Author: editor.udayarashmi@gmail.com

ಸತ್ತ ನಂತರದ ಪರಿಹಾರಕ್ಕಿಂತ ಜೀವ ಉಳಿಸುವ ಕ್ರಮವೇ ಸರ್ವ ಶ್ರೇಷ್ಠ ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ- ವಿವೇಕಾನಂದ ಎಚ್.ಕೆ, ಬೆಂಗಳೂರು ಪಟಾಕಿ ಸ್ಪೋಟದ ಘಟನೆಗಳು ಆಕಸ್ಮಿಕವಲ್ಲ ಅವು ಖಂಡಿತ ನಿರೀಕ್ಷಿತ. ಮದ್ದು ಗುಂಡುಗಳು ಸ್ಪೋಟಿಸುವುದು ಸಹಜ ಅಲ್ಲವೇ.‌ ಅದರಿಂದ ಆಗುವ ಹಾನಿಯೂ ಸ್ವಾಭಾವಿಕವಲ್ಲವೇ. ಹಾಗಾದರೆ ಅರಿವಿನ ಅಂಚಿನಲ್ಲಿನ‌ ದುರಂತ ತಡೆಯುವುದು ಸರ್ಕಾರದ ಸಹಜ ಜವಾಬ್ದಾರಿಯಲ್ಲವೇ..ಬಡ ಕೂಲಿ ಕಾರ್ಮಿಕರ ಜೀವ ಉಳಿಸಲು, ಅಂಗಡಿ ಮಾಲಿಕರ ಕುಟುಂಬ ಉಳಿಸಲು, ಪರಿಸರದ ಶುದ್ಧತೆ ಮತ್ತು ಸ್ವಚ್ಚತೆ ಉಳಿಸಲು ಪಟಾಕಿ ನಿಷೇಧಿಸಲೇಬೇಕು..ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ, ಹೊಸ ವರ್ಷ ಸೇರಿ ಎಲ್ಲಾ ಹಬ್ಬಗಳಿಗೂ, ರಾಜಕೀಯ ಧಾರ್ಮಿಕ ಕಾರ್ಯಕ್ರಮಗಳಿಗೂ ಒಟ್ಟಿನಲ್ಲಿ ಪಟಾಕಿ ಉತ್ಪಾದನೆಯನ್ನೇ ನಿಲ್ಲಿಸಬೇಕು. ಅದು ಮಾಡುತ್ತಿರುವ ಹಾನಿ ತುಂಬಾ ಭಯಂಕರವಾಗಿದೆ..ಇಡೀ ಪಟಾಕಿ ಉದ್ಯಮವನ್ನೇ ನಿಷೇಧಿಸಿ ಅದರಲ್ಲಿ ತೊಡಗಿಸಿಕೊಂಡಿದ್ದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ರಫ್ತು ಸಹ ನಿಷೇಧ ಮಾಡಬೇಕು..ಹಿಂದೆ ಪಟಾಕಿ ಒಂದು ಉತ್ತಮ, ಮನಸ್ಸಿಗೆ ಉಲ್ಲಾಸ ನೀಡುವ ಬೆಳಕಿನ ಆಚರಣೆಯಾಗಿತ್ತು. ಆ ವಿವಿಧ…

