Author: editor.udayarashmi@gmail.com

ಇಂಡಿ: ಪ್ರತಿಯೊಬ್ಬರೂ ಮನೆ ಸುತ್ತಮುತ್ತಲೂ ಸ್ವಚ್ಚತೆ ಇಟ್ಟುಕೊಂಡರೆ, ಶ್ರಮದಾನ ಮಾಡಿದ್ರೆ, ರೋಗದಿಂದ ದೂರವಿರಲು ಸಾಧ್ಯ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಸಿದ್ದರಾಮ ಸಿನಖೇಡ ಹೇಳಿದರು.ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಬ್ಬೇವಾಡ ಚಿಕ್ಕ‌ಮಣ್ಣೂರ, ಶಿರಗೂರ ಇನಾಂ ಗ್ರಾಮದಲ್ಲಿ ಶ್ರಮದಾನ‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜನರು ಸ್ವಯಂ ಪ್ರೇರಿತರಾಗಿ ದೇಶಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಅನ್ನೋದು ಪ್ರಧಾನಿ ಮೋದಿ ಅವರ ಆಶಯವಾಗಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಶೋಕ ಶಹಾ, ಗುಡುಲಾಲ ರೇವುರ, ಮಲನಗೌಡ ಬಗಲಿ, ಮಾದೇವ ವಾಲಿಕಾರ, ರಾಜು ಕಲೋಡ್,ಕಾರ್ಯದರ್ಶಿ ನಾಗಪ್ಪ ತೆಲಸಂಗ, ಬಿಲ್ ಕ್ಲರ್ಕ್ ಸಿದ್ದರಾಮ ಕೋಳಿ, ವಾಟರಮ್ಯಾನ ಮಲಕಪ್ಪ ಪೂಜಾರಿ, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Read More

ಮುದ್ದೇಬಿಹಾಳ: ಸಿದ್ದೇಶ್ವರ ಶ್ರೀಗಳು ನಡೆಸಿದ ವೇದಿಕೆಯ ಮೇಲೆ ಪ್ರವಚನ ನೀಡುವ ಭಾಗ್ಯ ಲಭಿಸಿದ ನಾನು ಧನ್ಯ ಎಂದು ಧಾರವಾಡದ ಉಪ್ಪಿನಬೇಟಗೇರಿಯ ವೀರುಪಾಕ್ಷೇಶ್ವರ ಮಹಾಸ್ವಾಮಿಗಳು ಹೇಳಿದರು.ಪಟ್ಟಣದಲ್ಲಿ ಡಿ.೧೦ ರಿಂದ ೨೧ ದಿನಗಳ ಕಾಲ ನಡೆಯಲಿರುವ ಬಸವ ಪುರಾಣ ಕಾರ್ಯಕ್ರಮ ಕುರಿತು ವಿಬಿಸಿ ಹೈಸ್ಕೂಲ ಮೈದಾನದ ಸಿದ್ದೇಶ್ವರ ವೇದಿಕೆಯಲ್ಲಿ ಅವರು ಮಾತನಾಡಿದರು.ಈ ಕ್ಷೇತ್ರ ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗದೇ ಎಲ್ಲರೂ ಸೌಹಾರ್ಧತೆಯಿಂದ ಕೂಡಿ ಬಾಳುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಬಸವಣ್ಣನವರು ಹೇಳಿದಂತೆ ಸಮಾಜದಲ್ಲಿ ಮೇಲು ಕೀಳು ಎನ್ನುವ ಬೇಧ ಭಾವವನ್ನು ತೊರೆದು ಎಲ್ಲರೂ ಒಂದೇ ಎನ್ನುವ ತತ್ವದಡಿ ಧರ್ಮ ರಕ್ಷಣೆ ಜೊತೆಗೆ ಸಾಮರಸ್ಯ ಜೀವನದಲ್ಲಿ ಎಲ್ಲರೂ ಮುಂದುವರೆಯಬೇಕು ಎಂದರು.ಈ ವೇಳೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಗಣ್ಯ ಉದ್ಯಮಿ ಶರಣು ಸಜ್ಜನ, ಸುಧೀರ ನಾವದಗಿ, ಪ್ರಕಾಶ ಇಲ್ಲೂರ, ರಾಜಶೇಖರ ಕರಡ್ಡಿ, ಮುಖಂಡರಾದ ಕಾಮರಾಜ ಬಿರಾದಾರ, ಸದಾಶಿವ ಮಠ, ಮುತ್ತಣ್ಣ ರಾಯಗೊಂಡ, ಗುರುಸ್ವಾಮಿ ಬೂದಿಹಾಳಮಠ, ರಾಜಶೇಖರ ಮ್ಯಾಗೇರಿ, ಹರೀಶ ಬೇವೂರ, ವಾಯ್.ಎಚ್.ವಿಜಯಕರ, ಪುರಸಭೆ ಸದಸ್ಯ…

