Author: editor.udayarashmi@gmail.com

ಪತ್ರಕರ್ತರ 37 ನೇ ರಾಜ್ಯ ಸಮ್ಮೇಳನದ ಸ್ಮರಣಸಂಚಿಕೆ ಬಿಡುಗಡೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕಳೆದ ಫೆ. 4 ಮತ್ತು 5 ರಂದು ನಡೆದ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಸವಿ ನೆನಪಿಗಾಗಿ ಹೊರತಂದ ಕರ್ನಾಟಕ ಪತ್ರಕರ್ತ ಸ್ಮರಣ ಸಂಚಿಕೆಯ ಬಿಡುಗಡೆ ಸೋಮವಾರ ಇಲ್ಲಿನ ಜಿಪಂ‌ ಸಭಾಂಗಣಲ್ಲಿ ನಡೆಯಿತು.‌ರಾಜ್ಯದ ಬೃಹತ್ ಕೈಗಾರಿಕೆ, ಮೂಲಭೂತ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆಯ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಜರುಗಿದ್ದು, ಸಮ್ಮೇಳನದ ಸವಿನೆನಪಿಗಾಗಿ ಸಂಘವು ಹೊರತಂದಿರುವ ‘ಪತ್ರಕರ್ತ’ ಸ್ಮರಣಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಇಂದು ಬಿಡುಗಡೆಗೊಳಿಸಿರುವುದು ಅತೀವ ಸಂತಸ ತಂದಿದೆ ಎಂದರು.ಸಮ್ಮೇಳನದ ಯಶಸ್ವಿಗೆ ಸಹಕರಿಸಿದ ಜಿಲ್ಲಾಡಳಿತಕ್ಕೆ, ಎಲ್ಲ ಜನಪ್ರತಿನಿಧಿಗಳಿಗೆ, ಜಿಲ್ಲೆಯ…

Read More

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಿಂದಗಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಿಂದಗಿ: ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸಿದ ಹನ್ನೆರಡನೆಯ ಶತಮಾನದ ಶರಣರ ವಚನಗಳ ಸಾರದಲ್ಲಿ ಕಾಯಕ ನಿಷ್ಠೆ, ಸ್ವಾವಲಂಬಿತನ, ಸ್ವಾತಂತ್ರ‍್ಯ ಮತ್ತು ಹಕ್ಕುಗಳ ಸಮ ಸಮಾಜದ ಆಶಯಗಳ ಮದ್ದು ಅಡಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಶರಣಪ್ಪ ಕಂಚ್ಯಾಣಿ ಹೇಳಿದರು.ಸೋಮವಾರ ನಗರದಲ್ಲಿನ ಸಾರಂಗಮಠ-ಗಚ್ಚಿನಮಠದ ಆವರಣದಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಿಂದಗಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ವಚನಗಳಲ್ಲಿನ ತತ್ವಾದರ್ಶ, ಸಂದೇಶ, ಆಚಾರ ವಿಚಾರಗಳಿಗೆ ಜನ-ಮನ ಕಿವಿಗೊಡುವಂತೆ, ಆಲಿಸಿ, ಪಾಲಿಸುವುದರ ಮೂಲಕ ಅದನ್ನು ಭವಿಷ್ಯದ ಮಕ್ಕಳಿಗೆ ಪಸರಿಸುವ ಉದ್ದೇಶವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹೊಂದಿದೆ. ಈ ದಿಸೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಬಸವಣ್ಣನವರ ಚಿಂತನೆಗೆ ಮಾರು ಹೋಗಿ, ಎಲ್ಲೆಡೆ ಅವರ ವಚನಗಳನ್ನು ಪಠಿಸುತ್ತ, ಅವರ…

Read More

ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಅ.20 ರ ಶುಕ್ರವಾರ ಬೆ.11.30ಗಂ. ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ನಡೆಯಲಿದೆ.ಮುಖ್ಯ ಅತಿಥಿಯಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಪತಿ ಡಾ.ಆರ್.ಎಸ್.ಮುಧೋಳ ವರದಿ ವಾಚನ ಮಾಡಲಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ಸಚಿವ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ, ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುವುದು.ಈ ಘಟಿಕೋತ್ಸವದಲ್ಲಿ ಒಟ್ಟು 349 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುತ್ತಿದ್ದು, ಇವುಗಳಲ್ಲಿ 9 ಡಾಕ್ಟರೇಟ್, 1 ಎಂ.ಸಿ.ಎಚ್. ಯೂರಾಲಜಿ ವಿಭಾಗ, 113 ವೈದ್ಯಕೀಯ ಸ್ನಾತಕೋತ್ತರ ಪದವಿ, 4 ಫೆಲೋಶಿಪ್, 205 ಎಂ.ಬಿ.ಬಿ.ಎಸ್., 13 ಬಿ.ಎಸ್.ಸಿ. (ಎಂ.ಐ.ಟಿ.), 3 ಎಂ.ಎಸ್.ಸಿ. ಹಾಗೂ 1 ಎಂ.ಎಚ್.ಎ. ಅಲೈಡ್ ಹೆಲ್ತ್ ಸೈನ್ಸ್‍ನ ಸ್ನಾತಕೋತ್ತರ ಪದವಿಗಳು ಒಳಗೊಂಡಿವೆ. ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 17 ಚಿನ್ನದ ಪದಕಗಳು…

