ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಿಂದಗಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ
ಸಿಂದಗಿ: ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸಿದ ಹನ್ನೆರಡನೆಯ ಶತಮಾನದ ಶರಣರ ವಚನಗಳ ಸಾರದಲ್ಲಿ ಕಾಯಕ ನಿಷ್ಠೆ, ಸ್ವಾವಲಂಬಿತನ, ಸ್ವಾತಂತ್ರ‍್ಯ ಮತ್ತು ಹಕ್ಕುಗಳ ಸಮ ಸಮಾಜದ ಆಶಯಗಳ ಮದ್ದು ಅಡಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಶರಣಪ್ಪ ಕಂಚ್ಯಾಣಿ ಹೇಳಿದರು.
ಸೋಮವಾರ ನಗರದಲ್ಲಿನ ಸಾರಂಗಮಠ-ಗಚ್ಚಿನಮಠದ ಆವರಣದಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಿಂದಗಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ವಚನಗಳಲ್ಲಿನ ತತ್ವಾದರ್ಶ, ಸಂದೇಶ, ಆಚಾರ ವಿಚಾರಗಳಿಗೆ ಜನ-ಮನ ಕಿವಿಗೊಡುವಂತೆ, ಆಲಿಸಿ, ಪಾಲಿಸುವುದರ ಮೂಲಕ ಅದನ್ನು ಭವಿಷ್ಯದ ಮಕ್ಕಳಿಗೆ ಪಸರಿಸುವ ಉದ್ದೇಶವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹೊಂದಿದೆ. ಈ ದಿಸೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಬಸವಣ್ಣನವರ ಚಿಂತನೆಗೆ ಮಾರು ಹೋಗಿ, ಎಲ್ಲೆಡೆ ಅವರ ವಚನಗಳನ್ನು ಪಠಿಸುತ್ತ, ಅವರ ಜ್ಞಾನ ಜ್ಯೋತಿಯನ್ನು ಬೆಳಗಿಸಿದ್ದಾರೆ. ಇಂಗ್ಲೆಂಡಿನಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲೂ ಸರ್ವಸಮಾನತೆ, ಸ್ವಾತಂತ್ರ‍್ಯವನ್ನು ಪ್ರತಿಪಾದಿಸಿ, ಪಾಲಿಸಿದ ವಿಶ್ವದ ವ್ಯಕ್ತಿ ಕರ್ನಾಟಕದ ಬಸವಣ್ಣ ಎಂಬುದನ್ನು ಘೋಷಿಸಿ, ಅವರನ್ನು ವಿಶ್ವಜ್ಯೋತಿ ಎಂದು ಕರೆದಿದ್ದಾರೆ. ಬಸವಣ್ಣನವರ ಕಾಯಕ ಪ್ರೀತಿ ಮತ್ತು ನಾಯಕ ನೀತಿಗಳುಳ್ಳ ವಚನಗಳನ್ನು ವಿಶ್ವಸಂಸ್ಥೆಯು ಜಾರಿಗೆ ತಂದ ಮೂವತ್ತು ಅಂಶಗಳ ಮಾನವ ಹಕ್ಕುಗಳಲ್ಲಿ ಕಾಣಬಹುದು ಎಂದರು.
ಈ ವೇಳೆ ನಿಕಟಪೂರ್ವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮ.ಗು.ಯಾದವಾಡ, ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಚನ್ನಪ್ಪ ಕತ್ತಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಡಾ.ಶರಣಬಸವ ಜೋಗೂರ ಮಾತನಾಡಿ, ಶರಣರ ಜೀವನ ಸಿದ್ಧಾಂತ, ಸಮ ಸಮಾಜದ ಚಿಂತನೆ, ಬದುಕಿಗೆ ಕಾಯಕ ಶೃದ್ಧೆಯನ್ನು ಸಮರ್ಪಿಸಿದ ಶರಣ ಸಂಕುಲದ ಪ್ರಚಾರ ಮತ್ತು ಅವರ ತತ್ವಾದರ್ಶಗಳನ್ನು ಸರ್ವರಿಗೂ ಪರಿಚಯಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಶರಣ ಸಾಹಿತ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ಆತ್ಮೋದ್ಧಾರದ ಲಾಭ ಮತ್ತು ಆಧ್ಯಾತ್ಮ ಚಿಂತನೆಗಳಿಂದ ಪಡೆವ ಆದರ್ಶ ನಮ್ಮೆಲ್ಲರ ಬದುಕಿನ ಆದರ್ಶ ಹೆಜ್ಜೆಗೆ ಪ್ರೇರಣೆಯಾಗುತ್ತದೆ ಎಂದರು.
