ಮುದ್ದೇಬಿಹಾಳ: ಅಬಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಳೆದ ೫೭ ದಿನಗಳಿಂದ ಹೋರಾಟಗಾರ ಮಂಜುನಾಥಸ್ವಾಮಿ ಕುಂದರಗಿ ನಡೆಸುತ್ತಿರುವ ಹೋರಾಟಕ್ಕೆ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಶೆಟ್ಟಿ ಬಣದ ಪದಾಧಿಕಾರಿಗಳು ಸೇರಿದಂತೆ ಇತರ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ಸೂಚಿಸಿದರು.
ಈ ವೇಳೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗಂಗನಗೌಡರ, ಗೌರವಾಧ್ಯಕ್ಷ ಜಿ.ಎಸ್.ಸಾಲಿಮಠ ಸ್ವಾಭಿಮಾನಿ ಬಣದ ಅಧ್ಯಕ್ಷ ಸಂಗಯ್ಯ ಬಸಾರಂಗಮಠ ಮತ್ತೀತರರು ಮಾತನಾಡಿ ಹೋರಾಟ ಪ್ರಾರಂಭಿಸಿ ಸಾಕಷ್ಟು ದಿನಗಳು ಕಳೆದರೂ ಸೌಜನ್ಯಕ್ಕೂ ಯಾರೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡುವಂತೆ ಒತ್ತಾಯಿಸಿದರು.
ಈ ವೇಳೆ ಪ್ರಭಾಕರ ಬಿರಾದಾರ, ಬಸವರಾಜ ಗೌಡರ, ನಾಗರಾಜ ಪಾಟೀಲ, ಪ್ರಕಾಶ ಪತ್ತಾರ, ಗುರುರಾಜ ಮದರಿ, ಚಂದ್ರಶೇಖರ ಕಲ್ಲಪ್ಪಗೌಡರ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment