ಇಂಡಿ: ಪ್ರತಿಯೊಬ್ಬರೂ ಮನೆ ಸುತ್ತಮುತ್ತಲೂ ಸ್ವಚ್ಚತೆ ಇಟ್ಟುಕೊಂಡರೆ, ಶ್ರಮದಾನ ಮಾಡಿದ್ರೆ, ರೋಗದಿಂದ ದೂರವಿರಲು ಸಾಧ್ಯ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಸಿದ್ದರಾಮ ಸಿನಖೇಡ ಹೇಳಿದರು.
ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಬ್ಬೇವಾಡ ಚಿಕ್ಕಮಣ್ಣೂರ, ಶಿರಗೂರ ಇನಾಂ ಗ್ರಾಮದಲ್ಲಿ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನರು ಸ್ವಯಂ ಪ್ರೇರಿತರಾಗಿ ದೇಶಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಅನ್ನೋದು ಪ್ರಧಾನಿ ಮೋದಿ ಅವರ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಶೋಕ ಶಹಾ, ಗುಡುಲಾಲ ರೇವುರ, ಮಲನಗೌಡ ಬಗಲಿ, ಮಾದೇವ ವಾಲಿಕಾರ, ರಾಜು ಕಲೋಡ್,
ಕಾರ್ಯದರ್ಶಿ ನಾಗಪ್ಪ ತೆಲಸಂಗ, ಬಿಲ್ ಕ್ಲರ್ಕ್ ಸಿದ್ದರಾಮ ಕೋಳಿ, ವಾಟರಮ್ಯಾನ ಮಲಕಪ್ಪ ಪೂಜಾರಿ, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Related Posts
Add A Comment