Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕರುನಾಡು ಜನತೆಗೆ ವರವಾದ ಪಂಚ ಗ್ಯಾರಂಟಿ ಯೋಜನೆಗಳು

ದಿವ್ಯಾಂಗರ ವಾಲಿಬಾಲ್ ನಲ್ಲಿ ಮಿಂಚಿದ ಯಮನಪ್ಪ

ಮಕ್ಕಳೆ ಮೊಬೈಲ್‌ ಬಿಟ್ಟು ಪುಸ್ತಕ ಹಿಡಿಯಿರಿ :ಮಲ್ಲಿಬೊಮ್ಮ ಶ್ರೀ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಾನಂಗಳದಲ್ಲಿ ಚಿತ್ರ ವಿಚಿತ್ರ ಚಿತ್ತಾರ ಬಿಡಿಸಿದ ಪಟಾಕಿಗಳು
(ರಾಜ್ಯ ) ಜಿಲ್ಲೆ

ಬಾನಂಗಳದಲ್ಲಿ ಚಿತ್ರ ವಿಚಿತ್ರ ಚಿತ್ತಾರ ಬಿಡಿಸಿದ ಪಟಾಕಿಗಳು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಚಡಚಣದಲ್ಲಿ ಸಂಗಮೇಶ್ವರ ಜಾತ್ರೆಯ ಸಂಭ್ರಮ | ಪಲ್ಲಕ್ಕಿ ಹಾಗೂ ನಂದಿ ಧ್ವಜದ ಮೆರವಣಿಗೆ

ಉದಯರಶ್ಮಿ ದಿನಪತ್ರಿಕೆ

ಚಡಚಣ: ಪಟ್ಟಣದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಜ.18 ರಿಂದ ಅದ್ದೂರಿಯಾಗಿ ಆರಂಭಗೊಂಡಿದ್ದು, ಜಾತ್ರೆಯ 2ನೇ ದಿನವಾದ ಸೋಮವಾರ ಸಾಯಂಕಾಲ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಹಾಗೂ ನಂದಿ ಧ್ವಜದ ಮೇರವಣಿಗೆಯು ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನದ ಮೂಲಕ 9.00 ಗಂಟೆಗೆ ಶ್ರೀ ಸಂಗಮೇಶ್ವರ ದೇವಸ್ಥಾನ ತಲುಪಿತು.
ನಂತರ 9.00 ಗಂಟೆಗೆ ಜಾತ್ರೆಯ ನಿಮಿತ್ಯ ದೇವಸ್ಥಾನದ ಪಕ್ಕದಲ್ಲಿರುವ ಎತ್ತರದ ವಿಶಾಲವಾದ ಮೈದಾನದಲ್ಲಿ ಶ್ರೀ ದತ್ತ ಇಂಡಿಯಾ ಶುಗರ್ ಹಾವಿನಾಳ ಕಾರ್ಖಾನೆಯ (ಒಂದು ಲಕ್ಷ ರೂಪಾಯಿ ದೇಣಿಗೆ) ಸಹಯೋಗದೊಂದಿಗೆ ಆಯೋಜಿಸಿದ್ದ ಆಕರ್ಷಕ ಚಿತ್ರ-ವಿಚಿತ್ರವಾದ ಮದ್ದು ಸುಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಾತ್ರೆಯ ಅಂಗವಾಗಿ ಏರ್ಪಡಿಸಲಾಗಿದ್ದ ಮದ್ದು ಸುಡುವ ಕಾರ್ಯಕ್ರಮದಲ್ಲಿ ಪಟಾಕಿಗಳು ಹೊರಹೊಮ್ಮಿಸಿದ ಶಬ್ದ, ಮೂಡಿಸಿದ ಬೆಳಕಿನ ಚಿತ್ತಾರ ಸೇರಿದ ಜನಸಾಗರವನ್ನು ಖುಷಿಪಡಿಸುವಲ್ಲಿ ಯಶಸ್ವಿಯಾಯಿತು. ವಿಧ ವಿಧವಾದ ಬಣ್ಣಗಳ ಬಾಣ ಬಿರುಸು ಆಕಾಶಕ್ಕೆ ನೆಗೆದು ಚಿತ್ತಾರ ಮೂಡಿಸುತ್ತಿದ್ದಂತೆಯೇ ನೆರೆದಿದ್ದ ಜನರ ಆನಂದಕ್ಕೆ ಮಿತಿಯೇ ಇರಲಿಲ್ಲ. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ತದೇಕ ಚಿತ್ತರಾಗಿ ಬಾಣ ಬಿರುಸು ವೀಕ್ಷಿಸಿ ಕೆಲ ಹೊತ್ತು ಆನಂದದಲ್ಲಿ ಮೈಮರೆತರು.
ಮದ್ದು ಸುಡುವ ಕಾರ್ಯಕ್ರಮದ ವೈಭವವನ್ನು ಕಣ್ಣು ತುಂಬಿಕೊಳ್ಳಲು ಪಟ್ಟಣದ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಜನರು ರಾತ್ರಿ 8 ಗಂಟೆಗೆ ದೇವಸ್ಥಾನದ ಎದುರಿನಲ್ಲಿರುವ ಬೋರಿ ಹಳ್ಳದ ವಿಶಾಲವಾದ ಮೈದಾನದಲ್ಲಿ ತಮ್ಮ ಆಸನಗಳನ್ನು ಭದ್ರಪಡಿಸಿಕೊಂಡಿದ್ದರು. ಬೆಂಕಿಯಲ್ಲಿ ಅರಳಿದ ನಾನಾ ರೀತಿಯ ಚಕ್ರಗಳು, ತ್ರಿಶೂಲ, ದೇವಾಲಯ, ಕಾರಂಜಿ, ಸ್ವಾಗತ ಕಮಾನು, ಶ್ರೀ ದತ್ತ ಸಕ್ಕರೆ ಕಾರ್ಖಾನೆಯ ನಾಮಫಲಕ, ಜಲಪಾತ, ಬೆಳಕಿನ ಗಿಡ, ಪಟಾಕಿಯ ವಿಶಿಷ್ಟ ಚಿತ್ತಾರಗಳು ಕಣ್ಮನ ಸೆಳೆದವು. ಇವೆಲ್ಲ ಚಿತ್ತಾಕರ್ಷಕ ದೃಶ್ಯಗಳೊಟ್ಟಿಗೆ ಮಧ್ಯದಲ್ಲಿ ಆಕಾಶದೆತ್ತರಕ್ಕೆ ಚಿಮ್ಮುತ್ತಿದ್ದ ಟಬ್, ಟುಬ್ ಎಂದು ಕಿವಿಗಡಚ್ಚಿಕ್ಕುವ ದೊಡ್ಡ ಪಟಾಕಿಗಳಂತೂ ದೊಡ್ಡ ಸದ್ದು ಮಾಡುತ್ತಿದ್ದವು. ಬಾನಂಗಳದಲ್ಲಿ ಮದ್ದಿನ ವೈವಿಧ್ಯಮಯ ಚಿತ್ತಾರ ಮೂಡಿ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಿದವು.
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಚಡಚಣ ಸಿ.ಪಿ.ಐ. ಅವರ ನೇತೃತ್ವದಲ್ಲಿ ಚಡಚಣ, ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕರುನಾಡು ಜನತೆಗೆ ವರವಾದ ಪಂಚ ಗ್ಯಾರಂಟಿ ಯೋಜನೆಗಳು