ಈ ವೇಳೆ ಸಲಹಾ ಸಮಿತಿಯ ಅಂಬಣ್ಣ ಗಾಯಕವಾಡ, ಡಾ.ಎಂ.ಎಂ.ಪಡಶೆಟ್ಟಿ, ಡಾ.ಚನ್ನಪ್ಪ ಕಟ್ಟಿ, ಪ್ರೊ.ಎಂ.ಎಸ್.ಹಯ್ಯಾಳಕರ, ಕೆ.ಎಚ್.ಸೋಮಾಪೂರ, ಮಹಾನಂದ ಬಮ್ಮಣ್ಣಿ, ಶಕುಂತಲಾ ಹಿರೇಮಠ, ಸಿದ್ದಪ್ಪ ಹಿರೇಕುರುಬರ ಸೇರಿದಂತೆ ಆರ್.ಆರ್.ಹಂಚಿನಾಳ, ಪರಶುರಾಮ ಕೋಳೂರ, ಅಶೋಕ ವಾರದ, ಸಿ.ಎಂ.ಪೂಜಾರಿ, ಬಾಬು ಕಮತಗಿ, ಶಿವಕುಮಾರ ಶಿವಶಿಂಪಿ, ಶಿವಾನಂದ ಕಲಬುರ್ಗಿ, ವಿರೇಶ ಜೋಗುರ, ಗವಿಸಿದ್ದಪ್ಪ ಆನೆಗುಂದಿ ಮತ್ತಿತರರಿದ್ದರು.
*ತಾಲೂಕು ಘಟಕದ ನೂತನ ಪದಾಧಿಕಾರಿಗಳು*
ಡಾ.ಶರಣಬಸವ ಜೋಗೂರ (ಅಧ್ಯಕ್ಷ), ಶಿವಮಾಂತ ಪೂಜಾರಿ ಹಾಗೂ ಸುನೀಲ ದೇವರಮನಿ (ಉಪಾಧ್ಯಕ್ಷ), ದಯಾನಂದ ಬಿರಾದಾರ (ಕೋಶಾಧ್ಯಕ್ಷ), ಸಿದ್ಧಲಿಂಗ ಕಿಣಗಿ (ಕಾರ್ಯದರ್ಶಿ), ಸುಧಾಕರ ಚವ್ಹಾಣ (ಸಹ ಕಾರ್ಯದರ್ಶಿ), ಬಸಯ್ಯ ಗೋಲಗೇರಿಮಠ ಮತ್ತು ಸಂತೋಷ ಮಲಘಾಣ (ಸಂಘಟನಾ ಕಾರ್ಯದರ್ಶಿ), ವಿಶ್ವನಾಥ ನಂದಿಕೋಲ (ದತ್ತಿ ಸಂಚಾಲಕ), ರವಿಚಂದ್ರ ಮಲ್ಲೇದ (ಪತ್ರಿಕಾ ಪ್ರತಿನಿಧಿ), ಯುವ ಘಟಕಕ್ಕೆ ಪ್ರಸನ್ನ ಜೋಗೂರ (ಅಧ್ಯಕ್ಷ), ಕದಳಿ ವೇದಿಕೆಗೆ ಶ್ರೀಮತಿ ಸುಜಾತಾ ಕಿಣಗಿ (ಅಧ್ಯಕ್ಷೆ), ಡಾ. ಸೀಮಾ ವಾರದ (ಮಹಿಳಾ ಪ್ರತಿನಿಧಿ), ನಿಕಟಪೂರ್ವ ಅಧ್ಯಕ್ಷ ಚನ್ನಪ್ಪ ಸಂಗಪ್ಪ ಕತ್ತಿ.
ಕದಳಿ ವೇದಿಕೆಗೆ: ಶ್ರೀಮತಿ ಮುಕ್ತಾಯಕ್ಕ ಕತ್ತಿ (ಕಾರ್ಯದರ್ಶಿ), ಶ್ರೀಮತಿ ಸಾವಿತ್ರಿ ಗಂಗನಳ್ಳಿಮಠ ಹಾಗೂ ಶ್ರೀಮತಿ ರೇಣುಕಾದೇವಿ ವಸ್ತçದ (ಸಹ ಕಾರ್ಯದರ್ಶಿ), ಶ್ರೀಮತಿ ದಾಕ್ಷಾಯಣಿ ಪಾಟೀಲ ಹಾಗೂ ಶ್ರೀಮತಿ ಜಗದೇವಿ ಅಂಬಲಗಿ (ಸಂಘಟನಾ ಕಾರ್ಯದರ್ಶಿ), ಆರತಿ ಲಿಂಗರಾಜ ಮತ್ತು ಮಧು ಬಮ್ಮಣ್ಣಿ.
*ಯುವ ಘಟಕ ಪದಾಧಿಕಾರಿಗಳು*
ಮಹಾಂತೇಶ ನೂಲಾನವರ (ಉಪಾಧ್ಯಕ್ಷ), ಭೀಮಾಶಂಕರ ಅರಳಗುಂಡಗಿ (ಕಾರ್ಯದರ್ಶಿ), ಚನ್ನಬಸವರಾಜ ಕತ್ತಿ ಹಾಗೂ ಸತೀಶ ಹಿರೇಮಠ (ಸಹ ಕಾರ್ಯದರ್ಶಿ), ಶಿವಕುಮಾರ ಜೋಗೂರ ಹಾಗೂ ಶ್ರೀಕಾಂತ ಜಂಗಿನಮಠ (ಸಂಘಟನಾ ಕಾರ್ಯದರ್ಶಿ) ಸದಸ್ಯರಾಗಿ ಮಡಿವಾಳಪ್ಪ ಮಡಿವಾಳರ ಪದಗ್ರಹಣ ಮಾಡಿದರು.