ವಿಜಯಪುರ: ದೇವರಹಿಪ್ಪರಗಿಯಲ್ಲಿ ೧೧೦/೩೩/೧೧ ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಅಕ್ಟೊಬರ್ ೪ ಹಾಗೂ ೫ ರಂದು ಕೈಗೊಳ್ಳಲಿರುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲ ೩೩ ಕೆವ್ಹಿ ಮತ್ತು ೧೧ ಕೆವ್ಹಿ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂ ಕಾರ್ಯನಿವಾಹಕ ಅಭಿಯಂತರರು ಕೋರಿದ್ದಾರೆ.
೧೧ಕೆವ್ಹಿ ದೇವರ ಹಿಪ್ಪರಗಿ ಎನ್‌ಜೆವಾಯ್ ಹಾಗೂ ೧೧ ಕೆವ್ಹಿ ಇಂಗಳಗಿ ಎನ್‌ಜೆವಾಯ್ ಮಾರ್ಗಗಳಿಗೆ ಅಕ್ಟೋಬರ್ ೪ ರಂದು ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಹಾಗೂ ಅಕ್ಟೊಬರ್ ೫ ರಂದು ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧ ಗಂಟೆವರೆಗೆ ೩೩ ಕೆವ್ಹಿ ಕಡ್ಲೇವಾಡ್ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment