Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಬಹು ಭಾಷಾ ಕಥಾ ಸಾಹಿತ್ಯ ಪರಂಪರೆಯ ಮತ್ತು ವಿವಿಧ ಭಾಷೆಯ ಕಥಾ ಸಾಹಿತ್ಯ ವೈಭವವನ್ನು ಅರಿತುಕೊಳ್ಳುವುದು ಮುಖ್ಯ. ಅದಕ್ಕಾಗಿ ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಮೇ.೧೨ ರಂದು ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಐ.ಕ್ಯೂ.ಎ.ಸಿ ಸಂಯೋಜಕ ಬಿ ಎಸ್ ಬೆಳಗಲಿ ಹೇಳಿದರು.ಗುರುವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು ವೈವಿದ್ಯೆಮಯ ಭಾಷೆ, ಸಂಸ್ಕೃತಿ, ಸಾಹಿತ್ಯ ಪರಂಪರೆಯ ನೆಲೆಯಾಗಿದೆ. ವಿಶ್ವದ ಪ್ರತಿಯೊಂದು ಭಾಷೆಯು ತನ್ನದೆ ಆದ ವೈಶಿಷ್ಟತೆಗಳನ್ನು ಹೊಂದಿದೆ. ಈ ಪರಂಪರೆ ಭಾರತ ದೇಶದ ಏಕತೆಗಾಗಿ ಸಂದೇಶ ಸಾರುತ್ತದೆ ಎಂದರು.ಕಥೆಗಳು ಕೇವಲ ಮನರಂಜನೆಯ ಸಾಧನವಲ್ಲ, ಸಮಾಜದ ದರ್ಪಣವಾಗಿಯೂ, ಚಿಂತನೆಗೆ ದಾರಿಯಾಗಿಯೂ ಕಾರ್ಯನಿರ್ವಹಿಸುತ್ತವೆ. ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಲೇಖನ ಮಂಡಿಸುವವರು ಆದ್ಯಯನ ಕೇಂದ್ರಿಕರಿಸಿ ಸಂಶೋಧನಾ ಲೇಖನಗಳನ್ನು ರಚಿಸಬಹುದು. ವಿಷಯಗಳ ಜೊತೆಯಲ್ಲಿ ನಿಮ್ಮ ಆದ್ಯಯನಕ್ಕೆ ಲಭಿಸುವ ಕಥಾಸಾಹಿತ್ಯದ ಚಿಂತನೆಗಳ ಬರಹಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗುವದು. ಕಾರಣ ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ…

Read More

ವೇತನ ಬಿಡುಗಡೆಗೆ ಆಗ್ರಹಿಸಿ ನೌಕರರ ಸಂಘದಿಂದ ಬಿಇಓ ಅವರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಂಡ ವಿಜಯಪುರ ಗ್ರಾಮೀಣ ಶೈಕ್ಷಣಿಕ ತಾಲ್ಲೂಕಿನಲ್ಲಿ ಎಸ್ಎಸ್ಎ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಮಾರ್ಚ್ ಹಾಗೂ ಏಪ್ರೀಲ್ ತಿಂಗಳ ವೇತನ ಆಗದೇ ಇರುವದರಿಂದ ಸಂಕಷ್ಟ ಅನುಭವಿಸುತ್ತಿದ್ದು, ತಿಕೋಟಾ ತಾಲ್ಲೂಕ ನೌಕರರ ಸಂಘದ ಅಧ್ಯಕ್ಷ ಚನ್ನಯ್ಯ ಮಠಪತಿ ಅವರ ತಂಡದಿಂದ ವೇತನ ಬಿಡುಗಡೆಗೆ ಆಗ್ರಹಿಸಿ ಬಿಇಓ ಬಸವರಾಜ ತಳವಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಮಠಪತಿ ಎರಡು ತಿಂಗಳಿನಿಂದ ವೇತನ ಇಲ್ಲದೇ‌ ಶಿಕ್ಷಕರು ಪರದಾಡುವಂತಾಗಿದೆ. ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ, ಸಾಲದ ಕಂತುಗಳು, ಸಂಸಾರಿಕ ಖರ್ಚು ನಿಭಾಯಿಸಲಿಕ್ಕೆ ಆಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಯಾವುದೇ ತಾಂತ್ರಿಕ ಸಮಸ್ಯೆ ಅಥವಾ ಬಜೆಟ್ ಸಮಸ್ಯೇ ಏನೇ ಇದ್ದರು ಈ ವಾರದೊಳಗೆ ವೇತನ ಪಾವತಿ ಮಾಡಬೇಕು. ಇಲ್ಲದಿದ್ದರೆ ಕಛೇರಿ ಮುಂದೆ ನೌಕರರ ಸಂಘದ ವತಿಯಿಂದ ವೇತನಕ್ಕಾಗಿ ಪ್ರತಿಭಟನೆಗೆ ಧರಣಿ ಕೂಡಲಾಗುವುದು ಎಂದು ಹೇಳಿದರು.ಜಿಲ್ಲಾ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ…

