ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ರವಿವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಜಿಲ್ಲೆಯಲ್ಲಿ ಬರಪೀಡಿತವಾದ ನಾನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಮೊದಲಿಗೆ ನಾಗಠಾಣ ಮತಕ್ಷೇತ್ರದ ಹಿಟ್ಟಿನಹಳ್ಳಿಗೆ ಭೇಟಿ ನೀಡಲಿರುವ ಅವರು ಹತ್ತಿ ಬೆಳೆ ವೀಕ್ಷಣೆ ನಡೆಸಲಿದ್ದಾರೆ. ನಂತರ ಬಸವನ ಬಾಗೇವಾಡಿ ಮತಕ್ಷೇತ್ರದ ಮನಗೂಳಿಗೆ ತೆರಳಿ ಕಬ್ಬು, ಹತ್ತಿ ಹಾಗೂ ಉಳ್ಳಾಗಡ್ಡೆ ಬೆಳೆ ವೀಕ್ಷಿಸಲಿದ್ದಾರೆ. ಬಳಿಕ ಯರನಾಳ ಗ್ರಾಮಕ್ಕೆ ತೆರಳಿ ಸೂರ್ಯಕಾಂತಿ ಬೆಳೆ ವೀಕ್ಷಿಸಲಿದ್ದಾರೆ. ಅಲ್ಲಿಂದ ಬಸವನ ಬಾಗೇವಾಡಿಗೆ ತೆರಳಿ ತೊಗರಿ, ಹೆಸರು ಹಾಗೂ ಉಳ್ಳಾಗಡ್ಡೆ ಬೆಳೆ ವೀಕ್ಷಿಸಲಿದ್ದಾರೆ.
ನಂತರ ದೇವರ ಹಿಪ್ಪರಗಿ ಮತಕ್ಷೇತ್ರದ ಹೂವಿನ ಹಿಪ್ಪರಗಿಗೆ ತೆರಳಿ ಹತ್ತಿ ಬೆಳೆ ವೀಕ್ಷಿಸಲಿದ್ದಾರೆ. ಬಳಿಕ ಮುದ್ದೇಬಿಹಾಳ ಮತಕ್ಷೇತ್ರದ ಕೊಣ್ಣೂರಿಗೆ ತೆರಳಿ ತೊಗರಿ ಮತ್ತು ಹತ್ತಿ ಬೆಳೆ ವೀಕ್ಷಣೆ ಮಾಡಲಿದ್ದಾರೆ. ಹೂವಿನ ಹಿಪ್ಪರಗಿ ಮೂಲಕ ದೇವರ ಹಿಪ್ಪರಗಿಗೆ ಆಗಮಿಸಲಿರುವ ಸಚಿವರು ಬೊಮ್ಮನಜೋಗಿ ಕ್ರಾಸ್ ಬಳಿ ಕಬ್ಬು ಬೆಳೆ ವೀಕ್ಷಿಸಲಿದ್ದಾರೆ.
ಅಲ್ಲಿಂದ ಸಿಂದಗಿ ಮತಕ್ಷೇತ್ರದ ಕನ್ನೊಳ್ಳಿಗೆ ತೆರಳಿ ಕಬ್ಬು ಹಾಗೂ ಹತ್ತಿ ಬೆಳೆ ವೀಕ್ಷಿಸಿ ನಾಗಠಾಣ ಮತಕ್ಷೇತ್ರದ ಮದಭಾವಿ ಗ್ರಾಮಕ್ಕೆ ಆಗಮಿಸಿ ಸೂರ್ಯಕಾಂತಿ ಬೆಳೆ ವೀಕ್ಷಿಸಲಿದ್ದಾರೆ ಎಂದು ಸಚಿವರ ಕಚೇರಿಯ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಿದ್ದಾರೆ.

