ಸಿಂದಗಿ: ಸುಮಾರು ೯ ವರ್ಷಗಳಿಂದ ಸಮಾಜದ ಹಿತದೃಷ್ಠಿಗಾಗಿ ಮೂಲಭೂತ ಸೌಕರ್ಯಕ್ಕಾಗಿ ಸರಕಾರಕ್ಕೆ ಶಫರ್ಡ ಇಂಡಿಯಾ ಇಂಟರ್ನ್ಯಾಷನಲ್ ಸಂಘಟನೆಯ ಮೂಲಕ ಒತ್ತಡ ಹಾಕುತ್ತಿರುವ ಸಮಾಜದ ಏಳಿಗೆಗಾಗಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಮಾಜಿ ಸಚಿವ ಎಚ್.ಎಂ ರೇವಣ್ಣ ಹಾಗೂ ಎಚ್.ವಿಶ್ವನಾಥ ಅವರ ಮುಂದಾಳತ್ವದಲ್ಲಿ ಅ.೩ರಂದು ಬೆಳಗಾವಿಯಲ್ಲಿ ಬ್ರಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ರಮೇಶ ಭಂಟನೂರ ತಿಳಿಸಿದ್ದಾರೆ.
ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಕಾರಣ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೋಳಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಲ್ಲು ಸಾವಳಸಂಗ, ಶಿವಾನಂದ ಗಣಿಹಾರ, ಪಿಂಟು ಪೂಜಾರಿ, ಮಹಾಂತೇಶ ಸಾಸಾಬಾಳ, ಸಿದ್ದು ಕೆರಿಗೊಂಡ, ಸೇರಿದಂತೆ ಅನೇಕರು ಇದ್ದರು.
Related Posts
Add A Comment