ಉದಯರಶ್ಮಿ ದಿನಪತ್ರಿಕೆ
ಇಂಡಿ: ರೈತರ ಕೃಷಿ ಪಂಪಶೆಟ್ಟುಗಳಿಗೆ ಸಮರ್ಪಕ ಹಾಗೂ ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಕೆ ಆಗ್ರಹಿಸಿ ಕ ರ ವೇ ಕಾರ್ಯಕರ್ತರು ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರವೇ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ, ಧನಶೆಟ್ಟಿ ತಾಂಡಾ ಫೀಡರ್ ಮೇಲೆ ಬರುವ ರೈತರಿಗೆ ಮೂರು ಫೇಸ್ ವಿದ್ಯುತ್ ಸರಿಯಾಗಿ ಪೂರೈಕೆ ಆಗುತ್ತಿಲ್ಲ, ಅದರಂತೆ ತಾಲೂಕಿನ ಎಲ್ಲ ಕಡೆಯೂ ಇದೇ ಪರಿಸ್ಥಿತಿ ಇದೆ. ಕೆಈ ಬಿಯವರಿಗೆ ಕೇಳಿದರೆ ಜಾಸ್ತಿ ಲೋಡ ಇರುವದರಿಂದ ಆಗುತ್ತಿದೆ ಎಂದು ಹೇಳುತ್ತಾರೆ. ಪದೇ ಪದೇ ಉಂಟಾಗುವ ವಿದ್ಯುತ್ ಕಡಿತವನ್ನು ತಕ್ಷಣ ತಡೆಗಟ್ಟಬೇಕು. ಹಾಳಾದ ಟ್ರಾನ್ಸಫರ‍್ಮರ ತ್ವರಿತವಾಗಿ ಬದಲಾಯಿಸಬೇಕು. ವಿದ್ಯುತ್ ಕಂಬ ಮತ್ತು ದುರಸ್ತಿ ಕಾರ್ಯ ತುರ್ತಾಗಿ ಕೈಕೊಳ್ಳಬೇಕು ರೈತರಿಗೆ ಹಗಲು ವೇಳೆ ಸಾದ್ಯವಾದಷ್ಟು ಹೆಚ್ಚಿನ ವಿದ್ಯುತ್ ಪೂರೈಕೆ ಆಗಬೇಕು ಎಂದರು.
ಸುನೀಲಗೌಡ ಬಿರಾದಾರ, ಅಪ್ಪು ಮಸಳಿ, ಮಹೇಶ ಹೂಗಾರ, ಪ್ರಶಾಂತ ಲಾಳಸಂಗಿ, ಸುನೀಲ ಹಿರೇಮಠ, ಮಿಥುನ ರಾಠೋಡ, ಹಿರಾಸಿಂಗ ಜಾಧವ, ಅಶೋಕ ರಾಠೋಡ, ಖುಬಸಿಂಗ ರಾಠೋಡ, ರಮೇಶ ವಾಲಿಕಾರ, ರೇವಣ್ಣ ತಮಶೆಟ್ಟಿ, ಶ್ರೀಶೈಲ ಮೇತ್ರಿ ಸಗಾರ ಬಿರಾದಾರ ಮತ್ತಿತರಿದ್ದರು.
ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

