ಮುದ್ದೇಬಿಹಾಳ: ಸಿದ್ದೇಶ್ವರ ಶ್ರೀಗಳು ನಡೆಸಿದ ವೇದಿಕೆಯ ಮೇಲೆ ಪ್ರವಚನ ನೀಡುವ ಭಾಗ್ಯ ಲಭಿಸಿದ ನಾನು ಧನ್ಯ ಎಂದು ಧಾರವಾಡದ ಉಪ್ಪಿನಬೇಟಗೇರಿಯ ವೀರುಪಾಕ್ಷೇಶ್ವರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದಲ್ಲಿ ಡಿ.೧೦ ರಿಂದ ೨೧ ದಿನಗಳ ಕಾಲ ನಡೆಯಲಿರುವ ಬಸವ ಪುರಾಣ ಕಾರ್ಯಕ್ರಮ ಕುರಿತು ವಿಬಿಸಿ ಹೈಸ್ಕೂಲ ಮೈದಾನದ ಸಿದ್ದೇಶ್ವರ ವೇದಿಕೆಯಲ್ಲಿ ಅವರು ಮಾತನಾಡಿದರು.
ಈ ಕ್ಷೇತ್ರ ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗದೇ ಎಲ್ಲರೂ ಸೌಹಾರ್ಧತೆಯಿಂದ ಕೂಡಿ ಬಾಳುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಬಸವಣ್ಣನವರು ಹೇಳಿದಂತೆ ಸಮಾಜದಲ್ಲಿ ಮೇಲು ಕೀಳು ಎನ್ನುವ ಬೇಧ ಭಾವವನ್ನು ತೊರೆದು ಎಲ್ಲರೂ ಒಂದೇ ಎನ್ನುವ ತತ್ವದಡಿ ಧರ್ಮ ರಕ್ಷಣೆ ಜೊತೆಗೆ ಸಾಮರಸ್ಯ ಜೀವನದಲ್ಲಿ ಎಲ್ಲರೂ ಮುಂದುವರೆಯಬೇಕು ಎಂದರು.
ಈ ವೇಳೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಗಣ್ಯ ಉದ್ಯಮಿ ಶರಣು ಸಜ್ಜನ, ಸುಧೀರ ನಾವದಗಿ, ಪ್ರಕಾಶ ಇಲ್ಲೂರ, ರಾಜಶೇಖರ ಕರಡ್ಡಿ, ಮುಖಂಡರಾದ ಕಾಮರಾಜ ಬಿರಾದಾರ, ಸದಾಶಿವ ಮಠ, ಮುತ್ತಣ್ಣ ರಾಯಗೊಂಡ, ಗುರುಸ್ವಾಮಿ ಬೂದಿಹಾಳಮಠ, ರಾಜಶೇಖರ ಮ್ಯಾಗೇರಿ, ಹರೀಶ ಬೇವೂರ, ವಾಯ್.ಎಚ್.ವಿಜಯಕರ, ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ, ಶಾಲೆಯ ಮುಖ್ಯ ಗುರು ಈಶ್ವರ ಗೌಡರ ಸೇರಿದಂತೆ ಹಲವರು ಗಣ್ಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

