ಕಲಕೇರಿ: ಸಮಿಪದ ತಿಳಗೂಳ ಗ್ರಾಮದ ಎಸ್ ಎಸ್ ಕೆ ವ್ಹಿ ಐ ಸಂಸ್ಥೆಯ ತಿಳಗೂಳ ಪ್ರೌಡಶಾಲೆಯ ಹಿಂದಿ ಶಿಕ್ಷಕರಾದ ಎ ಬಿ ಶೇಖ್ ಅವರಿಗೆ ಕರ್ನಾಟಕ ರಾಜ್ಯ ಹಿಂದಿ ಶಿಕ್ಷಕರ ಸಂಘ ಬೆಂಗಳೂರು, ಮತ್ತು ಜಿಲ್ಲಾ ಘಟಕ ವಿಜಯಪುರ ಇಒವರ ಆಶ್ರಯದಲ್ಲಿ ವಿಜಯಪುರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರೌಡಶಾಲಾ ಹಿಂದಿ ಶಿಕ್ಷಕರ ಸಮ್ಮೇಳನದಲ್ಲಿ “ಹಿಂದಿ ಶಿಕ್ಷಕ ರತ್ನ” ಪ್ರಶಸ್ತಿಯನ್ನು ನಿಡಿ ಗೌರವಿಸಲಾಯಿತು.
ಎ ಬಿ ಶೇಖ್ ಶಿಕ್ಷಕರು ಸಿಸಿಆರ್‌ಟಿ ನವದೆಹಲಿಯ ಸಂಪನ್ಮೂಲ ವ್ಯಕ್ತಿಯಾಗಿ ೧೦ ವರ್ಷ ಸೇವೆಯ ಜೊತೆಗೆ ಜಿಲ್ಲೆಯ ಹಿಂದಿ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಸೃಜನಾತ್ಮಕ ಶೈಕ್ಷಣಿಕ ಕಾರ್ಯಕ್ಷಮತೆಯಿಂದ ವಿಧ್ಯಾರ್ಥಿಗಳಲ್ಲಿ ಗುಣಾತ್ಮಕ ಹಾಗೂ ಸಕಾರಾತ್ಮಕ ರೂಪದಿಂದ ಶೈಕ್ಷಣಿಕ ಕಾರ್ಯಗಳಲ್ಲಿ ಬದಲಾವಣೆಯನ್ನು ತರಲು ಶ್ರಮಿಸಿದ್ದನ್ನು ಗುರುತಿಸಿ ಶ್ರೀಯುತರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶ್ರೀಯುತರಿಗೆ ಎಸ್ ಎಸ್ ಕೆ ವ್ಹಿ ಐ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Related Posts
Add A Comment