ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ವಿದ್ಯಾಲಯದ ಮೂಲಭೂತ ಸೌಲಭ್ಯಗಳು, ಅನುದಾನ ಬಳಕೆ, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ದಿಸಲು ಕಾಲೇಜು ಅಭಿವೃದ್ದಿ ಸಮೀತಿಯ ಪಾತ್ರವೂ ಮಹತ್ವದ್ದಾಗಿದ್ದು. ಕ್ರಿಯಾಶೀಲ ಸಮೀತಿಯಿಂದ ಅಭಿವೃದ್ಧಿ ಸಾಧ್ಯವೆಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ ಹೇಳಿದರು.
ಗ್ರಾಮದ ಸರಕಾರಿ ಪದವಿಪೂರ್ವ ವಿದ್ಯಾಲಯದಲ್ಲಿ ನಡೆದ ಪಾಲಕರ ಸಭೆಯಲ್ಲಿ ಕಾಲೇಜು ಅಭಿವೃದ್ದಿ ಸಮೀತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರ ಆಯ್ಕೆ ಪ್ರಕ್ರಿಯೆ ಬಳಿಕ ಮಾತನಾಡಿದ ಅವರು ವಿದ್ಯಾಲಯದ ಅಗತ್ಯಗಳಿಗೆ ಗ್ರಾಮದ ಪ್ರತಿಯೊಬ್ಬರು ಸ್ಪಂದನೆ ನಿರಂತರವಾಗಿರಲಿದ್ದು ಪಧಾದಿಕಾರಿಗಳು ನಿರಂತರ ಸಂಪರ್ಕದಿಂದ ವಿದ್ಯಾಲಯಕ್ಕೆ ಯಾವುದೇ ಸಮಸ್ಯೆ ಬಾರದಂತೆ ಸ್ಪಂದಿಸಬೇಕೆಂದು ಸಲಹೆ ನೀಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ. ಕಾಳಪ್ಪ ಬಡಿಗೇರ ಮಾತನಾಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಬೀರಪ್ಪ ಹಳೆಮನಿ, ಶಂಕರಗೌಡ ಬ. ಪಾಟೀಲ, ರಾಚಯ್ಯ ಮಠಮತಿ, ನಿಂಗಣ್ಣ ಪೂಜಾರಿ, ಪ್ರಭು ಮುಧೋಳ, ಪ್ರಕಾಶ ಪಾಟೀಲ, ಪಿರಸಾಬ ನದಾಫ, ಪ್ರಾಶುಪಾಲೆ ಶ್ರೀಮತಿ ಎಸ್.ಕೆ. ರಾಠೋಡ ಉಪಸ್ಥಿತರಿದ್ದರು.
ಕಾಲೇಜು ಅಭಿವೃದ್ದಿ ಸಮೀತಿಗೆ ನೂತನ ಅಧ್ಯಕ್ಷರಾಗಿ ಅವ್ವನಪ್ಪ ಮುಗಳಖೋಡ ಉಪಾಧ್ಯಕ್ಷರಾಗಿ ಬಸಪ್ಪ ಮಮದಾಪೂರ, ಗಟಿಗೆಪ್ಪ ಜಂಗನೂರ, ನಾಗಪ್ಪ ಆಲಕನೂರ, ಬಸವರಾಜ ಕವಟಗೊಪ್ಪ, ತುಕಾರಾಮ ದೊಡಮನಿ, ಶ್ರೀಮತಿ ಲಕ್ಷಿö್ಮ, ಅಗ್ರಾಣೆಪ್ಪ ಬಿಳ್ಳೂರ, ಹಿರಿಯ ಉಪನ್ಯಾಸಕ ಬಿ.ಬಿ. ಕುದರಿಮನಿ, ಹಾಗೂ ಪ್ರಾಶುಪಾಲೆ ಶ್ರೀಮತಿ ಎಸ್.ಕೆ. ರಾಠೋಡರವರು ಸಮೀತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