Read More

ಆಲಮಟ್ಟಿ: ಎಲ್ಲಿ ಸ್ವಚ್ಚತೆ ಇದೆಯೋ ಅಲ್ಲಿ ದೇವರು ನೆಲೆಸುತ್ತಾನೆ. ಸ್ವಸ್ಥ ಮನಸಿದ್ದಲ್ಲಿ ಸಮಾಜವೂ ಸ್ವಾಸ್ಥ್ಯದಿಂದರಲು ಸಾಧ್ಯ. ಆ ಕಾರಣ ಮೊದಲು ನಮ್ಮ ದೇಹ,ಮನಸ್ಸು ಶುಚಿಯೊಂದಿಗೆ ಸ್ವಚ್ಚತಾ ಪ್ರೇಮಮನೋಭಾವದಲ್ಲಿ ಮೊಳಗಬೇಕು ಎಂದು ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ ಹೇಳಿದರು.    ಇಲ್ಲಿನ ಎಸ್.ವ್ಹಿ.ವ್ಹಿ.ಸಂಸ್ಥೆಯ ಎಂ.ಎಚ್.ಎಂ.ಪ್ರೌಢಶಾಲೆಯಲ್ಲಿ ಸ್ವಚ್ಚತಾ ಆಂದೋಲನದಡಿ ಹಮ್ಮಿಕೊಂಡಿದ್ದ ಶಾಲಾವರಣ ಶುಚಿಗೊಳಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ಸ್ವಚ್ಚತೆ ಇದ್ದಡೆ ನೆಮ್ಮದಿಯೊಂದಿಗೆ ಮನಸ್ಸು ಪ್ರಸನ್ನಗೊಳ್ಳುತ್ತದೆ. ಮನಪೂರ್ವಕವಾಗಿ ಸ್ವಚ್ಚತಾ ಸೇವಾಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸ್ವಚ್ಛ ಭಾರತ ಅನುಷ್ಠಾನಕ್ಕೆ ಕೈಜೋಡಿಸಬೇಕು. ಪರಿಸರ ಸ್ವಸ್ಥದಿಂದ ನಮ್ಮ ಉಸಿರಿನ ಸ್ವಾಸ್ಥ್ಯವೂ ಉತ್ತಮವಾಗಿ ಇರಿಸಿಕೊಳ್ಳಲು ಸಾಧ್ಯ. ಸ್ವಚ್ಚತೆ ಕಾಳಜಿಯಿದ್ದರೆ ಆರೋಗ್ಯಯುತ ಬದುಕು ನಮ್ಮದಾದೀತು ಎಂದರು. ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ಮಾತನಾಡಿದರು.ಶಾಲಾವರಣದಲ್ಲಿನ ಕಸ, ಕಡ್ಡಿ, ಪ್ಲಾಸ್ಟಿಕ್ ಇತರೆ ಕಸಗಳನ್ನು ತಗೆಯುವದರ ಮೂಲಕ ಮೂಲಕ ಸ್ವಚ್ಚತಾ ದಿನ ಆಚರಿಸಲಾಯಿತು.ಶಿಕ್ಷಕರಾದ ಯು.ಎ.ಹಿರೇಮಠ, ಎಂ.ಎಚ್.ಬಳಬಟ್ಟಿ, ಮಹೇಶ ಗಾಳಪ್ಪಗೋಳ, ಜಗದೇವಿ ಕೆ, ಸಿದ್ದಮ್ಮ ಅಂಗಡಿ, ಶ್ವೇತಾ ಕೊಪ್ಪ ಇತರರು ಇದ್ದರು.ಸ್ವಚ್ಚತಾ ಕಾರ್ಯದಲ್ಲಿ ಶಾಲಾ ಮಕ್ಕಳು ಸ್ವಯಂ ಪ್ರೇರಣೆಯಿಂದ ಕಸಗೂಡಿಸಿ…