Read More

ವಿಜಯಪರ: ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳ ತೂಕ ಮತ್ತು ಅಳತೆಯಲ್ಲಿ ಆಗುತ್ತಿರುವ ಲೋಪವನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ವತಿಯಿಂದ ಸಹಾಯಕ ನಿಯಂತ್ರಕರು, ಕಾನೂನು ಮಾಪನಶಾಸ್ತ್ರ (ತೂಕ ಮತ್ತು ಅಳತೆ) ಕಚೇರಿ, ವಿಜಯಪುರ ಇವರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಪಡಿಸಲಾಯಿತು.ರಾಜ್ಯ ಸರ್ಕಾರದ ಸಕ್ಕರೆ ಇಲಾಖೆಯು ಪ್ರಸಕ್ತ ಸಾಲಿನ ಕಬ್ಬುನುರಿಸುವ ಸಕ್ಕರೆ ಹಂಗಾಮಿನ ಹೊಸ ಎಫ್ ಆರ್ ಪಿ ದರವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದೆ. ಯಾವ ಕಾರ್ಖಾನೆಗೆ ಎಷ್ಟು ದರ ಎಂದು ನಿಗದಿಪಡಿಸಿರುವ ಪಟ್ಟಿಯನ್ನು ನೀಡಿರುತ್ತದೆ. ಅದರಂತೆ ವಿಜಯಪುರ ಜಿಲ್ಲೆಯಲ್ಲಿ ಒಂಬತ್ತು ಸಕ್ಕರೆ ಕಾರ್ಖಾನೆಗಳು ಇರುತ್ತವೆ. ೧) ಇಂಡಿಯನ್ ಶುಗರ್ಸ್-೩೧೫೬, ೨) ಜಮಖಂಡಿ ಶುಗರ್ಸ್-೩೨೫೪, ೩)ಕೆಪಿಆರ್ ಶುಗರ್ಸ-೩೩೬೫, ೪) ಮನಾಲಿ ಶುಗರ್ಸ-೨೯೨೦, ೫) ನಂದಿ ಶುಗರ್ಸ-೩೪೫೪, ೬) ಸಂಗಮನಾಥ ಶುಗರ್ಸ್-೨೯೨೦, ೭) ಬಾಲಾಜಿ ಶುಗರ್-೩೩೭೪, ೮) ಬಸವೇಶ್ವರ ಶುಗರ್ಸ-೩೪೦೮ ಮತ್ತು ೯) ಭೀಮಾಶಂಕರ್ ಶುಗರ್ಸ-೩೨೨೧ ಈ ರೀತಿಯಾಗಿ ಎಪ್ ಆರ್ ಪಿ ದರವನ್ನು ನಿಗದಿಪಡಿಸಿ ರೈತಪರವಾದ ಒಳ್ಳೆಯ ಆದೇಶವನ್ನು…

Read More

೨ ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ | ಸಂಚಾರ ಅಸ್ತವ್ಯಸ್ತ | ಪರದಾಡಿದ ಪ್ರಯಾಣಿಕರು ತಿಕೋಟಾ: ನಾಡಿನಾದ್ಯಂತ ಕಳೆದ ೩ ತಿಂಗಳಿನಿಂದ ಮಳೆ ಬಾರದೇ ಬರಗಾಲದ ದವಡೆಗೆ ಸಿಲುಕಿರುವ ನಾಡಿನ ಅನ್ನದಾತರ ಸಂಕಷ್ಟಕ್ಕೆ ಧ್ವನಿಯಾಗಬೇಕಿರುವ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ೧೩ ತಾಲೂಕುಗಳ ಪೈಕಿ ತಿಕೋಟಾ ಹೋರತುಪಡಿಸಿರುವುದು ತುಂಬಾ ದುಃಖದ ಸಂಗತಿ. ಈ ಕೂಡಲೇ ತಿಕೋಟಾ ತಾಲೂಕನ್ನು ಸಂಪೂರ್ಣ ಬರಗಾಲ ಎಂದು ಘೋಷಣೆ ಮಾಡಿ ಪ್ರತಿ ಎಕರೆಗೆ ೫೦ ಸಾವಿರ ರೂ. ಪರಿಹಾರ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾದ್ಯಕ್ಷ ಚೂನ್ನಪ್ಪಾ ಪೂಜೇರಿ ಹೇಳಿದರು.ಬುಧವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಿಕೋಟಾ ತಾಲೂಕು ಬರಗಾಲ ಘೋಷಣೆ ಮಾಡಬೇಕೆಂದು ಆಗ್ರಹಿಸಿ ವಿವಿಧ ರೈತ ಸಂಘಗಳಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡಲಾಯಿತು.ರಾಜ್ಯ ಕಾರ್ಯಧ್ಯಕ್ಷ ರಾಜು ಪವಾರ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮಹಿಳಾ ಜಿಲ್ಲಾಧ್ಯಕ್ಷೆ ರೇಖಾ ಪಾಟೀಲ, ರಾಜ್ಯಾಧ್ಯಕ್ಷ ಮೋತಿರಾಮ ಲಮಾಣಿ,…

