Author: editor.udayarashmi@gmail.com

ಇಂಡಿ‌: ಪಿತ್ರ ಪಕ್ಷ ಮಾಸಾಚರಣೆ ಕಾರ್ಯಕ್ರಮ ಪಟ್ಟಣದ ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಮುಕುಂದ ಆದ್ಯರವರು ಶನಿವಾರ ತಿಳಿಸಿದ್ದಾರೆ.ಪಟ್ಟಣದ ಸಿಂದಗಿ ರಸ್ತೆಯ ಶಾಂತಿ ನಗರದ ಶ್ರೀ ಸತ್ಯ ನಾರಾಯಣ ದೇವಸ್ಥಾನದಲ್ಲಿ ‌ಸೆ- 30 ರಿಂದ ಅ-13 ರವರೆಗೆ ಪಿತ್ರ ಪಕ್ಷ ಕ್ರಿಯಾ ವಿದಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ತಾಲೂಕಿ ವಿಪ್ರ ಬಂಧುಗಳು, ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರಗಳಿಗೆ ಸಂಪರ್ಕಿಸಲು ತಿಳಿಸಿದ್ದಾರೆ.9900929924, 9482103555, 9380420733, 8073500916

Read More

ಸಿಂದಗಿ: ಸುಮಾರು ೯ ವರ್ಷಗಳಿಂದ ಸಮಾಜದ ಹಿತದೃಷ್ಠಿಗಾಗಿ ಮೂಲಭೂತ ಸೌಕರ್ಯಕ್ಕಾಗಿ ಸರಕಾರಕ್ಕೆ ಶಫರ್ಡ ಇಂಡಿಯಾ ಇಂಟರ್ನ್ಯಾಷನಲ್ ಸಂಘಟನೆಯ ಮೂಲಕ ಒತ್ತಡ ಹಾಕುತ್ತಿರುವ ಸಮಾಜದ ಏಳಿಗೆಗಾಗಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಮಾಜಿ ಸಚಿವ ಎಚ್.ಎಂ ರೇವಣ್ಣ ಹಾಗೂ ಎಚ್.ವಿಶ್ವನಾಥ ಅವರ ಮುಂದಾಳತ್ವದಲ್ಲಿ ಅ.೩ರಂದು ಬೆಳಗಾವಿಯಲ್ಲಿ ಬ್ರಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ರಮೇಶ ಭಂಟನೂರ ತಿಳಿಸಿದ್ದಾರೆ.ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಕಾರಣ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೋಳಿಸಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಮಲ್ಲು ಸಾವಳಸಂಗ, ಶಿವಾನಂದ ಗಣಿಹಾರ, ಪಿಂಟು ಪೂಜಾರಿ, ಮಹಾಂತೇಶ ಸಾಸಾಬಾಳ, ಸಿದ್ದು ಕೆರಿಗೊಂಡ, ಸೇರಿದಂತೆ ಅನೇಕರು ಇದ್ದರು.

Read More

ಪಪೂ ಕಾಲೇಜುಗಳ ಅಥ್ಲೆಟಿಕ್ಸ ಕ್ರೀಡಾಕೂಟ ಹಾಗೂ ಬಾಲ್ ಬ್ಯಾಡ್ಮಿಂಟನ್ ಟೆನ್ನಿಸ್ ವ್ಹಾಲಿಬಾಲ್ ಪಂದ್ಯಾವಳಿ ಬಸವನಬಾಗೇವಾಡಿ: ಕ್ರೀಡೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ. ಕ್ರೀಡೆಯಲ್ಲಿ ಕ್ರೀಡಾಮನೋಭಾವ, ಹೃದಯವೈಶಾಲ್ಯತೆಯಿಂದ ಭಾಗವಹಿಸುವುದು ಮುಖ್ಯ. ಗ್ರಾಮೀಣ ಮಟ್ಟದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚುವಂತಾಗಲಿ ಎಂದು ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಹಾಗೂ ಬಸವೇಶ್ವರ ಸರ್ಕಾರಿ ಪಪೂ ಕಾಲೇಜಿನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕು ಪಪೂ ಕಾಲೇಜುಗಳ ಅಥ್ಲೇಟಿಕ್ಸ ಕ್ರೀಡಾಕೂಟ ಹಾಗೂ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೆನ್ನಿಸ್ ವ್ಹಾಲಿಬಾಲ್ ಪಂದ್ಯಾವಳಿಯನ್ನು ಸಸಿಗೆ ನೀರುಣಿಸಿ ಉದ್ಘಾಟಿಸಿದ ನಂತರ ಕ್ರೀಡಾಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕ್ರೀಡೆಯು ಯಾರ ಸ್ವತ್ತಲ್ಲ. ಯಾರೂ ಛಲದಿಂದ ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಾರೋ ಅವರಿಗೆ ಕ್ರೀಡೆ ಒಲಿಯುತ್ತದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಯಲ್ಲಿ ನಿರಂತರ ಅಧ್ಯಯನದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು…