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಹಾಗೂ ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ್ದ ಪ್ರಹ್ಲಾದ್ ಕುಳಿಲಿ ಅವರು, ಕೆಂಗೇರಿಯ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ಹಿರಿಯ ಪತ್ರಕರ್ತರಾದ ಪ್ರಹ್ಲಾದ ಕುಳಲಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ) ಸಂತಾಪ ವ್ಯಕ್ತಪಡಿಸಿದೆ.ಕ್ರೀಯಾಶೀಲ ಪತ್ರಕರ್ತರಾಗಿದ್ದ ಅವರು, ವರದಿಗಾರರ ಕೂಟ ಕಟ್ಟುವಲ್ಲಿಯೂ ಕ್ರೀಯಾಶೀಲವಾಗಿ ಕೆಲಸ ಮಾಡಿದ್ದ ಅವರನ್ನು ಕೆಯುಡಬ್ಲ್ಯೂಜೆ ಮನೆಯಂಗಳದಲ್ಲಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿತ್ತು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸ್ಮರಿಸಿದ್ದಾರೆ.ಮೃತರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ.ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಗಡೂರು ಪ್ರಾರ್ಥಿಸಿದ್ದಾರೆ.

Read More

ಕೈಗಾರಿಕೆ,‌ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾಂಗ್ರೆಸ್ ಪಕ್ಷವೆಂಬುದು ಅನುಭವ ಮಂಟಪ. ಈ ಅನುಭವ ಮಂಟಪದಲ್ಲಿ ಎಲ್ಲ ಜಾತಿ-ಜನಾಂಗಗಳಿಗೆ ಸಮಸ್ಥಾನ. ಆ ಸಾಮಾಜಿಕ ಹಿನ್ನಲೆಯನ್ನು ಅನುಸರಿಸಿ ಬಹಳಷ್ಟು ಹಿಂದುಳಿದ ಸಮಾಜಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಕಾರ್ಯ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಗಳು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬರಲಿವೆ ಎಂದು ಕೈಗಾರಿಕೆ,‌ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಗುರುವಾರ ವಿಜಯಪುರ ನಗರದ ಗೃಹ ಕಚೇರಿಯಲ್ಲಿ ತಿಕೋಟಾ ಪಟ್ಟಣದ ತಳವಾರ ಸಮುದಾಯದ ನಾನಾ ಮುಖಂಡರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡು ಅವರು ಮಾತನಾಡಿದರು.ಮತಕ್ಷೇತ್ರದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನೆಗಳು ಸಕಲ ಸಮುದಾಯಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ತಿಕೋಟಾ ತಳವಾರ ಸಮುದಾಯದ ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಇಂದು ರಾಜಕೀಯ ಚಿತ್ರಣವೇ ಬದಲಾಗಿದೆ. ನುಡಿದಂತೆ ನಡೆಯುವ ನಮ್ಮ ಗ್ಯಾರಂಟಿ…