Read More

ಸಿಂದಗಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೆಲವೊಂದು ಸರ್ವೇ ನಂಬರಿನ ಪ್ರದೇಶಗಳಲ್ಲಿ ಕಟ್ಟಡ ಪರವಾನಿಗೆ ತೆಗೆದುಕೊಳ್ಳಲು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯವರು ತಮ್ಮ ಪ್ರದೇಶದ ವ್ಯಾಪ್ತಿಯ ಹೊರಗಡೆ ಬರುತ್ತವೆ ಎಂದು ಕಾರಣ ನೀಡಿ ಪರವಾನಿಗೆಯನ್ನು ತಿರಸ್ಕೃತಗೊಳಿಸುತ್ತಿದ್ದ ಕಾರಣ ಪಟ್ಟಣದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು ಅದನ್ನು ಸರಿಪಡಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಗ್ರಾಮಾಂತರ ಯೋಜನಾ ಇಲಾಖೆ ನಿರ್ದೇಶಕರಿಗೆಹೇಳಿದರು.ಈ ಕುರಿತು ಪಟ್ಟಣದ ಸಾರ್ವಜನಿಕರು ಶಾಸಕರನ್ನು ಬೇಟಿ ಮಾಡಿ ಸಮಸ್ಯೆಯ ಕುರಿತು ಗಮನಕ್ಕೆ ತಂದಿದ್ದರು. ಅದರ ಪ್ರಯುಕ್ತ ಶಾಸಕರು ಬೆಂಗಳೂರಿನ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನಿರ್ದೇಶಕರನ್ನು ಬೇಟಿ ಮಾಡಿ ಸದರಿ ಸಮಸ್ಯೆ ಕುರಿತು ಚರ್ಚಿಸಿದರು.ಶಾಸಕರ ಕೋರಿಕೆಗೆ ತಕ್ಷಣ ಸ್ಪಂದಿಸಿದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಿರ್ದೇಶಕರುವಿಜಯಪುರ ಜಿಲ್ಲಾ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಕರೆ ಮಾಡಿ, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ ಕಟ್ಟಡ ಪರವಾನಿಗೆ ನೀಡಲು ಸೂಚಿಸಿದರು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಕಾಂಗ್ರೆಸ್…

