ಕೊಳವೆಬಾವಿ ಪಂಪ್‌ಸೆಟ್‌ಗಳಲ್ಲಿ ಬರುವ ಸಣ್ಣ ಪ್ರಮಾಣದ ನೀರಿನಿಂದ ಬೆಳೆ ಸಂರಕ್ಷಿಸಿಕೊಳ್ಳಲು ರೈತರು ಪರದಾಟ ನಡೆಸಿದ್ದಾರೆ. ಬಿಸಿಲು ತಾಪ ಹೆಚ್ಚಾಗಿದ್ದು, ಬೆಳಗ್ಗೆ 11…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨ ರ ಸಹಯೋಗದಲ್ಲಿ ಏ.೨೫ ರಂದು ದತ್ತು ಗ್ರಾಮ ಅರಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಮನೆ ಮನೆಗೆ, ಮನ ಮನಕೆ ಬಾಬಾಸಾಹೇಬರು ಜಾಗೃತಿ ಅಭಿಯಾನ ಹಾಗೂ ಮತದಾರರ ಜಾಗೃತಿ ಮತ್ತು ಸ್ವಚ್ಛತಾ ಅಭಿಯಾನ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಜಯಪುರ ಚುನಾವಣಾ ಸಾಕ್ಷರತಾ ಕ್ಲಬ್‌ನ ಜಿಲ್ಲಾ ನೋಡಲ್ ಅಧಿಕಾರಿ ಡಾ. ಶಿವಾನಂದ್ ಜಮಾದಾರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ ಎಂದರು. ಅದರಂತೆ ಮತದಾರರ ಜವಾಬ್ದಾರಿಗಳು, ಮತದಾನದ ಪಾರದರ್ಶಕತೆ, ನಾಯಕರ ಹೊಣೆಗಾರಿಕೆ ಚುನಾವಣಾ ಸಾಕ್ಷರತಾ ಕ್ಲಬ್‌ನ ಪರಿಣಾಮಕಾರಿ ಪಾತ್ರದ ಅರಿವನ್ನು ಸಮಗ್ರವಾಗಿ ಮಾಹಿತಿ ನೀಡಿದರು.ಈ ವೇಳೆ ಬಾಬಾಸಾಹೇಬರ ವಿಚಾರಗಳನ್ನು ಸಾಮಾಜಿಕ ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಮಹತ್ವವನ್ನು ಹರಡಿಸಲು ಎಲ್ಲ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಮೇ 1 ರಿಂದ ಮೇ 3 ರವರೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.ಮೇ 1 ಶುಕ್ರವಾರರಂದು ಬೆ.10ಗಂ. ಬರಟಗಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ರೂ.734 ಲಕ್ಷ ವೆಚ್ಚದಲ್ಲಿ ಅರಕೇರಿ, ಬರಟಗಿ ಮತ್ತು ಹಂಚಿನಾಳ ಪಿ.ಎಚ್ ಹಾಗೂ ಬೆ.11ಗಂ. ಲೋಹಗಾಂವ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ರೂ.978 ಲಕ್ಷ ವೆಚ್ಚದಲ್ಲಿ ಲೋಹಗಾಂವ, ಟಕ್ಕಳಕಿ, ಹುಬನೂರ, ಜಾಲಗೇರಿ, ಇಟ್ಟಂಗಿಹಾಳ, ಸಿದ್ಧಾಪೂರ ಗ್ರಾಮಗಳಲ್ಲಿ ಸರಣಿ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಈ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ನಂತರ ಸಾ.5ಗಂ ತಿಗಣಿಬಿದರಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ರೂ.984 ಲಕ್ಷ ವೆಚ್ಚದಲ್ಲಿ ಕಾಖಂಡಕಿ, ಬಬಲೇಶ್ವರ ಮಮದಾಪೂರ…

Read More