Read More

ಒಂದೂವರೆ ಎಕರೆ ಚೆಂಡು ಹೂ ಬೆಳೆಗೆ ತಂಬಿಗೆಯಿಂದ ನೀರು ಪೂರೈಕೆ! *- ಜಿ ಎನ್ ಬೀರಗೊಂಡ (ಮುತ್ತು)*ಢವಳಗಿ: ರಾಜ್ಯದಲ್ಲಿ ಬರಗಾಲ ಆವರಿಕೊಂಡಿದ್ದರಿಂದ ರೈತರು ತೀವ್ರ ಕಂಗಾಲಾಗಿದ್ದು ಮುಂದೇನು? ಎಂಬ ಚಿಂತೆಯಲ್ಲಿ ವರುಣನ ಆಗಮನದ ನಿರೀಕ್ಷೆಯಲ್ಲಿ ಆಕಾಶದತ್ತ ಚಿತ್ತ ನೆಟ್ಟಿದ್ದಾರೆ.ರೈತರ ಜಮೀನಲ್ಲಿದ್ದ ಬೋರು, ಬಾವಿಗಳು ನೀರಿಲ್ಲದೆ ಬತ್ತಿ ಹೊಗಿವೆ. ಜನ- ಜಾನುವಾರಗಳಿಗೆ ಕುಡಿಯಲು ನೀರಿಲ್ಲದೆ ಕಂಗಾಲಾಗಿದ್ದಾರೆ.ರೈತನೋರ್ವ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಚೆಂಡು ಹೂ ನಾಟಿ ಮಾಡಿದ್ದಾನೆ. ಆದರೆ ಸರಿಯಾದ ಮಳೆ ಮತ್ತು ವಿದ್ಯುತ್ ಅಭಾವದ ಕಾರಣ ಮೂರು ತಿಂಗಳಿಂದ ಉತ್ತಮವಾಗಿ ಬೆಳೆದ ಚೆಂಡು ಹೂವು ಬಾಡಬಾರದು ಎಂದು ಒಣಗುತ್ತಿರುವ ಚೆಂಡು ಹೂವಿನ ಗಿಡದ ಬುಡಕ್ಕೆ ಬಕೆಟ್ ನಿಂದ ತಂಬಿಗೆಯ ಮೂಲಕ ನೀರು ಹಾಕಿ ಚೆಂಡು ಹೂವಿನ ಉಳಿವಿಗೆ ನಿರಂತರ ಶ್ರಮಿಸುತ್ತಿದ್ದಾನೆ.ಹೌದು, ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ ಗ್ರಾಮದ ರೈತ ಮುತ್ತು ರಾಮಣ್ಣ ಕೋರಿ ಅವರು, ಅಗಸಬಾಳ ಸರ್ವೇಯಲ್ಲಿರುವ ತಮ್ಮ ಜಮೀನಿನಲ್ಲಿ ಒಂದುವರಿ ಎಕರೆಯಲ್ಲಿ ಚೆಂಡು ಹೂವಿನ ಬೆಳೆ ಹಾಕಿದ್ದಾನೆ. ಆದರೆ ಮಳೆ ಇಲ್ಲದ…

Read More

ಪೊಲೀಸ್ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ ಖಡಕ್ ಸೂಚನೆ ವಿಜಯಪುರ: ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಯ ಟೇಲ್ ಎಂಡ್(ಕೊನೆಯ ಭಾಗದ) ವರೆಗೆ ನೀರು ಹರಿಸಲು ಅಡ್ಡಿಪಡಿಸುವವರ ವಿರುದ್ಧ ಕಟ್ಟುನಿಟ್ಟಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಪೊಲೀಸ್ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಇಂದು ಸೋಮವಾರ ಗೃಹ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಕರ್ನಾಟಕ ನೀರಾವರಿ ಇಲಾಖೆಯ ಅಧಿಕಾರಿಗಳು, ಯತ್ನಾಳ, ಜಾಲಗೇರಿ, ಇಟ್ಟಂಗಿಹಾಳ, ಲೋಹಗಾಂವ, ಸೋಮದೇವರಹಟ್ಟಿ ಮುಂತಾದ ಗ್ರಾಮಸ್ಥರೊಂದಿಗೆ ಸುದೀರ್ಘ ಸಭೆ ನಡೆಸಿದ ಸಚಿವರು ಈ ಸೂಚನೆ ನೀಡಿದ್ದಾರೆ.ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಗೆ ನೀರು ಹರಿಸಿದರೂ ಕಾಲುವೆಯ ಕೊನೆಯ ಭಾಗ ಟೇಲ್ ಎಂಡ್ ವರೆಗೂ ನೀರು ಸಿಗದ ಕಾರಣ ಯತ್ನಾಳ ಮತ್ತು ಇಟ್ಟಂಗಿಹಾಳ ಮುಂತಾದ ಗ್ರಾಮಗಳಿಗೆ ನೀರು ಬರುತ್ತಿಲ್ಲ.…

