ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಬಲೇಶ್ವದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ೨೦೨೬ನೇ ಸಾಲಿನ ಶೈಕ್ಷಣಿಕ ಸಾಲಿಗೆ ಮೆರಿಟ್ ಕಮ್ ರಿಸರ್ವೇಷನ್ ಆಧಾರಿತ ಪ್ರವೇಶಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಲಭ್ಯವಿರುವ ಎರಡು ವರ್ಷದ ವೃತ್ತಿಗಳಾದ ಎಲೆಕ್ಟ್ರೀಶಿಯನ್, ಎಲೆಕ್ಟ್ರಾನಿಕ್, ಮೆಕ್ಯಾನಿಕ್, ಫಿಟ್ಟರ್, ಅಡ್ವಾನ್ಸ್ಡ್ ಸಿಎನ್ ಸಿ ಮೆಕ್ಯಾನಿಂಗ್ ಟೆಕ್ನಿಶಿಯನ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಬೇಸಿಕ್ ಡಿಸೈನರ್ ಮತ್ತು ವರ್ಚುವಲ್ ವೆರಿಫೈಯರ್, ಒಂದು ವರ್ಷದ ವೃತ್ತಿಗಳಾದ ವೆಲ್ಡರ್, ಇಂಡಸ್ಟ್ರಿಯಲ್ ರೋಬೋಟಿಕ್ಸ್, ಮತ್ತ ಡಿಜಿಟಲ್ ಮ್ಯಾನ್ಯುಫ್ಯಾಕ್ಚರಿಂಗ್ ಟೆಕ್ನಿಶಿಯನ್, ಮ್ಯಾನ್ಯುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಮತ್ತು ಆಟೋಮೇಶನ್, ಆರ್ಟಿಸನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ಸ್ ಗಳಲ್ಲಿ ೧೦ನೇ ತರಗತಿ ಉತ್ತೀರ್ಣರಾದ ಗ್ರಾಮೀಣ ಪ್ರದೇಶದ ಮಕ್ಕಳು ಪ್ರವೇಶ ಪಡೆಯಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ತಿತಿತಿ.ಛಿiಣe.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಖಾಸಗಿ ನೆಟ್ ಸೆಂಟರ್ ಅಥವಾ ಹತ್ತಿರದ ಸರ್ಕಾರಿ ಸಂಸ್ಥೆಗಳಲ್ಲಿ ತೆರಳಿ ಮೇ ೮ ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಬಬಲೇಶ್ವರ ಮೊ ಸಂಖ್ಯೆ: ೯೮೪೪೭೯೩೯೭೦, ೯೮೮೬೫೯೧೭೦೦, ೮೬೧೮೩೬೫೪೧೬, ೭೩೫೩೬೯೫೫೫೫, ೯೯೦೦೬೨೭೧೯೭, ೮೯೦೪೪೧೬೧೨೬, ೭೦೨೬೦೮೪೬೦೨ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
