ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದ ರೈತರು ಹಿರೆಮಸಳಿ ವಿದ್ಯುತ್ ಕಚೇರಿ ಎದುರು ನಿರಂತರ ವಿದ್ಯುತ್ ಪೂರೈಕೆ ಆಗ್ರಹಿಸಿ ಬುಧವಾರ ಪ್ರತಿಭಟನೆ ಮಾಡಿದರು.
ಕರವೇ ಅಧ್ಯಕ್ಷ ಶಿವು ಮಲಕಗೊಂಡ ಮಾತನಾಡಿ, ಈ ಮೊದಲು ಹಗಲು ಹೊತ್ತಿನಲ್ಲಿ ಏಳು ಗಂಟೆ ನಿರಂತರ ವಿದ್ಯುತ್ ನೀಡುತ್ತಿದ್ದರು. ಈಗ ಹಗಲು ಹೊತ್ತು ೪ ಗಂಟೆ ಮತ್ತು ರಾತ್ರಿ ಹೊತ್ತು ೩ ಗಂಟೆ ವಿದ್ಯುತ್ ನೀಡುತ್ತಿದ್ದಾರೆ. ಅದೂ ಕೂಡ ನಿರಂತರವಾಗಿರುವದಿಲ್ಲ.
ಬೆಳಗ್ಗೆ ೯ ಗಂಟೆಗೆ ಕೊಟ್ಟು ೧ ಗಂಟೆಗೆ ತೆಗೆಯುತ್ತಾರೆ. ಈ ಮಧ್ಯೆ ಹಲವಾರು ಬಾರಿ ವಿದ್ಯುತ್ ಕಟ್ ಮಾಡುತ್ತಾರೆ. ಹೀಗಾಗಿ ರೈತರು ಬೆಳೆಗಳಿಗೆ ನೀರು ಕೊಡಲು ಆಗುತ್ತಿಲ್ಲ ಎಂದರು.
ಸಿದ್ದು ಕಲ್ಲೂರ, ನಬೀಲಾಲ ಸೌದಾಗರ ಮಾತನಾಡಿದರು.
ಪ್ರತಿಭಟನೆಯಲ್ಲಿ ಗುರುರಾಜ ಲೋಣಿ, ರವಿ ರಾಯಜಿ, ಬಸವರಾಜ ಪಟ್ಟಣಶೆಟ್ಟಿ, ಅನೀಲ ಕಪಾಲಿ, ಮಲ್ಲನಗೌಡ ಪಾಟೀಲ, ಸಂಜು ಸೋಲಾಪುರ, ಸಂಜು ರಜಪೂತ, ನಬೀಲಾಲ ಜಮಾದಾರ, ಈರಪ್ಪ ಹಂಜಗಿ, ಕುಮಾರ ಭತಗುಣಕಿ ಮತ್ತಿತರಿದ್ದರು.
ಜಿಲ್ಲೆಯ ಮತ್ತು ತಾಲೂಕಿನ ಅಧಿಕಾರಿಗಳು ಬರುವ ವರೆಗೆ ಪ್ರತಿಭಟನೆ ಮುಂದುವರೆಸುವದಾಗಿ ತಿಳಿಸಿದರು.
ರೈತರು ಪ್ರತಿಭಟನಾ ಸ್ಥಳದ ಸಮೀಪವೇ ಮಸಾಲಾ ಅನ್ನ ಮಾಡಿ ಊಟ ಮಾಡಿದರು.
Related Posts
Add A Comment