ಇಂಡಿ: ಶಕ್ತಿದೇವತೆ ಆರಾಧನೆಯ ನವರಾತ್ರಿ ಉತ್ಸವಕ್ಕೆ ಪಟ್ಟಣ ಸೇರಿದಂತೆ ತಾಲೂಕಿನಾದಂತ ನವರಾತ್ರಿಯ ಸಂಭ್ರಮ ಭಾನುವಾರ ಆರಂಭಗೊಂಡಿತು.
ಅಂಬಾಭವಾನಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ವಿಶೇಷ ಪೂಜೆ, ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಸಿದ್ಧತೆ ಹಮ್ಮಿಕೊಳ್ಳಲಾಯಿತು.
ಶ್ರೀ ಭುವನೇಶ್ವರಿ ಯುವಕ ಮಂಡಳಿ ಕುಂಬಾರ ಓಣಿ, ಶ್ರೀ ಭುವನೇಶ್ವರಿ ಯುವಕ ಮಂಡಳಿ ಹೂಗಾರ ಓಣಿ, ದುರ್ಗಾ ಪರಮೇಶ್ವರಿ ಮಿತ್ರ ಮಂಡಳಿ ಭೀರಪ್ಪ ನಗರ, ಶ್ರೀ ಅಂಬಾಭವಾನಿ ಯುವಕ ಮಂಡಳಿ ಚಾವಡಿ ಓಣಿ ಇವರಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಲಂಕೃತ ವಾಹನದಲ್ಲಿ ದೇವಿಯ ಭವ್ಯ ಮೆರವಣೆಗೆ ನಡೆಯಿತು.
ಅದಲ್ಲದೆ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ಗೋಪುರದ ಕಳಸಾಹರೋಹಣ ಕಾರ್ಯಕ್ರಮ ನಡೆಯಿತು.
ಈ ವೇಳೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಅರುಣ ಕೋಳೆಕರ, ನಾಗನಾಥ ಹಂಚಾಟೆ, ಬಾಪು ಮಹೀಂದ್ರಕರ, ಬಾಳು ಕಠಾರೆ, ಗಣೇಶ ಮಹೀಂದ್ರಕರ, ರಮೇಶ ಸುಲಾಖೆ, ಮನೋಜ ಕೋಳೆಕರ, ವಿಜಯ ಪತಂಗೆ, ಸುಭಾಸ ಬಳಮಕರ, ಬಾಬುರಾವ ಸುಲಾಖೆ ಸೇರಿದಂತೆ ಸುನೀಲ ಸುಲಾಖೆ, ಉಮೇಶ ಮಹಾವೀರ ಕೋಳೆಕರ, ಅಮರ ಕೋಳೆಕರ, ಶೀತಲ ಅಂಬರಕರ, ಉಮೇಶ ಕಾಂಬಳೆ, ಅಕ್ಷಯ ಮಹೀಂದ್ರಕರ, ಅಕ್ಷಯ ಸುಲಾಖೆ, ಕಿರಣ ಕೋಳೆಕರ, ವಿನೋದ ಕೋಳೆಕರ, ವಿಶಾಲ ಕೋಳೆಕರ, ರಾಹುಲ್ ಕೋಳೆಕರ, ಉಮೇಶ ಪವಾರ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

