ವಿಜಯಪರ: ನೆಲೆ ಕಳೆದುಕೊಂಡು ರೈತರಿಗೆ ನೀರು ಕೊಡದೆ ಆಂಧ್ರ ರಾಜ್ಯಕ್ಕೆ ನೀರು ಮಾರಿಕೊಳ್ಳುವ ಹುನ್ನಾರವನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘ (ರಿ) ಜಿಲ್ಲಾ ಘಟಕ ವಿಜಯಪುರ ವತಿಯಿಂದ ಆರ್.ಬಿ. ತಿಮ್ಮಾಪೂರ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧ್ಯಕ್ಷರು ನೀರಾವರಿ ಸಲಹಾ ಸಮಿತಿ ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ರವರಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಬುಧವಾರ ಮನವಿ ಸಲ್ಲಿಸಲಾಯಿತು.
ಈ ಕುರಿತು ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕೆ ನೆಲೆ ಕಳೆದುಕೊಂಡ ಅವಳಿ ಜಿಲ್ಲೆಯ ರೈತರಿಗೆ ರೈತರು ಕೇಳಿದ ಸಂದರ್ಭದಲ್ಲಿ ಕೃಷಿಗೆ ಸಮರ್ಪಕವಾಗಿ ನೀರು ಕೊಡುತ್ತಿಲ್ಲ.ಆ ಭಾಗದಲ್ಲಿ ರೈತರು ಜಮೀನು ಮನೆ ಕಳೆದುಕೊಂಡಿರುವುದಿಲ್ಲ. ಆದರೆ ದಿನನಿತ್ಯ ನೀರು ರೈತರು ಹರಿಸಲಾಗುತ್ತಿದೆ. ಶೇ.೬೦ ರಷ್ಟು ಭೂಮಿಯನ್ನು ನೀರಾವರಿಗೆ ಒಳಪಡಿಸುವ ಬೃಹತ್ ಕೃಷ್ಣಾ ಮೇಲ್ದಂಡೆ ಯೋಜನೆ ಇದಾಗಿದೆ. ಮೊದಲಿನಿಂದಲೂ ವಿಜಯಪುರ ಜಿಲ್ಲೆ ಬರಗಾಲ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇದನ್ನು ಕಳಚಬೇಕಾದರೆ ಸಮಗ್ರ ನೀರಾವರಿಗೆ ಒಳಪಡಬೇಕು. ಇಂತಹ ಭೀಕರ ಬರಗಾಲ ಸಂದರ್ಭದಲ್ಲಿ ರೈತರಿಗೆ ನೀರು ಕೊಡದಿದ್ದರೆ ಆಣೆಕಟ್ಟು ನಿರ್ಮಿಸಿದ್ದು ಯಾವ ಪುರಷಾರ್ಥಕ್ಕೆ? ಈ ಸದ್ಯ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದು , ಒಟ್ಟು ನೀರಿನ ಸಂಗ್ರಹ ೧೧೫,೭೦೯ ಟಿ.ಎಂ.ಸಿ. ನೀರು ಸಂಗ್ರಹವಿದ್ದು , ಅದರಲ್ಲಿ ೧೭ , ಟಿ.ಎಂ.ಸಿ ನೀರು ಬಳಕೆಗೆ ನಿರ್ಬಂಧ ಹೊರತುಪಡಿಸಿದರೂ ೯೮.೦೮೯ ಟಿ.ಎಂ.ಸಿ. ನೀರು ಸಂಗ್ರಹವಿದೆ. ಈಗಲೂ ಜಲಾಶಯಕ್ಕೆ ೨೩೭೧ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಇರುವ ಎಲ್ಲ ಕೆರೆಗಳನ್ನು ಭರ್ತಿ ಮಾಡಲು ಕೇವಲ ಒಂದರಿಂದ ಒಂದೂವರೆ ಟಿ.ಎಂ.ಸಿ. ನೀರು ಸಾಕಾಗುತ್ತದೆ. ಬೆಳೆಗಳಿಗೆ ಒಳಗೊಂಡಂತೆ ಎಲ್ಲ ಕೂಡಿ ೩ ಟಿ.ಎಂ.ಸಿ. ನೀರು ಆದರೆ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಯಾವುದೇ ಕುಂಟುನೆಪ ಹೇಳದೆ ಸರಾಗವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಜಮೀನು ಕಳೆದುಕೊಂಡ ರೈತರಿಗೆ ನೀರು ಕೇಳಿದಾಗ ಯಾವುದೇ ಹಂತಗಳ ನೆಪ ಹೇಳದೆ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕೆಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ವಿಠ್ಠಲಗೌಡ ಜೆ. ಬಿರಾದಾರ, ರ‍್ಯಾವಪ್ಪಗೌಡ ಬಿ.ಪೋಲೇಶಿ, ಮಲಿಗೆಪ್ಪ ಮ. ಸಾಸನೂರ, ಲಾಲಸಾಬ ಮ. ಹಳ್ಳೂರ, ಶಿದ್ದಲಿಂಗಪ್ಪ ಮ. ಬಿರಾದಾರ, ಚನ್ನಬಸಪ್ಪ ಸಿಂದೂರ, ರಾಜೇಸಾಬ ನಾಟೀಕಾರ ಇನ್ನಿತರರು ಉಪಸ್ಥಿತರಿದ್ದರು.
Related Posts
Add A Comment