Read More

ವಿಜಯಪರ: ನೆಲೆ ಕಳೆದುಕೊಂಡು ರೈತರಿಗೆ ನೀರು ಕೊಡದೆ ಆಂಧ್ರ ರಾಜ್ಯಕ್ಕೆ ನೀರು ಮಾರಿಕೊಳ್ಳುವ ಹುನ್ನಾರವನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘ (ರಿ) ಜಿಲ್ಲಾ ಘಟಕ ವಿಜಯಪುರ ವತಿಯಿಂದ ಆರ್.ಬಿ. ತಿಮ್ಮಾಪೂರ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧ್ಯಕ್ಷರು ನೀರಾವರಿ ಸಲಹಾ ಸಮಿತಿ ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ರವರಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಬುಧವಾರ ಮನವಿ ಸಲ್ಲಿಸಲಾಯಿತು.ಈ ಕುರಿತು ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕೆ ನೆಲೆ ಕಳೆದುಕೊಂಡ ಅವಳಿ ಜಿಲ್ಲೆಯ ರೈತರಿಗೆ ರೈತರು ಕೇಳಿದ ಸಂದರ್ಭದಲ್ಲಿ ಕೃಷಿಗೆ ಸಮರ್ಪಕವಾಗಿ ನೀರು ಕೊಡುತ್ತಿಲ್ಲ.ಆ ಭಾಗದಲ್ಲಿ ರೈತರು ಜಮೀನು ಮನೆ ಕಳೆದುಕೊಂಡಿರುವುದಿಲ್ಲ. ಆದರೆ ದಿನನಿತ್ಯ ನೀರು ರೈತರು ಹರಿಸಲಾಗುತ್ತಿದೆ. ಶೇ.೬೦ ರಷ್ಟು ಭೂಮಿಯನ್ನು ನೀರಾವರಿಗೆ ಒಳಪಡಿಸುವ ಬೃಹತ್ ಕೃಷ್ಣಾ ಮೇಲ್ದಂಡೆ ಯೋಜನೆ ಇದಾಗಿದೆ. ಮೊದಲಿನಿಂದಲೂ ವಿಜಯಪುರ ಜಿಲ್ಲೆ ಬರಗಾಲ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇದನ್ನು ಕಳಚಬೇಕಾದರೆ…

Read More

ವಿಜಯಪುರ: ಜಿಲ್ಲೆಯ ನಾಗರಿಕರಿಗೆ ಒದಗಿಸಬೇಕಾದ ಸೇವೆಗಳು, ಸಕಾಲದ ಹಿನ್ನಲೆ ಉದ್ದೇಶ, ಸಕಾಲ ಕಾಯ್ದೆ ಅಧಿನಿಯಮ ಕುರಿತ ಸಂಪೂರ್ಣ ಮಾಹಿತಿ ಬಗ್ಗೆ ಅರಿವು ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಸಕಾಲ ಅರಿವು-ಹರಿವು ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ಜಿಲ್ಲೆಯಲ್ಲಿ ಸ್ಥಾಪಿತವಾದ ಗ್ರಾಮ್ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳು ಸದುಪಯೋಗವಾಗಬೇಕು. ಗ್ರಾಮ ಒನ್ ಕೇಂದ್ರ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಕೆಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ, ಸಂವಹನ ಹಾಗೂ ತಾಳ್ಮೆಯಿಂದ ಇದ್ದು, ಅತ್ಯಂತ ಸಮಯಪ್ರಜ್ಞೆ, ಪ್ರಾಮಾಣಿಕತೆ, ಶಿಸ್ತಿನಿಂದ ಕಾರ್ಯನಿರ್ವಹಿಸಿ, ಅಗತ್ಯವಿರುವ ಮಾಹಿತಿ ಒದಗಿಸಲು ಪ್ರಯತ್ನಿಸಬೇಕು. ಕಾನೂನಿನಲ್ಲಿರುವ ನಿಯಮಗಳನ್ನು ಪಾಲಿಸಿ, ತಮ್ಮ ಅಧಿಕಾರವನ್ನು ಗೌರವಿಸಿ, ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಲ್ಲಿರುವ ಸೂಚನೆಯ ಮಾರ್ಗದರ್ಶನದಂತೆ ಜಿಲ್ಲೆ ಹಾಗೂ ಗ್ರಾಮಗಳಲ್ಲಿರುವ ಎಲ್ಲ ಗ್ರಾಮ ಒನ್ ಕೇಂದ್ರಗಳು…

