ಸಿಂದಗಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೆಲವೊಂದು ಸರ್ವೇ ನಂಬರಿನ ಪ್ರದೇಶಗಳಲ್ಲಿ ಕಟ್ಟಡ ಪರವಾನಿಗೆ ತೆಗೆದುಕೊಳ್ಳಲು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯವರು ತಮ್ಮ ಪ್ರದೇಶದ ವ್ಯಾಪ್ತಿಯ ಹೊರಗಡೆ ಬರುತ್ತವೆ ಎಂದು ಕಾರಣ ನೀಡಿ ಪರವಾನಿಗೆಯನ್ನು ತಿರಸ್ಕೃತಗೊಳಿಸುತ್ತಿದ್ದ ಕಾರಣ ಪಟ್ಟಣದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು ಅದನ್ನು ಸರಿಪಡಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಗ್ರಾಮಾಂತರ ಯೋಜನಾ ಇಲಾಖೆ ನಿರ್ದೇಶಕರಿಗೆ
ಹೇಳಿದರು.
ಈ ಕುರಿತು ಪಟ್ಟಣದ ಸಾರ್ವಜನಿಕರು ಶಾಸಕರನ್ನು ಬೇಟಿ ಮಾಡಿ ಸಮಸ್ಯೆಯ ಕುರಿತು ಗಮನಕ್ಕೆ ತಂದಿದ್ದರು. ಅದರ ಪ್ರಯುಕ್ತ ಶಾಸಕರು ಬೆಂಗಳೂರಿನ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನಿರ್ದೇಶಕರನ್ನು ಬೇಟಿ ಮಾಡಿ ಸದರಿ ಸಮಸ್ಯೆ ಕುರಿತು ಚರ್ಚಿಸಿದರು.
ಶಾಸಕರ ಕೋರಿಕೆಗೆ ತಕ್ಷಣ ಸ್ಪಂದಿಸಿದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಿರ್ದೇಶಕರು
ವಿಜಯಪುರ ಜಿಲ್ಲಾ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಕರೆ ಮಾಡಿ, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ ಕಟ್ಟಡ ಪರವಾನಿಗೆ ನೀಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಕಾಂಗ್ರೆಸ್ ಮುಖಂಡ ಬಸವರಾಜ ಕಾಂಬಳೆ ಉಪಸ್ಥಿತರಿದ್ದರು.
Related Posts
Add A Comment