Read More

ಸಿಂದಗಿ: ಚಕ್ರವರ್ತಿ ನೇತೃತ್ವದ ನಮೋ ಬ್ರಿಗೇಡ್ ಸಂಘಟನೆ ವತಿಯಿಂದ ರಾಜ್ಯಾದ್ಯಾಂತ ಜನ ಗಣ ಮನ ಎಂಬ ನಮೋ ಬೈಕ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದೇ ಅ.೬ರಂದು ಈ ಯಾತ್ರೆ ಸಿಂದಗಿಗೆ ಬರಲಿದೆ. ಬೈಕ್ ಯಾತ್ರೆ ಮತ್ತು ಬೈಠಕ್ ಕಾರ್ಯಕ್ರಮ ನಡೆಯಲಿದೆ. ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗುವ ಯಾತ್ರೆ ಅಂಬೇಡ್ಕರ್ ವೃತ್ತದಿಂದ ಸಾಗಿ ಆಲಮೇಲ ಮಾರ್ಗವಾಗಿ ಅಫಜಲಪೂರ ತಾಲೂಕಿಗೆ ತೆರಳಲಿದೆ. ಮತ್ತು ಸಂಗಮೇಶ್ವರ ದೇವಸ್ಥಾನದಲ್ಲಿ ನಡೆಯುವ ಬೈಠಕ್‌ನಲ್ಲಿ ನಮೋ ಯಾತ್ರೆಯ ಉದ್ದೇಶಗಳನ್ನು ತಿಳಿಸಲಾಗುವುದು ಎಂದು ಯುವಾ ಬ್ರಿಗೇಡ್ ಸಂಚಾಲಕ ಮಡಿವಾಳ ವಾಲಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೊಗ ವೈಯಕ್ತಿಕ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಅರಿವು-ಶೈಕ್ಷಣಿಕ ಸಾಲ ಯೋಜನೆ, ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ), ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅರ್ಜಿದಾರರು ದಿನಾಂಕ : ೩೧-೧೦-೨೦೨೩ರೊಳಗೆ ಸೇವಾಸಿಂಧು ಪೋರ್ಟ್ಲ್ : https://www.sevasindhu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ : https://www.dbcdc.karnataka.gov.in ಹಾಗೂ ಸಹಾಯವಾಣಿ ೦೮೦-೨೨೩೭೪೮೩೨ ಸಂಪರ್ಕಿಸಬಹುದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಯಾವುದೇ…

Read More

ವಿಜಯಪುರ: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಶೈಕ್ಷಣಿಕ ಸಾಲ ಯೋಜನೆಗಳು, ಜೀವ ಜಲ ಯೋಜನೆ, ಕಾಯಕ ಕಿರಣ ಯೋಜನೆ, ಭೋಜನಾಲಯ ಕೇಂದ್ರ ಸ್ಥಾಪನೆಗೆ ಸಹಾಯಧನ-ಸಾಲ ಸೌಲಭ್ಯ, ವಿಭೂತ ನಿರ್ಮಾಣ ಘಟಕ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ) ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅರ್ಜಿದಾರರು ದಿನಾಂಕ : ೩೦-೧೦-೨೦೨೩ರೊಳಗೆ ಸೇವಾಸಿಂಧು ಪೋರ್ಟ್ಲ್ : https://www.sevasindhu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ : https://kv1dc1.karnataka.gov.in ಹಾಗೂ ಸಹಾಯವಾಣಿ ೦೮೦-೨೨೮೬೫೫೨೨, ೯೯೦೦೧೨೩೫೧ ಅಥವಾ ನಿಗದಮ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ವಿಜಯಪುರ ಸಂಪರ್ಕಿಸುವಂತೆ ಜಿಲ್ಲಾ…