Read More

ರೈತರಿಗೆ ಸೌಜನ್ಯಕ್ಕೂ ಭೇಟಿ ಮಾಡದ ಸಿಎಂ | ರೈತರಿಗೆ ನೀಡುವ ಅನುದಾನಕ್ಕೆ ಕತ್ತರಿ | ೧೦ ವಾರದಲ್ಲಿ ಸರ್ಕಾರ ಪತನ! ಜೆಡಿಎಸ್ ಕೋರ್ ಕಮೀಟಿ ಸಭೆಯಲ್ಲಿ ನಾಯಕರ ಅಭಿಮತ ವಿಜಯಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತರಿಗಾಗಿ ಏನೂ ಮಾಡಿಲ್ಲ, ಬರಗಾಲ ಪರಿಸ್ಥಿತಿಯ ನೋವು ಎದುರಿಸುತ್ತಿರುವ ರೈತರಿಗೆ ಸೌಜನ್ಯಕ್ಕೂ ಭೇಟಿ ಮಾಡಿಲ್ಲ, ಅವರ ಜಮೀನುಗಳಿಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿಲ್ಲ ಎಂದು ಮಾಜಿ ಸಚಿವ ಜಿ.ಟಿ. ದೇವೆಗೌಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.ವಿಜಯಪುರದ ಕಿತ್ತೂರ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಬುಧವಾರ ನಡೆದ ಜೆಡಿಎಸ್ ಕೋರ್ ಕಮೀಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೈತಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತರಿಗಾಗಿ ಏನೂ ಮಾಡಿಲ್ಲ, ಒಂದೇ ಒಂದು ಗ್ಯಾರಂಟಿ ರೈತರಿಗಾಗಿ ಮೀಸಲಾಗಿ ಇದೆಯೇ? ಇನ್ನು ರೈತರಿಗೆ ನೀಡುವ ಅನುದಾನವನ್ನೇ ಕತ್ತರಿಸಿದ್ದಾರೆ. ರೈತಪರ ಎಂದು ಹೇಳುವುದು ಕೇವಲ ಅವರ ಮಾತಿಗೆ ಸೀಮಿತವಾಗಿದೆ ಹೊರತು ಕೃತಿಯಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.ಬಿಜೆಪಿಯನ್ನು ಶೇ.೪೦ ಕಮೀಷನ್…

Read More

ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದ ರೈತರು ಹಿರೆಮಸಳಿ ವಿದ್ಯುತ್ ಕಚೇರಿ ಎದುರು ನಿರಂತರ ವಿದ್ಯುತ್ ಪೂರೈಕೆ ಆಗ್ರಹಿಸಿ ಬುಧವಾರ ಪ್ರತಿಭಟನೆ ಮಾಡಿದರು.ಕರವೇ ಅಧ್ಯಕ್ಷ ಶಿವು ಮಲಕಗೊಂಡ ಮಾತನಾಡಿ, ಈ ಮೊದಲು ಹಗಲು ಹೊತ್ತಿನಲ್ಲಿ ಏಳು ಗಂಟೆ ನಿರಂತರ ವಿದ್ಯುತ್ ನೀಡುತ್ತಿದ್ದರು. ಈಗ ಹಗಲು ಹೊತ್ತು ೪ ಗಂಟೆ ಮತ್ತು ರಾತ್ರಿ ಹೊತ್ತು ೩ ಗಂಟೆ ವಿದ್ಯುತ್ ನೀಡುತ್ತಿದ್ದಾರೆ. ಅದೂ ಕೂಡ ನಿರಂತರವಾಗಿರುವದಿಲ್ಲ.ಬೆಳಗ್ಗೆ ೯ ಗಂಟೆಗೆ ಕೊಟ್ಟು ೧ ಗಂಟೆಗೆ ತೆಗೆಯುತ್ತಾರೆ. ಈ ಮಧ್ಯೆ ಹಲವಾರು ಬಾರಿ ವಿದ್ಯುತ್ ಕಟ್ ಮಾಡುತ್ತಾರೆ. ಹೀಗಾಗಿ ರೈತರು ಬೆಳೆಗಳಿಗೆ ನೀರು ಕೊಡಲು ಆಗುತ್ತಿಲ್ಲ ಎಂದರು.ಸಿದ್ದು ಕಲ್ಲೂರ, ನಬೀಲಾಲ ಸೌದಾಗರ ಮಾತನಾಡಿದರು.ಪ್ರತಿಭಟನೆಯಲ್ಲಿ ಗುರುರಾಜ ಲೋಣಿ, ರವಿ ರಾಯಜಿ, ಬಸವರಾಜ ಪಟ್ಟಣಶೆಟ್ಟಿ, ಅನೀಲ ಕಪಾಲಿ, ಮಲ್ಲನಗೌಡ ಪಾಟೀಲ, ಸಂಜು ಸೋಲಾಪುರ, ಸಂಜು ರಜಪೂತ, ನಬೀಲಾಲ ಜಮಾದಾರ, ಈರಪ್ಪ ಹಂಜಗಿ, ಕುಮಾರ ಭತಗುಣಕಿ ಮತ್ತಿತರಿದ್ದರು.ಜಿಲ್ಲೆಯ ಮತ್ತು ತಾಲೂಕಿನ ಅಧಿಕಾರಿಗಳು ಬರುವ ವರೆಗೆ ಪ್ರತಿಭಟನೆ ಮುಂದುವರೆಸುವದಾಗಿ ತಿಳಿಸಿದರು.ರೈತರು ಪ್ರತಿಭಟನಾ ಸ್ಥಳದ ಸಮೀಪವೇ…