Read More

ಇಂದು (ಮೇ ೮, ಶುಕ್ರವಾರ) “ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಶ್ರೇಷ್ಠ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರು, “ಐiಜಿe’s mosಣ ಠಿeಡಿsisಣeಟಿಣ ಚಿಟಿಜ uಡಿgeಟಿಣ quesಣioಟಿ is, “Whಚಿಣ ಚಿಡಿe ಥಿou ಜoiಟಿg ಜಿoಡಿ oಣheಡಿs?” ಅದನ್ನೇ ಪುರಂದರ ದಾಸರು “ಮಾನವ ಜನ್ಮ ದೊಡ್ಡದು ಅದನ್ನು ಹಾನಿ ಮಾಡಿಕೊಳ್ಳಬೇಡ, ಬದುಕಿರುವಷ್ಟು ಕಾಲದಲ್ಲಿ ಸದಾ ಸಹಾಯ ಹಸ್ತ ಬಂದವರಿಗೆ ನಿಸ್ವಾರ್ಥದಿಂದ ಮಾನವೀಯತೆ ಮೆರೆದು ಸೇವೆ ಮಾಡು ಅಂದಾಗ ನಿಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿರುವುದು ನಿಜಕ್ಕೂ ಸತ್ಯವಾದ ಮಾತು. ಪ್ರವಾಹ, ಅಫಘಾತ ಮತ್ತು ಇನ್ನಿತರ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ಮಾಡುತ್ತಿರುವ ಜೀವಿಗಳನ್ನು ರಕ್ಷಿಸಲು ಮತ್ತು ಅಗತ್ಯವಾದಲ್ಲಿ ರಕ್ತದಾನ ಮಾಡುವದರ ಮೂಲಕ ಅವರನ್ನು ಪ್ರಾಣಾಪಾಯದಿಂದ ಸಂರಕ್ಷಿಸುವುದು ರೆಡ್ ಕ್ರಾಸ್ ಘಟಕದ ಸ್ವಯಂ ಸೇವಕರ ಆದ್ಯ ಕರ್ತವ್ಯವಾಗಿದೆ. ಎಲ್ಲ ದಾನಗಳಲ್ಲಿ ಅತಿ ಶ್ರೇಷ್ಠವಾದ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಗ್ರಾಮೀಣ ಬಡಜನರಿಗೆ ಉದ್ಯೋಗ ಭದ್ರತೆ ಒದಗಿಸುವ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವಂತರಾಯಗೌಡ ಬಿರಾದಾರ ಅವರು ಅಧಿಕಾರಿಗಳಿಗೆ ಸೂಚಿಸಿದರು.ತಿಕೋಟಾ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಉದ್ಯೋಗ ಮಾಡಿದ ಕೂಲಿಕಾರರ ವೇತನ ಪಾವತಿಯಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು, ಪ್ರತಿ ಹಂತದಲ್ಲೂ ಪಾರದರ್ಶಕತೆ ಕಾಪಾಡಬೇಕು. ಎಂಐಎಸ್‌ನಲ್ಲಿ ಸಮಯಕ್ಕೆ ಸರಿಯಾಗಿ ಮಾಹಿತಿ ದಾಖಲಿಸಬೇಕು ಎಂದು ಸೂಚಿಸಿದರು.ಮನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿವಾರು ಗುರಿ ನಿಗದಿಪಡಿಸಿರುವ ಮಾನವ ದಿನಗಳ ಸೃಜನೆ ಮಾಡಿ ಗುರಿ ಸಾಧಿಸಲು ಎಲ್ಲರೂ ಕ್ರಮ ವಹಿಸಬೇಕು. ನರೇಗಾ ಕೆಲಸದ ಬೇಡಿಕೆ ಸಲ್ಲಿಸಿದ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಕಾಲಮಿತಿಯೊಳಗೆ ಉದ್ಯೋಗ ಒದಗಿಸಬೇಕು, ಕಾಮಗಾರಿಗಳನ್ನು ನಿಗದಿತ ಸಮಯದೊಳಗಾಗಿ ಪೂರ್ಣಗೊಳಿಸುವತ್ತ ವಿಶೇಷ ಗಮನ ಹರಿಸಬೇಕುಈಗಾಗಲೇ ಅನುಮೋದನೆಗೊಂಡ ಪ್ರಗತಿ ಹಂತದ ಕೂಲಿ ಆಧಾರಿತ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ…