Read More

ಇಂಡಿ: ನಗರದ ವಿಜಯಪುರ ರಸ್ತೆಯಲ್ಲಿರುವ ಭಾರತ ಗ್ಯಾಸ್‌ ಅಡುಗೆ ಅನಿಲ ಘಟಕವನ್ನು ನಗರದಿಂದ ಹೊರಗೆ ಸ್ಥಳಾಂತರ ಮಾಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ಕಂದಾಯ ಉಪವಿಭಾಗ ಕಛೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸೋಮವಾರ ಪಟ್ಟಣದ ತಾಲೂಕು ಆಡಳಿತ ಸೌಧದ ಉಪವಿಭಾಗ ಅಧಿಕಾರಿಗಳ ಕಾರ್ಯಾಲಯಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ತೆರಳಿ, ನಗರದಲ್ಲಿ ಇರುವ ಭಾರತ ಗ್ಯಾಸ್ ಘಟಕ, ನಗರದಾಚೆ ಸ್ಥಳಾಂತರ ಮಾಡಬೇಕು ಎಂದು ಮನವಿ ಸಲ್ಲಿಸಿದರು.ಅಲ್ಲಿ ಸಂಬಂಧಿಸಿದ ಭಾರತ ಗ್ಯಾಸ್‌ ಏಜೆನ್ಸಿ ಮತ್ತು ಕಾರ್ಮಿಕರು ಕ್ರಮಬದ್ಧವಾಗಿ, ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಸರ್ಕಾರದ ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿ ಬೇಜವಾಬ್ದಾರಿತನದಿಂದ, ಕಾರ್ಯನಿರ್ವಹಿಸುತ್ತಿದ್ದು, ಸುತ್ತಮುತ್ತಲಿನ ಜನರು ಭಯದಲ್ಲಿ, ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿದ್ದು, ಕ್ರಮ ವಹಸಿದೇ ಮೌನವಾಗಿದ್ದು, ಜನಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ಮೇಲ್ನೊಟಕ್ಕೆ ಕಂಡು ಬಂದಿರುತ್ತದೆ. ನಗರದ ಜನರ ಹಿತ ದೃಷ್ಟಿಯಿಂದ ಭಾರತ ಗ್ಯಾಸ್…

Read More

ಇಂಡಿ: ಶಕ್ತಿದೇವತೆ ಆರಾಧನೆಯ ನವರಾತ್ರಿ ಉತ್ಸವಕ್ಕೆ ಪಟ್ಟಣ ಸೇರಿದಂತೆ ತಾಲೂಕಿನಾದಂತ ನವರಾತ್ರಿಯ ಸಂಭ್ರಮ ಭಾನುವಾರ ಆರಂಭಗೊಂಡಿತು.ಅಂಬಾಭವಾನಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ವಿಶೇಷ ಪೂಜೆ, ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಸಿದ್ಧತೆ ಹಮ್ಮಿಕೊಳ್ಳಲಾಯಿತು.ಶ್ರೀ ಭುವನೇಶ್ವರಿ ಯುವಕ ಮಂಡಳಿ ಕುಂಬಾರ ಓಣಿ, ಶ್ರೀ ಭುವನೇಶ್ವರಿ ಯುವಕ ಮಂಡಳಿ ಹೂಗಾರ ಓಣಿ, ದುರ್ಗಾ ಪರಮೇಶ್ವರಿ ಮಿತ್ರ ಮಂಡಳಿ ಭೀರಪ್ಪ ನಗರ, ಶ್ರೀ ಅಂಬಾಭವಾನಿ ಯುವಕ ಮಂಡಳಿ ಚಾವಡಿ ಓಣಿ ಇವರಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಲಂಕೃತ ವಾಹನದಲ್ಲಿ ದೇವಿಯ ಭವ್ಯ ಮೆರವಣೆಗೆ ನಡೆಯಿತು.ಅದಲ್ಲದೆ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ಗೋಪುರದ ಕಳಸಾಹರೋಹಣ ಕಾರ್ಯಕ್ರಮ ನಡೆಯಿತು.ಈ ವೇಳೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಅರುಣ ಕೋಳೆಕರ, ನಾಗನಾಥ ಹಂಚಾಟೆ, ಬಾಪು ಮಹೀಂದ್ರಕರ, ಬಾಳು ಕಠಾರೆ, ಗಣೇಶ ಮಹೀಂದ್ರಕರ, ರಮೇಶ ಸುಲಾಖೆ, ಮನೋಜ ಕೋಳೆಕರ, ವಿಜಯ ಪತಂಗೆ, ಸುಭಾಸ ಬಳಮಕರ, ಬಾಬುರಾವ ಸುಲಾಖೆ ಸೇರಿದಂತೆ ಸುನೀಲ ಸುಲಾಖೆ, ಉಮೇಶ ಮಹಾವೀರ ಕೋಳೆಕರ, ಅಮರ ಕೋಳೆಕರ, ಶೀತಲ ಅಂಬರಕರ, ಉಮೇಶ…

Read More

ಕಲಕೇರಿ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಪಾಪದ ಹೊರೆ ಕಡಿಮೆಯಾಗಿ ಪುಣ್ಯದ ಫಲ ಪ್ರಾಪ್ತಿಯಾಗುತ್ತದೆ. ಅಲ್ಲದೇ ಮಠಮಾನ್ಯಗಳಲ್ಲಿ ನಡೆಯುವ ಪುರಾಣ ಪುಣ್ಯಕಥೆಗಳನ್ನು ಆಲಿಸುವುದರಿಂದ ಮನುಷ್ಯನ ಆರೋಗ್ಯ ಮತ್ತು ಆಯಸ್ಸು ಹೆಚ್ಚುತ್ತದೆ ಎಂದು ಮಾಗಣಗೇರಿಯ ಡಾ.ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.ಕಲಕೇರಿ ಗ್ರಾಮದ ಭವಾನಿ ದೇವಸ್ಥಾನದಲ್ಲಿ ಶರನ್ ನವರಾತ್ರಿಯ ದಸರೆಯ ಪ್ರಯುಕ್ತ ರವಿವಾರ ಸಂಜೆ ಹಮ್ಮಿಕೊಂಡ ೩೦ನೇ ವರ್ಷದ ಪರಮೇಶ್ವರಿ ದೇವಿಯ ಪುರಾಣ ಪ್ರಾರಂಭೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.   ಶಿಷ್ಟರ ರಕ್ಷಣೆ ಮತ್ತು ದುಷ್ಠರ ದಮನ ದೇವಿ ಪುರಾಣದ ಮೂಲ ಉದ್ದೇಶವಾಗಿದೆ. ಆಧುನಿಕ ಜೀವನದ ಜಂಜಾಟಗಳಿಂದ ಹೊರ ಬರಲು ಮನಸ್ಸಿನ ಸಂತೃಪ್ತಿಗಾಗಿ ಮಾನಸಿಕ ನೆಮ್ಮದಿ ಹೊಂದಲು ಪುರಾಣ ಪ್ರವಚನ ಆಲಿಸುವುದು ಅತ್ಯವಶ್ಯವಾಗಿದೆ ಎಂದು ಅವರು ಹೇಳಿದರು.ಕಲಕೇರಿಯ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಮಾತನಾಡಿದರು.       ಹಿರೂರಿನ ಜಯಸಿದ್ದೇಶ್ವರ ಸ್ವಾಮೀಜಿ ಪುರಾಣವನ್ನು ನಡೆಸಿಕೊಟ್ಟರು. ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಆಶಿರ್ವಚನ ನೀಡಿದರು. ಗದ್ದುಗೆಮಠದ ಗುರುಮಡಿವಾಳೇಶ್ವರ ಶಿವಾಚಾರ್ಯರು, ಜಾಲಹಳ್ಳಿಮಠದ ಡಾ.ವ್ಹಿ ಕೆ ಜಾಲಹಳ್ಳಿಮಠ, ಕುಮಾರಸ್ವಾಮಿ ಜಾಲಹಳ್ಳಿಮಠ ಅಧ್ಯಕ್ಷತೆಯನ್ನು ವಹಿಸಿದ್ದರು,…

Read More

ಚಡಚಣ: ಸಮೀಪದ ನಿವರಗಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿ ಸಾಕ್ಷಿ ರಾಜೇಂದ್ರ ತೇಲಿ ಇವರು ಜಿಲ್ಲಾ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ತ್ರಿವಿಧ ಜಿಗಿತ ಮತ್ತು ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.ಈ ಸಾಧನೆಗೆ ಶಾಲೆಯ ಮುಖ್ಯ ಗುರು ರವಿಕುಮಾರ ನಾಯಕ, ದೈಹಿಕ ಶಿಕ್ಷಕ ಟಿ.ಐ.ಕುಂಬಾರ, ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ವರ್ಗ, ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Read More