Read More

ಇಂಡಿ: ತಾಲೂಕು ಸರಕಾರಿ ನೌಕರ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಂಕರಗೌಡ ಪಾಟೀಲ ಅವರನ್ನು ನಾಮನಿರ್ದೇಶನ ಮೇರೆಗೆ ವಿಭಾಗೀಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕಲಕೇರಿ: ಸಮಿಪದ ತಿಳಗೂಳ ಗ್ರಾಮದ ಎಸ್ ಎಸ್ ಕೆ ವ್ಹಿ ಐ ಸಂಸ್ಥೆಯ ತಿಳಗೂಳ ಪ್ರೌಡಶಾಲೆಯ ಹಿಂದಿ ಶಿಕ್ಷಕರಾದ ಎ ಬಿ ಶೇಖ್ ಅವರಿಗೆ ಕರ್ನಾಟಕ ರಾಜ್ಯ ಹಿಂದಿ ಶಿಕ್ಷಕರ ಸಂಘ ಬೆಂಗಳೂರು, ಮತ್ತು ಜಿಲ್ಲಾ ಘಟಕ ವಿಜಯಪುರ ಇಒವರ ಆಶ್ರಯದಲ್ಲಿ ವಿಜಯಪುರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರೌಡಶಾಲಾ ಹಿಂದಿ ಶಿಕ್ಷಕರ ಸಮ್ಮೇಳನದಲ್ಲಿ “ಹಿಂದಿ ಶಿಕ್ಷಕ ರತ್ನ” ಪ್ರಶಸ್ತಿಯನ್ನು ನಿಡಿ ಗೌರವಿಸಲಾಯಿತು.ಎ ಬಿ ಶೇಖ್ ಶಿಕ್ಷಕರು ಸಿಸಿಆರ್‌ಟಿ ನವದೆಹಲಿಯ ಸಂಪನ್ಮೂಲ ವ್ಯಕ್ತಿಯಾಗಿ ೧೦ ವರ್ಷ ಸೇವೆಯ ಜೊತೆಗೆ ಜಿಲ್ಲೆಯ ಹಿಂದಿ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಸೃಜನಾತ್ಮಕ ಶೈಕ್ಷಣಿಕ ಕಾರ್ಯಕ್ಷಮತೆಯಿಂದ ವಿಧ್ಯಾರ್ಥಿಗಳಲ್ಲಿ ಗುಣಾತ್ಮಕ ಹಾಗೂ ಸಕಾರಾತ್ಮಕ ರೂಪದಿಂದ ಶೈಕ್ಷಣಿಕ ಕಾರ್ಯಗಳಲ್ಲಿ ಬದಲಾವಣೆಯನ್ನು ತರಲು ಶ್ರಮಿಸಿದ್ದನ್ನು ಗುರುತಿಸಿ ಶ್ರೀಯುತರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶ್ರೀಯುತರಿಗೆ ಎಸ್ ಎಸ್ ಕೆ ವ್ಹಿ ಐ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Read More