Read More

ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ಪಾಂಚಾಲಿ ಕುಂತಿಯ ಸೊಸೆ.ಮಥುರೆಯ ಶೂರಸೇನನ ಮಗಳು ‘ಪೃಥಾ’, ಕುಂತಿಸಾಮ್ರಾಜ್ಯದ ಕುಂತಿಭೋಜನ ಮಗಳು ‘ಕುಂತಿ’ಯಾದಳು..ಪಾಂಚಾಲ ದೇಶದ ದ್ರುಪದ ಮಹಾರಾಜನ ಮಗಳು ದ್ರೌಪದಿ, ಹಸ್ತಿನಾಪುರದ ಪಾಂಡವರ ಪತ್ನಿ ‘ಪಾಂಚಾಲಿ’ಯಾದಳು..ಯಾವ ಸುಖಕ್ಕೆ.. ಯಾರ ಕೋಪಕ್ಕೆ.. ಯಾವುದರ ಆರಂಭಕ್ಕೆ?ಹಿಂದಿನ ಜನ್ಮದಲ್ಲಿ ನಳಯಾನಿಯಾಗಿದ್ದ ದ್ರೌಪದಿ ಶಿವನನ್ನು ಕುರಿತು ತಪಸ್ಸು ಮಾಡಿ, ಎಲ್ಲಾ ಉತ್ತಮ ಗುಣಗಳು ಅಥವಾ ಕೌಶಲ್ಯಗಳು ಇರುವವ ತನ್ನ ಪತಿಯಾಗಬೇಕು ಎಂಬ ವರಬೇಡಿದ್ದರ ಫಲವಾಗಿ ‘ಎಲ್ಲಾ ಹಣ್ಣುಗಳು ಒಂದೇ ಮರದಲ್ಲಿ ಬಿಡುವುದಿಲ್ಲ’ ಎಂಬ ಪ್ರಾಕೃತಿಕ ಸತ್ಯದಂತೆ, ಎಲ್ಲಾ ಉತ್ತಮ ಗುಣಗಳು ಒಬ್ಬನೇ ಪುರುಷನಲ್ಲಿ ಕ್ರೋಡೀಕೃತವಾಗಿರುವುದಿಲ್ಲವಾದ್ದರಿಂದ, ಉತ್ತಮ ಗುಣಗಳ ಮೊತ್ತವಾದ ಪಂಚಪಾಂಡವರು ಕೃಷ್ಣೆಗೆ(ಕೃಷ್ಣನಂತೆ ಕಪ್ಪಗಿದ್ದ ದ್ರೌಪದಿಗೆ ದೇವತೆಗಳು ‘ಕೃಷ್ಣೆ’ ಎಂದು ಕರೆದರು) ಪತಿಗಳಾದರು.ದೇವಿ ಶ್ಯಾಮಲಾ (ಧರ್ಮನ ಪತ್ನಿ), ಭಾರತೀದೇವಿ (ವಾಯುವಿನ ಪತ್ನಿ), ಸಚಿ ದೇವಿ (ಇಂದ್ರನ ಪತ್ನಿ), ಉಷಾ ದೇವಿ(ಅಶ್ವಿನ್‌ ನ ಪತ್ನಿ)ಪಾರ್ವತಿ (ಶಿವನ ಪತ್ನಿ) ಇಷ್ಟೂ ಜನ ಪಂಚಕನ್ಯೆಯರ ಸಮ್ಮಿಲನವಾದ ದೇವಿ ಶಿವನನ್ನು ಕುರಿತು ತಪಸ್ಸು ಮಾಡಿ ಉತ್ತಮ…

Read More

ನಾಯಿ ಕಡಿತಕ್ಕೊಳಗಾದ ಬಾಲಕನನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ ಸಂ ೩೫ರ ಫೇವರಚಂದ ಕಾಲೊನಿಯ ರಾಜಕುಮಾರ ಲೇಔಟ್ ನಲ್ಲಿ ನಾಯಿ ಕಡಿತಕ್ಕೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವನ್ನು ಭೇಟಿ ಮಾಡಿ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಮಗುವಿನ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸಲಹೆ ಮಾಡಿದರು.ರಾಜಕುಮಾರ ಲೇಔಟ್ ನಿವಾಸಿಯಾಗಿರುವ ೩ ವರ್ಷದ ವಿರಾಜ್ ಸಂತೋಷ ಬಿರಾದಾರ ಮಂಗಳವಾರ ನಾಯಿ ಕಡಿತಕ್ಕೊಳಗಾಗಿದ್ದರಿಂದ ಆತನನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸುದ್ದಿ ತಿಳಿದ ಜಿಲ್ಲಾಧಿಕಾರಿಗಳು, ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ನಾಯಿ ಕಡಿತಕ್ಕೊಳಗಾದ ಮಗುವಿನ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಮಗು ಔಷಧಿಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಂಡು ಮಾತನಾಡುತ್ತಿದ್ದಾನೆ. ಹಾಗಾಗಿ ಪೋಷಕರ ಆತಂಕಕ್ಕೊಳಗಾಗಬೇಕಿಲ್ಲ ಎಂದರು.ಜೊತೆಗೆ ಬಾಲಕನಿಗೆ ರೇಬೀಸ್ ವಿರೋಧಿ ಲಸಿಕೆಗಳನ್ನು ನೀಡಲಾಗುತ್ತದೆ. ಜಿಲ್ಲಾಸ್ಪತ್ರೆಯಿಂದಲೂ ಸೂಕ್ತ ಲಸಿಕೆಯನ್ನು ಪಡೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಇದೇ ವೇಳೆ ತಿಳಿಸಿದರು.ಪಾಲಿಕೆಯ…

