ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದಲ್ಲಿ ಜನವರಿ 29 ರಂದು ಬ್ರಹತ್ ಹಿಂದೂ ಸಮಾಜೋತ್ಸವ ಸಮಾವೇಶ ಹಾಗೂ ಶೋಭಾಯಾತ್ರೆ ಜರುಗಲಿದೆ.
ಈ ಕಾರ್ಯಕ್ರಮ ನಿಮಿತ್ಯ ಸೋಮವಾರ ಎಲ್ಲ ಮಠಾದೀಶರು ನೇತೃತ್ವದಲ್ಲಿ ಎಲ್ಲ ಸಮುದಾಯದ ಹಿಂದೂಗಳ ಮನೆಗೆ ತೆರಳಿ ಕಾರ್ಯಕ್ರಮದ ಸಂಪರ್ಕ ಅಭಿಯಾನ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.
ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ತಾರಾಪೂರ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಗುರು ಸಂಸ್ಥಾನ ಹಿರೇಮಠ ಚಂದ್ರಶೇಖರ ಶಿವಾಚಾರ್ಯರು, ಅರ್ಜುಣಗಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಕುಮಸಗಿಯ ಶಿವಾನಂದ ಮಹಾಸ್ವಾಮಿಗಳು ನೇತೃತ್ವದಲ್ಲಿ ಪಟ್ಟಣ ಪ್ರತಿಯೊಂದು ನಗರಗಳಿಗೆ ತೆರಳಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಹ್ವಾನಿಸಿದರು.
ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮುಖಂಡ ಜಿ.ಸಿ. ಪಷುಪತಿಮಠ ಮಾತನಾಡಿ, 29 ರಂದು ನಡೆಯುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಿಮಿತ್ಯ ಶೋಭಾಯಾತ್ರೆ ನಡೆಯಲಿದ್ದು, ಈ ಶೋಭಾಯಾತ್ರೆಯಲ್ಲಿ ಹಿಂದೂ ಧರ್ಮದ ಎಲ್ಲ ಸಮಾಜದ ಸಾದು ಸಂತರ, ಮಹಾನ ನಾಯಕರ, ಹೋರಾಟಗಾರ ಭಾವ ಚಿತ್ರಗಳೊಂದಿಗೆ ಶೋಭಾಯಾತ್ರೆ ಮಾಡಲಾಗುವದು. ಸೋಮವಾರ ಎಲ್ಲ ಸ್ವಾಮಿಜಿಗಳ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಸಂಪರ್ಕ ಅಭಿಯಾನ ಮಾಡಲಾಗಿದೆ ಹಾಗೆ ಮಹಿಳಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಕುಂಕುಮ ಹಚ್ಚಿ ಎಲ್ಲ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಕರೆತರುವ ಮೂಲಕ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರಲ್ಲದೆ, ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಸಾಧು-ಸಂತರು, ಹಿಂದೂ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಂಪರ್ಕ ಅಭಿಯಾನದಲ್ಲಿ ಮುಖಂಡರಾದ ಪಿ.ಟಿ.ಪಾಟೀಲ, ಬಾಬು ಬಿಜ್ಜರಗಿ, ಶಂಕರ ಹಳೆಮನಿ, ದಲಿತ ಮುಖಂಡ ಹರಿಶ ಎಂಟಮಾನ, ರವಿ ವಾರದ, ಮಲ್ಲಿಕಾರ್ಜುನ ರಾಂಪೂರಮಠ, ವಿಶ್ವನಾಥ ಅಮರಗೊಂಡ, ಕಮಕಲರ ಪತ್ತಾರ, ರಾಕೇಶ ರಾಂಪೂರಮಠ ಸೇರಿದಂತೆ ಅನೇಕ ಯುವಕರು ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