Read More

ವಿಜಯಪುರ: ದೇವರಹಿಪ್ಪರಗಿಯಲ್ಲಿ ೧೧೦/೩೩/೧೧ ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಅಕ್ಟೊಬರ್ ೪ ಹಾಗೂ ೫ ರಂದು ಕೈಗೊಳ್ಳಲಿರುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲ ೩೩ ಕೆವ್ಹಿ ಮತ್ತು ೧೧ ಕೆವ್ಹಿ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂ ಕಾರ್ಯನಿವಾಹಕ ಅಭಿಯಂತರರು ಕೋರಿದ್ದಾರೆ.೧೧ಕೆವ್ಹಿ ದೇವರ ಹಿಪ್ಪರಗಿ ಎನ್‌ಜೆವಾಯ್ ಹಾಗೂ ೧೧ ಕೆವ್ಹಿ ಇಂಗಳಗಿ ಎನ್‌ಜೆವಾಯ್ ಮಾರ್ಗಗಳಿಗೆ ಅಕ್ಟೋಬರ್ ೪ ರಂದು ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಹಾಗೂ ಅಕ್ಟೊಬರ್ ೫ ರಂದು ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧ ಗಂಟೆವರೆಗೆ ೩೩ ಕೆವ್ಹಿ ಕಡ್ಲೇವಾಡ್ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕಾರ್ಮಿಕ ಸಚಿವ ಸಂತೋಷ ಲಾಡ್ ಭರವಸೆ ವಿಜಯಪುರ: ಕಟ್ಟಡ ಕಾರ್ಮಿಕ ಮಕ್ಕಳಿಗೆ ಶಿಷ್ಯವೇತನ ಮಂಜೂರಾತಿಗಾಗಿ ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ಬಹಳಷ್ಟು ಅರ್ಜಿಗಳು ಸ್ವೀಕೃತವಾಗಿದ್ದು, ಮುಂದಿನ ದಿನಗಳಲ್ಲಿ ಶಿಷ್ಯವೇತನ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಕಾರ್ಮಿಕ ಖಾತೆ ಸಚಿವರಾದ ಸಂತೋಷ ಲಾಡ್ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕಾರ್ಮಿಕ ಸಂಘಟನೆಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಷ್ಯವೇತನ ಮಂಜೂರಾತಿಗಾಗಿ ಈಗಾಗಲೇ ಪೋರ್ಟಲ್ ಮೂಲಕ ಅರ್ಜಿಗಳು ಸ್ವೀಕೃತವಾಗಿದ್ದು, ನೈಜ ಫಲಾನುಭವಿಗಳಿಗೆ ಶಿಷ್ಯವೇತನ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಸೂಕ್ತ ಪರಿಶೀಲನೆ ನಡೆಸಿ ೭ ಲಕ್ಷ ಅರ್ಹರಿಗೆ ಶಿಷ್ಯವೇತನ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.ಮೊದಲಿದ್ದ ಕಾರ್ಮಿಕ ಬಂಧು ಹೊಸ ವ್ಯವಸ್ಥೆ ಅಳವಡಿಸಿ ಪರಿಶೀಲಿಸಿ ಅರ್ಹ ಫಲಾನುಭವಿಗಳ ಮಕ್ಕಳಿಗೆ ಶಿಷ್ಯವೇತನ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ. ಸರ್ಕಾರಿ ಕಾರ್ಮಿಕ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮದುವೆ ಸಹಾಯಧನ, ಹೆರಿಗೆ ಸಹಾಯಧನ, ಹೆರಿಗೆ ಭತ್ಯೆ ನೀಡುವಾಗ ನೈಜ ಫಲಾನುಭವಿಗಳ ಪರಿಶೀಲನೆ ಮಾಡಿ…

Read More

ಸಿಂದಗಿ: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ಜಿಲ್ಲಾ ಮಟ್ಟದ ವೈಯಕ್ತಿಕ ಮತ್ತು ಗುಂಪು ಆಟಗಳಲ್ಲಿ ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ೪೩ ಜನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಇವರ ಸಾಧನೆಗೆ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ವಿಮಲಕಾಂತ ಪಾಟೀಲ, ಉಪಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ, ಪಿ.ವ್ಹಿ.ಮಹಲಿನಮಠ,.ಎನ್.ಬಿ.ಪೂಜಾರಿ, ಸುನೀಲ ಪಾಟೀಲ, ಪ್ರಸನ್ನ ಜೋಗೂರ, ಎಸ್.ಎಚ್.ಜಾಧವ, ಎಸ್.ಎಸ್.ತಾಳಿಕೋಟಿ, ಶಿವಶರಣ ಬೂದಿಹಾಳ, ಬಿ.ಬಿ.ಜಮಾದಾರ, ಶಿವರಾಜ ಕುಂದಗೋಳ, ಸಂಗಮೇಶ ಚಾವರ, ಎನ್.ಎಂ.ಶೆಳ್ಳಗಿ, ರೋಹಿತ ಸುಲ್ಪಿ, ರಾಹುಲ ನಾರಾಯಣಕರ್, ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

Read More