ವಿಜಯಪರ: ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳ ತೂಕ ಮತ್ತು ಅಳತೆಯಲ್ಲಿ ಆಗುತ್ತಿರುವ ಲೋಪವನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ವತಿಯಿಂದ ಸಹಾಯಕ ನಿಯಂತ್ರಕರು, ಕಾನೂನು ಮಾಪನಶಾಸ್ತ್ರ (ತೂಕ ಮತ್ತು ಅಳತೆ) ಕಚೇರಿ, ವಿಜಯಪುರ ಇವರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಪಡಿಸಲಾಯಿತು.
ರಾಜ್ಯ ಸರ್ಕಾರದ ಸಕ್ಕರೆ ಇಲಾಖೆಯು ಪ್ರಸಕ್ತ ಸಾಲಿನ ಕಬ್ಬುನುರಿಸುವ ಸಕ್ಕರೆ ಹಂಗಾಮಿನ ಹೊಸ ಎಫ್ ಆರ್ ಪಿ ದರವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದೆ. ಯಾವ ಕಾರ್ಖಾನೆಗೆ ಎಷ್ಟು ದರ ಎಂದು ನಿಗದಿಪಡಿಸಿರುವ ಪಟ್ಟಿಯನ್ನು ನೀಡಿರುತ್ತದೆ. ಅದರಂತೆ ವಿಜಯಪುರ ಜಿಲ್ಲೆಯಲ್ಲಿ ಒಂಬತ್ತು ಸಕ್ಕರೆ ಕಾರ್ಖಾನೆಗಳು ಇರುತ್ತವೆ. ೧) ಇಂಡಿಯನ್ ಶುಗರ್ಸ್-೩೧೫೬, ೨) ಜಮಖಂಡಿ ಶುಗರ್ಸ್-೩೨೫೪, ೩)ಕೆಪಿಆರ್ ಶುಗರ್ಸ-೩೩೬೫, ೪) ಮನಾಲಿ ಶುಗರ್ಸ-೨೯೨೦, ೫) ನಂದಿ ಶುಗರ್ಸ-೩೪೫೪, ೬) ಸಂಗಮನಾಥ ಶುಗರ್ಸ್-೨೯೨೦, ೭) ಬಾಲಾಜಿ ಶುಗರ್-೩೩೭೪, ೮) ಬಸವೇಶ್ವರ ಶುಗರ್ಸ-೩೪೦೮ ಮತ್ತು ೯) ಭೀಮಾಶಂಕರ್ ಶುಗರ್ಸ-೩೨೨೧ ಈ ರೀತಿಯಾಗಿ ಎಪ್ ಆರ್ ಪಿ ದರವನ್ನು ನಿಗದಿಪಡಿಸಿ ರೈತಪರವಾದ ಒಳ್ಳೆಯ ಆದೇಶವನ್ನು ನೀಡಿರುತ್ತದೆ. ಅಧಿಕಾರಿಗಳು ಭೇಟಿ ನೀಡಿದಾಗ ತೂಕ ಮಾಪನಗಳನ್ನು ಸರಿಪಡಿಸಿಕೊಳ್ಳುತ್ತಾರೆ ನಂತರ ಅದೇ ಚಾಳಿಯನ್ನು ಮುಂದುವರಿಸಿರುತ್ತಾರೆ. ಹಾಗಾಗಿ ರೈತರ ಹಿತದೃಷ್ಟಿಯಿಂದ ಶಾಶ್ವತವಾದ ಪರಿಹಾರವನ್ನು ಇಲಾಖೆಯು ಕೈಗೊಳ್ಳುವುದರ ಮೂಲಕ ರೈತ ಪರವಾದ ನಿಲುವನ್ನು ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ರಾಕೇಶ ಇಂಗಳಗಿ, ಹಮೀದ ಇನಾಮದಾರ, ಪ್ರವೀಣ ಕನಸೆ, ವಿಕ್ರಮ ವಾಗ್ಮೊರೆ, ಶ್ರೀಶೈಲ ಮಠ ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಸಕ್ಕರೆ ಕಾರ್ಖಾನೆಗಳಿಂದ ತೂಕದಲ್ಲಿ
ಲೋಪ: ಕ್ರಮಕ್ಕೆ ಕೆಆರೆಎಸ್ ಆಗ್ರಹ
Related Posts
Add A Comment