Read More

ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹವಾಮಾನ ಬದಲಾವಣೆ ತಡೆಗಟ್ಟುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ, ಕೆಪಿಐಗಳ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯತಿನಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಸಿ.ಬಿ. ಕುಂಬಾರ ಹೇಳಿದರು.ಎಂಪ್ರಿ ಸಂಸ್ಥೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕುರಿತು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರಿಯಾ ಯೋಜನೆ (ಏSಂPಅಅ) ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಂಪ್ರಿ ಸಂಸ್ಥೆಯ ಸಂಶೋಧನಾ ವಿಜ್ಞಾನಿಗಳಾದ ಡಾ. ಪವಿತ್ರಾ ಪಿ. ನಾಯಕ್ ಅವರು ಮಾತನಾಡಿ, ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು.ಹವಾಮಾನ ಕಾರ್ಯನೀತಿ, ಕಾರ್ಯತಂತ್ರಗಳು, ವಿವಿಧ ಇಲಾಖೆಗಳ ಪಾತ್ರ ಹಾಗೂ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳ ಪರಿಣಾಮಗಳು ಮತ್ತು ಜಿಲ್ಲಾಸ್ಥರದ ದತ್ತಾಂಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ಅರಣ್ಯ ಇಲಾಖೆಯ…

Read More

ದಿನದಿಂದ ದಿನಕ್ಕೆ ಏರುತ್ತಲೇ ಇರುವ ಸೂರ್ಯನ ತಾಪಮಾನ | ಕಸುಬು ನಂಬಿದ ಕುಟುಂಬಗಳ ಮೊಗದಲ್ಲಿ ಮಂದಹಾಸ ಉದಯರಶ್ಮಿ ದಿನಪತ್ರಿಕೆ ವರದಿ: ರತ್ನಾಂಜಲಿ ವಾಲಿಕಾರವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೂರ್ಯನ ತಾಪಮಾನ ಏರುತ್ತಲೇ ಇದೆ. ಬಿರು ಬೇಸಿಗೆಯ ದಾಹ ನೀಗಿಸಿಕೊಳ್ಳಲು ಸಾರ್ವಜನಿಕರು ಈಗ ನೈಸರ್ಗಿಕವಾದ ‘ಮಣ್ಣಿನ ಮಡಿಕೆ’ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಮಣ್ಣಿನ ಮಡಿಕೆಗಳ ವ್ಯಾಪಾರ ವಹಿವಾಟು ಜೋರಾಗಿದ್ದು, ಈ ಕಸುಬು ನಂಬಿದ ಕುಟುಂಬಗಳ ಮೊಗದಲ್ಲಿ ಮಂದಹಾಸ ಮೂಡಿದೆ.ಆರೋಗ್ಯಕ್ಕೆ ಮಡಿಕೆ ನೀರು ಅಮೃತ. ಮಣ್ಣಿನ ಮಡಿಕೆಯಲ್ಲಿನ ಸಣ್ಣ ರಂಧ್ರಗಳ ಮೂಲಕ ನೀರು ನಿಧಾನವಾಗಿ ಆವಿಯಾಗುವುದರಿಂದ ನೀರು ಸ್ವಾಭಾವಿಕವಾಗಿ ತಂಪಾಗುತ್ತದೆ. ಇದು ದೇಹಕ್ಕೆ ಸಮತೋಲಿತ ತಂಪನ್ನು ನೀಡುತ್ತದೆ. ಈ ನೈಸರ್ಗಿಕ ಗುಣವೇ ಜನರನ್ನು ಮಡಿಕೆಯತ್ತ ಆಕರ್ಷಿಸುತ್ತಿದೆ.ಕುಲಕಸುಬಿಗೆ ಆರ್ಥಿಕ ಬಲ: ಮಣ್ಣಿನ ಮಡಿಕೆಗಳ ಬೇಡಿಕೆ ಕುಸಿದು ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಈ ಬೇಸಿಗೆ ವರದಾನವಾಗಿದೆ. ಕೆಲವು ಕಡೆಗಳಲ್ಲಿ ದಿನಕ್ಕೆ ನೂರಾರು ಮಡಿಕೆಗಳು ಮಾರಾಟವಾಗುತ್ತಿದ್ದು, ಗ್ರಾಮೀಣ ಭಾಗದ ಗುಡಿ ಕೈಗಾರಿಕೆಗೆ ಹೊಸ ಚೈತನ್ಯ ಬಂದಿದೆ.ಪರಿಸರ ಸ್ನೇಹಿ ಆಯ್ಕೆ:…

Read More