ಆಲಮಟ್ಟಿ: ಎಲ್ಲಿ ಸ್ವಚ್ಚತೆ ಇದೆಯೋ ಅಲ್ಲಿ ದೇವರು ನೆಲೆಸುತ್ತಾನೆ. ಸ್ವಸ್ಥ ಮನಸಿದ್ದಲ್ಲಿ ಸಮಾಜವೂ ಸ್ವಾಸ್ಥ್ಯದಿಂದರಲು ಸಾಧ್ಯ. ಆ ಕಾರಣ ಮೊದಲು ನಮ್ಮ ದೇಹ,ಮನಸ್ಸು ಶುಚಿಯೊಂದಿಗೆ ಸ್ವಚ್ಚತಾ ಪ್ರೇಮಮನೋಭಾವದಲ್ಲಿ ಮೊಳಗಬೇಕು ಎಂದು ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ ಹೇಳಿದರು.
ಇಲ್ಲಿನ ಎಸ್.ವ್ಹಿ.ವ್ಹಿ.ಸಂಸ್ಥೆಯ ಎಂ.ಎಚ್.ಎಂ.ಪ್ರೌಢಶಾಲೆಯಲ್ಲಿ ಸ್ವಚ್ಚತಾ ಆಂದೋಲನದಡಿ ಹಮ್ಮಿಕೊಂಡಿದ್ದ ಶಾಲಾವರಣ ಶುಚಿಗೊಳಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಚ್ಚತೆ ಇದ್ದಡೆ ನೆಮ್ಮದಿಯೊಂದಿಗೆ ಮನಸ್ಸು ಪ್ರಸನ್ನಗೊಳ್ಳುತ್ತದೆ. ಮನಪೂರ್ವಕವಾಗಿ ಸ್ವಚ್ಚತಾ ಸೇವಾಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸ್ವಚ್ಛ ಭಾರತ ಅನುಷ್ಠಾನಕ್ಕೆ ಕೈಜೋಡಿಸಬೇಕು. ಪರಿಸರ ಸ್ವಸ್ಥದಿಂದ ನಮ್ಮ ಉಸಿರಿನ ಸ್ವಾಸ್ಥ್ಯವೂ ಉತ್ತಮವಾಗಿ ಇರಿಸಿಕೊಳ್ಳಲು ಸಾಧ್ಯ. ಸ್ವಚ್ಚತೆ ಕಾಳಜಿಯಿದ್ದರೆ ಆರೋಗ್ಯಯುತ ಬದುಕು ನಮ್ಮದಾದೀತು ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ಮಾತನಾಡಿದರು.ಶಾಲಾವರಣದಲ್ಲಿನ ಕಸ, ಕಡ್ಡಿ, ಪ್ಲಾಸ್ಟಿಕ್ ಇತರೆ ಕಸಗಳನ್ನು ತಗೆಯುವದರ ಮೂಲಕ ಮೂಲಕ ಸ್ವಚ್ಚತಾ ದಿನ ಆಚರಿಸಲಾಯಿತು.ಶಿಕ್ಷಕರಾದ ಯು.ಎ.ಹಿರೇಮಠ, ಎಂ.ಎಚ್.ಬಳಬಟ್ಟಿ, ಮಹೇಶ ಗಾಳಪ್ಪಗೋಳ, ಜಗದೇವಿ ಕೆ, ಸಿದ್ದಮ್ಮ ಅಂಗಡಿ, ಶ್ವೇತಾ ಕೊಪ್ಪ ಇತರರು ಇದ್ದರು.
ಸ್ವಚ್ಚತಾ ಕಾರ್ಯದಲ್ಲಿ ಶಾಲಾ ಮಕ್ಕಳು ಸ್ವಯಂ ಪ್ರೇರಣೆಯಿಂದ ಕಸಗೂಡಿಸಿ ಶಾಲಾವರಣ ಶುಚಿಗೊಳಿಸಿದರು. ಎಂ.ಎಚ್.ಎಂ.ಆಂಗ್ಲ ಹಾಗೂ ಕನ್ನಡ ಪ್ರಾಥಮಿಕ ಶಾಲೆಯಲ್ಲೂ ಸ್ವಚ್ಚತಾ ಶ್ರಮದಾನ ಗುರುಮಾತೆಯರ ನೇತೃತ್ವದಲ್ಲಿ ಜರುಗಿದವು.
Subscribe to Updates
Get the latest creative news from FooBar about art, design and business.
ಸ್ವಸ್ಥ ಮನಸ್ಸಿದ್ದಲ್ಲಿ ಸ್ವಚ್ಛ ಪರಿಸರ ಸಾಧ್ಯ :ಗಿಡ್ಡಪ್ಪಗೋಳ
Related Posts
Add A Comment