ವಿಜಯಪುರ: ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿನ ಡಾ.ಫ.ಗು.ಹಳಕಟ್ಟಿ ಸಭಾ ಭವನದಲ್ಲಿ ಶನಿವಾರ ಸಂಸ್ಥೆಯ ಅಧ್ಯಕ್ಷರು, ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಸಿದ್ದೇಶ್ವರ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ವಿಶೇಷ ಸಭೆಯಲ್ಲಿ ಶತಮಾನ ಕಂಡ, ಪ್ರತಿಷ್ಠಿತ ವಿಜಯಪುರದ ಶ್ರೀ ಸಿದ್ದೇಶ್ವರ ಸಂಸ್ಥೆಗೆ ನೂತನವಾಗಿ ಏಳು ಜನ ನಿರ್ದೇಶಕರು ಅಧಿಕಾರ ಸ್ವೀಕರಿಸಿದರು.ಚಂದಪ್ಪ ಹುಂಡೇಕಾರ, ನಾಗಪ್ಪ ಗುಗ್ಗರಿ, ಸಾಯಿಬಣ್ಣ ಭೋವಿ, ಮಲಕಪ್ಪ ಗಾಣಿಗೇರ, ರಮೇಶ ಹಳ್ಳದ, ರಾಮನಗೌಡ ಪಾಟೀಲ ಯತ್ನಾಳ ಹಾಗೂ ಸಂಸ್ಥೆಯ ನಿರ್ದೇಶಕರಾಗಿದ್ದ ಶಶಿಧರ ಹಕ್ಕಾಪಕ್ಕಿ ಅವರ ನಿಧನ ಹಿನ್ನೆಲೆ ನೇಮಕ ಮಾಡಲಾದ ಅವರ ಪುತ್ರ ಮಲ್ಲಿಕಾರ್ಜುನ ಹಕ್ಕಾಪಕ್ಕಿ ಅವರು ಶಿವಯೋಗಿ ಶ್ರೀ ಸಿದ್ದೇಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಈಚೆಗೆ ಜರುಗಿದ ಸಿದ್ದೇಶ್ವರ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಚರ್ಚಿಸಿದ ವಿಷಯ ಸಂಖ್ಯೆ-೫ ರಂತೆ ಸ್ಥಳೀಯ ಆಡಳಿತ ಮಂಡಳಿಯ ನಿರ್ದೇಶಕರ ಸಂಖ್ಯೆಯನ್ನು ೧೫ ರಿಂದ ೨೧ಕ್ಕೆ ಏರಿಸಲು ಸಂಪೂರ್ಣವಾದ ಅಧಿಕಾರವನ್ನು ಅಧ್ಯಕ್ಷರಿಗೆ ವಹಿಸಿ, ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ…

Read More

ಮುದ್ದೇಬಿಹಾಳ: ಅಬಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಳೆದ ೫೭ ದಿನಗಳಿಂದ ಹೋರಾಟಗಾರ ಮಂಜುನಾಥಸ್ವಾಮಿ ಕುಂದರಗಿ ನಡೆಸುತ್ತಿರುವ ಹೋರಾಟಕ್ಕೆ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಶೆಟ್ಟಿ ಬಣದ ಪದಾಧಿಕಾರಿಗಳು ಸೇರಿದಂತೆ ಇತರ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ಸೂಚಿಸಿದರು.ಈ ವೇಳೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗಂಗನಗೌಡರ, ಗೌರವಾಧ್ಯಕ್ಷ ಜಿ.ಎಸ್.ಸಾಲಿಮಠ ಸ್ವಾಭಿಮಾನಿ ಬಣದ ಅಧ್ಯಕ್ಷ ಸಂಗಯ್ಯ ಬಸಾರಂಗಮಠ ಮತ್ತೀತರರು ಮಾತನಾಡಿ ಹೋರಾಟ ಪ್ರಾರಂಭಿಸಿ ಸಾಕಷ್ಟು ದಿನಗಳು ಕಳೆದರೂ ಸೌಜನ್ಯಕ್ಕೂ ಯಾರೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡುವಂತೆ ಒತ್ತಾಯಿಸಿದರು.ಈ ವೇಳೆ ಪ್ರಭಾಕರ ಬಿರಾದಾರ, ಬಸವರಾಜ ಗೌಡರ, ನಾಗರಾಜ ಪಾಟೀಲ, ಪ್ರಕಾಶ ಪತ್ತಾರ, ಗುರುರಾಜ ಮದರಿ, ಚಂದ್ರಶೇಖರ ಕಲ್ಲಪ್ಪಗೌಡರ ಸೇರಿದಂತೆ ಮತ್ತೀತರರು ಇದ್ದರು.

Read More

ಸಿಂದಗಿ: ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೆಚ್.ಜಿ ಕಾಲೇಜಿನ ವಿದ್ಯಾರ್ಥಿಗಳಾದ ಸಮೀರ ಕಲಬುರಗಿ, ಅನಿಲ ಕನ್ನೋಳಿ, ದತ್ತು ನಾಯ್ಕೋಡಿ, ಹನುಮಂತ್ರಾಯ ತಳವಾರ ದ್ವಿತೀಯ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಸಂಸ್ಥೆಯ ಅಧ್ಯಕ್ಷ, ಶಾಸಕ ಅಶೋಕ ಮನಗೂಳಿ, ಪ್ರಾಚಾರ್ಯ ಎ.ಆರ್ ಹೆಗ್ಗನದೊಡ್ಡಿ, ದೈಹಿಕ ಉಪನ್ಯಾಸಕ ಸತೀಶ ಬಸರಕೋಡ, ಎಸ್.ಎಪಾಟೀಲ, ಆರ್.ಸಿ ಕಕ್ಕಳಮೇಲಿ, ಆರ್.ಬಿ ಹೊಸಮನಿ, ಬಿ.ಎಸ್ ಬಿರಾದಾರ, ಎಂ.ಎನ್ ಅಜ್ಜಪ್ಪ, ಎಸ್.ಪಿ ಬಿರಾದಾರ ಮುಕ್ತಾಯಕ್ಕ ಕತ್ತಿ, ಎ.ಬಿ ಪಾಟೀಲ, ಸುರೇಶ ಮಂಗುಂಡಿ ಸೇರಿದಂತೆ ಭೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ವಿಶ್ವ ಹೃದಯ ದಿನಾಚರಣೆ ಮತ್ತು ವಿಶ್ವ ರೇಬಿಸ್ ದಿನಾಚರಣೆ ಜನಜಾಗೃತಿ ಜಾಥಾಕ್ಕೆ ಚಾಲನೆ ವಿಜಯಪುರ: ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ವಿಶ್ವಾದ್ಯಂತ ಪ್ರತಿ ವರ್ಷ ೧೭.೩ ಮಿಲಿಯನ್ ಜನರು ಸಾವಿಗಿಡಾಗುತ್ತಿದ್ದಾರೆ. ನಿಯಮಿತ ಯೋಗಾಭ್ಯಾಸ ಅಳವಡಿಸಿಕೊಂಡು ನಿತ್ಯವೂ ಹೃದಯದ ಕುರಿತು ಕಾಳಜಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ಕರೆ ನೀಡಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ ಎನ್.ಸಿ.ಡಿ.ಘಟಕ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಶಾಖೆ ಡಾ|| ಬಿದರಿಯವರ ಅಶ್ವಿನಿ ಆಸ್ಪತ್ರೆ ಹಾಗೂ ಅಶ್ವಿನಿ ಇನ್ಸಿಟ್ಯೂಟ್ ವಿವಿದ ನರ್ಸಿಂಗ್ ಕಾಲೇಜಗಳು ಇವರ ಸಹಯೋಗದಲ್ಲಿ ಸೆ.೩೦ರ ಶನಿವಾರ ಆಯೋಜಿಸಲಾದ ವಿಶ್ವ ಹೃದಯ ದಿನಾಚರಣೆ ಮತ್ತು ವಿಶ್ವ ರೇಬಿಸ್ ದಿನಾಚರಣೆ ಜನಜಾಗೃತಿ ಜಾಥಾಕ್ಕೆ ಅಶ್ವಿನಿ ಆಸ್ಪತ್ರೆಯ ಮುಖ್ಯಸ್ಥ ಚಿಕ್ಕಮಕ್ಕಳ ತಜ್ಞ ಡಾ|| ಎಲ್.ಎಚ್ ಬಿದರಿಯವರೊಂದಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಜಗತ್ತಿನಾದ್ಯಂತ ಹೆಚ್ಚು ಮನುಷ್ಯ…

Read More

ವಿಜಯಪುರ: ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ವತಿಯಿಂದ ಕರ್ನಾಟಕದಲ್ಲಿ ರಿಟೇಲ್ ಮಾರಾಟ ವಿತರಕರ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ.ವಿತರಕರ ಆಯ್ಕೆಗೆ ಡಿಫೆನ್ಸ್ ಕೆಟಗರಿರವರು (ಡಿಫೆನ್ಸ್ ವಿಭಾಗ) ಅರ್ಜಿಯನ್ನು ದಿನಾಂಕ : ೧೭-೧೦-೨೦೨೩ರೊಳಗಾಗಿ ಸಲ್ಲಿಸಬಹುದಾಗಿದ್ದು, ಅರ್ಜಿ ನಮೂನೆ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ನಲ್ಲಿ https://www.petrolpumpdealerchayan.in ವೀಕ್ಷಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More