Read More

ಇಂಡಿ: ಸರ್ಕಾರಿ ಶಾಲಾ ಮಕ್ಕಳಿಗೆ ಸೇರಬೇಕಿದ್ದ ಹಾಲಿನ ಪುಡಿಯನ್ನು ಅಕ್ರಮವಾಗಿ ಸಾಗಾಟ ಹಿನ್ನೆಲೆಯಲ್ಲಿ, ಗ್ರಾಮೀಣ ಠಾಣಾ ಸಿಪಿಐ ಎಮ್ ಎಮ್ ಡಪ್ಪಿನ ನೇತೃತ್ವದಲ್ಲಿ ಪೊಲೀಸರು ದಾಳಿಗೈದು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ಸುಮೀತ ಸಾತಪುತೆ, ನಿಶಾಂತ ಕಲಶೆಟ್ಟಿ, ದುಂಡಪ್ಪ ಗಂಗನಹಳ್ಳಿ ಬಂಧಿತ ಆರೋಪಿಗಳು. ಇನ್ನು ಆರೋಪಿಗಳಿಂದ 30 ಕೆಜಿಯ 66 ಪ್ಲಾಸ್ಟಿಕ್ ಬ್ಯಾಗ್, 20 ಕೆಜಿಯ ಒಂದು ಬ್ಯಾಗ್ ಹಾಗೂ ಒಂದು ಪಿಕ್ ಆಫ್ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಎಮ್ ಎಚ್ ಯರಗುದ್ರಿ ಇದ್ದರು.ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಜಯಪುರ: ಸರ್ಕಾರದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೊತ್ಸಾಹಕ ಸೊಸೈಟಿ ಬೆಂಗಳೂರು ವತಿಯಿಂದ ಡಿಎಸ್‌ಟಿ-ಪಿಹೆಚ್‌ಡಿ ಕಾರ್ಯಕ್ರಮದಡಿ ಶಿಷ್ಯವೇತನ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ೨೦೨೩-೨೪ನೇ ಸಾಲಿನಲ್ಲಿ ಶಿಷ್ಯವೇತನ ಪಡೆಯಲು ವಿಜ್ಞಾನ ಮತ್ತು ಇಂಜಿನೀಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ-ಸಂಸ್ಥೆ- ಕಾಲೇಜುಗಳಲ್ಲಿ ಪಿಹೆಚ್‌ಡಿ ಪದವಿಗೆ ಈಗಾಗಲೇ ನೋಂದಾಯಿರಾಗಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ : ೩೦-೧೦-೨೦೨೩ ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸುವ ಲಿಂಕ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ ಎಂದು ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸುವ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆಯನ್ನು ಅ.೧೩ ರಂದು ಸಂಜೆ ೪ ಗಂಟೆಗೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಒಂದನೇ ಮಹಡಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More