ದಿವ್ಯಾಂಗರ ವಾಲಿಬಾಲ್ ನಲ್ಲಿ ಮಿಂಚಿದ ಯಮನಪ್ಪ

ಮಕ್ಕಳೆ ಮೊಬೈಲ್‌ ಬಿಟ್ಟು ಪುಸ್ತಕ ಹಿಡಿಯಿರಿ :ಮಲ್ಲಿಬೊಮ್ಮ ಶ್ರೀ

ಸಾಮಾಜಿಕ ನ್ಯಾಯ ಬಡಜನತೆಯ ಕಲ್ಯಾಣದ ಬಜೆಟ್

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕರುನಾಡು ಜನತೆಗೆ ವರವಾದ ಪಂಚ ಗ್ಯಾರಂಟಿ ಯೋಜನೆಗಳು
    In ವಿಶೇಷ ಲೇಖನ
  • ದಿವ್ಯಾಂಗರ ವಾಲಿಬಾಲ್ ನಲ್ಲಿ ಮಿಂಚಿದ ಯಮನಪ್ಪ
    In (ರಾಜ್ಯ ) ಜಿಲ್ಲೆ
  • ಮಕ್ಕಳೆ ಮೊಬೈಲ್‌ ಬಿಟ್ಟು ಪುಸ್ತಕ ಹಿಡಿಯಿರಿ :ಮಲ್ಲಿಬೊಮ್ಮ ಶ್ರೀ
    In (ರಾಜ್ಯ ) ಜಿಲ್ಲೆ
  • ಸಾಮಾಜಿಕ ನ್ಯಾಯ ಬಡಜನತೆಯ ಕಲ್ಯಾಣದ ಬಜೆಟ್
    In (ರಾಜ್ಯ ) ಜಿಲ್ಲೆ
  • ಆರ್ಥಿಕತೆಯಲ್ಲಿ ಯಾವ ಬದಲಾವಣೆಯೂ ಕಾಣದ ಬಜೆಟ್
    In (ರಾಜ್ಯ ) ಜಿಲ್ಲೆ
  • ವಚನ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ
    In (ರಾಜ್ಯ ) ಜಿಲ್ಲೆ
  • ಬಜೆಟ್ ವಿರುದ್ಧ ಖಾಲಿ ಚೊಂಬು ಹಿಡಿದು ಬಿಜೆಪಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ರಾಜ್ಯ ಬಜೆಟ್ ಪ್ರತಿಕ್ರಿಯೆಗಳು
    In (ರಾಜ್ಯ ) ಜಿಲ್ಲೆ
  • ಬಜೆಟ್: ಮುಖ್ಯಮಂತ್ರಿಗಳಿಂದ ದಲಿತ ವರ್ಗಕ್ಕೆ ದೊಡ್ಡ ದ್ರೋಹ
    In (ರಾಜ್ಯ ) ಜಿಲ್ಲೆ
  • ಬಜೆಟ್ನಲ್ಲಿ ವಿಜಯಪುರ ಸಂಪೂರ್ಣ ನಿರ್ಲಕ್ಷ್ಯ :ಕೇಶವ ಪ್ರಸಾದ್
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.